Asianet Suvarna News Asianet Suvarna News

ಪದೇ ಪದೇ ಚಡ್ಡಿ ಯಾಕೆ ತೋರಿಸ್ತಿಯಾ? ಪ್ಯಾಂಟ್​ ಕೊಳ್ಳೋಕೂ ದುಡ್​ ಇಲ್ವಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್​!

ನಿವೇದಿತಾ ಗೌಡ ಷಾರ್ಟ್ಸ್​ ಧರಿಸಿ ಹೊಸ ರೀಲ್ಸ್​ ಶೇರ್​ ಮಾಡಿದ್ದು, ಟ್ರೋಲಿಗರು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. ಪ್ಯಾಂಟ್​ ಖರೀದಿಗೆ ದುಡ್ಡಿಲ್ವಾ ಅಂತ ಕೇಳ್ತಿದ್ದಾರೆ. 
 

Nivedita Gowda shared new reels wearing shorts and trollers are trolling suc
Author
First Published Oct 12, 2023, 11:17 AM IST

ಇತ್ತೀಚಿಗೆ ಹೆಚ್ಚಿನ  ಹುಡುಗಿಯರು ಫ್ಯಾಷನ್​ ಹೆಸರಿನಲ್ಲಿ ಹೆಚ್ಚಾಗಿ ಷಾರ್ಟ್ಸ್​, ಮಿನಿ ಸ್ಕರ್ಟ್​ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲಿಯೂ ಸಿನಿಮಾ ತಾರೆಯರನ್ನು ನೋಡಿ ಧಾರಾಳ ದೇಹ ಪ್ರದರ್ಶನ ಮಾಡುವುದು ಎಂದರೂ ಹಲವರಿಗೆ ಇನ್ನಿಲ್ಲದ ಖುಷಿ. ಈ ರೀತಿಯ ಬಟ್ಟೆ ಧರಿಸಿದರೆ ತಾವೂ ಸೆಲೆಬ್ರಿಟಿ ಎನಿಸುತ್ತದೆಯೋ ಏನೋ, ಒಟ್ಟಿನಲ್ಲಿ ಬಟ್ಟೆಯ ವಿಷಯದಲ್ಲಿ ಹಲವು ಹುಡುಗಿಯರು ಎಲ್ಲಾ ಮಿತಿಗಳನ್ನೂ ಮೀರುತ್ತಿದ್ದಾರೆ. ಇದು ಸಾಮಾನ್ಯ ಜನರ ಮಾತಾದರೆ ಇನ್ನು ನಟಿಯರ ವಿಷಯ ಹೇಳುವುದೇ ಬೇಡ ಬಿಡಿ. ಕೆಲವರಿಗೆ ಇಂಥ ಬಟ್ಟೆಗಳು ಯಾವುದೇ ರೀತಿಯಲ್ಲಿ ಅಸಹ್ಯ ಎನಿಸದಿದ್ದರೂ, ಕೆಲವರು ಇಂಥ ಬಟ್ಟೆ ಧರಿಸಿದಾಗ ವಾಕರಿಕೆ ಬರುವುದೂ ಉಂಟು. ಆದರೆ ಬಿಗ್​ಬಾಸ್ ಖ್ಯಾತಿಯ ನಟಿ ನಿವೇದಿತಾ ಯಾವುದೇ ರೀತಿಯ ತುಂಡುಡುಗೆ ಹಾಕಿದರೂ ಆಕೆಗೆ ಒಪ್ಪುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಇತ್ತೀಚೆಗೆ ನಿವೇದಿತಾ ಗೌಡ ಹೆಚ್ಚಾಗಿ ಷಾರ್ಟ್ಸ್​ ಧರಿಸಿ ರೀಲ್ಸ್​ ಮಾಡುತ್ತಾರೆ.

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ನಿವೇದಿತಾ ಕ್ಯೂಟ್​ ವಿಡಿಯೋ ವೈರಲ್​: ಮೂರು ವರ್ಷ ಕುಣಿದದ್ದು ಸಾಕು, ಮಕ್ಳು ಮಾಡ್ಕೋಳಿ ಅನ್ನೋದಾ?

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ಅವರು ಚಡ್ಡಿ ಧರಿಸಿ ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಪದೇ ಪದೇ ಈ ರೀತಿಯ ರೀಲ್ಸ್​ ಮಾಡುತ್ತಿರುವುದಕ್ಕೆ ಹಲವು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಮದುವೆಯಾಗಿ ಮೂರು ವರ್ಷವಾದರೂ ಇಂದಿಗೂ ನಮ್ಮ ಸಂಸ್ಕೃತಿಯನ್ನು ಕಲಿಯದೇ ವಿದೇಶಿಗರಂತೆ ಚಿಕ್ಕ ಚಿಕ್ಕ ಡ್ರೆಸ್​ ಹಾಕುತ್ತಾ ಕುಣಿಯುವುದನ್ನು ಬಿಡು ಎಂದು ಕೆಲವರು ಹೇಳುತ್ತಿದ್ದರೆ, ಸಂಪ್ರದಾಯ, ಸಂಸ್ಕೃತಿಯ ಅರಿವು ಇಲ್ಲದಿದ್ದರೆ ಭಾರತದಲ್ಲಿ ಇರಬೇಡ ಎಂದು ಹಲವರು ಸಿಟ್ಟಿನಿಂದ ಹೇಳುತ್ತಿದ್ದಾರೆ. ಇನ್ನು ಕೆಲವರು, ಚಡ್ಡಿ ತೋರಿಸೋ ಕೆಲಸ ಪತಿಯ ಬಳಿ ಇಟ್ಟುಕೋ. ಸಿಕ್ಕಾಪಟ್ಟೆ ದುಡಿಯುವ ನಿನಗೆ ಒಂದು ಪ್ಯಾಂಟ್​ ಖರೀದಿ ಮಾಡಲು ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲೂ ಹಾರದ ಡ್ರೋನ್​: ಪ್ರತಾಪನ ಅವಸ್ಥೆ ಕಂಡು ಅಯ್ಯೋ ಅಂತಿದ್ದಾರೆ ಫ್ಯಾನ್ಸ್​!

Follow Us:
Download App:
  • android
  • ios