Spandana Somanna: ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿರುವ ಕನ್ನಡ ಕಿರುತೆರೆ-ಹಿರಿತೆರೆ ನಟಿ, ಬಿಗ್ ಬಾಸ್ ಬ್ಯೂಟಿ ಸ್ಪಂದನಾ ಸೋಮಣ್ಣ ತಮ್ಮ ಭಾವಿ ಪತಿ ಬಗ್ಗೆ ಸೋಶಿಯಲ್ಲಿ ಬಂದಿರುವ ನೆಗೆಟಿವ್ ಕಾಮೆಂಟ್ ಗಳಿಗೆ ಖಡಕ್ ಉತ್ತರ ಕೊಟ್ಟು, ಸುಮ್ಮನಾಗಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸ್ಪಂದನಾ ಸೋಮಣ್ಣ

ಕನ್ನಡ ಸಿನಿಮಾಗಳಲ್ಲಿ ನಟಿಸಿ, ಸೀರಿಯಲ್ ಗಳ ಮೂಲಕ ಜನಮನ ಗೆದ್ದು, ಬಿಗ್ ಬಾಸ್ ಸೀಸನ್ 12ರ ಮೂಲಕ ಕಳ್ಳ ಪುಟ್ಟಿಯ ಪಟ್ಟ ಗೆದ್ದ ಚೆಲುವೆ ಸ್ಪಂದನಾ ಸೋಮಣ್ಣ. ನಟಿ ಇದೀಗ ಹೊಸ ಜೀವನಕ್ಕೆ ಪ್ರವೇಶಿಸುವ ತಯಾರಿಯಲ್ಲಿದ್ದಾರೆ. ಅಂದರೆ ನಟಿ ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇತ್ತೀಚೆಗಷ್ಟೇ ನಟಿ ತಮ್ಮ ಭಾವಿ ಪತಿ ವರುಣ್ ಮುನಿರಾಜು ಪ್ಯಾರೀಸ್ ನಲ್ಲಿ ಪ್ರಪೋಸ್ ಮಾಡಿದ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ತಾವು ಪ್ರೀತಿ ಮಾಡುತ್ತಿರುವುದನ್ನು ತಿಳಿಸಿದ್ದರು. ಇತ್ತೀಚೆಗೆ ನಟಿ ಹೂಮುಡಿಸುವ ಶಾಸ್ತ್ರದ ಫೋಟೊಗಳನ್ನು ಸಹ ಪೋಸ್ಟ್ ಮಾಡಿದ್ದರು. ಆದರೆ ಮದುವೆ ದಿನಾಂಕದ ಬಗ್ಗೆ ಮಾತ್ರ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಮೆಚ್ಚಿನ ನಟಿಗೆ ಅಭಿಮಾನಿಗಳ ಶುಭ ಹಾರೈಕೆ

ಹೊಸ ಬಾಳಿಗೆ ಎಂಟ್ರಿ ಕೊಡಲಿರುವ ಸ್ಪಂದನಾಗೆ ಶುಭ ಹಾರೈಸುತ್ತಾ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಆದರೆ ಕೆಲವರು ನೆಗೆಟಿವ್ ಕಾಮೆಂಟ್ ಮೂಲಕ ಸದ್ದು ಮಾಡಿದ್ದರು. ಅದರಲ್ಲೂ ನಟಿಯ ಭಾವಿ ಪತಿಯ ಕುರಿತು ಕೂಡ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇದೀಗ ನಟಿ ತಮ್ಮ ಆರು ವರ್ಷಗಳ ಪ್ರೀತಿ, ಏರ್ ಪೋರ್ಟ್ ಗುಡ್ ಬೈ, ಬೇಸರಕ್ಕೆ ಅಂತ್ಯ ಹಾಡುವ ಸಮಯ ಈಗ ಬಂದಿದೆ ಎಂದು ಹೇಳುತ್ತಾ, ತಮ್ಮ ಲಾಂಗ್ ಡಿಸ್ಟನ್ಸ್ ಪ್ರೀತಿಯ ಬಗ್ಗೆ ತಿಳಿಸಿ, ಅದರ ಜೊತೆಗೆ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಸ್ವೀಟ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

ನೆಗೆಟಿವ್ ಕಾಮೆಂಟ್ ಮಾಡುವವರಿಗೆ ವಾರ್ನಿಂಗ್ ಕೊಟ್ರ ಸ್ಪಂದನಾ

ಸ್ಪಂದನಾ ಏರ್ ಪೋರ್ಟ್ ಗುಡ್ ಬೈ ವಿಡಿಯೋ ಪೋಸ್ಟ್ ಮಾಡಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ‘ಕೊನೆಗೂ ಏರ್‌ಪೋರ್ಟ್‌ನಲ್ಲಿ ನಡೆಯುತ್ತಿದ್ದ ಬೀಳ್ಕೊಡುಗೆಗಳಿಗೆ ಅಂತ್ಯ ಹಾಡುವ ಸಮಯ ಬಂದಿದೆ. ಇನ್ಮುಂದೆ ನಮ್ಮ ಜೀವನದಲ್ಲಿ ಶಾಶ್ವತವಾಗಿ ಜೊತೆಯಾಗಿರುವ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಹಲವು ವರ್ಷಗಳಿಂದ ಈ ದಿನದ ಕನಸು ಕಂಡಿದ್ದೆ, ಅದಕ್ಕಾಗಿ ಕಾಯುತ್ತಿದ್ದೆ. ಇದೀಗ ಕೊನೆಗೂ ಆ ಕನಸು ನನಸಾಗುತ್ತಿದೆ.

ದೂರದ ಪ್ರೀತಿ (Long Distance Relationship) ಅಷ್ಟು ಸುಲಭವಲ್ಲ. ಆ ಕಣ್ಣೀರು, ದಿನಗಳನ್ನು ಎಣಿಸುತ್ತಾ ಕಾಯುವುದು, ಪ್ರೀತಿಪಾತ್ರರ ಅಪ್ಪುಗೆಯನ್ನು ಮಿಸ್ ಮಾಡಿಕೊಳ್ಳುವುದು, ಮತ್ತೆ ಮತ್ತೆ ಏರ್‌ಪೋರ್ಟ್‌ನಲ್ಲಿ ಬೀಳ್ಕೊಡುವ ನೋವು... ಇವೆಲ್ಲದರ ನಡುವೆಯೂ ಪ್ರೀತಿಯೇ ಗೆಲ್ಲುತ್ತದೆ. ಯಾವಾಗಲೂ ಪ್ರೀತಿಯೇ ಗೆಲ್ಲುತ್ತದೆ. ಇನ್ನು ಮುಂದೆ ಬೀಳ್ಕೊಡುಗೆಗಳಿಲ್ಲ, ಭೇಟಿಯಾಗಲು ದಿನಗಳನ್ನು ಎಣಿಸುವ ಅಗತ್ಯವೂ ಇಲ್ಲ. ಬದಲಾಗಿ ಜೀವನಪೂರ್ತಿ ಒಟ್ಟಿಗೆ ಇರುವ ಸುಂದರ ಕ್ಷಣಗಳಿಗೆ ಸಾಕ್ಷಿಯಾಗೋಣ’ ಎಂದು ನಟಿ ಬರೆದುಕೊಂಡಿದ್ದಾರೆ.

ತಮ್ಮ ಪ್ರೀತಿಯ ಬಗ್ಗೆ ತಿಳಿಸುವುದರ ಜೊತೆಗೆ ನೆಟಿವಿಟಿ ಹರಡುವವರಿಗೆ ವಾರ್ನಿಂಗ್ ಕೊಟ್ಟಿರುವ ನಟಿ PS.: ಕಾಮೆಂಟ್‌ಗಳಲ್ಲಿ ಕೆಲವರು ನಮ್ಮ ವಿಚಾರವಾಗಿ ತುಂಬಾ ತಲೆಕೆಡಿಸಿಕೊಂಡಿರುವಂತಿದೆ. ಅಂಥವರಿಗೆ ಒಂದೇ ಮಾತು ಹೇಳಲು ಬಯಸುತ್ತೇನೆ. ನೀವು ಹೊಟ್ಟೆಕಿಚ್ಚಿನಿಂದಲೇ ಇರಿ, ನಾವು ಮಾತ್ರ ಸಂತೋಷವಾಗಿರುತ್ತೇವೆ! ಎಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ.

View post on Instagram