Asianet Suvarna News Asianet Suvarna News

'ಈ ಥರ ಆಡೋಕೆ ಅಲ್ವಾ ಚಂದನ್‌ ಶೆಟ್ಟಿನಾ ಬಿಟ್ಟಿದ್ದು..' ಹೊಸ ರೀಲ್‌ ಹಂಚಿಕೊಂಡ ನಿವೇದಿತಾ ಗೌಡಗೆ ಬಂತು ಬೆಂಕಿ ಕಾಮೆಂಟ್ಸ್‌!

Niveditha Gowda chandan shetty ಕಿರುತೆರೆ ನಟಿ ಹಾಗೂ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಜೊತೆಗಿನ ವಿಚ್ಛೇದನ ಪಡೆದುಕೊಂಡ ಬಳಿಕ ಕೆಲ ದಿನ ಸೋಶಿಯಲ್‌ ಮೀಡಿಯಾದಿಂದ ರೆಸ್ಟ್‌ ಪಡೆದುಕೊಂಡಿದ್ದರು. ಈಗ ಮತ್ತೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿದ್ದಾರೆ.

Niveditha Gowda New Reel in Instagram Fans comments on chandan shetty san
Author
First Published Jun 26, 2024, 2:44 PM IST

ಬೆಂಗಳೂರು (ಜೂ.26): ಈ ತಿಂಗಳ ಆರಂಭದಲ್ಲಿ ಕಿರುತೆರೆ ನಟಿ ಹಾಗೂ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹಾಗೂ ರಾಪರ್, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ನಾಲ್ಕು ವರ್ಷದ ದಾಂಪತ್ಯಕ್ಕೆ ಜೋಡಿ ಸಡನ್‌ ವಿದಾಯ ಹೇಳಿದ್ದಕ್ಕೆ ಸಾಕಷ್ಟು ಮಂದಿ ಆಘಾತ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ವಿಚ್ಚೇದನಕ್ಕೆ ಸಾಕಷ್ಟು ಕಾರಣಗಳೂ ಹೊರಬಂದಿದ್ದವು. ಚಂದನ್‌ ಶೆಟ್ಟಿಗೆ ಮಗು ಮಾಡಿಕೊಳ್ಳುವ ಆಸೆಯಿತ್ತು. ಆದರೆ, ನಿವೇದಿತಾ ಗೌಡ ಇದಕ್ಕೆ ಒಪ್ಪಿರಲಿಲ್ಲ. ನಿವೇದಿತಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಪರೀತ ಎನಿಸುವಷ್ಟು ಆಕ್ಟೀವ್‌ ಆಗಿದ್ದು ಚಂದನ್‌ ಬೇಸರಕ್ಕೆ ಕಾರಣವಾಗಿತ್ತು ಎನ್ನುವ ಮಾತುಗಳಿದ್ದವು. ಆದರೆ, ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಿಚ್ಚೇದನಕ್ಕೆ ಕಾರಣವನ್ನು ಬಹಿರಂಗ ಮಾಡಿದ್ದರು. ನಾವಿಬ್ಬರೂ ಬದುಕುವ ಶೈಲಿ ಹೊಂದಾಣಿಕೆ ಆಗುತ್ತಿರಲಿಲ್ಲ. ಆ ಕಾರಣಕ್ಕಾಗಿ ವಿಚ್ಚೇದನ ಪಡೆದುಕೊಳ್ಳುತ್ತಿದ್ದೇವೆ. ಅದರ ಹೊರತಾಗಿ ಎಲ್ಲಾ ಕಾರಣಗಳೂ ವದಂತಿಗಳು ಎಂದು ತಿಳಿಸಿದ್ದರು.

ಆ ಬಳಿಕ ನಿವೇದಿತಾ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಸ್ವಲ್ಪ ರೆಸ್ಟ್ ಪಡೆದುಕೊಂಡಿದ್ದರು. ಆದರೆ, ಈಗ ಹಂತ ಹಂತವಾಗಿ ಅವರು ಮತ್ತೆ ಸೋಶಿಯಲ್‌ ಮೀಡಿಯಾಗೆ ವಾಪಸಾಗುತ್ತಿದ್ದಾರೆ. ಎರಡುದಿನಗಳ ಹಿಂದೆ ಅವರು ಹೊಸ ರೀಲ್ಸ್‌ಅನ್ನು ಹಂಚಿಕೊಂಡಿದ್ದು, ಇದರಲ್ಲಿ ಹೆಚ್ಚಿನ ಕಾಮಂಟ್ಸ್‌ಗಳು ನಿವೇದಿತಾ ಗೌಡ ವಿರುದ್ಧವಾಗಿಯೇ ಬಂದಿದೆ. ಇದೇ ರೀತಿ ಆಡೋಕೆ ತಾನೆ ನೀವು ಚಂದನ್‌ ಶೆಟ್ಟಿಯನ್ನು ಕೈಬಿಟ್ಟಿದ್ದು ಎಂದು ಟೀಕೆ ಮಾಡಿದ್ದಾರೆ.

'ನಮ್ಮ ಶೆಟ್ಟಿ ಇರುವಾಗ ಅಷ್ಟೇ ಗೌರವ ನಿನಗೆ. ಇನ್ನು ಮೂರು ಕಾಸು ಗೌರವ ಕೊಡಲ್ಲ ಯಾರು. ಎಷ್ಟು ದಿವಸ ಕುಣಿತಿಯ ನೋಡೋಣ. ತಪ್ಪು ಎಲ್ಲರೂ ಮಾಡ್ತಾರೆ ಆದ್ರೆ ಅಭಿಮಾನಿಗಳಿಗೆ ಗೋಸ್ಕರ ಆದ್ರೂ ತಪ್ಪನು ತಿದ್ದಿಕೊಂಡು ನಮ್ಮ ಶೆಟ್ಟಿ  ಜೊತೆ ಸುಖವಾಗಿ ಸಂಸಾರ ಮಾಡಬಹುದಿತ್ತು. ಈ ರೀಲ್ಸ ಹುಚ್ಚಿನಿಂದ ಎಲ್ಲ ಹಾಳು ಮಾಡ್ಕೊಂಡೆ..next ಒಂದು ದಿನ ಪಶ್ಚಾತ್ತಾಪ ಪಡ್ತೀಯ ನೋಡ್ತಾ ಇರು...ಮತ್ತೇನು ಮಾಡಕಾಗೋಲ್ಲ...ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ..ಚಂದನ್ ಶೆಟ್ಟಿ ಅಂತ ಗಂಡ ಯಾರು ಸಿಗಲ್ಲ ನಿನಗೆ....ಮುತ್ತಿನಂಥ ಗಂಡನ ಜೊತೆ ಬಾಳುವ ಯೋಗ್ಯತೆಯನ್ನು ನಿನ್ನ ಅಹಂಕಾರದಿಂದ ಕಳೆದುಕೊಂಡೆ..' ಎಂದು ಶ್ರೀಲಕ್ಷ್ಮೀ ಎನ್ನುವರು ನಿವೇದಿತಾಗೆ ಕಾಮೆಂಟ್‌ ಮಾಡಿದ್ದಾರೆ.

ನಿಮ್ಮ ಪಾಲಿಗೆ ಮದುವೆ ಅನ್ನೋದೇ ಇಲ್ಲ, ಎಲ್ಲವೂ ಮಕ್ಕಳ ಆಟ ಎಂದು ಇನ್ನೊಬ್ಬರು ಬರರೆದಿದ್ದಾರೆ. 'ಮನೇಲಿ ಹೇಳೋರು ಕೇಳೋರು ಇಲ್ಲದಿದ್ರೆ ಈ ತರ ಪ್ರತಿಭೆಗಳು ಅರಳುತ್ತವೆ..' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಯಾರೂ ಕೂಡ ಕೆಟ್ಟ ಕಾಮೆಂಟ್ಸ್ ಹಾಕಬೇಡಿ. ಅವರವರ ನಿಗೂಢ ಅವರಿಗೆ ಮಾತ್ರವೇ ತಿಳಿದಿರುತ್ತೆ. ನಮಗೆ ವಿಷ್ಯ ಗೊತ್ತು ಆದರೆ, ವಿಷ ಯಾರು ಅನ್ನೋದು ಗೊತ್ತಿಲ್ಲ. ಸೋ ಯಾರೂ ಯಾರನ್ನೂ ಜಡ್ಜ್‌ ಮಾಡೋಕೆ ಹೋಗಬೇಡಿ..'ಎಂದು ಮತ್ತೊಬ್ಬರು ಬರೆದಿದ್ದಾರೆ.

 

'ಏನು ಇಷ್ಟು ದಪ್ಪ ಆಗಿದೆ..' ಅಂತಾ ಕಾಮೆಂಟ್‌ ಮಾಡೋದು ವಾಕ್‌ ಸ್ವಾತಂತ್ರ್ಯ ಅಲ್ಲ: ಚಂದನ್‌ ಶೆಟ್ಟಿ!

'ಈ ಥರ ಆಟ ಆಡೋಕೆ ಅಲ್ವಾ ನೀನು ಚಂದನ್‌ ಶೆಟ್ಟಿಯನ್ನ ಬಿಟ್ಟಿದ್ದು, ಥೂ..' ಎಂದು ನಿವೇದಿತಾ ಗೌಡ ಹೊಸ ರೀಲ್ಸ್‌ಗೆ ಕಾಮೆಂಟ್‌ ಮಾಡಿದ್ದಾರೆ. 'ನನ್ನ ಪ್ರಶ್ನೆಗಳು ಕೆಲವೊಂದಿದೆ. ಈ ರೀಲ್ಸ್ ನಿಂದ ಜನರಿಗೆ ಏನು ಸಂದೇಶ ಸಾರುತ್ತದೆ? ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ? ವಿವಾಹಿತೆಯಾಗಿ ಮಾಂಗಲ್ಯ ಎಲ್ಲಿ? ಇದ್ರಲ್ಲಿ ಸಮಾಜಕ್ಕೆ ಏನಾದ್ರೂ ಉಪಯೋಗ ಇದೀಯ? ತುಂಡು ಬಟ್ಟೆಗಳನ್ನು ಉಟ್ಟು ಈ ರೀತಿ ಸೋಶಿಯಲ್ ಮೀಡಿಯಾ ದಲ್ಲಿ likes ಗಾಗಿ ಕುಣಿಯುವುದು ಅನಿವಾರ್ಯವೇ?..' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಕಾಮೆಂಟ್ಸ್ ಹಾಕುವ ಮುನ್ನ ಶೆಡ್ ನೆನಪು ಮಾಡ್ಕೊಳ್ಳಿ...' ' ಏನೋ ಹೇಳೋಕೆ ಬಂದೆ ಶೆಡ್ ನೆನಪಾಗಿ ಸುಮ್ನೆ ಆದೆ..' ಎಂದು ನಿವೇದಿತಾ ಗೌಡ ರೀಲ್ಸ್‌ಗೆ ತಮಾಷೆ ಮಾಡಿದ್ದಾರೆ.

ಚಂದನ್‌ ಶೆಟ್ಟಿ-ನಿವೇದಿತಾಗೆ ಸಿಕ್ತು ಒಂದೇ ದಿನದಲ್ಲಿ ಡಿವೋರ್ಸ್‌, ಏನಿದು ಫ್ಯಾಮಿಲಿ ಕೋರ್ಟ್‌ 13ಬಿ ಸೆಕ್ಷನ್‌?

 

 

Latest Videos
Follow Us:
Download App:
  • android
  • ios