ಪ್ರಭುದೇವ ಮಾತನಾಡಿದ್ದು ತಮಿಳು ಮಿಶ್ರಿತ ಕನ್ನಡ ಅಲ್ಲ ಚಾಮರಾಜನಗರ ಭಾಷೆ; ರಮ್ಯಾಗಿಂತ ನೀವೇ ಬೆಸ್ಟ್ ಎಂದ ಕನ್ನಡಿಗರು
ವೀಕೆಂಡ್ ವಿತ್ ರಮೇಶ್ ಎರಡನೇ ಅತಿಥಿ ಪ್ರಭುದೇವ ಕನ್ನಡ ಪ್ರೇಮಕ್ಕೆ ಫಿದಾ ಆದ ಕನ್ನಡಿಗರು. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಸಪೋರ್ಟ್....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕಮ್ರದಲ್ಲಿ ಎರಡನೇ ಅತಿಥಿಯಾಗಿ ಡ್ಯಾನ್ಸರ್ ಪ್ರಭುದೇವ ಆಗಮಿಸಿದ್ದರು. ಮೊದಲ ಎಪಿಸೋಡ್‌ನಲ್ಲಿ ಕನ್ನಡ ಗೊತ್ತಿದ್ದರೂ ರಮ್ಯಾ ಕನ್ನಡ ಮಾತನಾಡಿಲ್ಲ ಇನ್ನು ಪ್ರಭುದೇವ ಏನು ಮಾತನಾಡುತ್ತಾರೋ ಎಂದು ಯೋಚನೆ ಮಾಡುತ್ತಿದ್ದ ನೆಟ್ಟಿಗರಿಗೆ ಫುಲ್ ಖುಷಿಯಾಗಿದ್ದು ವೀಕೆಂಡ್ ಎಪಿಸೋಡ್ ನೋಡಿದ ಮೇಲೆ....
ಹೌದು! ಎರಡು ದಿನಗಳ ಕಾಲ ಪ್ರಸಾರವಾದ ಎಪಿಸೋಡ್‌ನಲ್ಲಿ ಪ್ರಭುದೇವ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ವಾವ್! ನೀವು ಕಣ್ರೀ ನಮ್ಮ ಅಪ್ಪಟ್ಟ ಕನ್ನಡಿಗ ನಮ್ಮ ನೆಚ್ಚಿನ ಡ್ಯಾನ್ಸ್ ಮಾಸ್ಟರ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಕೆಲವರ ಪ್ರಕಾರ ಪ್ರಭುದೇವ್ ಒತ್ತಾಯಕ್ಕೆ ಕನ್ನಡ ಮಾತನಾಡಿದ್ದರು , ತಮಿಳು ಕನ್ನಡ ಮಾತನಾಡಿದ್ದರು ಎಂದು ಕೊಂಕು ಮಾಡುತ್ತಿದ್ದಾರೆ. ರಮ್ಯಾ ಮಾಡಿದ ಕಿತಾಪತಿಗೆ ಪ್ರಭುದೇವ್ ಸಂಕಷ್ಟದಲ್ಲಿ ಸಿಲುಕಿಕೊಂಡರು ಎನ್ನುತ್ತಾರೆ. ಆದರೆ ಅಸಲಿ ಕಥೆನೇ ಬೇರೆ...
ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ; ರಮ್ಯಾ ಇಂಗ್ಲಿಷ್ ಎಪಿಸೋಡ್‌ಗೆ ರಮೇಶ್ ರಿಯಾಕ್ಷನ್ ವೈರಲ್
ಪ್ರಭುದೇವ್ ಅವರಿಗೆ ಅಪ್ಪಟ್ಟ ಕನ್ನಡ ಬರುತ್ತದೆ. ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು ತಮಿಳು ವಿಶ್ರಿತ ಕನ್ನಡ ಅಲ್ಲ ಚಾಮರಾಜನಗರದ ಸೊಗಡಿನ ಭಾಷೆ. ಅಲ್ಲಿನ ಜನರು ಮದುವೆಗೆ ಮದವ ರವೆ ಉಂಡೆಗೆ ರವವುಂಡ, ತಿನ್ನದು, ಯೋಳಿ, ಮಡಗ್ಬಟ್ಟು, ಆರಾಕು ಮತ್ತು ಉದ್ನಪ್ಪಳ ಸಂಡಗ ಎಂದು ಮಾತನಾಡುತ್ತಾರೆ. ಚಾಮರಾಜನಗರ ತಮಿಳು ನಾಡಿಗೆ ಅಂಟಿಕೊಂಡಿರುವುದಕ್ಕೆ ಬಹುಷ ಅವರು ಭಾಷೆ ಮೇಲೆ ಈ ರೀತಿ ಪ್ರಭಾವ ಇರಬಹುದು. ಕೆಲವರಿಗೆ ಈ ಭಾಷೆ ಅರ್ಥವಾಗದೆ ಕಾಡು ಭಾಷೆ ಎಂದಿದ್ದಾರೆ. ನೀವು ತಿಳಿದುಕೊಂಡಿರುವುದು ಸರಿಯೇ ಏಕೆಂದರೆ ಇದು ಕಾಡಿನ ಜಿಲ್ಲೆಯಲ್ಲಿರುವ ಕಾರಣ ಕಾಡುಭಾಷೆಯೇ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ 'ತತ್ತಯ್ಯ ಒಂದ್ ದ್ವಾಸ್ಯಾ' ಅಂತಿದ್ದರು. ದ್ವಾಸ್ಯಾ ನಾ ಎಂದು ಅನೇಕರು ಕೇಳಿದಾಗ ನಮ್ಮೂರ್ ಭಾಷೆ ಸರ್ ಎಂದು ಹೆಮ್ಮೆಯಿಂದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದರಂತೆ. ಸೋಷಿಯಲ್ ಮೀಡಿಯಾದಲ್ಲಿ ಕುಸುಮಾ ಆಯರಹಳ್ಳಿ ಎಂಬುವರು ಬರೆದುಕೊಂಡಿದ್ದಾರೆ.
ವೀಕೆಂಡ್ ಕುರ್ಚಿಯಲ್ಲಿ ಭಾರತದ ಮೈಕೆಲ್ ಜಾಕ್ಸನ್; 'ನಾನು ಲುಂಗಿ ಹಾಕಲ್ಲ' ಎಂದಿದ್ದೇಕೆ ಪ್ರಭುದೇವ?
'ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದು ತುಂಬಾ ಖುಷಿಯಾಗಿರುವೆ. ಸಾಮಾನ್ಯವಾಗಿ ನಾನು ಫ್ಯಾಮಿಲಿ ಮತ್ತು ಸ್ನೇಹಿತರನ್ನು ಸಪರೇಟ್ ಆಗಿ ನೋಡುವೆ. ಚೆನ್ನೈ ಸ್ನೇಹಿತರು ಬೇರೆ ಇದ್ದಾರೆ ಊರಿನ ಸ್ನೇಹಿತರು ಬೇರೆ ಇದ್ದಾರೆ..ಕೆಲಸ ಮಾಡುವವರ ಜೊತೆ ಸಪರೇಟ್ ಆಗಿರುವೆ ಆದರೆ ಇದೇ ಮೊದಲು ಒಂದೇ ಜಾಗದಲ್ಲಿ ಎಲ್ಲರನ್ನು ಒಟ್ಟಿಗೆ ನೋಡಿರುವುದು. ತುಂಬಾ ಎಂಜಾಯ್ ಮಾಡಿರುವೆ. ಕೆಲವರನ್ನು ನೋಡಿ ಆಶ್ಚರ್ಯವಾಯ್ತು ನನ್ನ ಅವ್ವ ಅಂದ್ರೆ ತಾಯಿ ಅವರ ತಾಯಿ ಟಿವಿ ವೇದಿಕೆ ಮೇಲೆ ಬಂದೇ ಇಲ್ಲ. ನನ್ನ ಹಳ್ಳಿ ಸ್ನೇಹಿತರು ಈ ರೀತಿ ವೇದಿಕೆಯಲ್ಲ ನೋಡಿಲ್ಲ. ಮನಸ್ಸಿನಲ್ಲಿ ಏನಿತ್ತು ಅದನ್ನು ಮಾತನಾಡಿದ್ದೀನಿ ಕೆಲವೊಂದು ವಿಚಾರ ಮರೆತಿರಬಹುದು..ಈ ಸಮಯದಲ್ಲಿ ಏನು ಹೇಳಬೇಕು ಮನಸ್ಸು ಬಿಚ್ಚಿ ಮಾತನಾಡಿರುವ' ಎಂದು ಪ್ರಭುದೇವ್ ಮಾತನಾಡಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಪ್ರಭುದೇವ 50ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. 'ನಾನು ತುಂಬಾ ಲಕ್ಕಿ ಮತ್ತು ಪುಣ್ಯ ಮಾಡಿದೆ ನಿಮ್ಮನ್ನು ಮದುವೆ ಮಾಡಿಕೊಳ್ಳಲು' ಎಂದು ಅವರ ಪ್ರಭು ಪತ್ನಿ ವಿಡಿಯೋದಲ್ಲಿ ಹೇಳಿದ್ದಾರೆ. 'Take it easy ಎಂಜಾಯ್ ಲೈಫ್ ' ಎಂದು ಎಲ್ಲರಿಗೂ ಸಿಂಪಲ್ ಸಲಹೆ ಕೊಟ್ಟಿದ್ದಾರೆ.