Puttakkana Makkalu Serial: ರವಿಚಂದ್ರನ್ ಸಲಹೆಯಂತೆ ವೈರಿಗಳ ಹೆಡೆಮುರಿ ಕಟ್ಟಿದ ಕಂಠಿ
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರವಿಚಂದ್ರನ್ ಕೊಟ್ಟ ಸಲಹೆಯಂತೆ ಕಂಠಿ ವೈರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

'ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ವಿ ರವಿಚಂದ್ರನ್ ಆಗಮನ ಆಗಿದೆ. 900 ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದ್ದರೂ ಕೂಡ ಈ ಸೀರಿಯಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ. ಈಗ ರಣಧೀರನ ಸಲಹೆಯಿಂದ ಕಂಠಿ ವೈರಿಗಳ ಹೆಡೆಮುರಿ ಕಟ್ಟಿದ್ದಾನೆ.
ಈ ಧಾರಾವಾಹಿ ಕತೆ ಏನು?
ಈ ಧಾರಾವಾಹಿಯಲ್ಲಿ 'ಹೆಣ್ಣು ಮಕ್ಕಳ ಹೆತ್ತೋರು ಎಲ್ಲ ದೇವರಿಗು ದೊಡ್ಡೋರು' ಎಂದಿದೆ. ಈ ಧಾರಾವಾಹಿಯ ಹಾಡಿನ ಸಾಲು ಈ ಸೀರಿಯಲ್ ಕಥೆಯನ್ನು ಹೇಳುತ್ತದೆ. ಗಂಡು ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಗೋಪಾಲ ತನ್ನ ಹೆಂಡ್ತಿ ಪುಟ್ಟಕ್ಕಳನ್ನು ಬಿಟ್ಟು ಬೇರೆ ಮದುವೆ ಆಗ್ತಾನೆ. ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳನ್ನು ಬೆಳೆಸುತ್ತಾಳೆ, ಅವರಿಗೆ ದಾರಿ ತೋರಿಸಲು ಹೋರಾಡುತ್ತಾಳೆ.
ಹೋರಾಟಕ್ಕೆ ಮುಂದಾದ ಪುಟ್ಟಕ್ಕ
ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪುಟ್ಟಕ್ಕಳಿಗೆ ಸಹನಾ, ಸ್ನೇಹಾ, ಸುಮಾ ಎಂಬ ಮೂವರು ಮಕ್ಕಳಿದ್ದಾರೆ. ಆಸೆಪಟ್ಟಂತೆ, ಕನಸು ಕಂಡಂತೆ ಜಿಲ್ಲಾಧಿಕಾರಿ ಆಗಿದ್ದ ಸ್ನೇಹಾ, ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಳು. ಸ್ನೇಹಾಳನ್ನು ಸಿಂಗಾರಮ್ಮ ಕೊಲೆ ಮಾಡಿಸಿದ್ದಳು. ನಿಧನದ ಬಳಿಕವೂ ಕೂಡ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ಅವ್ಯವಹಾರದ ಆರೋಪ ಬಂದಿದ್ದು, ಮಗಳ ಪರವಾಗಿ ಪುಟ್ಟಕ್ಕ ಹೋರಾಟಕ್ಕೆ ಮುಂದಾಗಿದ್ದಾಳೆ.
ರವಿಚಂದ್ರನ್ ಆಗಮನ
ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಗಳಿಗೆ ಅಂಟಿದ ಕಳಂಕ ತೊಳೆಯುವ ಈ ಕಾರ್ಯಕ್ಕೆ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗೆ ಬೇಸತ್ತಿರುವ ಪುಟ್ಟಕ್ಕನಿಗೆ ಸಾಥ್ ಕೊಡಲು 'ಕ್ರೇಜಿ ಸ್ಟಾರ್ ರವಿಚಂದ್ರನ್' ಮುಂದಾಗಿದ್ದಾರೆ. ಜಸ್ಟಿಸ್ ಫಾರ್ ಸ್ನೇಹಾ ಹೋರಾಟಕ್ಕೆ ಪುಟ್ನಂಜ ಕೈ ಜೋಡಿಸಿದ್ದಾರೆ. ʼಪುಟ್ನಂಜʼ ಸಿನಿಮಾದಲ್ಲಿ ಮೊಡಿ ಮಾಡಿದ್ದ ಉಮಾಶ್ರೀ ಮತ್ತು ರವಿಚಂದ್ರನ್, ಇದೀಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
2ನೇ ಮದುವೆಗೆ ಗಂಡು ರೆಡಿ ಇದ್ದ; ಮಗಳ ಆ ಮಾತಿಗೆ ಸಿಂಗಲ್ ಆಗಿ ಉಳಿದ ನಟಿ ಉಮಾಶ್ರೀ, ಯಾಕೆ?
ವೈರಿಗಳ ಹೆಡೆಮುರಿ ಕಟ್ಟಾಯ್ತು!
ರವಿಚಂದ್ರನ್ ಅವರಿಂದ ಪುಟ್ಟಕ್ಕನ ಹೋರಾಟಕ್ಕೆ ನ್ಯಾಯ ಸಿಗುತ್ತಾ? ಮಗಳಿಗೆ ಅಂಟಿದ ಕಳಂಕ ಹೋಗುತ್ತಾ? ಅನ್ನೋದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗ ರಣಧೀರನ ಸಲಹೆಯಂತೆ ವೈರಿಗಳನ್ನು ಕಂಠಿ ಹೆಡೆಮುರಿ ಕಟ್ಟಿದ್ದಾನೆ. ಇವರೆಲ್ಲರಿಗೂ ಈಗ ಸರಿಯಾದ ಪಾಠ ಕಲಿತ ಹಾಗೆ ಆಗಿದೆ.