Niveditha Gowda 7 ದಿನ ಸ್ಕಿನ್ ಚಾಲೆಂಜ್; ಮುಖದಲ್ಲಿ ಮೊಡವೆ ಬೇಗ ಹೋಗ್ಬೇಕಂದ್ರೆ ಹೀಗೆ ಮಾಡ್ಬೇಕಂತೆ
ಹವಮಾನ ಸರಿಯಾಗಿಲ್ಲ ಅದಿಕ್ಕೆ ಮುಖದಲ್ಲಿ ಮೊಡವರೆ ಬರುತ್ತಿದೆ. ಬೇಸರದಲ್ಲಿ 7 ದಿನ ಸ್ಕಿನ್ ಕೇರ್ ಚಾಲೆಂಗ್ ತೆಗೆದುಕೊಂಡ ನಿವಿ .....
ಕನ್ನಡ ಕಿರುತೆರೆಯ ಬೇಡಿಕೆಯ ಸುಂದರಿ ನಿವೇದಿತಾ ಗೌಡ (Niveditha Gowda) ಸ್ಟೈಲಿಂಗ್,ಡಯಟ್, ಫ್ಯಾಷನ್, ಸ್ಕಿನ್ ಕೇರ್ ಮತ್ತು ಹೇರ್ ಕೇರ್ ಬಗ್ಗೆ ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಿರುತ್ತಾರೆ. ಪ್ರತಿಯೊಂದಕ್ಕೂ ತಾಳ್ಮೆಯಿಂದ ಉತ್ತರ ಕೊಡುವ ಸುಂದರಿ ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಮುಖದ ಮೊಡವೆಯನ್ನು ಹೇಗೆ ಮಾಯಾ ಮಾಡಿಸಬೇಕು ಎಂದು ತೋರಿಸಿಕೊಟ್ಟಿದ್ದಾರೆ.
'ನಾನು 7 ದಿನ ಸ್ಕಿನ್ ಗ್ಲೋ ಚಾಲೆಂಜ್‌ನ ಸ್ವೀಕರಿಸಿರುವೆ. ಚಳಿಗಾಲ ಶುರುವಾಗುತ್ತಿರುವ ಕಾರಣ ನನ್ನ ತ್ವಚೆ ತುಂಬಾನೇ ಡ್ರೈ ಆಗಿದೆ. ನನ್ನ ಸುತ್ತ ಮತ್ತ ಯಾರನೇ ನೋಡಿದ್ದರೂ ಮೀಟ್ ಮಾಡಿದ್ದರೂ ಅವರ ಮುಖದಲ್ಲಿ ಪಿಂಪಲ್ ಕಾಣಿಸುತ್ತಿದೆ. ಹಣೆ ಮೇಲೆ ಹೆಚ್ಚಿಗೆ ಆಗಿದೆ. ಇತ್ತೀಚಿಗೆ ನಾನು ಶೋ ಶೂಟಿಂಗ್ ಅಂತ ಬ್ಯುಸಿಯಾಗಿ ಜಾಸ್ತಿ ಮೇಕಪ್ ಮಾಡಿಕೊಂಡಿರುವೆ. ಮೊದಲು ಸ್ಕಿನ್ ಹೇಗಿತ್ತು ಅದೇ ರೀತಿಗೆ ತರಬೇಕು ಅಂತ ನಾನು 7 ದಿನ ಚಾಲೆಂಜ್ ಆಗಿ ಸ್ವೀಕರಿಸಿರುವೆ. ನಾನು ಮಾಡುವ ಪ್ರಯೋಗವನ್ನು ನೀವು ಟ್ರೈ ಮಾಡಿ' ಎಂದು ನಿವೇದಿತಾ ವಿಡಿಯೋ ಆರಂಭಿಸಿದ್ದಾರೆ.
'ಮೊದಲು ಮುಖವನ್ನು ಹಾಲಿನಲ್ಲಿ ತೊಳೆಯಬೇಕು. ಬಿಸಿ ಮಾಡದೆ ಬಳಸಬೇಕು. ಫೇಸ್ ಮಾಸ್ಕ್ ಮಾಡಲು ಅರಿಶಿಣ, ಬೇಸನ್, ಜೇನುತುಪ್ಪ ಮತ್ತು ಮೊಸರು ಬಳಸುವೆ. ಚೆನ್ನಾಗಿ ಮಿಕ್ಸ್ ಮಾಡಬೇಕು. ಮುಖಕಕ್ಕೆ ಹಾಕಿ 15 ನಿಮಿಷ ಬಿಟ್ಟರೆ ಸಾಕು..ಹೆಚ್ಚಿನ ಹೊತ್ತು ಬಿಟ್ಟರೆ ಮುಖ ಡ್ರೈ ಮಾಡುತ್ತದೆ. ಮೊಡವೆ ಇದ್ದರೆ ಕೆನ್ನೆ ಮೇಲೆ ಹಾಕಿ. ಚೆನ್ನಾಗಿ ಮುಖ ತೊಳೆದುಕೊಂಡ ನಂತರ ಫ್ರೆಶ್ ಫೀಲ್ ಆಗುತ್ತದೆ. ಮಾಸ್ಕ್ ಆದ್ಮೇಲೆ ಸೆರಮ್ ಬಳಸುವೆ. ಸೆರಮ್ ಇಲ್ಲ ಅಂದ್ರೆ ರೋಸ್ ವಾಟರ್‌ನ ಬಳಸಬಹುದು. ಇದಾದ ಮೇಲೆ moisturizer ಬಳಸಬೇಕು ಅದಾದ ಮೇಲೆ 10 ನಿಮಿಷ ಬಿಟ್ಟು ಸನ್‌ಕ್ರೀಮ್ ಬಳಸಬೇಕು' ಎಂದು ಹೇಳಿದ್ದಾರೆ.
ಉದ್ದ ಉಗುರಿದೆ ಅಕ್ಕಿ ರೊಟ್ಟಿ ಗತಿ ಗೋವಿಂದ; Niveditha Gowda ಅಡುಗೆ ನೋಡಿ ಕಣ್ಣೀರಿಟ್ಟ ಕನ್ನಡಿಗರು
'ದಸರ ಹಬ್ಬ ದೀಪಾವಳಿ ಹಬ್ಬಗಳು ಬರ್ತಿದೆ. ಈ ಸಮಯದಲ್ಲಿ ತುಂಬಾ ಮದುವೆಗಳು ನಡೆಯುತ್ತದೆ. ಈ 7 ದಿನ ಸ್ಕಿನ್ ಚಾಲೆಂಜ್ ಮಾಡಿದರೆ ಸುಲಭವಾಗುತ್ತದೆ. ಪಾರ್ಲರ್‌ಗೆ ಹೋಗಿ 3- 7 ಸಾವಿರ ಖರ್ಚು ಮಾಡುವ ಬದಲು ಮನೆಯಲ್ಲಿ ಸುಲಭವಾಗಿ ಸಿಗುವ ಈ ವಸ್ತುಗಳಿಂದ ಸ್ಕಿನ್ ಕೇರ್ ಮಾಡಿ. ಚೆನ್ನಾಗಿ ಒಳ್ಳೆಯ ಆಹಾರ ತಿನ್ನಿ' ಎಂದಿದ್ದಾರೆ.
ಟ್ರೋಲಿಗರಿಗೆ ಉತ್ತರ :
ನಿಮ್ಮ ಏಜ್ ಅಂಡ್ ಹೈಟ್ ಎಷ್ಟು?
ಹುಡ್ಗೀರು ಯಾವತ್ತಾದ್ರೂ ಏಜ್ ಹೇಳ್ತಾರಾ?ನಾನು ರಿವೀಲ್ ಮಾಡೋಲ್ಲ ಆದರೆ 18 ಕ್ಕೂ ಹೆಚ್ಚು ವಯಸ್ಸು ಆಗಿದೆ. ಟಿವಿಯಲ್ಲಿ ನಾನು ತುಂಬಾ ಹೈಟ್ ಕಾಣಿಸುತ್ತೀನಿ ಆದರೆ ನಾನು ಇರೋದು 5'3'' ಅಷ್ಟೆ. ಹೀಲ್ಸ್ ಹಾಕೊಂದು 5'6'' ಕಾಣಿಸುತ್ತೀನಿ.
ತುಂಡುಡುಗೆ ತೊಟ್ಟು ಐಸ್ ತಿಂದು ಹೊಗೆ ಬಿಟ್ಟ Niveditha Gowda; ಹಸು ನೋಡಿ ರನ್!
ನೀವು ಪ್ರಗ್ನೆಂಟ್ ಅಂತ ರೂಮರ್ಸ್ ಇದೆ. ಇದಕ್ಕೆ ನಿಮ್ಮ ರೆಸ್ಪಾನ್ಸ್ ಏನು?
ನನಗೆ ಎಷ್ಟೊಂದು ಸಲ ಕಾಲ್ ಮಾಡಿ ಕೇಳುತ್ತಾರೆ. ಸದ್ಯಕ್ಕೆ ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಇಲ್ಲ. ಲೈಫ್‌ನ ಎಂಜಾಯ್ ಮಾಡಬೇಕು ಮಕ್ಕಳಿಗೆಂದು ಟೈಮ್ ಕೊಡಬೇಕು ತುಂಬಾ ಕೇರ್ ಮಾಡಬೇಕು. ಈಗ ಅದೆಲ್ಲಾ ಮಾಡಲು ಆಗುದಿಲ್ಲ. ಏನಾದರೂ ಇದ್ದರೆ ನಾನೇ ಅನೌನ್ಸ್ ಮಾಡ್ತೀನಿ...
ನಿಮ್ಮ ಸ್ಯಾಲರಿ ಎಷ್ಟು?
ಎಷ್ಟು ಕಷ್ಟವಾದ ಪ್ರಶ್ನೆ ಕೇಳಿದ್ದೀರಿ. ತಿಂಗಳಿಗೊಂದು ರೀತಿ ಸಂಬಳ ಬರುತ್ತೆ. ಒಂದೊಂದು ತಿಂಗಳು ಬರೋದೇ ಇಲ್ಲ. ಬಂದಾಗ ಚೆನ್ನಾಗಿ ಇಟ್ಟಿಕೊಳ್ಳಬೇಕು ಬೇಕಾಗುತ್ತದೆ. ಹುಡುಗಿಯರ ವಯಸ್ಸು ಹೇಗೆ ಕೇಳಬಾರದು ಅವರ ಸಂಬಳ ಕೂಡ ಕೇಳಬಾರದು.
ಚಂದನ್ ಅವರಿಗೆ ಇನ್ನೂ ತನಕ ಗೊತ್ತಿಲ್ಲದೇ ಇರುವ ಸೀಕ್ರೆಟ್ ಯಾವುದು?
ನಾನು ತೂಟ್ ಬ್ರಶ್‌ನ ಹೆಚ್ಚಿಗೆ ಬದಲಾಯಿಸುತ್ತೀನಿ. ಒಂದು ದಿನ ಚಂದನ್‌ಗೆಂದು ತಂದಿರುವ ಬ್ರಶ್‌ನ ನಾನು ಬಳಸಿರುವೆ. ಹೇಳಿದರೆ ಬೈತಾನೆ ಅಂತ ಬಳಸಿ ಹಾಗೆ ಅದೇ ಜಾಗದಲ್ಲಿ ಇಟ್ಟೆ. ಆಮೇಲೆ ಅದನ್ನು ಬಳಸಲು ಶುರು ಮಾಡಿದ್ದರು. Hygein ಬಗ್ಗೆ ಚಂದನ್ ತುಂಬಾ ಕೇರ್ ಮಾಡುತ್ತಾರೆ. ಇದುವರೆಗೂ ಚಂದನ್‌ಗೆ ಈ ವಿಚಾರ ಗೊತ್ತಿರಲಿಲ್ಲ.