ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ

ಡಾ.ಬ್ರೋ ಅವರು ಅಯೋಧ್ಯೆ ಹಾಗೂ ನೇಪಾಳಕ್ಕೆ ಭೇಟಿ ನೀಡಿ ಶ್ರೀರಾಮಚಂದ್ರನ ಕುರಿತು ಹಲವಾರು ಮಾಹಿತಿ ನೀಡಿದ್ದಾರೆ. 
 

Dr Bro visited Ayodhya and Nepal and gave many information about  Ramachandra suc

ಕಳೆದೊಂದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್​ಲೋಡ್​ ಮಾಡದೇ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದ ಹಾಗೂ ಅಭಿಮಾನಿಗಳ ಚಿಂತೆಗೂ ಕಾರಣರಾಗಿದ್ದ ಡಾ.ಬ್ರೋ ಅರ್ಥಾತ್​ ಗಗನ್​ ಅವರು ಇದೀಗ ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆಯಲ್ಲಿ ಹೊಸ ವರ್ಷದಂದು ಕಾಣಿಸಿಕೊಂಡಿದ್ದಾರೆ. ಅಯೋಧ್ಯೆಯ ಜೊತೆಗೆ ರಾಮಾಯಣಕ್ಕೆ ನಂಟಿರುವ ನೇಪಾಳಕ್ಕೂ ಭೇಟಿ ಕೊಟ್ಟು ಹಲವಾರು ವಿಷಯಗಳನ್ನು ಶೇರ್​  ಮಾಡಿಕೊಂಡಿದ್ದಾರೆ. ಈ ಮೂಲಕ ಡಾ.ಬ್ರೋ ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​ ನೀಡಿದ್ದು, ಅಭಿಮಾನಿಗಳ ಮನಸ್ಸನ್ನು ತಣಿಸಿದ್ದಾರೆ. ವಿಡಿಯೋ ಹಾಕಿದ ಕೆಲವೇ ನಿಮಿಷಗಳಲ್ಲಿ  ಸಹಸ್ರಾರು ಮಂದಿ ಕಮೆಂಟ್ ಮಾಡುವ ಮೂಲಕ ಡಾ.ಬ್ರೋಗೆ ಹೊಸ ವರ್ಷದ ಶುಭಾಶಯ ಕೋರಿದ್ದೂ ಅಲ್ಲದೇ,  ಅಯೋಧ್ಯೆಯ ಪರಿಚಯ ಮಾಡಿಸಿದ್ದಕ್ಕಾಗಿ ಧನ್ಯವಾದಗಳ ಸುರಿಮಳೆಯನ್ನೇ ಹರಿಸಿದ್ದಾರೆ.
 ​ 
ಮೊದಲು ಡಾ.ಬ್ರೊ. ಸರಯೂ ನದಿಗೆ ಭೇಟಿ ಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಸರಯೂ ನದಿ ಕೂಡ ಒಂದು. ಭಗೀರಥ ಮಹಾರಾಜನು ತನ್ನ ಪೂರ್ವಜರ ಒಳಿತಿಗಾಗಿ ಗಂಗಾಳನ್ನು ಭೂಮಿಗೆ ಕರೆತಂದು, ಗಂಗಾ ಮತ್ತು ಸರಯೂ ನದಿಯ ಸಂಗಮ ಮಾಡಿದನು. ರಾಮನ ಜನ್ಮಭೂಮಿಯಾದ ಅಯೋಧ್ಯೆ ಉತ್ತರ ಪ್ರದೇಶದ ಸರಯೂ ನದಿಯ   ದಂಡೆಯಲ್ಲಿದೆ. ಅಯೋಧ್ಯೆಯು ಹಿಂದೂಗಳ ಪ್ರಾಚೀನ ಮತ್ತು ಏಳು ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.  ಇಂಥ ಸರಯೂ ನದಿಯ ಪರಿಚಯ ಮಾಡಿಸಿದ ಡಾ.ಬ್ರೋ ನಂತರ ಒಂದಾನೊಂದು ರಾಮ-ಸೀತೆ ಮೆಟ್ಟಿದ ಮಣ್ಣಿನ ಪರಿಚಯವನ್ನು ಮಾಡಿಸಿ 2024 ಸುಖ ಶಾಂತಿ ಕರುಣಿಸಲಿ ಎಂದು ಶ್ರೀರಾಮನಲ್ಲಿ ಕೋರುತ್ತೇನೆ ಎಂದಿದ್ದಾರೆ.
ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್‌

ಅಲ್ಲಿಂದ ಅಯೋಧ್ಯೆಯ ಹಲವಾರು ಸ್ಥಳ, ದೇಗುಲಗಳ ದರ್ಶನವನ್ನೂ ಡಾ.ಬ್ರೋ ಮಾಡಿಸಿದ್ದಾರೆ. ಇಲ್ಲಿ ಹಲವಾರು ದೇಗುಲಗಳು ಇದ್ದರೂ ಮೊದಲಿಗೆ ಹನುಮಾನ ಗಡಿಯಲ್ಲಿ ಹನುಮಂತನ ದರ್ಶನ ಮಾಡಿಯೇ ಜನರು ಮುಂದಿನ ದರ್ಶನ ಮಾಡುತ್ತಾರೆ. ಹನುಮಂತ ಭೂಲೋಕದಲ್ಲಿ ಶ್ರೀರಾಮನ ಜಪ ಮಾಡುತ್ತಾ ಇರುವ ಸ್ಥಳ ಇದು. ಅಯೋಧ್ಯೆಯಲ್ಲಿ ವಿರಾಜಮಾನ ನಿಲ್ಲಿಸಿರುವ ಹನುಮಂತನ ನೋಡಿ ಎನ್ನುತ್ತಲೇ ಹನುಮಂತನ ದರ್ಶನವನ್ನೂ ಮಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ನಮಗೆ ಇದಾಗಲೇ ಹನುಮಂತನ ಅಪ್ಪಣೆಯಾಗಿದೆ. ರಾಮನ ಹುಡುಕಿಕೊಂಡು ಹೋಗುವುದೇ ನಮ್ಮ ಕೆಲಸ ಎನ್ನುತ್ತಲೇ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. 

ಅದಾದ ಬಳಿಕ ಅಲ್ಲಿರುವ ಸಾಲಿಗ್ರಾಮದ ಪರಿಚಯವನ್ನೂ ಮಾಡಿಸಿದ್ದಾರೆ.  ಶ್ರೀರಾಮ-ಸೀತಾಮಾತೆಯ ವಿಗ್ರಹ ಮಾಡಲು ಬಳಸಿಕೊಂಡಿರುವ ಈ ಕಲ್ಲು ನೇಪಾಳದಿಂದ ಸುಮಾರು 1,100 ಕಿಲೋ ಮೀಟರ್​ ದಾಟಿ ಅಯೋಧ್ಯೆಗೆ ಬಂದಿರುವುದಾಗಿ ಹೇಳಿರುವ ಗಗನ್​ ಅವರು, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಹಲವಾರು ವಿಗ್ರಹಗಳಿಗೆ ಕರ್ನಾಟಕದ ಕಲ್ಲುಗಳನ್ನೂ ಬಳಸಿಕೊಂಡಿರುವ ಮಾಹಿತಿ ನೀಡಿದ್ದಾರೆ. ಜೊತೆಗೆ  ರಾಮ-ವಿವಾಹ ಆದ ಮೇಲೆ  ನೆಲೆಸಿದ್ದ ಜಾಗವನ್ನೂ ಡಾ.ಬ್ರೋ ಪರಿಚಯ ಮಾಡಿಸಿದ್ದಾರೆ. ರಾಮಾಯಣದಲ್ಲಿಯೂ ಇದರ ಉಲ್ಲೇಖ ಇರುವುದಾಗಿ ತಿಳಿಸಿದ್ದಾರೆ. ಕೈಕೇಯಿ ಸೀತೆಗೆ ಕೊಟ್ಟ ಗಿಫ್ಟ್​ ಇದು ಎಂದು ಮಾಹಿತಿ ನೀಡಿರುವ ಅವರು, ತಮಗೆ ಆ ಸ್ಥಳದಲ್ಲಿ ಆಗುತ್ತಿರುವ ಆನಂದವನ್ನು  ಪದಗಳಲ್ಲಿ ವರ್ಣಿಸಲಾಗುತ್ತಿಲ್ಲ ಎಂದಿದ್ದಾರೆ. ಸಮೀಪವೇ ಇರುವ  ಕನಕ ಮಹಲ್​ ಪರಿಚಯವನ್ನೂ ಮಾಡಿಸಿದ್ದಾರೆ.  

ಅಯೋಧ್ಯೆಯಿಂದ ರಾಮಾಯಣಕ್ಕೆ ತೀರಾ ಹತ್ತಿರದ ಸಂಪರ್ಕ ಇರುವ ನೇಪಾಳಕ್ಕೂ ಭೇಟಿ ನೀಡಿರುವ ಡಾ.ಬ್ರೋ ಅಲ್ಲಿಯ ಕೆಲವು ಸ್ಥಳಗಳನ್ನು ಮತ್ತು ಆಹಾರಗಳನ್ನು ಪರಿಚಯಿಸಿದ್ದಾರೆ. ಮೊದಲೇ ಹೇಳಿದ ಹಾಗೆ, ಶ್ರೀರಾಮಚಂದ್ರನಿಗೂ ನೇಪಾಳಕ್ಕೂ ಭಾರಿ ಸಂಬಂಧವಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಸೀತಾ ಮಾತೆಯು ನೇಪಾಳದ ಜನಕ ಮಹಾರಾಜನ ಪುತ್ರಿ. ಅಯೋಧ್ಯಾ ರಾಮನ ಜೊತೆಗೆ ಸೀತೆಯ ವಿವಾಹ ಆಗುತ್ತದೆ. ಅಯೋಧ್ಯೆಯಲ್ಲಿ ರಾಮ ನವಮಿಯ ದಿನದಂದು ಭಗವಾನ್ ಶ್ರೀರಾಮನ ಹುಟ್ಟುಹಬ್ಬ ಆಚರಣೆ ಮಾಡುವ ಸಂದರ್ಭದಲ್ಲೇ ನೇಪಾಳದ ಜನಕಪುರದಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹ ಮಹೋತ್ಸವದ ಸಂಭ್ರಮಾಚರಣೆಯೂ ನಡೆಯುತ್ತದೆ. ಶುಕ್ಲ ಪಕ್ಷದ ಐದನೇ ದಿನ ಈ ಆಚರಣೆ ನಡೆಯುತ್ತದೆ.  

Latest Videos
Follow Us:
Download App:
  • android
  • ios