Asianet Suvarna News Asianet Suvarna News

ಅಮೆರಿಕಾ ನೆಲದಲ್ಲೇ ಪತಿ ಕಾಲೆಳೆದ ಪ್ರಿಯಾಂಕಾ ಚೋಪ್ರಾ; ಪತ್ನಿಗೆ ನಿಕ್ ಜೊನಾಸ್ ಮಾಡಿದ್ದೇನು?

ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊನಾಸ್‌ ಮದುವೆಯಾಗಿ ಅಮೆರಿಕಾಕ್ಕೆ ಹೋದ ಬಳಿಕ, ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಜತೆಗೆ, ಅಲ್ಲಿನ ಹಾಲಿವುಡ್ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತ ಅಲ್ಲಿನ ಮನರಂಜನಾ..

Actress Priyanka Chopra comedy talks on american venue in front of nick jonas srb
Author
First Published May 17, 2024, 5:26 PM IST

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿಹೋಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅಮೆರಿಕಾದ ನೆಲದಲ್ಲಿ ನಿಕ್ ಜೊನಾಸ್ ಬ್ರದರ್ಸ್‌ ಕಾಲೆಳೆದಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ವೇದಿಕೆಯೊಂದರಲ್ಲಿ ಮಾತನಾಡುತ್ತ 'ನಾನು ಸಂಸ್ಕೃತಿ, ಸಂಗೀತ ಹಾಗು ಮನರಂಜನಾ ಕ್ಷೇತ್ರದಲ್ಲಿ ಮೇಲ್ಮಟ್ಟದಲ್ಲಿರುವ ಭಾರತದ ನೆಲದಿಂದ ಬಂದವಳು. ನಾನು ಈ ನಿಕ್ ಬ್ರದರ್ಸ್‌ಗೆ ನಮ್ಮ ನೆಲದ ಹಲವು ಶ್ರೇಷ್ಠ ಸಂಗತಿಗಳನ್ನು ಹೇಳಿಕೊಟ್ಟಿದ್ದೇನೆ. ನಾವು ಹಾಗೇ ಇದ್ದೇವೆ, ನಾವು ಪರಸ್ಪರ ಕಲಿಸುತ್ತೇವೆ, ಕಲಿಯುತ್ತೇವೆ' ಎಂದಿದ್ದಾರೆ. 

ನಮ್ಮಿಬ್ಬರ ನಡುವೆ (ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್) ಮಧ್ಯೆ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ನಿಕ್‌ಗೆ (Nick Jonas) 1990ರ ದಶಕದ ಹಲವು ಸಂಗತಿಗಳು ಗೊತ್ತಿಲ್ಲ. ನಾನು ಅದನ್ನು ಅವರಿಗೆ ಹೇಳುತ್ತಿರುವೆ. ಹಾಗೇ, ನನಗೆ ಟಿಕ್‌ಟಾಕ್‌ ಗೊತ್ತಿಲ್ಲ, ಅದನ್ನು ನಿಕ್ ನನಗೆ ಕಲಿಸುತ್ತಿದ್ದಾರೆ. ಈ ರೀತಿಯಲ್ಲಿ ನಾವು ಒಬ್ಬರಿಗೊಬ್ಬರು ಕಲಿಸುತ್ತ, ಕಲಿಯುತ್ತ ಚೆನ್ನಾಗಿ ಪರಸ್ಪರ ಅರ್ಥ ಮಾಡಿಕೊಂಡು ಹಾಯಾಗಿ ಲೈಫ್ ಲೀಡ್ ಮಾಡುತ್ತಿದ್ದೇವೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

ಐಶ್ವರ್ಯಾ ರೈ-ಅಭಿಷೇಕ್ ಮದುವೆಯಲ್ಲಿ ಕಪಿಲ್ ಕೊಟ್ಟ ಗಿಫ್ಟ್ ಏನು; ಐಶೂ ನಕ್ಕಿದ್ದೇಕೆ?

ಮುಂದುವರೆದ ಪ್ರಿಯಾಂಕಾ 'ನಾನು ನಿಕ್ ಬ್ರದರ್ಸ್‌ಗೆ ಸಕ್ಸಸ್‌ ತರಬಲ್ಲ ನಟನೆ ಹೇಳಿಕೊಡುತ್ತೇನೆ. ಅವರಿಂದ ನಾನು ಪಾಪ್ ಹಾಡುಗಳನ್ನು ಕಲಿತಿದ್ದೇನೆ' ಎಂದು ಹೇಳಿ ನಾನಾ ರೀತಿಯಲ್ಲಿ ನಿಕ್ ಜೊನಾಸ್ ಬ್ರದರ್ಸ್ ಕಾಲೆಳೆದಿದ್ದಾರೆ. ಪ್ರಿಯಾಂಕಾ ಮಾತುಗಳಿಗೆ ನಗುತ್ತಿದ್ದ ನಿಕ್ ಜೊನಾಸ್ ಯಾವುದಕ್ಕೂ ಬೇಸರ ಮಾಡಿಕೊಳ್ಳದೇ ಪತ್ನಿಯ ಜೋಕ್‌ಗೆ ಜೋರಾಗಿಯೇ ನಗುತ್ತಿದ್ದರು. 

ಉಪೇಂದ್ರರ 'ಎ' ಚಿತ್ರ ಪ್ರದರ್ಶನದ ವೇಳೆ ಕಾವೇರಿ ಥಿಯೇಟರ್‌ಗೆ ಪೊಲೀಸರು ಬಂದಿದ್ದೇಕೆ?

ಒಟ್ಟಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊನಾಸ್‌ ಮದುವೆಯಾಗಿ ಅಮೆರಿಕಾಕ್ಕೆ ಹೋದ ಬಳಿಕ, ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಜತೆಗೆ, ಅಲ್ಲಿನ ಹಾಲಿವುಡ್ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತ ಅಲ್ಲಿನ ಮನರಂಜನಾ ಉದ್ಯಮದಲ್ಲೇ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾ ಆಫರ್‌ಗಳು ಸಾಕಷ್ಟು ಇದ್ದರೂ ಪ್ರಿಯಾಂಕಾ ಅವುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕಾರಣ, 'ನಾನು ನನ್ನ ಫ್ಯಾಮಿಲಿಯನ್ನು ಅಂದರೆ ನಿಕ್ ಜೊನಾಸ್‌ ಅವರನ್ನು ಬಿಟ್ಟು ಬಹಳಷ್ಟು ದಿನಗಳು ಶೂಟಿಂಗ್‌ನಲ್ಲಿ ಇಂಡಿಯಾದಲ್ಲಿ ಕಳೆಯಲಾರೆ'ಎಂದಿದ್ದಾರೆ. 

ಕಿಚ್ಚ ಸುದೀಪ್ 'ನಂದಿ' ನಟಿ ಸಿಂಧು ಮೆನನ್ ಲಂಡನ್‌ನಲ್ಲಿ ಏನ್ಮಾಡ್ತಿದಾರೆ; ಯಾಕೆ ನಟಿಸ್ತಿಲ್ಲ?

Latest Videos
Follow Us:
Download App:
  • android
  • ios