ಸ್ನಾನದ ಮನೆಯಲ್ಲಿ ಆಕಾಶ್ ಬೆನ್ನು ಉಜ್ಜಿದ ಪುಷ್ಪಾ; ಅಮ್ಮ ಎಂದೇ ನಂಬಿದ್ದ ಆಕಾಶ್ ಕಕ್ಕಾಬಿಕ್ಕಿ!
ಸ್ನಾನ ಮಾಡುವಾಗ ಬೆನ್ನು ಉಜ್ಜಲು ತಾಯಿ ಅಥವಾ ಅತ್ತೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಮುಖ, ತಲೆಗೆಲ್ಲಾ ಸೋಪು-ಶಾಂಪು ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದಾನೆ. ಆದರೆ ಆಕಾಶ್ ಅಮ್ಮ ಐಡಿಯಾ ಮಾಡಿ ಬೆನ್ನು ಉಜ್ಜಲು ಪುಷ್ಪಾಳನ್ನೇ ಕಳಿಸಿದ್ದಾಳೆ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಬೃಂದಾವನ ಸೀರಿಯಲ್‌ನಲ್ಲಿ ಆಕಾಶ್ ಮತ್ತು ಪುಷ್ಪಾ ಎಲ್ಲರೆದುರು ಮದುವೆ ಮೂಲಕ ಗಂಡ-ಹೆಂಡತಿ ಆಗಿದ್ದಾರೆ. ಆದರೆ, ಅವರಿಬ್ಬರ ಮಧ್ಯೆ ಇನ್ನೂ ಅನ್ಯೋನ್ಯತೆ ಮೂಡಿಲ್ಲ. ಫಸ್ಟ್ ನೈಟ್ ದಿನ ಇಬ್ಬರೂ ಒಂದೇ ರೂಮಿನಲ್ಲಿ ಇದ್ದರೂ ಆಕಾಶ್ ಹನಿಮೂನ್‌ಗೆ ಅವಕಾಶವನ್ನೇ ಕೊಟ್ಟಿಲ್ಲ. ಪುಷ್ಪಾಗೆ ಗೊತ್ತಿಲ್ಲ, ಆಕಾಶ್ ಇಷ್ಟವಿಲ್ಲದೇ ಈ ಮದುವೆ ಆಗಿದ್ದಾನೆಂದು. ಆಕಾಶ್ ತನ್ನ ಹೆಂಡತಿ ಪುಷ್ಪಾ ಜತೆ ಮಾತೇ ಆಡುತ್ತಿಲ್ಲ. ಅವಳಿಗೆ ಈ ಬಗ್ಗೆ ಸಾಕಷ್ಟು ನೋವಿತ್ತು. ಆದರೆ, ಗಂಡನ ಮನೆ ಕಡೆಯವರೊಬ್ಬರು 'ಆಕಾಶ್ ತನ್ನ ಓದಿಗೆ ತೊಂದರೆ ಆಗುತ್ತದೆ ಎಂದು ಸದ್ಯ ನಿನ್ನಿಂದ ದೂರ ಇದ್ದಾನೆ.
ಈಗಲೇ ನನ್ನ ಜತೆ ಸಂಸಾರ ಮಾಡಲು ಶುರು ಮಾಡಿಕೊಂಡರೆ ಅವನಿಗೆ ಓದಲು ಕಾನ್ಸಂಟ್ರೇಶನ್ ಇರುವುದಿಲ್ಲ. ಹೀಗಾಗಿ ಅವನು ಮನಸ್ಸಿನಲ್ಲಿ ನಿನ್ನ ಬಗ್ಗೆ ಅಪಾರ ಪ್ರೀತಿ ಇದ್ದರೂ ತೋರಿಸಿಕೊಳ್ಳದೇ ತನ್ನ ಓದಿನತ್ತ ಗಮನ ಹರಿಸುತ್ತಿದ್ದಾನೆ' ಎಂದು ಪುಷ್ಪಾಳನ್ನು ನಂಬಿಸಿದ್ದಾರೆ. ಅದನ್ನೇ ನಂಬಿ ಪುಷ್ಪಾ ತನ್ನ ಗಂಡ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ನಂಬಿದ್ದಾಳೆ. ಅದನ್ನೇ ತನ್ನವರೊಂದಿಗೆ ಹೇಳಿಕೊಂಡು ಖುಷಿ ಪಡುತ್ತಿದ್ದಾಳೆ. ಆದರೆ ಆಕಾಶ್ ಮಾತ್ರ ನಿಜವಾಗಿಯೂ ಪುಷ್ಪಾಳನ್ನು ದ್ವೇಷಿಸುತ್ತಿದ್ದಾನೆ. ಏಕೆಂದರೆ, ಆಕಾಶ್‌ಗೆ ಈ ಮದುವೆ ಇಷ್ಟವಿರಲಿಲ್ಲ, ಮನೆಯವರು ಒಪ್ಪಿ ಮಾಡಿದ್ದಾರೆ ಎಂದು ಪುಷ್ಪಾಗೆ ತಾಳಿ ಕಟ್ಟಿದ್ದಾನೆ ಅಷ್ಟೇ.
ಒಂಬತ್ತನೇ ವಾರದಲ್ಲಿ 9 ನಾಮಿನೇಶನ್ಸ್; ಮನೆಯಿಂದ ಯಾರು ಹೊರಹೋಗ್ತಾರೆ ಎಂಬುದು ಸದ್ಯದ ಕುತೂಹಲ!
ಸ್ನಾನ ಮಾಡುವಾಗ ಬೆನ್ನು ಉಜ್ಜಲು ತಾಯಿ ಅಥವಾ ಅತ್ತೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಮುಖ, ತಲೆಗೆಲ್ಲಾ ಸೋಪು-ಶಾಂಪು ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದಾನೆ. ಆದರೆ ಆಕಾಶ್ ಅಮ್ಮ ಐಡಿಯಾ ಮಾಡಿ ಬೆನ್ನು ಉಜ್ಜಲು ಪುಷ್ಪಾಳನ್ನೇ ಕಳಿಸಿದ್ದಾಳೆ. ಆದರೆ, ಆ ಕ್ಷಣ ಕಣ್ಣು ಬಿಟ್ಟು ನೋಡಲಾಗದ ಆಕಾಶ್ ಪುಷ್ಪಾಳನ್ನು ತನ್ನಮ್ಮ ಅಂತಲೇ ಅಂದುಕೊಂಡಿದ್ದಾನೆ. ಪುಷ್ಪಾಳನ್ನು ಬೆನ್ನು ಉಜ್ಜಿಸಿಕೊಂಡು ತಲೆಗೆ ನೀರು ಹಾಕಿಸಿಕೊಂಡು ಸ್ನಾನ ಮುಂದುವರಿಸಿದ್ದಾನೆ.
ಕೋಪ ಮಾಡ್ಕೊಂಡ್ರೆ ಇನ್ನೂ ಮುದ್ದುಮುದ್ದಾಗಿ ಕಾಣಿಸ್ತಾನೆ; ಆಕಾಶ್ ಕೋಪ ಎಂಜಾಯ್ ಮಾಡ್ತಿದಾಳೆ ಪುಷ್ಪಾ!
ಇತ್ತ ತನ್ನ ರೂಮಿಗೆ ಬಂದ ಪುಷ್ಪಾ ಮೊಬೈಲ್ಗೆ ಬಂದ ಮಲ್ಲಿ ಕಾಲ್ ಪಿಕ್ ಮಾಡಿ ಮಾತನಾಡುತ್ತಿದ್ದಾಳೆ. ಅವರಬ್ಬರ ಮಾತುಕತೆ ಮಧ್ಯೆ ತಾನು ಆಕಾಶ್ ಬೆನ್ನು ಉಜ್ಜಿದ್ದಾಗಿಯೂ, ಆದರೆ ಆಕಾಶ್ ಅದನ್ನು ತನ್ನ ತಾಯಿ ಎಂದುಕೊಂಡಿದ್ದಾಗಿಯೂ ಪುಷ್ಪಾ ಮಲ್ಲಿಗೆ ಹೇಳುತ್ತಾಳೆ. ಅಷ್ಟರಲ್ಲಿ ತಲೆ ಒರೆಸಿಕೊಳ್ಳುತ್ತ ರೂಮಿಗೆ ಬಂದ ಆಕಾಶ್ ಅದನ್ನು ಕೇಳಿಸಿಕೊಂಡು ಕೆಂಡಾಮಂಡಲ ಆಗಿದ್ದಾನೆ. ಮುಂದೇನು ನಡೆದಿದೆ, ನಡೆಯುತ್ತದೆ ಎಂಬುನ್ನು ತಿಳಿಯಲು ಇಂದಿನ ಹಾಗು ಮುಂದಿನ ಸಂಚಿಕೆಗಳನ್ನು ನೋಡಬೇಕು. ಅಂದಹಾಗೆ, ಬೃಂದಾವನ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಪ್ರಸಾರವಾಗುತ್ತಿದೆ.