ಬಿಗ್​ಬಾಸ್​ ಮನೆಯಲ್ಲೂ ಹಾರದ ಡ್ರೋನ್​: ಪ್ರತಾಪನ ಅವಸ್ಥೆ ಕಂಡು ಅಯ್ಯೋ ಅಂತಿದ್ದಾರೆ ಫ್ಯಾನ್ಸ್​!

 ಬಿಗ್​ಬಾಸ್​ ಮನೆಯಲ್ಲಿ ಡ್ರೋನ್​ ಪ್ರತಾಪ್​ಗೆ ಸ್ಪರ್ಧಿಗಳು ಹಲವಾರು ರೀತಿ ಪ್ರಶ್ನೆ ಕೇಳಿ ತಲೆ ತಿನ್ನುತ್ತಿದ್ದಾರೆ. ಆದರೂ ಡ್ರೋನ್​ ತಯಾರಿಕೆ ಕುರಿತು ಸಮರ್ಥಿಸಿಕೊಳ್ತಿರೋ ಪ್ರತಾಪನನ್ನು ನೋಡಿ ಪ್ರೇಕ್ಷಕರು ನಗುತ್ತಿದ್ದಾರೆ. 
 

In Bigg Boss the contestants are asking various questions to drone Pratap suc

 ಕೆಲ ವರ್ಷಗಳ ಹಿಂದೆ ಡ್ರೋನ್​ ಪ್ರತಾಪ್​ ಎನ್ನುವ ಯುವಕ ಎಲ್ಲರಿಗೂ ಮಾದರಿಯಾಗಿದ್ದರು. ಇವರ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋನ್​​. ಡ್ರೋನ್​ ​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಕಾಣಿಸಿಕೊಂಡಿದ್ದಾರೆ ಪ್ರತಾಪ್​. 

ಇಂಥ ಕಾಂಟ್ರವರ್ಸಿ ಮಾಡಿಕೊಳ್ಳುವವರಿಗೆ ಬಿಗ್​ಬಾಸ್​ ತೆರೆದ ಮನಸ್ಸಿನಿಂದ ಸ್ವಾಗತ ನೀಡುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಪ್ರತಾಪ್​ ನಿಜವಾಗಿಯೂ ಡ್ರೋನ್​ ಮಾಡಿ ಸಕ್ಸಸ್​ ಆಗಿದ್ದರೆ ಈ ವೇದಿಕೆ ಸಿಗುತ್ತಿರಲಿಲ್ಲವೇನೋ.  ಆದರೆ ಗಲಾಟೆ ಮಾಡಿ ನೆಗೆಟಿವ್​ ಕಮೆಂಟ್​ಗಳಿಂದ ಭರ್ಜರಿ ಸುದ್ದಿಯಾಗಿದ್ದರಿಂದ ಸಹಜವಾಗಿ ಬಿಗ್​ಬಾಸ್​ನಲ್ಲಿ ಹೋಗಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಭರ್ಜರಿ ಚಟುವಟಿಕೆಗಳು ಶುರುವಾಗಿದೆ.  ಇದರಲ್ಲಿ ಈಗ ಹೈಲೈಟ್​ ಆಗ್ತಿರೋದು ಡ್ರೋನ್​ ಪ್ರತಾಪ್​. 

ಇವರು ಯಾವುದೇ ಡ್ರೋನ್​ ಹಾರಿಸಿಯೇ ಇಲ್ಲ. ರೆಡಿ ಮಾಡಿಟ್ಟಿದ್ದ ಡ್ರೋನ್​ ಪಾರ್ಟ್​ ತಂದು ಅದರ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿ ತಾವೇ ಡ್ರೋನ್​ ಮಾಡಿದಂತೆ ಎಲ್ಲರ ಮುಂದೆ ಪೋಸ್ ಕೊಡುತ್ತಿರುವ ಗಂಭೀರ ಆರೋಪ ಪ್ರತಾಪ್​ ಮೇಲಿದೆ. ಡ್ರೋನ್​ನ ಬಿಡಿ ಭಾಗಗಳನ್ನು ತಂದು ಅದನ್ನು ತಾವೇ ತಯಾರು ಮಾಡಿರುವುದಾಗಿ ಹೇಳುತ್ತಾರೆ ಎನ್ನಲಾಗಿದೆ. ಹೀಗೆ ರೆಡಿ ಮಾಡಿದ ಡ್ರೋನ್​ ಅನ್ನು ತಾವೇ ಸಂಪೂರ್ಣವಾಗಿ ತಯಾರು ಮಾಡಿರುವುದಾಗಿ ಹೇಳುತ್ತಲೇ ವರ್ಷಾನುಗಟ್ಟಲೆ ಎಲ್ಲರ ಕಣ್ಣಿಗೆ ಮಣ್ಣೆರೆಚುತ್ತಲೇ ಬಂದಿರುವ ಆರೋಪ ಇವರ ಮೇಲಿದೆ. ನಟ ಜಗ್ಗೇಶ್​ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರೂ ಪ್ರತಾಪ್​ಗೆ ಧನ ಸಹಾಯ ಮಾಡಿದ್ದಿದೆ. ಹಲವು ಸಂಘ ಸಂಸ್ಥೆಗಳು ಕರೆದು ಸಹಾಯ ಮಾಡಿದ್ದಲ್ಲದೇ ಬಿರುದು ಸನ್ಮಾನ ನೀಡಿದ್ದಿದೆ. ಕೊನೆಗೆ ಈತನ ಬಂಡವಾಳ ಬಯಲಾಗುತ್ತಿದ್ದಂತೆಯೇ ಖುದ್ದು ಜಗ್ಗೇಶ್​ ಅವರು ಮೀಡಿಯಾದ ಮುಂದೆ ಬಂದು ನೋವು ತೋಡಿಕೊಂಡಿದ್ದರು. ಎಂಥವನಿಗೆ ನಾನು ಸಹಾಯ ಮಾಡಿಬಿಟ್ಟೆ ಎಂದಿದ್ದರು.

ಬಿಗ್​ಬಾಸ್​ ವೇದಿಕೆಯಲ್ಲಿ ಡ್ರೋಣ್​ ಪ್ರತಾಪ್​ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು

ಇದೀಗ ಬಿಗ್​ಬಾಸ್​​ ಮನೆಯಲ್ಲಿಯೂ ಡ್ರೋನ್​ ಪ್ರತಾಪ್​ ವಿರುದ್ಧ ವಾಗ್ದಾಳಿ ನಿಂತಿಲ್ಲ. ಸ್ಪರ್ಧಿಗಳು ಪರಸ್ಪರ ಮಾತಾಡಿಕೊಂಡಿದ್ದರು, ಇವರು  ಮಾಡಿರೋ ಡ್ರೋನ್​ ನೀವು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಹಾಗಿದ್ರೆ ಇವ್ರು ಡ್ರೋನ್​ ಮಾಡೇ ಇಲ್ವಾ ಎಂದು ಪ್ರಶ್ನಿಸಿದ್ದರೆ, ಮತ್ತೋರ್ವ ಸ್ಪರ್ಧಿ, ಇಲ್ಲ, ಇವ್ರು ಡ್ರೋನ್​ ಅನ್ನು ಮಾರಾಟಕ್ಕೆ ತಂದು   ತಾವೇ ಮಾಡಿದ್ದು ಹೇಳಿಕೊಂಡು  ಹಾರಿಸ್ತಾ ಇದ್ರು ಎಂದಿದ್ದಾರೆ. ಆ ಸಮಯದಲ್ಲಿ ಡ್ರೋನ್​ ಪ್ರತಾಪ್​ ತಾಳ್ಮೆಯನ್ನೂ ಕಳೆದುಕೊಂಡು ಅವರು ಹೇಳುತ್ತಿದ್ದುದೆಲ್ಲಾ ಸುಳ್ಳು ಎಂದಿದ್ದಾರೆ. ನಮ್ಮ ಆಫೀಸ್​ಗೆ ಬಂದು ನೋಡಿ, ಎಲ್ಲವೂ ತಿಳಿಯುತ್ತದೆ ಎಂದಿದ್ದಾರೆ. ಅಸಲಿಗೆ ಇದೇ ಮಾತನ್ನು ಹಲವಾರು ವೇದಿಕೆಯಲ್ಲಿಯೂ ಪ್ರತಾಪ್​ ಹೇಳಿದ್ದರು. ಆದರೆ ಅವರ ಕಚೇರಿಯಲ್ಲಿ ಇವರೇ ಖುದ್ದು ಡ್ರೋನ್ ತಯಾರಿಸಿ ತೋರಿಸಲೇ ಇಲ್ಲ. ಇದೇ ಬಿಗ್​ಬಾಸ್​ ಮನೆಯಲ್ಲಿಯೂ ಪ್ರಸ್ತಾಪ ಆಗಿದೆ. ನನಗೆ ಒಂದಿಷ್ಟು ರೈತರು ಗೊತ್ತು. ಅವರು ಡ್ರೋನ್​  ತಯಾರಿಸಿ ಕೊಟ್ಟಿಲ್ಲ ಎಂದು ಓರ್ವ ಸ್ಪರ್ಧಿ ಹೇಳಿದ್ದು, ಇದನ್ನು ನೋಡಿ ಪ್ರೇಕ್ಷಕರು ಪಾಪ ಇಲ್ಲೂ ಪ್ರತಾಪನ ಡ್ರೋನ್​ ಹಾರಲೇ ಇಲ್ಲ ಅಂತಿದ್ದಾರೆ. 

ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

Latest Videos
Follow Us:
Download App:
  • android
  • ios