ಗರ್ಲ್ಫ್ರೆಂಡ್ ಏನು ಆಧಾರ್ ಕಾರ್ಡಾ? ಪುಟ್ಟಕ್ಕನ ಮಕ್ಕಳು ಮುರಳಿ ಮಾತಿಗೆ ಸೂಪರ್ ಗುರೂ ಅಂತಿರೋ ಫ್ಯಾನ್ಸ್
ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡ ಗರ್ಲ್ಫ್ರೆಂಡ್ ಕುರಿತು ರೀಲ್ಸ್ ಮಾಡಿದ್ದು, ಅಭಿಮಾನಿಗಳು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ಅಷ್ಟಕ್ಕೂ ಏನಿದು ರೀಲ್ಸ್?
ಇಂದಿನ ಕಾಲದಲ್ಲಿ ಹುಡುಗ-ಹುಡುಗಿರಯರಿಗೆ ಗರ್ಲ್ಫ್ರೆಂಡ್/ ಬಾಯ್ಫ್ರೆಂಡ್ ಇರೋದು ಮಾಮೂಲು ಎನಿಸಿಬಿಟ್ಟಿದೆ. ಒಂದಿಷ್ಟು ದಿನಗಳ ಕಾಲ ಮೋಜು ಮಸ್ತಿ ಮಾಡುವುದಕ್ಕಾದರೂ ಒಂದಿಷ್ಟು ಮಂದಿ ಈ ರೀತಿಯ ಸಂಬಂಧದಲ್ಲಿ ಬೀಳುವುದು ಇದೆ. ಒಂದೆಡೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹವಾದರೆ, ಅದೇ ಇನ್ನೊಂದೆಡೆ ಇಂದಿನ ಸಿನಿಮಾ, ಸೀರಿಯಲ್ಗಳ ಪ್ರಭಾವವೂ ಇಂಥ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಗರ್ಲ್ಫ್ರೆಂಡ್ ಇಲ್ಲದಿದ್ದರೆ ಅಂಥ ಹುಡುಗರನ್ನು ಅನುಮಾನದ ದೃಷ್ಟಿಯಿಂದ ನೋಡುವುದೂ ಇದೆ ಎಂದು ಇದಾಗಲೇ ಹಲವು ಹುಡುಗರು ಗೋಳೋ ಅನ್ನುವುದೂ ಇದೆ. ಅಲ್ಲಿಗೆ ಬಂದು ಮುಟ್ಟಿದೆ. ಇದೇ ಕಾರಣಕ್ಕೆ ಇಂಥ ಸಂಬಂಧ ಮೇಲೆ ಜೋಕ್ಸ್, ಮೀಮ್ಸ್, ರೀಲ್ಸ್ಗಳು ಸಾಕಷ್ಟು ಬರುತ್ತಲೇ ಇವೆ. ಅದರಲ್ಲಿಯೂ ಸೋಷಿಯಲ್ ಮೀಡಿಯಾ ಸಕತ್ ಸ್ಟ್ರಾಂಗ್ ಆಗಿರೋ ಈ ಹೊತ್ತಿನಲ್ಲಿ ಲವರ್ಸ್ ಜೋಕ್ಸ್ಗಳಿಗಂತೂ ಬರವೇ ಇಲ್ಲ. ಇದೀಗ ಅಂಥದ್ದೇ ವಿಷಯದ ಜೋಕ್ಸ್ ಒಂದನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್ನ ರಾಜಿ, ಕಾಳಿ ಹಾಗೂ ಮುರಳಿ ಪಾತ್ರಧಾರಿ ಮಾಡಿ ತೋರಿಸಿದ್ದಾರೆ.
ಅಂದಹಾಗೆ, ಈ ಸೀರಿಯಲ್ನಲ್ಲಿ ವಿಲನ್ ಪಾತ್ರಧಾರಿಯಾಗಿರುವ ರಾಜಿ ಅಂದ್ರೆ ರಾಜೇಶ್ವರಿಯ ಅಸಲಿ ಹೆಸರು ಹಂಸ ನಾರಾಯಣ @ ಹಂಸ ಪ್ರತಾಪ್ (Hamsa Pratap), ರಾಜಿಯ ತಮ್ಮನ ಪಾತ್ರಧಾರಿಯಾಗಿರುವ ಇನ್ನೋರ್ವ ವಿಲನ್ ಕಾಳಿಯ ಅಸಲಿ ಹೆಸರು ಅನಿರಿಶ್. ಇನ್ನು ಟೀಚರ್ ಪಾತ್ರಧಾರಿಯಾಗಿದ್ದು ಪುಟ್ಟಕ್ಕನ ದೊಡ್ಡ ಮಗಳು ಸಹನಾಳ ಗಂಡನ ಪಾತ್ರದಲ್ಲಿ ನಟಿಸುತ್ತಿರುವ ಮುರಳಿಯ ನಿಜವಾದ ಹೆಸರು, ಪವನ್ ಕುಮಾರ್. ಇವರು ಸೇರಿ ಗರ್ಲ್ಫ್ರೆಂಡ್ ಕುರಿತು ರೀಲ್ಸ್ ಮಾಡಿದ್ದಾರೆ.
ಹೊಸ ವರ್ಷಕ್ಕೆ ಹೊಸ ಸರ್ಪ್ರೈಸ್: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ
ಅಷ್ಟಕ್ಕೂ ಇದರಲ್ಲಿ ರಾಜಿ ಪಾತ್ರಧಾರಿ ಹಂಸ ಮೊದಲಿಗೆ ಕಾಳಿ ಅಂದ್ರೆ ಅನಿರಿಶ್ ಹತ್ರ ನಿನಗೆ ಗರ್ಲ್ಫ್ರೆಂಡ್ ಇದ್ದಾಳಾ ಎಂದಾಗ ಹೌದು ಅನ್ನುತ್ತಾರೆ, ಇನ್ನೊಬ್ಬ ಪಾತ್ರಧಾರಿಯಿಂದಲೂ ಹೌದು ಎನ್ನುವ ಮಾತೇ ಬರುತ್ತದೆ. ನಂತರ ಹಂಸ ಮುರಳಿ ಅಂದ್ರೆ ಪವನ್ ಹತ್ರ ಕೇಳಿದಾಗ ಅವ್ರು ಇಲ್ಲ ಎನ್ನುತ್ತಾರೆ. ಆಗ ಹಂಸ ಇಲ್ವಾ ಅದ್ಯಾಕೆ ಎಂದಾಗ ಪವನ್, ಗರ್ಲ್ಫ್ರೆಂಡ್ ಎಲ್ಲರ ಬಳಿ ಇರೋದಕ್ಕೆ ಅದೇನು ಆಧಾರ್ ಕಾರ್ಡಾ ಕೇಳುತ್ತಾರೆ. ಇದನ್ನು ಕೇಳಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಬಂದಿದ್ದು, ಗರ್ಲ್ಫ್ರೆಂಡ್ ಇಲ್ಲದ ಹೈಕಳೆಲ್ಲಾ ಖುಷಿ ಪಟ್ಟು ಏನ್ ಮಾತು ಗುರೂ ಅನ್ನುತ್ತಿದ್ದಾರೆ. ಇನ್ನು ಹಲವರು ಈ ರೀಲ್ಸ್ಗೆ ಸಕತ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಸೂಪರ್, ವ್ಹಾರೆವ್ಹಾ ಎನ್ನುತ್ತಿದ್ದಾರೆ.
ರಾಜೇಶ್ವರಿ ಪಾತ್ರಧಾರಿ ಹಂಸ ಪ್ರತಾಪ್ ಅವರು ಇದಾಗಲೇ ಹಲವಾರು ರೀಲ್ಸ್ ಮಾಡಿದ್ದಾರೆ. ಅದರಲ್ಲಿಯೂ ಕಾಳಿ ಪಾತ್ರಧಾರಿ ಅನಿರಿಶ್ ಜೊತೆ ಹಲವಾರು ರೀಲ್ಸ್ ಮಾಡಿದ್ದಾರೆ. ಹಲವು ಹಾಡುಗಳಿಗೆ ಈ ಅಕ್ಕ-ಅಮ್ಮನ ಜೋಡಿ ಸ್ಟೆಪ್ ಹಾಕಿದೆ. ಅಂದಹಾಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ ಅವರಷ್ಟೇ ಸಕತ್ ಫೇಮಸ್ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ರಾಜಿ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ತಮ್ಮನ ಪಾತ್ರದಲ್ಲಿ ಕಾಳಿಯೂ ಮಿಂಚುತ್ತಿದ್ದರೆ, ಟೀಚರ್ ಪಾತ್ರಧಾರಿ ಮುರುಳಿ ಜೀವನದಲ್ಲಿಯೂ ಟ್ವಿಸ್ಟ್ ಬಂದಿದೆ. ಮುರಳಿ ಇನ್ನೊಂದು ಸಂಬಂಧ ಹೊಂದಿದ್ದಾನೆ ಎನ್ನುವ ಗುಮಾನಿ ಪತ್ನಿ ಸಹನಾಳಲ್ಲಿ ಶುರುವಾಗಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ನೋಡಬೇಕಿದೆ.
ಮದುಮಗಳಾಗಿ ಕಂಗೊಳಿಸುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡ ಸೀತಾರಾಮ ನಟಿ ವೈಷ್ಣವಿ!