ಕೋಪ ಮಾಡ್ಕೊಂಡ್ರೆ ಇನ್ನೂ ಮುದ್ದುಮುದ್ದಾಗಿ ಕಾಣಿಸ್ತಾನೆ; ಆಕಾಶ್ ಕೋಪ ಎಂಜಾಯ್ ಮಾಡ್ತಿದಾಳೆ ಪುಷ್ಪಾ!

ಸುಮ್ನೆ ನಗೋರಿಗೆ ಏನಂತಾರೆ ಗೊತ್ತಾ? ಎಂದು ರೇಗಿದರೂ ಪುಷ್ಪಾ ಸ್ವಲ್ಪವೂ ಬೇಸರಗೊಳ್ಳುವುದಿಲ್ಲ. ಅವಳಿಗೆ ಎನಾಗಿದೆ, ಬೈದರೂ ಏನೂ ಅಂದ್ಕೋತಿಲ್ಲ ಎಂದು ಆಕಾಶ್ ಮನಸ್ಸಿನಲ್ಲೇ ಹೇಳಿಕೊಳ್ತಾನೆ. ಅತ್ತ ಪುಷ್ಪಾ ಇವ್ನು ಕೋಪ ಮಾಡಿಕೊಂಡ್ರೂ ಕೂಡ ಚೆನ್ನಾಗಿ ಕಾಣ್ತಾನೆ ಎಂದು ಮನಸ್ಸಿನಲ್ಲೇ ಖುಷಿಯಿಂದ ಹೇಳಿಕೊಳ್ತಾಳೆ. 

Akash gets angry towards pushpa and she knows the reason behind his behaviour srb

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಬೃಂದಾವನ ಸೀರಿಯಲ್ ವೀಕ್ಷಕರ ಗಮನ ಸೆಳೆಯುತ್ತಿದೆ. ಆಕಾಶ್ ಪುಷ್ಪಾ ಮದುವೆ ಅದ್ದೂರಿತನದಿಂದ ಮುಗಿದಿದೆ. ಆದರೆ, ಆಕಾಶ್‌ಗೆ ಈ ಮದುವೆ ಇಷ್ಟವಿರಲಿಲ್ಲ. ಪುಷ್ಪಾ ಜತೆ ಸಂಸಾರ ಮಾಡಲು ಆಕಾಶ್ ಸಿದ್ಧನಿಲ್ಲ. ಪುಷ್ಪಾ-ಆಕಾಶ್ ಒಂದೇ ರೂಮಿನಲ್ಲಿ ಇದ್ದರೂ ಬೇರೆಬೇರೆ ಕಡೆ ಮಲಗುತ್ತಿದ್ದಾರೆ. ಆಕಾಶ್ ತಾನೇ ಪುಪ್ಪಾಳಿಂದ ದೂರ ಮಲಗುತ್ತಿದ್ದಾನೆ ಎಂಬುದು ಸರಿಯಾಗಿದೆ. ಮೊದಲ ದಿನ ಪುಷ್ಪಾಗೆ ವಿಷಯ ಗೊತ್ತಿರಲಿಲ್ಲ, ಅದಕ್ಕೇ ಅವಳು ಗಂಡ ಪಕ್ಕದಲ್ಲೇ ಇದ್ದರೂ  ಮಾತನಾಡುತ್ತಿಲ್ಲ, ಜತೆಗೆ ಮಲಗುತ್ತಿಲ್ಲ ಎಂದು ತುಂಬಾ ದುಃಖ ಪಟ್ಟಿದ್ದಳು. 

ಆದರೆ, ಈಗ ಮನೆಯವರೊಬ್ಬರ ಮೂಲಕ ಪುಷ್ಪಾಗೆ ಆಕಾಶ್ ಯಾಕೆ ತನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ ಎಂಬ ಸಂಗತಿ ಗೊತ್ತಾಗಿದೆ. ಹೀಗಾಗಿ ಅವಳು ಆಕಾಶ್ ಕೋಪ ಮಾಡಿಕೊಳ್ಳುತ್ತಿರುವುದನ್ನೂ ಎಂಜಾಯ್ ಮಾಡುತ್ತಿದ್ದಾಳೆ. ರೂಮ್‌ನಲ್ಲಿ ಪಕ್ಕದಲ್ಲೇ ಇದ್ದರೂ ಮಾತನಾಡದ, ತಾನು ಹತ್ತಿರ ಬಂದರೆ ಓಡಿ ಹೋಗಿ ಕಾರ್ಪೆಟ್ ಮೇಲೆ ಮಲಗುವ ಆಕಾಶ್ ನೋಡಿ ಫೀಲ್ ಮಾಡಿಕೊಳ್ಳದೇ ನಗುತ್ತಿದ್ದಾಳೆ. ಅದನ್ನು ನೋಡಿ ಆಕಾಶ್ ಕೋಪ ಇನ್ನೂ ಜಾಸ್ತಿಯಾಗುತ್ತಿದೆ. ಪುಷ್ಪಾ ನಗು ನೋಡಿ ಅವಳಿಗೆ ಬೈಯುತ್ತಾನೆ. 

ದೇವಸ್ಥಾನಕ್ಕೆ ಬಂದು ದೇವ್ರನ್ನು ನೋಡ್ದೇ ಹೋಗ್ತಾರೆ, ಎಂಥ ಜನಾನಪ್ಪ; ರಾಮಾಚಾರಿ ಡೈಲಾಗ್ ಕೇಳಿ ಅವರಣ್ಣ ಸುಸ್ತು!

ಸುಮ್ನೆ ನಗೋರಿಗೆ ಏನಂತಾರೆ ಗೊತ್ತಾ? ಎಂದು ರೇಗಿದರೂ ಪುಷ್ಪಾ ಸ್ವಲ್ಪವೂ ಬೇಸರಗೊಳ್ಳುವುದಿಲ್ಲ. ಅವಳಿಗೆ ಎನಾಗಿದೆ, ಬೈದರೂ ಏನೂ ಅಂದ್ಕೋತಿಲ್ಲ ಎಂದು ಆಕಾಶ್ ಮನಸ್ಸಿನಲ್ಲೇ ಹೇಳಿಕೊಳ್ತಾನೆ. ಅತ್ತ ಪುಷ್ಪಾ ಇವ್ನು ಕೋಪ ಮಾಡಿಕೊಂಡ್ರೂ ಕೂಡ ಚೆನ್ನಾಗಿ ಕಾಣ್ತಾನೆ ಎಂದು ಮನಸ್ಸಿನಲ್ಲೇ ಖುಷಿಯಿಂದ ಹೇಳಿಕೊಳ್ತಾಳೆ. ಅವರಿಬ್ಬರ ಮನಸ್ಸುಗಳ ಮಾತುಕತೆ ಕೇಳಿದರೆ ವೀಕ್ಷಕರಿಗೆ ಕಚಗುಳಿ ಆಗುವುದಂತೂ ಗ್ಯಾರಂಟಿ ಎನ್ನಬಹುದು. 

'ಮುಂಗಾರು ಮಳೆ' ಮನೆಗೆ ಭೇಟಿ ಕೊಟ್ಟ ಮಳೆ ಹುಡುಗಿ; ಸವಿನೆನನಪು ಹಂಚಿಕೊಂಡ ನವವಧು ಪೂಜಾ ಗಾಂಧಿ

ಹೆಂಡತಿ ಇದ್ದರೂ ತನ್ನ ಬೆನ್ನು ಉಜ್ಜಲು ಬನ್ನಿ ಎಂದು ತನ್ನ ತಾಯಿ-ಅತ್ತೆಯನ್ನು ಆಕಾಶ್ ಕರೆಯುವನು. ಅವನ ಮಾತನ್ನು ಕೇಳಿ ತಾಯಿ, ಅತ್ತೆ ಇಬ್ಬರೂ ರೇಗಿಸುವರು. ಬೃಂದಾವನ ಕಥೆಯಲ್ಲಿ ಮುಂದೇನಾಗುವುದು ಎಂಬುದನ್ನು ಸಂಚಿಕೆ ನೋಡಿ ತಿಳಿಯಬೇಕು. ಸದ್ಯ ಆಕಾಶ್-ಪುಷ್ಪಾ ಮದುವೆ ಮುಗಿದು ಅವರಿಬ್ಬರೂ ಒಂದಾಗದಂತೆ ನೋಡಿಕೊಳ್ಳಲಾಗಿದೆ. ಪುಷ್ಪಾಳಿಂದ ಆಕಾಶ್ ಬೆನ್ನು ಉಜ್ಜಿಸಿಕೊಳ್ತಾನಾ? ನೆಂಟರಿಷ್ಟರು ಸೇರಿ ಹಳಿ ತಪ್ಪಿರುವ ಅವರಿಬ್ಬರ ಜೀವನವನ್ನು ಸರಿದಾರಿಗೆ ತರುತ್ತಾರಾ? ಎಲ್ಲ ಪ್ರಶ್ನೆಗಳಿಗೆ ಮಂದೆ ಪ್ರಸಾರ ಆಗಲಿರುವ ಸಂಚಿಕೆಗಳು ಉತ್ತರ ನೀಡಲಿವೆ. 

 

 

Latest Videos
Follow Us:
Download App:
  • android
  • ios