Asianet Suvarna News Asianet Suvarna News

ಪವಿತ್ರಾ ಜಯರಾಂ ಸಂಬಂಧಿ ಮಂಡ್ಯದ ಲೋಕೇಶ್‌ ಚಂದು ಲವ್, ಆತ್ಮಹತ್ಯೆ ಬಗ್ಗೆ ಹೇಳಿದ್ದೇನು?

ನಾಲ್ಕು ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ತನ್ನ ಕಣ್ಣೆದುರೇ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದನ್ನು ನೋಡಿ ನಟ ಚಂದು ಆಘಾತಕ್ಕೊಳಗಾಗಿದ್ದರು. ಪವಿತ್ರಾ ಜಯರಾಮ್ ಸಾವನ್ನು..

Pavithra Jayaram relative Mandya Lokesh talks about Chandu love towards Pavithra Jayaram srb
Author
First Published May 18, 2024, 12:54 PM IST

ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಸಾವಿನ ಬೆನ್ನಲ್ಲೇ ಡಿಫ್ರೆಶನ್‌ಗೆ ಒಳಗಾಗಿದ್ದ ನಟ, ಪವಿತ್ರಾ ಸ್ನೇಹಿತ ಚಂದು (Actor Chandu) ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. 'ರಾಧಮ್ಮ ಪೆಳ್ಳಿ' ಮತ್ತು 'ಕಾರ್ತಿಕ ದೀಪಂ' ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದ ನಟ ಚಂದು, ನಟಿ ಪವಿತ್ರಾ ಅವರನ್ನು ಪ್ರೀತಿಸುತ್ತಿದ್ದು, ಅವರ ಸಾವಿನ ಬಳಿಕ ತೀವ್ರ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ನಿನ್ನೆ ಸಾಯಂಕಾಲ ನಟ ಚಂದು ಮಣಿಕೊಂಡದಲ್ಲಿರುವ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ ಬಗ್ಗೆ ಈಗಾಗಲೇ ವರದಿಯಾಗಿದ್ದು, ಹೊಸ ಸಂಗತಿ ಎಂದರೆ, ಪವಿತ್ರಾ ಜಯರಾಂ ಅವರನ್ನು ಇದೀಗ ಆತ್ಮಹತ್ಯೆ ಮಾಡಿಕೊಂಡು ಅಗಲಿರುವ ನಟ ಚಂದು ತುಂಬಾ ಪ್ರೀತಿಸುತ್ತಿದ್ದರು ಎಂ ಬಗ್ಗೆ ಮಂಡ್ಯದಲ್ಲಿರುವ ನಟಿ ಪವಿತ್ರ ಜಯರಾಂ ಸಂಬಂಧಿ ಲೋಕೇಶ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರು 'ನಟಿ ಪವಿತ್ರ ಜಯರಾಂ ಸಾವಿನ ಬೆನ್ನಲ್ಲೇ ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗು ಇಂಡಸ್ಟ್ರಿ ಸೇರಿದ ಬಳಿಕ ಪವಿತ್ರಾಗೆ ಚಂದು ಪರಿಚಯವಾಗಿದ್ದರು. ಅವರಿಬ್ಬರೂ ಒಟ್ಟಿಗೇ, ಒಂದೇ ಧಾರವಾಹಿಯಲ್ಲಿ ನಟಿಸುತ್ತಿದ್ದರು.

ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ 'ತ್ರಿನಯನಿ' ನಟ ಚಂದು ಆತ್ಮಹತ್ಯೆ!

ನಟ ಚಂದು ಅವರು ಪವಿತ್ರಾ ಅವರನ್ನು ತುಂಬಾ ಹಚ್ಚಿಕೊಂಡಿದ್ರು. ಎರಡು ಮೂರು ಬಾರಿ ನಮ್ಮ ಮನೆಗೂ ಬಂದಿದ್ದರು. ಪವಿತ್ರ ಅಂತ್ಯಕ್ರಿಯೆಗೆ ಬಂದಿದ್ದ ವೇಳೆ, ನಟ ಚಂದು ತುಂಬಾ ಡಿಪ್ರೆಶನ್‌ಗೆ ಒಳಗಾಗಿದ್ರು. ಪವಿತ್ರಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ ಅಂತಾ ಹೇಳ್ತಿದ್ರು. ಅವರನ್ನು ಬಿಟ್ಟಿರಲು ಆಗಲ್ಲ ಅಂತಾ ಇದ್ದರು. ಪವಿತ್ರ ಸಾವಿನಿಂದ ಬದುಕಲು ಇಷ್ಟವಿಲ್ಲ ಎಂದು ಚಂದು ಹೇಳ್ತಾ ಇದ್ರು. ಏನೇ ತೊಂದರೆ ಇದ್ರು ಬನ್ನಿ ಅಂತಾ ನನಗೆ ಅವರ ನಂಬರ್ ಕೂಡ ಕೊಟ್ಟಿದ್ದರು. ಪವಿತ್ರ ಅವರ ನೆನಪಲ್ಲೇ ಚಂದು ಇದ್ದರು. ನನಗೆ ನಿನ್ನೆ ರಾತ್ರಿ 11.30ಕ್ಕೆ ನಟ ಚಂದು ಆತ್ಮಹತ್ಯೆ ವಿಚಾರ ತಿಳಿಯಿತು' ಎಂದಿದ್ದಾರೆ.

ಡಾ ರಾಜ್‌ ನೇತೃತ್ವದ ಗೋಕಾಕ್ ಚಳುವಳಿಗೆ ವಿಷ್ಣುವರ್ಧನ್ ಬಂದಿರಲಿವೇ? ರಿಯಲ್ ಸೀಕ್ರೆಟ್ ಏನು?

ನಟ ಚಂದು ಅವರು 'ತ್ರಿನಯನಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ಮದುವೆಯಾಗಿದ್ದ ಚಂದು, ಪತ್ನಿ ಶಿಲ್ಪಾ ಪ್ರೇಮಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ಚಂದು ಅವರು 'ರಾಧಮ್ಮ ಪೆಳ್ಳಿ' ಮತ್ತು 'ಕಾರ್ತಿಕ ದೀಪಂ' ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಇಂದು ಆತ್ಮಹತ್ಯೆ ಮಾಡಿಕೊಂಡಿರುವ ನಟ ಚಂದು ಅವರು ಇತ್ತೀಚೆಗೆ ಅಪಘಾತದಲ್ಲಿ ತೀರಿಕೊಂಡ ನಟಿ ಪವಿತ್ರಾ ಜಯರಾಮ್ ಅವರ ಸ್ನೇಹಿತರಾಗಿದ್ದರು ಎಂಬ ಸಂಗತಿ ಇದೀಗ ಜಗಜ್ಜಾಹೀರಾಗಿದೆ. ಚಂದು ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಅದೊಂದೇ ಸಿನಿಮಾ ಸೋಲಿನಿಂದ ಗೋವಿಂದ ನಟನೆ ಬಿಟ್ಟು ರಾಜಕೀಯ ಸೇರಿಕೊಂಡ್ರು!

ನಾಲ್ಕು ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ತನ್ನ ಕಣ್ಣೆದುರೇ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದನ್ನು ನೋಡಿ ನಟ ಚಂದು ಆಘಾತಕ್ಕೊಳಗಾಗಿದ್ದರು. ಪವಿತ್ರಾ ಜಯರಾಮ್ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಪವಿತ್ರಾ-ಚಂದು ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಜೊತೆಯಲ್ಲೇ ವಾಸಿಸುತ್ತಿದ್ದರು, ಮದುವೆಯಾಗಿದ್ದರು ಎಂಬ ಮಾತುಗಳು ಹೇಳಿ ಬಂದಿದ್ದವು.

ಅಮೆರಿಕಾ ನೆಲದಲ್ಲೇ ಪತಿ ಕಾಲೆಳೆದ ಪ್ರಿಯಾಂಕಾ ಚೋಪ್ರಾ; ಪತ್ನಿಗೆ ನಿಕ್ ಜೊನಾಸ್ ಮಾಡಿದ್ದೇನು?

ಇತ್ತೀಚೆಗೆ ನಡೆದ ಕಾರು ಅಪಘಾತದಲ್ಲಿ ಚಂದು ಗಾಯಗೊಂಡಿದ್ದರು. ಗೆಳತಿಯ ಸಾವಿನಿಂದ ಸಾಕಷ್ಟು ನೊಂದಿದ್ದರು. ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರೇ ಇದನ್ನು ಹೇಳಿಕೊಂಡಿದ್ದರು. ಪ್ರೀತಿ ಮದುವೆ ಬಗ್ಗೆ ಅವ್ರೇ ಹೇಳಿಕೊಂಡಿದ್ದಾರೆ. ನಿನ್ನೆ, 17 ಮೇ 2024ರಂದು ಶುಕ್ರವಾರ ಸಂಜೆ ವೇಳೆ ಜಿಮ್ ಕೋಚ್‌ಗೆ ಕರೆ ಮಾಡಿದ್ದ ಚಂದು ಜಿಮ್ ಗೆ ಹೋಗೋಣ ಎಂದು ಹೇಳಿದ್ದರಂತೆ. ಆದರೆ ಬಳಿಕ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Latest Videos
Follow Us:
Download App:
  • android
  • ios