ಮಾಜಿ ಗಂಡನಿಗೆ ಉರಿಸೋಕಂತಲೇ 'ಹಾಟ್' ಪೋಸ್ಟ್ ಮಾಡ್ತಿದ್ದಾರಾ ನಿವೇದಿತಾ ಗೌಡ?
ನಟಿ ನಿವೇದಿತಾ ಗೌಡ ತಮ್ಮ ಹೊಸ ವಿಡಿಯೋದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಚಂದನ್ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ಸೊಂಟ ತೋರಿಸುವ ಉದ್ದೇಶದಿಂದಲೇ ಈ ರೀತಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಹಾಟ್ ಆಗಿದ್ದಾರೆ. ತಮ್ಮ ಮೊದಲ ಮ್ಯೂಸಿಕ್ ಆಲ್ಬಂ ಮನಸಾರೆ ನಿನ್ನ ಬಿಡುಗಡೆಯಲ್ಲಿ ಬ್ಯೂಸಿಯಾಗಿರುವ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಂಟೆಂಟ್‌ಗಳಿಂದಲೂ ಜನರಿಗೆ ಹತ್ತಿರವಾಗ್ತಿದ್ದಾರೆ. ತಮ್ಮ ಬೋಲ್ಡ್-ಫಿಟ್ ಬಾಡಿಯನ್ನು ಜನರಿಗೆ ತೋರಿಸೋದ್ರಲ್ಲಿಯೇ ಖುಷಿ ಪಡುವ ನಿವೇದಿತಾ ಗೌಡ, ಶುಕ್ರವಾರ ತಮ್ಮ ಅಕೌಂಟ್‌ನಲ್ಲಿ ಬ್ಲ್ಯಾಕ್ ಟಾಪ್ ಹಾಗೂ ಪ್ಯಾಂಟ್‌ನಲ್ಲಿ ಮಾಡಿರುವ ರೀಲ್ಸ್‌ಗೆ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. ನಿಮ್ಮೆಲ್ಲಾ ವಿಡಿಯೋ ನೋಡಿದ ಬಳಿಕ ಈಗ ಅರ್ಥವಾಗೋದು ಏನೆಂದರೆ, ಚಂದನ್ ಶೆಟ್ಟಿಗೆ ಇದ್ದ ರೆಸ್ಪೆಕ್ಟ್ ನಿಮ್ಮ ಜೊತೆ ಇದ್ದರೆ ಹಾಳಾಗ್ತಿತ್ತು. ಡಿವೋರ್ಸ್ ಕೊಟ್ಟು ಒಳ್ಳೆ ಕೆಲಸ ಮಾಡಿದ್ದೀಯ ಎಂದು ಕಾಮೆಂಟ್ ಮಾಡಿದ್ದಾರೆ. ಒಂದೆಡೆ ಚಂದನ್ ಶೆಟ್ಟಿ ಅವರ ಜೀವನ ಭಿನ್ನ ಮಾರ್ಗದಲ್ಲಿ ಸಾಗುತ್ತಿದೆ. ನಟಿ ಸಂಜನಾ ಆನಂದ್ ಅವರನ್ನು ವಿವಾಹವಾಗುತ್ತಾರೆ ಎನ್ನುವ ಗುಸುಗುಸು ಹಬ್ಬಿದ್ದವು. ಆದರೆ, ನಿವೇದಿತಾ ಗೌಡ ವಿಚಾರವಾಗಿ 2ನೇ ಮದುವೆಯ ಸುದ್ದಿ ಇನ್ನೂ ಹೆಚ್ಚಾಗಿ ವೈರಲ್ ಆಗಿಲ್ಲ.
ನಿವೇದಿತಾ ಗೌಡ ಅವರ ಹೊಸ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಹೆಚ್ಚಿನವರು ನಿವೇದಿತಾ ಗೌಡ ಅವರ ಹಾಟ್ ಅವತಾರವನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರು ಸೊಂಟವನ್ನು ತೋರಿಸುವ ಸಲುವಾಗಿಯೇ ನೀವು ಈ ರೀತಿಯ ಪೋಸ್ಟ್‌ಗಳನ್ನು ಮಾಡ್ತಾ ಇದ್ದೀರಿ ಅನ್ನೋದು ಅರ್ಥವಾಗುತ್ತಿದೆ ಎಂದಿದ್ದಾರೆ. 'ಲಂಗ ಹೊಕ್ಕಳ ಮೇಲೆ ನಿಲ್ತಿಲ್ಲ ಅಂದ್ರೆ ಆವಾಗ ಮಾತ್ರ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ಅರ್ಥ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
'ಮೂರು ಬಿಟ್ಟವರು ಊರಿಗೆ ದೊಡ್ಡವರು ಅಂತಾ ಹೇಳ್ತಾರೆ. ಇದು ಕಲಿಯುಗ..', 'ಅಕ್ಕ ನೀವು ಈ ವಿಡಿಯೋ ಪೋಸ್ಟ್ ಮಾಡಿ ಏನ್ ಹೇಳ್ತಾ ಇದ್ದೀರಿ ಅನ್ನೋದು ಅರ್ಥವಾಗ್ತಿಲ್ಲ. ಏನ್ ವಿಷ್ಯ ಅಂತಾ ನೇರವಾಗಿ ಹೇಳಿ..', 'ನಿಮ್ಮ ಈ ರೀತಿಯ ಪೋಸ್ಟ್‌ಅನ್ನೇ ನಾವು ನಿರೀಕ್ಷೆ ಮಾಡ್ತಿದ್ದೆವು..' ಎಂದು ನಿವೇದಿತಾ ಗೌಡ ಪೋಸ್ಟ್‌ಗೆ ಲೈಕ್ ಮಾಡಿದ್ದಾರೆ.
ಇಷ್ಟೆಲ್ಲಾ ಪೋಸ್ಟ್ ಮಾಡಿರುವ ನೀವು ಶೀಘ್ರದಲ್ಲೇ ಓನ್ಲಿ ಫ್ಯಾನ್ಸ್ (ಅಡಲ್ಟ್ ಕಂಟೆಟ್ ಸೈಟ್) ಅಕೌಂಟ್‌ನ ಯಾಕೆ ಕ್ರಿಯೇಟ್‌ಮಾಡಬಾರದು. ಅದರಲ್ಲೂ ನಾವು ಫಾಲೋವರ್ ಆಗ್ತಿವಿ ಎಂದು ಪೋಸ್ಟ್ ಮಾಡಿದ್ದಾರೆ. ನಿವೇದಿತಾ ಗೌಡಗೆ ಮೆಚ್ಚುಗೆ ಸೂಚಿಸುವ ಹಲವರು, ದಿನಗಳ ಕಳೆದ ಹಾಗೆ ನೀವು ಸಖತ್ ಹಾಟ್ ಆಗಿ ಕಾಣ್ತಿದ್ದೀರಿ. ಇದೊಂದು ಚಿಲ್ಲರ್ ಪೋಸ್ಟ್, ನೀವು ಸಖತ್ ಸೆಕ್ಸಿಯಾಗಿ ಕಾಣ್ತಿದ್ದೀರಿ ಎಂದು ಕಾಮೆಂಟ್ ಕುಕ್ಕಿದ್ದಾರೆ. 'ನಿವೇದಿತಾ ಸೊಂಟಕ್ಕೆ ಯಾರೆಲ್ಲ ಫ್ಯಾನ್ಸ್ ಇದ್ದೀರಿ, ಅವರೆಲ್ಲಾ ಇಂದು ಅಸೆಂಬಲ್ ಆಗಿ..' ಎಂದು ಬರೆದುಕೊಂಡಿದ್ದಾರೆ.
ರೆಡ್ ಲೆಹಂಗಾ ತೊಟ್ಟು ನಿವೇದಿತಾ ಗೌಡ ಪೋಸ್ ಕೊಟ್ರೆ, ಸೊಂಟ ಚೆನ್ನಾಗಿದೆ ಅನ್ನೋದಾ!
ಇನ್ನೂ ಕೆಲವರು ಚಂದನ್ ಶೆಟ್ಟಿಯನ್ನೇ ಈ ಪೋಸ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. 'ನಿವೇದಿತಾ ಗೌಡ ಚಂದನ್ ಶೆಟ್ಟಿಗೆ ಉರಿಸೋಕಂತಲೇ ಇನ್ಸ್‌ಟಾಗ್ರಾಮ್‌ನಲ್ಲಿ ಈ ರೀತಿಯ ಪೋಸ್ಟ್ ಮಾಡ್ತಿದ್ದಾರೆ..' ಎಂದು ಕೆಲವರು ಗೆಸ್ ಮಾಡಿದ್ದರೆ, ಇಂಥಾ ಬ್ಯೂಟಿಗೆ ಡಿವೋರ್ಸ್ ಯಾಕೆ ನೀಡಿದೆ ಎಂದು ಕೆಲವರು ಚಂದನ್ ಶೆಟ್ಟಿಗೆ ಪ್ರಶ್ನೆ ಮಾಡಿ ಕಾಮೆಂಟ್ ಮಾಡಿದ್ದಾರೆ.
ನಿವೇದಿತಾ ಗೌಡ ನೀವು ಸೀರೆಗಿಂತ ಶಾರ್ಟ್ ಡ್ರೆಸ್‌ನಲ್ಲೇ ಚಂದ ಕಾಣ್ತೀರಿ ಎಂದವರು ಎಷ್ಟು ಜನ ಗೊತ್ತಾ?