'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ವಿಚ್ಛೇದಿತ ಸಹನಾ ಮತ್ತು ಕಾಳಿ ಮಧ್ಯೆ ಪ್ರೇಮಾಂಕುರ. ಬೆಂಗಳೂರು ಪ್ರವಾಸದಲ್ಲಿ ಒಂದೇ ಕೋಣೆಯಲ್ಲಿ ಇದ್ದದ್ದನ್ನು ರಾಜಿ ಊರವರ ಮುಂದೆ ಬಹಿರಂಗಪಡಿಸಿ ಜಗಳ ಸೃಷ್ಟಿಸಿದ್ದಾಳೆ. ಸಹನಾಳ ಮೇಲಿನ ಆರೋಪ ಸಾಬೀತಾದರೆ ಅವರಿಬ್ಬರ ಮದುವೆ ಆಗಬಹುದು.

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಮುರಳಿಯಿಂದ ವಿಚ್ಛೇದನ ಪಡೆದಿರೋ ಸಹನಾ ಈಗ ಎರಡನೇ ಮದುವೆ ಆಗ್ತಾಳಾ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಈಗ ಸಹನಾ-ಕಾಳಿ ಇಬ್ಬರೂ ಮದುವೆ ಆಗುವ ಗಳಿಗೆ ಬಂದಹಾಗೆ ಕಾಣ್ತಿದೆ.

ಸಹನಾ ಸಹಾಯಕ್ಕೆ ಬಂದಿದ್ದ ಕಾಳಿ! 
ಹೌದು, ಸಹನಾಳನ್ನು ಕಾಳಿ ಪ್ರೀತಿ ಮಾಡುತ್ತಿದ್ದನು. ಆದರೆ ಸಹನಾ ಮುರಳಿಯನ್ನು ಪ್ರೀತಿಸಿ ಮದುವೆಯಾದಳು. ಆರಂಭದಲ್ಲಿ ದುಷ್ಟನಾಗಿದ್ದ ಕಾಳಿ ಆಮೇಲೆ ಒಳ್ಳೆಯವನಾದನು. ಇನ್ನು ಸಹನಾ ಬೆಂಗಳೂರಿನಲ್ಲಿ ಏಕಾಂಗಿಯಾಗಿ ಮೆಸ್‌ ನಡೆಸುವಾಗ ಅವಳ ಸಹಾಯಕ್ಕೆ ಬಂದಿದ್ದು ಕಾಳಿ ಮಾತ್ರ. ಈಗ ಕಾಳಿಗೆ ಮತ್ತೆ ಸಹನಾ ಮೇಲೆ ಪ್ರೀತಿ ಮೂಡಿದೆ.

ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್​ ಕಲಿ ಸುಸ್ತೋ ಸುಸ್ತು!

ಪುಟ್ಟಕ್ಕನ ಮನೆಯಲ್ಲಿ ಜಗಳ! 
ಸಹನಾ, ಕಾಳಿ ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿ ಅವರು ರೂಮ್‌ವೊಂದರಲ್ಲಿ ಇರಬೇಕಾಗಿ ಬಂತು. ಅದೇ ಸಮಯಕ್ಕೆ ರಾಜಿ ಅಲ್ಲಿಗೆ ಬಂದು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ನನ್ನ ತಮ್ಮ ಕಾಳಿ ಜೊತೆಗೆ ಬೆಂಗಳೂರಿಗೆ ಹೋಗ್ತೀನಿ ಅಂತ ಹೇಳಿ ಸರಸ ಆಡಿದ್ದಾಳೆ ಅಂತ ರಾಜಿ ಊರಿಗೆ ಬಂದು ಎಲ್ಲರ ಮುಂದೆ ಹೇಳಿದ್ದಾಳೆ. ಪುಟ್ಟಕ್ಕನ ಮನೆ ಮುಂದೆ ಒಂದು ದೊಡ್ಡ ಜಗಳವೇ ನಡೆದಿದೆ. 

ಕಣ್ಣೀರಿಟ್ಟ ಸಹನಾ! 
“ನಾನು ಏನೂ ತಪ್ಪು ಮಾಡಿಲ್ಲ. ಕಾಳಿ ಹಾಗೂ ನನ್ನ ಮಧ್ಯೆ ಏನೂ ನಡೆದಿಲ್ಲ. ಊಟದ ಆರ್ಡರ್‌ ವಿಚಾರಕ್ಕೆ ನಾನು, ಕಾಳಿ ಬೆಂಗಳೂರಿಗೆ ಹೋದೆವು. ಅಲ್ಲಿ ನಾವಿಬ್ಬರು ಒಂದೇ ರೂಮ್‌ನಲ್ಲಿ ಇದ್ದೆವು, ಆದರೆ ಏನೂ ತಪ್ಪು ನಡೆದಿಲ್ಲ” ಎಂದು ಸಹನಾ ಕಣ್ಣೀರು ಹಾಕಿಕೊಂಡು ಹೇಳಿದ್ದಾಳೆ. ಇನ್ನೊಂದು ಕಡೆ ರಾಜಿ ಬಾಯಿಗೆ ಬಂದಹಾಗೆ ಮಾತನಾಡಿದ್ದಾಳೆ. ಪಂಚಾಯಿತಿಯಲ್ಲಿದ್ದ ಕೆಲವರು ಕಾಳಿ ಜೊತೆ ಸಹನಾ ಅಲ್ಲಿಗೆ ಹೋಗಿದ್ದು ತಪ್ಪು, ಸಹನಾಳದ್ದೇ ತಪ್ಪಿದೆ, ಸಹನಾ ಕೆಡೋಕೆ ಪುಟ್ಟಕ್ಕನೇ ಕಾರಣ ಎಂದು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ಈ ಜಗಳದಲ್ಲಿ ಏನಾಗುವುದು?

ಪುಟ್ಟಕ್ಕನ ಮಗಳು ಸಹನಾ ಯಾರನ್ನು ಮದ್ವೆಯಾಗ್ತಿದ್ದಾಳೆ? ನಟಿ ಅಕ್ಷರಾ ಹೇಳಿದ್ದೇನು?

ಪಂಚಾಯಿತಿಯಲ್ಲಿ ಏನು ತೀರ್ಪು ಹೊರಬೀಳತ್ತೆ?
ಈ ಪಂಚಾಯಿತಿಯಲ್ಲಿ ಸಹನಾ-ಕಾಳಿ ತಪ್ಪು ಮಾಡಿಲ್ಲ ಅಂತ ಸಾಬೀತು ಆಗುತ್ತದೆಯೇ? ಸಹನಾಳ ಮೇಲೆ ಕಳಂಕ ಹೊರಿಸಿದ್ದು, ಆರೋಪ ಹೊರಿಸಿದ್ದು ಮುಕ್ತ ಆಗುತ್ತದೆಯೇ ಎಂಬ ಪ್ರಶ್ನೆ ಇದೆ. ಇನ್ನೊಂದು ಕಡೆ ಈ ಆರೋಪ ಸರಿ ಹೋಗಿಲ್ಲ ಅಂದ್ರೆ ಸಹನಾ-ಕಾಳಿ ಮದುವೆ ಆಗಬೇಕು ಎನ್ನುವ ತೀರ್ಪು ಹೊರಬಿದ್ದರೂ ಬೀಳಬಹುದು. ಒಟ್ಟಿನಲ್ಲಿ ಸಹನಾ-ಕಾಳಿ ಮದುವೆ ಆಗುತ್ತದೆಯೇ ಎಂದು ಕಾದು ನೋಡಬೇಕಿದೆ.

ಏನಾಗಬಹುದು?
ಸಹನಾ ಪ್ರೀತಿಸಿ ಮದುವೆಯಾಗಿದ್ದಾಳೆ. ಆದರೆ ಪ್ರೀತಿಸಿ ಮದುವೆಯಾದ ಗಂಡ ತನ್ನನ್ನು ನಂಬದೇ ಇದ್ದಾಗ ಅವಳು ವಿಚ್ಛೇದನ ತಗೊಳ್ಳುವ ನಿರ್ಧಾರಕ್ಕೆ ಬರುತ್ತಾಳೆ. ಗಂಡನ ಕ್ಷಮೆಯನ್ನು ಅವಳು ಸ್ವೀಕರಿಸಲೇ ಇಲ್ಲ. ಈಗ ಅವಳು ಇನ್ನೊಂದು ಮದುವೆ ಆಗುತ್ತಾಳಾ? ಇನ್ನೊಮ್ಮೆ ಅವಳಿಗೆ ಪ್ರೀತಿಯಲ್ಲಿ ಬೀಳಲು ಆಗತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಸೀರೆ ಬಳೆಯನು ತೊಟ್ಟೋಳು, ಇವಳೆ ದೇಶವನು ಕಟ್ಟೋಳು : ಪುಟ್ಟಕ್ಕನ ಮಕ್ಕಳು ಹಾಡಿಗೆ ನೆಟ್ಟಿಗರ ಚಪ್ಪಾಳೆ

ಪಾತ್ರಧಾರಿಗಳು
ಪುಟ್ಟಕ್ಕ ಪಾತ್ರದಲ್ಲಿ ಉಮಾಶ್ರೀ, ಸಹನಾ ಪಾತ್ರದಲ್ಲಿ ಅಕ್ಷರಾ, ಗೋಪಾಲಯ್ಯ ಪಾತ್ರದಲ್ಲಿ ರಮೇಶ್‌ ಪಂಡಿತ್‌, ಮುರಳಿ ಪಾತ್ರದಲ್ಲಿ ಪವನ್‌, ರಾಜಿ ಪಾತ್ರದಲ್ಲಿ ಸ್ವಾತಿ ನಟಿಸುತ್ತಿದ್ದಾರೆ. ಅಂದಹಾಗೆ ಸಾರಿಕಾ ರಾಜ್‌ ಅರಸ್‌, ಮಂಜುಭಾಷಿಣಿ, ರಮ್ಯಾ ರಾಜು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆರೂರು ಜಗದೀಶ್‌ ನಿರ್ದೇಶನದ ಈ ಧಾರಾವಾಹಿ ಆರಂಭವಾಗಿ ಎರಡು ವರ್ಷಗಳ ಕಾಲವೂ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿತ್ತು. ಇನ್ನು ಸೀರಿಯಲ್‌ ಟೈಮಿಂಗ್‌ ಬದಲಾದ ಕಾರಣಕ್ಕೆ ಧಾರಾವಾಹಿ ಟಿಆರ್‌ಪಿ ಕಡಿಮೆ ಆಗಿದೆ. ಅಂದಹಾಗೆ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಅವರು ನಟಿಸಿದ್ದರು. ಈ ಪಾತ್ರದ ಅಂತ್ಯ ಮಾಡಲಾಗಿದೆ.