Bigg Boss Kannada 9; ಕೋಟಿ ಕೊಟ್ರು ಹೋಗಲ್ಲ ಎಂದ ಬ್ರಹ್ಮಾಂಡ ಗುರೂಜಿ, ಬಿಗ್ ಮನೆಗೆ ಹೋಗೊರ್ಯಾರು?
ಬ್ರಹ್ಮಾಂಡ ಗುರೂಜಿ ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಹ್ಮಾಂಡ ಗುರೂಜಿ ಕೋಟಿ ಕೊಟ್ಟರು ಬಿಗ್‌ಬಾಸ್‌ಗೆ ಹೋಗಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಒಟಿಟಿ ಶೋ ಮುಗಿಯುತ್ತಿದ್ದಂತೆ ಟಿವಿ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಟಿವಿ ಬಿಗ್ ಬಾಸ್‌ಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು ಸೆಪ್ಟಂಬರ್ 24ರಿಂದ ಟಿವಿ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಬಿಗ್ ಬಾಸ್ ಬರ್ತಿದೆ ಎನ್ನುತ್ತಿದ್ದಂತೆ ಯಾರೆಲ್ಲ ಬರ್ತಾರೆ, ಯಾವೆಲ್ಲ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೆ ಈ ಬಾರಿ ಬಿಗ್ ಬಾಸ್ ನಲ್ಲಿಯೂ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಈಗಾಗಲೇ ಸಂಭಾವ್ಯ ಪಟ್ಟಿ ವೈರಲ್ ಆಗಿದೆ. ಅಂದಹಾಗೆ ಈ ಬಾರಿ ಬಿಗ್ ಬಾಸ್‌ನ ವಿಶೇಷ ಎಂದರೆ ಹೊಸಬರ ಜೊತೆ ಹಳೆಯ ಸ್ಪರ್ಧಿಗಳು ಸಹ ಭಾಗಿಯಾಗುತ್ತಿದೆ. ಹೌದು, ಬಿಗ್ ಬಾಸ್ 9 ಜೂನಿಯರ್ಸ್ ವರ್ಸಸ್ ಸೀನಿಯರ್ ಎನ್ನುವ ಕಾನೆಪ್ಟ್‌ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಜೊತೆಗೆ ಒಟಿಟಿಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ 4 ಜನ ಟಿವಿ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ಬಿಗ್ ಬಾಸ್ ಒಟಿಟಿ ಯಿಂದ ಟಿವಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟವರಲ್ಲಿ ರೂಪೇಶ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಮತ್ತು ಸಾನ್ಯ ಅಯ್ಯರ್ ಇದ್ದಾರೆ. ಹಾಗಾಗಿ ಈ ಬಾರಿಯ ಬಿಗ್ ಬಾಸ್ ಕೊಂಚ ವಿಭಿನ್ನವಾಗಿದೆ. ಇದರಲ್ಲಿ ಬ್ರಹ್ಮಾಂಡ ಗುರೂಜಿ ಹೆಸರು ಕೇಳಿಬರುತ್ತಿದೆ. ಬ್ರಹ್ಮಾಂಡ ಗುರೂಜಿ ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
Bigg Boss OTT: ಟಾಪರ್ ಆದ ರೂಪೇಶ್ ಶೆಟ್ಟಿ ಗೆದ್ದ ಬಹುಮಾನದ ಮೊತ್ತವೆಷ್ಟು?
ಕೋಟಿ ಕೊಟ್ಟರು ಬಿಗ್‌ಬಾಸ್‌ಗೆ ಹೋಗಲ್ಲ ಎಂದಿರುವ ಬ್ರಹ್ಮಾಂಡ ಗುರೂಜಿ, ಅಲ್ಲಿಗೆ ಹೋಗಿ ಮತ್ಯಾಕೆ ಮರ್ಯಾದೆ ಕಳೆದುಕೊಳ್ಳಬೇಕು ಎಂದಿದ್ದಾರೆ. ಅಂದ್ಮೇಲೆ ಬ್ರಹ್ಮಾಂಡ ಗುರೂಜಿ ಹೋಗುತ್ತಿದ್ದಾರೆ ಎನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಅಂದ್ಮೇಲೆ ಇನ್ನು ಯಾರೆಲ್ಲಾ ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸದ್ಯ ವೈರಲ್ ಆಗಿರುವ ಹೆಸರುಗಳೆಂದರೆ ಸೋಶಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದ್ರು, ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯಾ, ಮುದ್ದುಮಣಿಗಳು ಖ್ಯಾತಿಯ ಸಮೀಕ್ಷಾ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ ಕಾಮತ್, ಮಜಾಭಾರತ ಖ್ಯಾತಿಯ ಚಂದ್ರಪ್ರಭ ಗಾಯಕಿ ಆಶಾ ಭಟ್ ಹೆಸರುಗಳು ವೈರಲ್ ಆಗಿವೆ.
ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್, ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!
ಸದ್ಯ ವೈರಲ್ ಆಗಿರುವ ಹೆಸರುಗಳಲ್ಲಿ ನಿಜಕ್ಕೂ ಬಿಗ್ ಮನೆಗೆ ಹೋಗುವವರು ಯಾರು ಎನ್ನುವುದು ಬಿಗ್ ಬಾಸ್ ಪ್ರಾರಂಭ ಆದ್ಮೇಲೆ ಗೊತ್ತಾಗಲಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಒಟಿಟಿ ಬಿಗ್ ಬಾಸ್ ಮುಗಿಸಿರುವ ಕಿಚ್ಚ ಇದೀಗ ಮತ್ತೆ ಟಿವಿ ಬಿಗ್ ಬಾಸ್ ಗೆ ತಯಾರಾಗಿದ್ದಾರೆ. ಸೀನಿಯರ್ಸ್ ಮತ್ತು ಜೂನಿರ್ಯ್ ಜೊತೆಗೆ ಹೊಸ ಸ್ಪರ್ಧಿಗಳ ಬಿಗ್ ಬಾಸ್ ಹೇಗಿರಲಿದೆ ಎಂದು ಕಾದುನೋಡಬೇಕು.