ಪ್ರಭುದೇವ ನೆಚ್ಚಿನ ಕನ್ನಡ ಹೀರೋ ಇವರೆ: ವೀಕೆಂಡ್ ಕಾರ್ಯಕ್ರಮದಲ್ಲಿ ಇಂಟ್ರಸ್ಟಿಂಗ್ ವಿಚಾರ ಬಹಿರಂಗ
ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ಪ್ರಭುದೇವ ಅವರ ಕನ್ನಡದ ನೆಚ್ಚಿನ ನಟ ಶಂಕರ್ ನಾಗ್ ಎಂದು ಹೇಳಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್-5ನ 2ನೇ ಸಾಧಕರಾಗಿ ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ ಕಾಣಿಸಿಕೊಂಡಿದ್ದರು. ವೀಕೆಂಡ್ ಕುರ್ಚಿ ಏರಿದ್ದ ಪ್ರಭುದೇವ ಅವರ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳು ಬಹಿರಂಗವಾಗಿವೆ. ಕರ್ನಾಟಕ ಮೂಲದ ಪ್ರಭುದೇವ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಡಾನ್ಸರ್, ನೃತ್ಯ ನಿರ್ದೇಶಕರಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಟರಾಗಿರೂ ಪ್ರಭುದೇವ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತೀಯ ಸಿನಿಮಾರಂಗದ ದೊಡ್ಡ ದೊಡ್ಡ ಸ್ಟಾರ್‌ಗಳ ಫೇವರಿಟ್ ಡಾನ್ಸರ್, ಕೊರಿಯೋಗ್ರಾಫರ್ ಪ್ರಭುದೇವ ಕನ್ನಡಿಗರು ಎನ್ನುವುದೇ ಕನ್ನಡಿಗರ ಹೆಮ್ಮೆ.
ಪ್ರಭುದೇವ ಅದ್ಭುತವಾಗಿ ಕನ್ನಡ ಮಾಡುತ್ತಾರೆ ಎನ್ನುವ ವಿಚಾರ ಎಷ್ಟೋ ಜನರಿಗೆ ಗೊತ್ತಿರಲಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರಭುದೇವ ಕನ್ನಡ ಬಹಿರಂಗವಾಗಿದೆ. ಪ್ರಭುದೇವ ಹೆಚ್ಚಾಗಿ ಪಕ್ಕದ ರಾಜ್ಯಗಳಲ್ಲಿ ಇರುತ್ತಾರೆ. ಆದರೂ ಕನ್ನಡ ಮರೆತಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರಭುದೇವ ಅವರ ಬಗ್ಗೆ ಸಾಕಷ್ಟು ವಿಚಾರಗಳು ಬಹಿರಂಗವಾಗಿದೆ. ಕನ್ನಡ ಸಿನಿಮಾಗಳಲ್ಲಿ ಪ್ರಭುದೇವ ಕಾಣಿಸಿಕೊಂಡಿದ್ದು ತೀರ ಕಡಿಮೆ, ಆದರೂ ಕನ್ನಡಿಗರಿಗೆ ಪ್ರಭುದೇವ ಮೇಲೆ ಅಪಾರ ಪ್ರೀತಿ. ಪ್ರಭುದೇವ ಡಾನ್ಸ್ ಇಷ್ಟ ಪಟ್ಟದ ವ್ಯಕ್ತಿಗಳಲಿಲ್ಲ.
ವೀಕೆಂಡ್ ಕುರ್ಚಿಯಲ್ಲಿ ಭಾರತದ ಮೈಕೆಲ್ ಜಾಕ್ಸನ್; 'ನಾನು ಲುಂಗಿ ಹಾಕಲ್ಲ' ಎಂದಿದ್ದೇಕೆ ಪ್ರಭುದೇವ?
ಪ್ರಭುದೇವ ಬಗ್ಗೆ ಕನ್ನಡ ಸ್ಟಾರ್ಸ್ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕುಚ್ಚ ಸುದೀಪ್, ನಟಿ ತಾರಾ, ಕೋರಿಯಗ್ರಾಫರ್ ಚಿನ್ನಿ ಪ್ರಕಾಶ್ ಸೇರಿದಂತೆ ಅನೇಕರು ಪ್ರಭುದೇವ ಅವರನ್ನು ಹೊಗಳಿದ್ದಾರೆ. ಕಿಚ್ಚ ಸುದೀಪ್ ಮಾತನಾಡಿ ಅವರ ಡಾನ್ಸ್ ಯಾರಿಗೆ ತಾನೆ ಇಷ್ಟ ಆಗಲ್ಲ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಭುದೇವ ಮತ್ತು ಸುದೀಪ್ ಇಬ್ಬರೂ ದಬಂಗ್-3 ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸುದೀಪ್ ಅವರನ್ನು ದಬಂಗ್ 3 ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದು ಪ್ರಭುದೇವ ಎನ್ನುವುದನ್ನು ನೆನಪಿಸಿಕೊಂಡರು. ಇನ್ನು ನಟಿ ತಾರಾ ಕೂಡ ಪ್ರಭುದೇವ ಅವರ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಪ್ರಭುದೇವ ಮಾತನಾಡಿದ್ದು ತಮಿಳು ಮಿಶ್ರಿತ ಕನ್ನಡ ಅಲ್ಲ ಚಾಮರಾಜನಗರ ಭಾಷೆ; ರಮ್ಯಾಗಿಂತ ನೀವೇ ಬೆಸ್ಟ್ ಎಂದ ಕನ್ನಡಿಗರು
ಇದೇ ಕಾರ್ಯಕ್ರಮದಲ್ಲಿ ತನ್ನ ನೆಚ್ಚಿನ ಕನ್ನಡ ನಟ ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಪ್ರೇಕ್ಷಕರ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ ನಟ ಪ್ರಭುದೇವ ಆಗ ಕನ್ನಡದ ಫೇವರಿಟ್ ನಟ ಯಾರೆಂದು ಹೇಳಿದ್ದಾರೆ. ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಇದ್ದ ಪ್ರೇಕ್ಷರೊಬ್ಬರು ನೆಚ್ಚಿನ ಕನ್ನಡ ಸ್ಟಾರ್ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಪ್ರಭುದೇವ 'ಶಂಕರ್ ನಾಗ್' ಎಂದು ಹೇಳಿದ್ದಾರೆ. ನಿಮಗೆ ಶಂಕರ್ ನಾಗ್ ಇಷ್ಟನಾ ಎಂದು ರಮೇಶ್ ಅರವಿಂದ್ ಸಹ ಹೇಳಿದರು.