ರಾಜಿ, ಕಾಳಿ ಮತ್ತು ಸಹನಾ ನಡುವೆ ಸಂಬಂಧದ ಆರೋಪ ಕಟ್ಟೆ ಏರಿದ್ದು, ಕಾಳಿ ಪ್ರೀತಿಯನ್ನು ಸಹನಾ ತಿರಸ್ಕರಿಸಿದ್ದಾಳೆ. ಮನನೊಂದ ಕಾಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ. ಕಂಠಿ ತಡೆಯಲು ಪ್ರಯತ್ನಿಸುತ್ತಿದ್ದಾನೆ. ಕಾಳಿ ಬದುಕುಳಿಯುವನೇ? ಸಹನಾ ಎರಡನೇ ಮದುವೆ ಯಾರ ಜೊತೆ ಎಂಬುದು ಕುತೂಹಲ.
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಕಾಳಿ-ಸಹನಾ ಮಧ್ಯೆ ಏನೇನೋ ನಡೆದಿದೆ, ಇವರಿಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದೆ ಅಂತ ರಾಜಿ ಹೊಸ ಡ್ರಾಮಾ ಮಾಡಿದ್ದಳು. ಅವಳ ಈ ಆರೋಪ ಪಂಚಾಯಿತಿ ಕಟ್ಟೆವರೆಗೆ ಹೋಗಿತ್ತು. ಕಾಳಿ ಮೇಲೆ ಎಲ್ಲರೂ ಮುನಿಸಿಕೊಂಡಿದ್ದಾರೆ. ಈಗ ಇದೇ ಕಾರಣಕ್ಕೆ ಅವನ ಪ್ರಾಣ ಹೋಗತ್ತಾ ಅಂತ ಕಾದು ನೋಡಬೇಕಿದೆ.
ಫ್ರೆಂಡ್ ಆಗಿದ್ದ ಕಾಳಿ!
ಸಹನಾಳನ್ನು ಕಾಳಿ ಪ್ರೀತಿ ಮಾಡುತ್ತಿದ್ದನು, ಅವಳನ್ನು ಮದುವೆ ಆಗಬೇಕು ಅಂತ ಸಂಚು ಹಾಕಿದ್ದನು. ಆದರೆ ಸಹನಾ ಮುರಳಿಯನ್ನು ಪ್ರೀತಿಸಿ ಮದುವೆಯಾದಳು. ಆಮೇಲೆ ಒಳ್ಳೆಯವನಾದ ಕಾಳಿ ಸಹನಾಗೆ ಬೆಂಬಲ ಕೊಟ್ಟಿದ್ದನು. ಸಹನಾಗೋಸ್ಕರ ಅವನು ತನ್ನ ಅಕ್ಕ ರಾಜೇಶ್ವರಿ ವಿರುದ್ಧ ಕೂಡ ಕಾಳಿ ಹೋಗಿ ಮಾತನಾಡಿದ್ದುಂಟು, ಕೆಲಸ ಮಾಡಿದ್ದುಂಟು. ಇಷ್ಟೆಲ್ಲ ನಡೆಯುವಾಗ ಸಹನಾ ತನ್ನ ಮದುವೆಯನ್ನು ಮುರಿದುಕೊಳ್ತಾಳೆ, ಗಂಡನಿಗೆ ವಿಚ್ಛೇದನ ಕೊಟ್ಟು ಮನೆ ಬಿಟ್ಟು ಹೋಗ್ತಾಳೆ. ಸಹನಾ ಸತ್ತು ಹೋದಳು ಅಂತ ಎಲ್ಲರೂ ನಂಬಿದ್ದರು. ಆಗ ಕಾಳಿಗೆ ಸಹನಾ ಬದುಕಿರುವ ವಿಷಯ ಗೊತ್ತಾಗುವುದು. ಸಹನಾ ಬದುಕಿದ್ದಾಳೆ ಅಂತ ಗೊತ್ತಾದಮೇಲೆ ಅವನು ಅವಳಿಗೆ ನೆರವು ನೀಡುತ್ತ, ಬೆಂಬಲ ಕೊಟ್ಟು ಒಳ್ಳೆಯ ಫ್ರೆಂಡ್ ಆಗಿದ್ದನು.
Puttakkana Makkalu Serial: ಕೊನೆಗೂ ಸಹನಾ-ಕಾಳಿ ಮದುವೆ ಆಗೋ ಟೈಮ್ ಬಂತು! ಅಂಥದ್ದು ಏನಾಯ್ತು?
ಕಾಳಿ ಜೊತೆಗಿನ ಸ್ನೇಹ ಮುರೀತು!
ಕಾಳಿ ತನ್ನ ಹೊಸ ಗೆಳೆಯ ಸಹನಾ ನಂಬಿದ್ದಳು. ಆದರೆ ರಾಜೇಶ್ವರಿ ಮಾಡಿದ ಮೋಸದಿಂದ ಸಹನಾ-ಕಾಳಿ ಮಧ್ಯೆ ಏನೋ ನಡೆದಿದೆ ಎಂಬ ಆರೋಪ ಬಂತು. ಈ ಆರೋಪ ಪಂಚಾಯಿತಿ ಕಟ್ಟೆ ಏರಿತು. ಕೊನೆಗೂ ಇವರಿಬ್ಬರ ಮಧ್ಯೆ ಏನೂಈ ನಡೆದಿಲ್ಲ ಎನ್ನೋದು ಬಯಲಾಯ್ತು. ಆದರೆ ಕಾಳಿ ಮಾತ್ರ ನಾನು ಸಹನಾಳನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಎಲ್ಲರ ಮುಂದೆ ಹೇಳಿದ್ದಾನೆ. ಇದನ್ನು ಕೇಳಿ ಸಹನಾ ಕುಸಿದು ಬಿದ್ದಿದ್ದಾಳೆ. ನಾನು ನಂಬಿದ ಕಾಳಿ ಎಲ್ಲರ ಮುಂದೆ ಈ ವಿಷಯ ಹೇಳ್ತಾನೆ, ನನ್ನ ಬಳಿ ಒಮ್ಮೆಯೂ ಹೇಳಿಲ್ಲ, ನಾನು ಇವನನ್ನು ಇಷ್ಟು ನಂಬಿ ಏನು ಪ್ರಯೋಜನ ಆಯ್ತು ಅಂತ ಅವಳು ಆಲೋಚನೆ ಮಾಡುತ್ತಿದ್ದಾಳೆ. ಕಾಳಿ ಇಂಥ ಸತ್ಯವನ್ನು ಮುಚ್ಚಿಟ್ಟಿದ್ದಾನೆ, ಇನ್ನು ರಾಜಿ ಬಾಯಿಗೆ ಬಂದಹಾಗೆ ಬೈದಿರೋದು ಸಹನಾಗೆ ಅಥೀವ ದುಃಖವನ್ನು ತಂದಿದೆ. ಇದೇ ಕಾರಣಕ್ಕೆ ಅವಳು ಕಾಳಿ ಸ್ನೇಹ ಮುರಿದುಕೊಂಡು, ಇನ್ಮುಂದೆ ಮಾತಾಡೋದಿಲ್ಲ ಎಂದು ಹೇಳಿದ್ದಾಳೆ.
ಪುಟ್ಟಕ್ಕನ ಮಗಳು ಸಹನಾ ಯಾರನ್ನು ಮದ್ವೆಯಾಗ್ತಿದ್ದಾಳೆ? ನಟಿ ಅಕ್ಷರಾ ಹೇಳಿದ್ದೇನು?
ಮುಂದೆ ಏನಾಗುವುದು?
ಸಹನಾ ತನ್ನ ಜೊತೆ ಮಾತಾಡೋದಿಲ್ಲ ಅಂತ ಹೇಳಿದಳು, ಎಲ್ಲರೂ ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ, ಸಹನಾ ಕಣ್ಣೀರು ಹಾಕುತ್ತಿದ್ದಾಳೆ ಅಂತ ಕಾಳಿ ನೊಂದುಕೊಂಡಿದ್ದಾನೆ. ಇನ್ನೇನು ಮಾಡೋದು ಅಂತ ಅವನು ರಾಜಿಗೆ ಹೊಡೆಯಲು ಹೋಗಿದ್ದ. ಅಷ್ಟೇ ಅಲ್ಲದೆ ಈಗ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಹಾಗಾದರೆ ಕಾಳಿ ಸಾಯ್ತಾನಾ ಎನ್ನೋದು ಪ್ರಶ್ನೆ ಆಗಿದೆ. ಇನ್ನು ಕಂಠಿ ಇವನು ಆತ್ಮಹತ್ಯೆ ಮಾಡಿಕೊಳ್ಳೋದನ್ನು ತಡೆಯಲು ಪ್ರಯತ್ನಪಟ್ಟಿದ್ದಾನೆ. ಈ ಪ್ರಯತ್ನ ಸಫಲ ಆಗತ್ತಾ ಅಥವಾ ಕಾಳಿ ಸಾಯ್ತಾನಾ ಅಂತ ಕಾದು ನೋಡಬೇಕಿದೆ. ಸಹನಾಳ ಮೊದಲ ಪ್ರೀತಿ ನಾಶವಾಗಿದೆ. ಈಗ ಅವಳು ಎರಡನೇ ಮದುವೆ ಆಗ್ತಾಳಾ? ಸ್ನೇಹಿತ ಅಂತ ನಂಬಿದ್ದ ಕಾಳಿ ಜೊತೆಗೆ ಅವಳು ಮದುವೆ ಆಗ್ತಾಳಾ ಎನ್ನುವ ಪ್ರಶ್ನೆಯೂ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆ ಹೊಂದಿದೆ.
ಉಮಾಶ್ರೀ, ಧನುಷ್, ಸ್ವಾತಿ ಎಚ್‌ವಿ, ರಮೇಶ್ ಪಂಡಿತ್, ಮಂಜುಭಾಷಿಣಿ ನಟಿಸುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಟಿಆರ್‌ಪಿಯಲ್ಲಿ ಕಮಾಲ್ ಮಾಡಿತ್ತು. ಈಗ ಈ ಧಾರಾವಾಹಿ ಕಥೆ ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಿದೆ.
