Asianet Suvarna News Asianet Suvarna News

ಅನುಪಮಾ ಗೌಡ ಅಲ್ಲ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2' ನಿರೂಪಣೆ ಮಾಡ್ತಿರೋದು ಇವರೆ ನೋಡಿ

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ -2 ನಿರೂಪಣೆಯನ್ನು ನಿರಂಜನ್ ದೇಶಪಾಂಡೆ ಮಾಡುತ್ತಿದ್ದಾರೆ. ಅನುಪಮಾ ಗೌಡ ನಡೆಸಿಕೊಟ್ಟಿದ್ದ ಮೊದಲ ಶೋ ದೊಡ್ಡ ಮಟ್ಟದ ಹಿಟ್ ಆಗಿತ್ತು.

Niranjan Deshpande to host colors kannadas Nannamma Superstar season 2 sgk
Author
First Published Sep 22, 2022, 5:46 PM IST

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ಈ ನಡುವೆ ಅನೇಕ ಹೊಸ ಶೋಗಳು ಪ್ರಾರಂಭವಾಗುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಹಿಟ್ ಆಗಿರುವ ರಾಜ ರಾಣಿ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಬಳಿಕ ಮತ್ತೆ ಸೀಸನ್ 2 ಪ್ರಸಾರವಾಗುತ್ತಿದೆ. ಈ ಎರಡು ಶೋಗಳನ್ನು ನಟಿ, ನಿರೂಪಕಿ ಅನುಪಮಾ ಗೌಡ ಹೋಸ್ಟ್ ಮಾಡಿದ್ದರು.  ಈ ಶೋಗಳು ದೊಡ್ಡ ಮಟ್ಟದಲ್ಲಿ ಖ್ಯಾತಿ ಸಹ ಗಳಿಸಿದ್ದವು. ಈ ಶೋ ಹಿಟ್ ಆದ ಬಳಿಕ ಇದೀಗ ಸೀಸನ್ 2 ಪ್ರಸಾರವಾಗುತ್ತಿದೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಬರ್ತಿದೆ. ಈ ಶೋ ಬರ್ತಿದೆ ಎನ್ನುತ್ತಿದ್ದಂತೆ ಯಾರು ಹೋಸ್ಟ್ ಮಾಡಲಿದ್ದಾರೆ, ಈ ಬಾರಿಯ ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಸದ್ಯ ನಿರೂಪಣೆಯ ಜವಾಬ್ದಾರಿ ವಹಿಸಿದವರು ಯಾರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಅನುಪಮಾ ಜಾಗಕ್ಕೆ ನಿರಂಜನ್ ದೇಶಪಾಂಡೆ ಎಂಟ್ರಿ ಕೊಟ್ಟಿದ್ದಾರೆ.

 Niranjan Deshpande to host colors kannadas Nannamma Superstar season 2 sgk

ಅಂದಹಾಗೆ ನಿರಂಜನ್ ದೇಶಪಾಂಡೆ ಈಗಾಗಲೇ ಒಂದು ಶೋ ಹೋಸ್ಟ್ ಮಾಡಿದ್ದಾರೆ. ಈ ಮೊದಲು ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಶೋ ನಿರೂಪಣೆ ಮಾಡಿದ್ದರು. ಇದೀಗ ಮತ್ತೊಂದು ನಿರೀಕ್ಷೆಯ ಶೋ ನಿರೂಪಣೆಗೆ ಸಜ್ಜಾಗಿದ್ದಾರೆ ನಿರಂಜನ್. ಅಂದಹಾಗೆ ಅನುಪಮಾ ಗೌಡ ನಿರೂಪಣೆ ಶೈಲಿ ಎಲ್ಲರಿಗೂ ಇಷ್ಟವಾಗಿತ್ತು. ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಆದರೆ ಅನುಪಮಾ ಕಾರಣಾಂತರಗಳಿಂದ ನಂತರದ ಶೋಗಳಿಂದ ಹಿಂದೆ ಸರಿದರು. ಅನುಪಮಾ ಜಾಗಕ್ಕೆ ನಿರಂಜನ್ ಎಂಟ್ರಿ ಕೊಟ್ಟಿದ್ದಾರೆ. ನಿರಂಜನ್ ಕಳೆದ ಶೋ ಗಿಚ್ಚಿ ಗಿಲಿಗಿಲಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಮತ್ತೊಂದು ಶೋ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

ಫೇಸ್‌ಬುಕ್‌ ಲವ್‌; ಕಷ್ಟ ದಿನಗಳ ಬಗ್ಗೆ Niranjan Deshpande ಮಾತು

ಈಗಾಗಲೇ ನಿರಂಜನ್ ಅವರ ಪ್ರೋಮೋ ಶೂಟ್ ಆಗಿದೆ ಎನ್ನಲಾಗಿದೆ. ಸದ್ಯದಲ್ಲೇ ನನ್ನಮ್ಮ ಸೂಪರ್ ಸ್ಟಾರ್ ಶೋನ ಪ್ರೋಮೋ ಪ್ರಸಾರವಾಗುವ ಸಾಧ್ಯತೆ ಇದೆ. ಅಂದಹಾಗೆ ನಿರಂಜನ್ ಇತ್ತೀಚಿಗಷ್ಟೆ ಪ್ರೋಮೋ ಚಿತ್ರೀಕರಣದ ವಿಡಿಯೋ ಶೇರ್ ಮಾಡಿದ್ದರು. ಆದರೆ ಯಾವ ಶೋ ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಅಂದಹಾಗೆ ನನ್ನಮ್ಮ ಸೂಪರ್ ಸ್ಟಾರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆದ ಶೋ. ಹಾಗಾಗಿ ಈ ಬಾರಿ ಹೇಗಿರಲಿದೆ, ಯಾರೆಲ್ಲ ಇರಲಿದ್ದಾರೆ ಎನ್ನುವ ಮತ್ತಷ್ಟು ಹೆಚ್ಚಾಗಿದೆ. 

ಟಿವಿಲ್ಲಿ ಆಂಕರಿಂಗ್ ಮಾಡ್ಬೇಕಾ? ಈ ಸತ್ಯ ಬಿಚ್ಚಿಟ್ಟ ನಿರಂಜನ್ ದೇಶಪಾಂಡೆ

ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ, ಕಾಮನ್ ಅಮ್ಮಂದಿರಿಗೂ ಅವಕಾಶ ನೀಡಲಾಗಿದೆ. ಈಗಾಗಲೇ ಸ್ಪರ್ಧಿಗಳ ಲಿಸ್ಟ್ ರೆಡಿಯಾಗಿದ್ದು ಸದ್ಯದಲ್ಲೆ ಬಹಿರಂಗವಾಗಲಿದೆ. ಸದ್ಯ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ ಮುಕ್ತಾಯವಾಗುತ್ತಿದೆ. ಇದರ ಬೆನ್ನಲ್ಲೇ ಈಗ ನನ್ನಮ್ಮ ಸೂಪರ್ ಸ್ಟಾರ್ ಪ್ರಸಾರಕ್ಕೆ ಸಜ್ಜಾಗಿದೆ ವಾಹಿನಿ. ಗಿಚ್ಚಿ ಗಿಲಿಗಿಲಿ ಶೋನ ಫಿನಾಲಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಶೋ ಅಧಿಕೃತವಾಗಿ ಪ್ರಸಾರವಾಗುವ ಸಾಧ್ಯತೆ ಇದೆ. ನನ್ನಮ್ಮ ಸೂಪರ್ ಸ್ಟಾರ್ ಶೋ ಅಮ್ಮ ಮಕ್ಕಳ ಬಗ್ಗೆ ಇರುವ ಶೋ ಆಗಿದೆ. ತಾಯಿ ಮಕ್ಕಳ ಬಾಂಧವ್ಯದ ಶೋಗೆ ಜಡ್ಜ್ ಆಗಿ ಸೃಜನ್ ಲೋಕೇಶ್, ತಾರಾ ಅನುರಾಧ ಮತ್ತು ಅನುಪ್ರಭಾಕರ್ ಕಾಣಿಸಿಕೊಂಡಿದ್ದರು. ಈ ಬಾರಿಯ ಈ ಮೂವರು ಜಡ್ಜ ಸ್ಥಾನ ಅಲಂಕರಿಸಲಿದ್ದಾರೆ.  

Follow Us:
Download App:
  • android
  • ios