ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್, ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!

ಕಳೆದ 6 ವಾರಗಳಿಂದ ಕನ್ನಡಗರನ್ನು ರಂಜಿಸಿದ ಬಿಗ್‌ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಒಟಿಟಿ ವರ್ಶನ್ ಆರಂಭಿಸಲಾಗಿತ್ತು. ಚೊಚ್ಚಲ ಬಿಗ್‌ ಬಾಸ್ ಕನ್ನಡ ಒಟಿಟಿಯಲ್ಲಿ ನಾಲ್ವರು ಫೈನಲಿಸ್ಟ್ 9ನೇ ಆವೃತ್ತಿ ಬಿಗ್‌ಬಾಸ್‌ಗೆ ಪ್ರವೇಶ ಪಡೆದಿದ್ದಾರೆ. 
 

Bigg Boss OTT grand Finale Top 4 Finalists Aryavardhan Roopesh sanya and Rakesh enter Bigg Boss Kannada season 9 ckm

ಬೆಂಗಳೂರು(ಸೆ.16):  ಇದೇ ಮೊದಲ ಬಾರಿಗೆ ಆರಂಭಗೊಂಡ ಕನ್ನಡ ಬಿಗ್‌ ಬಾಸ್ ಒಟಿಟಿ ಅದ್ಧೂರಿಯಾಗಿ ತೆರೆಕಂಡಿದೆ.  ಇಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಂಬರ್ ಅಂದರೆ ನಾನು ಎನ್ನುತ್ತಲೇ ಜನಪ್ರಿಯರಾದ ಗುರೂಜಿ ಆರ್ಯವರ್ಧನ್ 9ನೇ ಆವೃತ್ತಿ ಬಿಗ್ ಬಾಸ್ ಕನ್ನಡ ರಿಲಿಯಾಟಿ ಶೋಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ನೀಡಿದರು. ಇನ್ನು ಕೋಸ್ಟಲ್‌ವುಡ್ ಸ್ಟಾರ್ ರೂಪೇಶ್ ಶೆಟ್ಟಿ ಎರಡನೇ ಸ್ಪರ್ಧಿಯಾಗಿ ಅವಕಾಶ ಪಡೆದಿದ್ದಾರೆ. ಸಾನ್ಯ ಅಯ್ಯರ್, ರಾಕೇಶ್ ಅಡಿಗ ಕೂಡ 9ನೇ ಆವೃತ್ತಿ ಬಿಗ್ ಬಾಸ್‌ಗೆ ಅವಕಾಶ ಪಡೆದಿದ್ದಾರೆ. ಈ ಮೂಲಕ ಒಟಿಟಿಯಿಂದ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿ ಬಾಗ್‌ ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ.  ಸೆಪ್ಟೆಂಬರ್ 24 ರಿಂದ 9ನೇ ಆವೃತ್ತಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭಗೊಳ್ಳುತ್ತಿದೆ. 

ಒಟಿಟಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಹಂತಕ್ಕೆ ಸೋಮಣ್ಮ ಮಾಚಿಮಾಡ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ರಾಕೇಶ್ ಅಡಿಗ, ಸೋನು ಗೌಡ, ಸಾನ್ಯ ಅಯ್ಯರ್, ಜಶ್ವಂತ್ ಬೋಪಣ್ಣ ಹಾಗೂ ಜಯಶ್ರಿ ಆಯ್ಕೆಯಾಗಿದ್ದರು.  8 ಸ್ಪರ್ಧಿಗಳ ಪೈಕಿ ನಾಲ್ವರು 9ನೇ ಆವೃತ್ತಿಗೆ ಬಡ್ತಿ ಪಡೆದಿದ್ದಾರೆ. 

 

BIGG BOSS 16: ಪೂನಂ ಪಾಂಡೆ ಸೇರಿದಂತೆ ಇವರೆಲ್ಲಾ ಬಿಗ್ ಬಾಸ್ 16 ಸ್ಪರ್ಧಿಗಳು!

ಗ್ರ್ಯಾಂಡ್ ಫಿನಾಲೆಗೆ ಬಂದು ಎಲಿಮಿನೇಟ್
ಒಟಿಟಿ ಫಿನಾಲೆಯಲ್ಲಿ ಮೊದಲಿಗೆ ಜಶ್ವಂತ್ ಬೋಪಣ್ಣ ಹಾಗೂ ಜಯಶ್ರಿ ಎಲಿಮಿನೇಟ್ ಆದರು. ಮೂರನೇ ಸರದಿ ಸುದ್ದಿ ವಾಹಿನಿ ನಿರೂಪಕ ಸೋಮಣ್ಣ ಮಾಚಿಮಾಡ . ಇನ್ನೂ ಸೋನು ಗೌಡ ಕೂಡ ಎಲಿಮಿನೇಟ್ ಆಗಿದ್ದಾರೆ. 

ಬಿಗ್‌ಬಾಸ್ ಒಟಿಟಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ, ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಸಾನ್ಯಾ ಅಯ್ಯರ್, ಸಂಖ್ಯಾಶಾಸ್ತ್ರ ಖ್ಯಾತಿಯ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿವಾಡ, ರೂಪೇಶ್ ಶೆಟ್ಟಿ, ರಾಕೇಶ್, ಜಯಶ್ರೀ ಆರಾಧ್ಯ, ಪ್ರೇಮಿಗಳಾಗಿರುವ ಜಶ್ವಂತ್ ಬೋಪಣ್ಣ  ಫಿನಾಲೆಗೆ ಎಂಟ್ರಿಕೊಟ್ಟಿದ್ದರು. ಇದರಲ್ಲಿ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ಸಾನ್ಯ ಅಯ್ಯರ್ , ರಾಕೇಶ್ ಅಡಿಗ ಫೈನಲಿಸ್ಟ್ ಆಗೋ ಮೂಲಕ 9ನೇ ಆವೃತ್ತಿ ಬಿಗ್ ಬಾಸ್‌ಗೆ ಎಂಟ್ರಿ ಟಿಕೆಟ್ ಪಡೆದಿದ್ದಾರೆ. 

ಕಿಚ್ಚ ಸುದೀಪ್ ಸಂಭಾವನೆ
ಬಿಗ್ ಬಾಸ್ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ಅವರಿಗೆ ಸಂಭಾವನೆ ಎಷ್ಟು ಎನ್ನುವ ಚರ್ಚೆ ಪ್ರಾರಂಭವಾಗಿದೆ. ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಮೂಲಗಳ ಪ್ರಕಾರ ಸುದೀಪ್ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಬ್ರಾಂಡ್ ಆಗಿರುವ ಸುದೀಪ್ ಅದ್ಭುತವಾಗಿ ಶೋ ಹೋಸ್ಟ್ ಮಾಡುತ್ತಾರೆ. ಕಿಚ್ಚನ ಶೈಲಿ ಎಲ್ಲರಿಗೂ ತುಂಬಾ ಇಷ್ಟವಾಗಿದೆ. 

Latest Videos
Follow Us:
Download App:
  • android
  • ios