ಸೀತಮ್ಮ ಸಿಹಿ ನಡುವೆ ರಿಯಲ್ ಪಾನಿಪೂರಿ ಚಾಲೆಂಜ್! ಸಿಹಿ ಪುಟ್ಟನ್ನ ಸೋಲಕ್ಕೆ ಬಿಟ್ಲಾ ಸೀತಮ್ಮ?
ಸೀತಾರಾಮದ ಸೀತಮ್ಮ ಮತ್ತು ಸಿಹಿ ಇಬ್ಬರು ರಿಯಲ್‌ನಲ್ಲಿ ಪಾನಿಪುರಿ ಚಾಲೆಂಜ್ ಹಾಕ್ಕೊಂಡಿದ್ದಾರೆ. ಆದರೆ ಈ ಚಾಲೆಂಜ್‌ನಲ್ಲಿ ಸಿಹಿನಾ ಸೋಲೋದಕ್ಕೆ ಬಿಡ್ತಾಳ ಸೀತಮ್ಮ?
'ಸೀತಾರಾಮ' ಸೀರಿಯಲ್‌ನ ಸೀತಮ್ಮ ಮತ್ತು ಸಿಹಿ ಆನ್ ಸ್ಕ್ರೀನ್ ಮಾತ್ರ ಅಲ್ಲ, ಆಫ್ ಸ್ಕ್ರೀನ್ ಕೂಡ ಸಖತ್ ಕ್ಲೋಸ್. ಸೀರಿಯಲ್‌ನಲ್ಲಿ ಅವರಿಬ್ಬರ ಬಾಂಡಿಂಗ್ ನೋಡಿ ಮೆಚ್ಚಿಕೊಳ್ಳದವರಿಲ್ಲ. ಸೀತಮ್ಮನ ಪಾತ್ರದಲ್ಲಿ ವೈಷ್ಣವಿ ಆ ಥರ ಮನಮುಟ್ಟುವ ಹಾಗೆ ನಟಿಸಿದ್ದಾರೆ. ಅದೇ ರೀತಿ ಮುದ್ದಾದ ಮಗು ಸಿಹಿಯ ಪಾತ್ರದಲ್ಲಿ ರೀತು ಸಿಂಗ್ ಎಂಬ ನೇಪಾಳ ಮೂಲದ ಪೋರಿ ಅದ್ಭುತವಾಗಿ ಅಭಿನಯಿಸಿದ್ದಾಳೆ. ಎಷ್ಟೋ ಸಲ ಸ್ಕ್ರೀನ್‌ನಲ್ಲಿ ಬಹಳ ಕ್ಲೋಸ್ ರಿಲೇಶನ್ ಶಿಪ್‌ನಲ್ಲಿರುವ ಮಂದಿ ಶೂಟಿಂಗ್ ಮುಗಿದ ಬಳಿಕ ಎಷ್ಟು ಬೇಕೋ ಅಷ್ಟೇ ಸಂಬಂಧ ಇಟ್ಕೊಂಡಿರ್ತಾರೆ. ಆದರೆ ಕೆಲವರು ಅದಕ್ಕೆ ಅಪವಾದ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಬರ್ತಿದ್ದ 'ಲಕ್ಷಣ' ಸೀರಿಯಲ್‌ನ ನಕ್ಷತ್ರ ಪಾತ್ರ ಮಾಡಿದ ವಿಜಯಲಕ್ಷ್ಮೀ, ಡೆವಿಲ್ ಭಾರ್ಗವಿಯಾಗಿ ಮಿಂಚಿದ್ದ ಪ್ರಿಯಾ ಷಟಮರ್ಶನ ಹಾಗೂ ಶ್ವೇತಾ ಎಂಬ ವಿಲನ್ ಪಾತ್ರದಲ್ಲಿ ಎಲ್ಲರಿಂದ ಉಗಿಸಿಕೊಳ್ತಿದ್ದ ಸುಕೃತಾ ಈ ಮೂವರೂ ರಿಯಲ್‌ನಲ್ಲಿ ದಿ ಬೆಸ್ಟ್ ಫ್ರೆಂಡ್ಸ್. ಇಂದಿಗೂ ಟೈಮ್ ಸಿಕ್ಕಾಗ ಒಟ್ಟು ಸೇರ್ತಾರೆ. ಎಲ್ಲೆಲ್ಲೋ ಸುತ್ತಾಡಿ ಬಂದು ಲೈಫನ್ನ ಎನ್‌ಜಾಯ್ ಮಾಡ್ತಾರೆ. ಆದರೆ ಸದ್ಯ ಪ್ರಿಯಾ ಅವರು ಒಂದಾದ ಮೇಲೊಂದು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಆದಕಾರಣ ಇದಕ್ಕೆ ಸ್ವಲ್ಪ ಬ್ರೇಕ್ ಬಿದ್ದಿರಬಹುದು.
ಈಗ ಸೀತಾ ಮತ್ತು ಸಿಹಿ ವಿಚಾರಕ್ಕೆ ಬಂದರೆ ಸೀರಿಯಲ್‌ನಲ್ಲೂ ಸೀತಾ, ಸಿಹಿಯ ರಿಯಲ್ ತಾಯಿ ಅಲ್ಲ. ಅವಳು ಸರೊಗೇಟ್ ಮದರ್. ಇದನ್ನು ಬಾಡಿಗೆ ಗರ್ಭ ಅಂತಾರೆ. ತನ್ನ ತಾಯಿಯ ಆಪರೇಶನ್‌ಗಾಗಿ ಹಣ ಹೊಂದಿಸಲು ಸೀತಾ ಸರೊಗೇಟ್ ಪ್ರೆಗ್ನೆನ್ಸಿಗೆ ಒಪ್ಪಿಕೊಳ್ತಾಳೆ. ಆದರೆ ಮುಂದೆ ಅವಳು ಮಗುವಿಗೆ ಜನ್ಮ ನೀಡಿದಾಗ ಮಗುವಿನ ನಿಜವಾದ ತಂದೆ ತಾಯಿ ಮಗುವನ್ನು ಸ್ವೀಕರಿಸಲು ಬರೋದೇ ಇಲ್ಲ. ವಿಧಿಯಿಲ್ಲದೆ ತನ್ನದಲ್ಲದ ಮಗುವನ್ನು ತನ್ನ ಮಗುವಾಗಿ ಸೀತಾ ಸಾಕುತ್ತಾಳೆ. ಇಡೀ ಸಮಾಜವನ್ನು, ತನ್ನ ಮನೆಯವರನ್ನು ಎದುರು ಹಾಕಿಕೊಂಡು ಸಿಹಿ ಎಂಬ ಡಯಾಬಿಟಿಕ್ ಮಗುವನ್ನು ಆರೈಕೆ ಮಾಡುತ್ತಾಳೆ. ಆದರೆ ಒಂದು ಹಂತದಲ್ಲಿ ಈ ಮಗುವಿನ ರಿಯಲ್ ತಂದೆ ತಾಯಿ ಬಂದು ಸೀತಾ ತಮಗೆ ಮೋಸ ಮಾಡಿದ್ದಾಳೆ. ತಮ್ಮ ಮಗುವನ್ನು ಆಕೆ ಕದ್ದಿದ್ದಾಳೆ ಎಂಬ ಆಪಾದನೆ ಮಾಡಿ ಆಕೆಯ ವಿರುದ್ಧ ನಿಲ್ಲುತ್ತಾರೆ. ಈ ಟೈಮಲ್ಲಿ ಸೀತಾ ಏನು ಮಾಡ್ತಾಳೆ, ಸೀತಾಳನ್ನೇ ತನ್ನ ಅಮ್ಮ ಎಂದು ನಂಬಿಕೊಂಡಿರುವ ಸಿಹಿಯನ್ನು ಅವಳ ರಿಯಲ್ ತಂದೆ ತಾಯಿಗೆ ಕೊಡ್ತಾಳ ಅನ್ನೋ ಇಂಟರೆಸ್ಟಿಂಗ್ ಹಂತದಲ್ಲಿ ಸ್ಟೋರಿ ಇದೆ.
ಮಾಜಿ ಗಂಡನಿಗೆ ಉರಿಸೋಕಂತಲೇ 'ಹಾಟ್' ಪೋಸ್ಟ್ ಮಾಡ್ತಿದ್ದಾರಾ ನಿವೇದಿತಾ ಗೌಡ?
ಆದರೆ ರಿಯಲ್‌ನಲ್ಲಿ ಮಾತ್ರ ಸೀತಮ್ಮ ಮತ್ತು ಸಿಹಿ ಪುಟಾಣಿ ಜೊತೆಯಾಗಿಯೇ ಓಡಾಡ್ತಿದ್ದಾರೆ. ಹಾಗೆ ನೋಡಿದರೆ ಸೀತ ಪಾತ್ರಧಾರಿ ವೈಷ್ಣವಿಗೆ ಇನ್ನೂ ಮದುವೆಯೇ ಆಗಿಲ್ಲ. ಆದರೆ ಆಕೆ ರೀತು ಎಂಬ ಆರು ವರ್ಷದ ಪುಟಾಣಿಯನ್ನು ತನ್ನ ಮಗಳಂತೇ ನೋಡಿಕೊಳ್ತಿದ್ದಾರೆ. ಆಕೆಯ ಜೊತೆಗೆ ಓಡಾಟ ಸುತ್ತಾಟ ಮಾಡುತ್ತಾ ರಿಯಲ್ ತಾಯಿಗಿಂತ ಹೆಚ್ಚು ಪ್ರೀತಿಯಿಂದ ನೋಡ್ಕೊಳ್ತಿರೋ ಹಾಗಿದೆ. ಬ್ಯಾಚುಲರ್ ಹುಡುಗೀರು ಸಾಮಾನ್ಯವಾಗಿ ಜವಾಬ್ದಾರಿಯಿಂದ ದೂರ ಓಡೋದೇ ಜಾಸ್ತಿ. ಅಂತಾದ್ರಲ್ಲಿ ಈ ವೈಷ್ಣವಿ ಆ ಪುಟ್ಟ ಹುಡುಗಿಯನ್ನು ಬಹಳ ಜವಾಬ್ದಾರಿಯಿಂದ ನೋಡಿಕೊಳ್ತಿರೋದಕ್ಕೆ ಎಲ್ಲರೂ ಶಹಭಾಸ್ ಅಂತಿದ್ದಾರೆ.
ಪುಟಾಣಿ ಸಿಹಿ ಮುದ್ದಾಡಿ ತಮ್ಮ ಅಪ್ಪ-ಅಮ್ಮನನ್ನು ಸ್ಮರಿಸಿದ ರವಿಚಂದ್ರನ್: ಪ್ರಶಸ್ತಿ ವೇದಿಕೆಯಲ್ಲಿ ಭಾವುಕ ಸನ್ನಿವೇಶ
ಇದೀಗ ಸೀತಮ್ಮ ಮತ್ತು ಸಿಹಿ ರಿಯಲ್‌ನಲ್ಲಿ ಪಾನಿಪೂರಿ ಚಾಲೆಂಜ್ ಮಾಡಿದ್ದಾರೆ. ಅದರಲ್ಲಿ ಯಾರು ಜಾಸ್ತಿ ಬೇಗ ಪಾನಿಪೂರಿ ತಿಂದರು ಅಂದರೆ ಯಾರೂ ಗೆಸ್ ಮಾಡಬಹುದು, ಪುಟಾಣಿ ಬಾಯಿಯ ಸಿಹಿಗೆ ಸೀತಮ್ಮನಷ್ಟು ಫಾಸ್ಟಾಗಿ ತಿನ್ನಕ್ಕೆ ಬರಲ್ಲ ಅಂತ. ಆದರೂ ಸೀತಮ್ಮ ಸಿಹಿಯನ್ನ ಸೋಲಕ್ಕೆ ಬಿಡಲಿಲ್ಲ. ತಾನೇ ಗೆದ್ದಿದ್ದರೂ ವಿನ್ನರ್ ಪಟ್ಟವನ್ನು ಪುಟ್ಟ ಸಿಹಿಗೇ ಕೊಟ್ಟುಬಿಟ್ಟಿದ್ದಾಳೆ. ಸೋ, ಸೀತಮ್ಮ ಅರ್ಥಾತ್ ವೈಷ್ಣವಿ ಅವರ ಈ ನೇಚರ್ ಎಲ್ಲರಿಗೂ ಖುಷಿಯಾಗಿದೆ. ಈವನ್ ಸಿಹಿ ಪುಟ್ಟಗೆ ಕೂಡ.