ಸ್ನೇಹಾಳ ಸಾಯಿಸೋ ಉದ್ದೇಶವೇ ಇರ್ಲಿಲ್ಲ- ನಟಿಗಾಗಿ ಬದಲಾಯ್ತಾ ಕಥೆ? ಅವಾರ್ಡ್ನಲ್ಲಿ ಸಂಜನಾಗೆ ಮೋಸ ಎಂದ ಫ್ಯಾನ್ಸ್!
ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿಯನ್ನು ಸಾಯಿಸುವ ಉದ್ದೇಶವೇ ಇರ್ಲಿಲ್ವಾ? ಏಕಾಏಕಿ ಈ ನಿರ್ಧಾರ ಯಾಕೆ- ಅವಾರ್ಡ್ ಬಗ್ಗೆ ಅಭಿಮಾನಿಗಳ ಬೇಸರ
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾಳ ಪಾತ್ರ ಮುಗಿದಿದೆ. ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಗಿದೆ. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ ಅಸಲಿಗೆ ಆಗಿದ್ದೇ ಬೇರೆ ಎಂದು ಇದಾಗಲೇ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಮೂರು ವರ್ಷಗಳ ತಮ್ಮ ಜರ್ನಿ ನೆನಪಿಸಿಕೊಂಡಿರೋ ಅವರು, ಅನಿವಾರ್ಯವಾಗಿ ನಾನು ಸೀರಿಯಲ್ ಸೆಟ್ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದು ಪರೋಕ್ಷವಾಗಿ ಸಂಜನಾ ಬುರ್ಲಿ ಹೇಳಿದಂತಿದೆ. ವೈಯಕ್ತಿಕ ಕಾರಣ ಏನು ಎಂದು ಅವರು ಹೇಳಿಲ್ಲ. ಬಹುಶಃ ಸಂಜನಾ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಸೀರಿಯಲ್ ಬಿಟ್ಟಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
ಸೀರಿಯಲ್ನಲ್ಲಿ ಜೀವ ಕಳಕೊಂಡು ಪಾತ್ರ ಮುಗಿಸಿದ ಪುಟ್ಟಕ್ಕನ ಮಗಳು ಸ್ನೇಹಾ ಸೀಕ್ರೇಟ್ ಹೇಳೇಬಿಟ್ರು!
ಏಕೆಂದರೆ ಸಂಜನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಹಿಂಟ್ ಕೂಡ ಕೊಟ್ಟಿದ್ದಾರೆ. ಅದೇನೆಂದರೆ, ಪಾತ್ರ ಬದಲಾಗಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಯಿತು ಎಂದು ಹೇಳಿದ್ದಾರೆ. ಇದರ ಅರ್ಥ ಸಾಮಾನ್ಯವಾಗಿ ಸೀರಿಯಲ್ಗಳಲ್ಲಿ ಒಬ್ಬರು ನಿರ್ಗಮಿಸಿದರೆ, ಆ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ. ಆದರೆ ಮುಖ್ಯ ಪಾತ್ರವಾಗಿದ್ದರೆ ವೀಕ್ಷಕರು ಅದನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಈಗಲೂ ಹಾಗೆಯೇ ಆಗಿದೆ. ಸಂಜನಾ ಸೀರಿಯಲ್ ಬಿಡುವುದು ಅನಿವಾರ್ಯವಾಗಿತ್ತು. ಆದರೆ ಆ ಪಾತ್ರಕ್ಕೆ ಬೇರೆಯವರನ್ನು ಕರೆತರುವ ಬದಲು ಆ ಪಾತ್ರವನ್ನೇ ಮುಗಿಸಿ, ಆಕೆಯ ಹೃದಯವನ್ನು ಇನ್ನೋರ್ವ ಸ್ನೇಹಾಳಿಗೆ ನೀಡಿ, ಹೃದಯದ ಮೂಲಕ ಪಾತ್ರವನ್ನು ಜೀವಂತವಾಗಿಡುವ ಹೊಸ ಪ್ರಯತ್ನ ಮಾಡಲಾಗಿದೆ ಎನ್ನುವುದು ತಿಳಿದು ಬರುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಅವರು ಈ ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ದುಃಖದಿಂದ ಪ್ಲೀಸ್ ಹೋಗಬೇಡಿ ಎನ್ನುತ್ತಿದ್ದಾರೆ. ಬೇಗ ಬೇರೆ ಸೀರಿಯಲ್‌ಗೆ ಬನ್ನಿ ಎಂದು ಕೆಲವರು ಹೇಳಿದರೆ, ಮತ್ತೆ ಹಲವರಿಗೆ ನಟಿಗೆ ಬೆಸ್ಟ್ ನಾಯಕಿ ಅವಾರ್ಡ್ ಸಿಕ್ಕಿಲ್ಲ ಎನ್ನುವ ಕೊರಗು. ಈ ಬಾರಿಯಾದರೂ ನಿಮಗೆ ಬೆಸ್ಟ್ ನಾಯಕಿ ಅವಾರ್ಡ್ ಸಿಗುತ್ತೆ ಎಂದುಕೊಂಡಿದ್ವಿ. ತುಂಬಾ ಬೇಸರವಾಯಿತು ಎಂದು ನೊಂದು ನುಡಿದಿದ್ದಾರೆ. ಕಳೆದ ಬಾರಿ ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಸ್ನೇಹಾ, ಸಹನಾ ಮತ್ತು ಸುಮಾಗೆ ಬೆಸ್ಟ್ ಸಹೋದರಿಯರು ಅವಾರ್ಡ್ ಬಂದಿತ್ತು. ಆದರೆ ಸ್ನೇಹಾಗೆ ಪ್ರತ್ಯೇಕವಾಗಿ ಅವಾರ್ಡ್ ಸಿಕ್ಕಿಲ್ಲ, ಇದು ಅನ್ಯಾಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ 'ಸ್ನೇಹಾ' ಸಂಜನಾ ಬುರ್ಲಿ ಅಧಿಕೃತ ಗುಡ್ ಬೈ, ಹೊಸ ಸೀರಿಯಲ್‌ಗೆ ಹೋಗೋದು ಫಿಕ್ಸ್!