Asianet Suvarna News Asianet Suvarna News

ಬಿಗ್​ಬಾಸ್​ ಹಳೆಯ ಸ್ಪರ್ಧಿಗಳ ಎಂಟ್ರಿ: ಖುಷಿಯ ಬದ್ಲು ಟಾರ್ಚರ್​! ಕಿಚ್ಚನ ಕೊನೆಯ ಪಂಚಾಯಿತಿಯಲ್ಲಿ ಟ್ವಿಸ್ಟ್​

ಬಿಗ್​ಬಾಸ್​ ಮನೆಯೊಳಗೆ ಹಳೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಪ್ರೊಮೋ ನೋಡಿದರೆ ಸಮಸ್ಯೆ ಆದಂತೆ ಕಾಣುತ್ತಿದೆ. ಅಸಲಿಗೆ ಆಗಿದ್ದೇನು?
 

Old contestants have entered the Bigg Boss house with big twist suc
Author
First Published Jan 20, 2024, 4:12 PM IST

ಬಿಗ್​ಬಾಸ್​ ಫಿನಾಲೆಗೆ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಪೈಪೋಟಿ ತುಸು ಜಾಸ್ತಿಯಾಗಿಯೇ ಕಾಣಿಸುತ್ತಿದೆ. ಸದ್ಯ ದೊಡ್ಮನೆಯಲ್ಲಿ ಏಳು ಜನ ಉಳಿದುಕೊಂಡಿದ್ದಾರೆ. ಇದಾಗಲೇ  ಸಂಗೀತಾ ಶೃಂಗೇರಿ ಡೈರೆಕ್ಟ್ ಆಗಿ ಫಿನಾಲೆಗೆ ಟಿಕೆಟ್​ ಪಡೆದುಕೊಂಡಿದ್ದರೆ, ತುಕಾಲಿ ಸಂತೋಷ್​  ನಾಮಿನೇಷನ್​ನಿಂದ ಪಾರಾಗಿದ್ದಾರೆ. ಈಗ ಏನಿದ್ದರೂ ಡೇಂಜರ್​ ಜೋನ್​ನಲ್ಲಿ ಇರುವವರು  ಡ್ರೋನ್ ಪ್ರತಾಪ್, ವಿನಯ್, ಕಾರ್ತಿಕ್, ವರ್ತೂರು ಸಂತೋಷ ಮತ್ತು ನಮ್ರತಾ. ಇದರ ನಡುವೆಯೇ ಇದೀಗ ಕಿಚ್ಚನ ಅಂತಿಮ ಪಂಚಾಯಿತಿಯ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಈ ಪ್ರೊಮೋದಲ್ಲಿ  ಹಳೆ ಸ್ಪರ್ಧಿಗಳೂ ಕಾಣಿಸಿಕೊಂಡಿದ್ದಾರೆ. ಸಹಜವಾಗಿ ಹಳೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಾಗ ಎಲ್ಲರ ಮೊಗದಲ್ಲಿ ನಗು ಕಾಣುವುದು ಸಹಜ. ಇಲ್ಲಿಯೂ ಹಾಗೆಯೇ ಆಗಿದೆ. ಹಳೆದ ಸ್ಪರ್ಧಿಗಳು ಬರುತ್ತಿದ್ದಂತೆಯೇ ಎಲ್ಲರೂ ಖುಷಿಯಿಂದ ತಬ್ಬಿಕೊಂಡಿದ್ದಾರೆ. ಆದರೆ  ಪ್ರೊಮೋದಲ್ಲಿ ತೋರಿಸಿರುವಂತೆ ನಂತರ ಆದದ್ದೇ ಬೇರೆ. 

ಹೌದು. ಹಳೆಯ ಸ್ಪರ್ಧಿಗಳು ಹೋದ ಬಳಿಕ ಕಾರ್ತಿಕ್​ ಕಣ್ಣೀರು ತೋರಲಾಗಿದೆ. ನನಗೆ ತುಂಬಾ ಟಾರ್ಚರ್​ ಆಯ್ತು ಎಂದು ನಮ್ರತಾ ಬಿಕ್ಕಿಬಿಕ್ಕಿ ಅಳುವುದನ್ನು ನೋಡಬಹುದು. ಅದಕ್ಕೆ ತಕ್ಕನಾಗಿ ಸುದೀಪ್​ ಅವರು,  ಬಂದ ಹಳೆ ಗೆಳೆಯರು ಎಲ್ಲರಿಗೂ ಸಂತೋಷ ತಂದ್ರಾ? ಅಥವಾ ಇನ್ನಷ್ಟು ಬೇಸರ ಮಾಡಿದ್ರಾ ಅಂತ ಕೇಳಿದ್ದಾರೆ. ಇದೇ ಸಮಯದಲ್ಲಿ  ಇಶಾನಿ ಮನೆಗೆ ಬಂದು ಪ್ರತಾಪ್ ಬಗ್ಗೆ ಮಾತನಾಡಿದ ವಿಷಯವೂ ಚರ್ಚೆಯಾಯಿತು.  

ಮಾನನಷ್ಟ ಮೊಕದ್ದಮೆ ಕೇಸ್​ ಬೆನ್ನಲ್ಲೇ, ಬಿಗ್ ಬಾಸ್ ಜೈಲು ಪಾಲಾದ ಡ್ರೋನ್​ ಪ್ರತಾಪ್​! ಫ್ಯಾನ್ಸ್​ ಶಾಕ್​...

ಕಾಗೆ ಕಕ್ಕ ಮಾಡಿ ಎಲ್ಲಾ ಕಡೆ ಹೋಗ್ತಾನೇ ಇದೆ. ಸಿಂಪತಿ ಕಾರ್ಡ್​ ಯೂಸ್​ ಮಾಡ್ಕೊಂಡು ಎಂದುಹೇಳಿದ ವಿಷಯ ಇದಾಗಿದ್ದು, ಇದು ಮತ್ತೆ ಪ್ರೊಮೋದಲ್ಲಿ ಕಾಣಿಸಿಕೊಂಡಿದೆ.  ಸ್ನೇಹಿತ್ ಅವರು ವಿನಯ್​ ವಿನ್ ಆಗಲಿ ಎಂದು ಈ ಮೊದಲು ಹೇಳಿದ್ದನ್ನೂ ಪುನರಾವರ್ತಿಸಲಾಗಿದೆ. ಆದರೆ ಕಾರ್ತಿಕ್​ ಮತ್ತು ನಮ್ರತಾ ಅಳುತ್ತಿರುವುದು ಏಕೆ ಎನ್ನುವುದು ಬಿಗ್​ಬಾಸ್​ ನೋಡಿದ ಮೇಲಷ್ಟೇ ತಿಳಿಯಬೇಕಿದೆ. 

ಇದೇ ವೇಳೆ ಈ ಬಾರಿ ನಾಮಿನೇಷನ್​ ಯಾರಾಗುತ್ತಾರೆ ಎನ್ನುವ ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ. ಸ್ಪರ್ಧಿಗಳ ಅಭಿಮಾನಿಗಳು ಇದಾಗಲೇ ಸೋಷಿಯಲ್​  ಮೀಡಿಯಾದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಸದ್ಯ ನಾಮಿನೇಟ್ ಆಗಿರುವ ಸ್ಪರ್ಧಿಗಳ ಮಟ್ಟಿಗೆ ಹೇಳುವುದಾದರೆ ಇದುವರೆಗಿನ ಸ್ಪರ್ಧೆ, ಅಂಕ ಒಟ್ಟಾರೆ ಗಮನಿಸಿದರೆ ವಿನಯ್, ಕಾರ್ತಿಕ್ ಹಾಗೂ ಡ್ರೋನ್ ಪ್ರತಾಪ್ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ.  ವರ್ತೂರು ಸಂತೋಷ್ ಮತ್ತು ನಮ್ರತಾ ಇಬ್ಬರಲ್ಲಿ ಒಬ್ಬರು ನಾಮಿನೇಟ್​ ಆಗುತ್ತಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.  ಮತ್ತೊಂದು ಕಿಚ್ಚನ ಪಂಚಾಯತಿ ಎಂದು ನಡೆಯುತ್ತಿದೆ. ಈ ಪಂಚಾಯತಿಯಲ್ಲಿ ಏನೆಲ್ಲ ಸಂಗತಿಗಳು ನಡೆಯಲಿವೆ ಎನ್ನುವ ಚರ್ಚೆ ಕೂಡ ಆಗುತ್ತಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಕಿಚ್ಚ ಇಂದು ಮಾಡುತ್ತಾರಾ ಅಥವಾ ನಾಳೆ ಮಾಡುತ್ತಾರಾ ಎನ್ನುವುದು ಇಂದು ರಾತ್ರಿಗೆ ಅಂದಾಜು ಸಿಗಲಿದೆ.

ಅನಿಮಲ್​ ನಿರ್ದೇಶಕ ಹೊಟ್ಟೆಗೆ ಏನ್​ ತಿಂತಾರೋ ಗೊತ್ತಿಲ್ಲ: ಹಸಿಬಿಸಿ ದೃಶ್ಯದ ಬಳಿಕ ರಶ್ಮಿಕಾ ಹೇಳಿದ್ದೇನು?  

Follow Us:
Download App:
  • android
  • ios