ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ 'ಭರ್ಜರಿ ಬ್ಯಾಚುಲರ್ಸ್' ಷೋನಲ್ಲಿ ತಮ್ಮ ಬಾಲ್ಯದ ನೋವಿನ ಕಥೆ ಹಂಚಿಕೊಂಡಿದ್ದಾರೆ. ಚಿಕ್ಕವರಿದ್ದಾಗಲೇ ತಂದೆ-ತಾಯಿ ದೂರಾಗಿದ್ದರಿಂದ ಒಂಟಿತನ ಅನುಭವಿಸಿದ್ದಾಗಿ ಭಾವುಕರಾದರು. ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ತಂದೆಯ ಧ್ವನಿ ಕೇಳಿ ನಿರಂಜನ್ ಗೆ ಆಶ್ಚರ್ಯವಾಯಿತು. ಬಿಗ್ ಬಾಸ್ ನಂತರ ಯಶಸ್ವಿನಿ ಜೊತೆ ಮದುವೆಯಾದ ನಿರಂಜನ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ತಮ್ಮ ಮಾತುಗಾರಿಕೆ, ಹಾಸ್ಯದಿಂದಲೇ ಸಖತ್ ಫೇಮಸ್ ಆಗಿರೋ, ತಮ್ಮ ಪಟ್ ಪಟಾಕಿ ಮಾತುಗಳು, ಕಾಮಿಡಿ, ಉತ್ತಮ ನಿರೂಪಣಾ ಶೈಲಿಯಿಂದ ಜನರ ಮನಗೆದ್ದಿರುವ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಯಶಸ್ವಿನಿ ಅವರದ್ದು ಸಕತ್​ ಜೋಡಿ. ಮದುವೆಯಾಗಿ ಏಳು ವರ್ಷಗಳಾದರೂ ನವ ದಂಪತಿಯಂತೆ ಇಬ್ಬರೂ ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಷೋನಲ್ಲಿ ಸ್ಪರ್ಧಿಯಾಗಿದ್ದ ಈ ಜೋಡಿ ಶೂಟಿಂಗ್, ಫ್ರೀ ಟೈಂ, ಶಾಪಿಂಗ್, ಅಡುಗೆ ಹೀಗೆ ವಿಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಫಾಲೋವರ್ಸ್‌ಗೆ ಮನೋರಂಜನೆ ನೀಡುತ್ತಾರೆ. 

ಹೀಗೆ ಸದಾ ಮನೋರಂಜನೆ ನೀಡುತ್ತಲೇ ಇರುವ ನಿರಂಜನ್​ ಅವರು ಇದೀಗ ತಮ್ಮ ಬದುಕಿನ ನೋವಿನ ಕಥೆಯನ್ನು ಭರ್ಜರಿ ಬ್ಯಾಚುಲರ್ಸ್​ ಷೋನಲ್ಲಿ ತೆರೆದಿಟ್ಟಿದ್ದಾರೆ. ಇದು ಕುಟುಂಬದ ಟಾಸ್ಕ್​ ಇದ್ದು, ಅದರಲ್ಲಿ ರವಿಚಂದ್ರನ್​ ಅವರು ಕುಟುಂಬದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಿರಂಜನ್​ ಉತ್ತರಿಸಿದ್ದಾರೆ. ನಾನು ಚಿಕ್ಕವನಿರುವಾಗಲೇ ನಮ್ಮ ತಂದೆ - ತಾಯಿ ದೂರವಾದರು. ನಾನು 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಆಚೆ ಬಂದೆ. ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ ಎಂದಿದ್ದಾರೆ. ನಾನು ಮೊದಲಿನಿಂದಲೂ ಇಬ್ಬರ ಪ್ರೀತಿಯನ್ನು ನೋಡಲೇ ಇಲ್ಲ. ಎರಡು ವರ್ಷದವನಿರುವಾಗಲೇ ಅಪ್ಪ-ಅಮ್ಮ ಬೇರೆಯಾದರೂ. ಆಮೇಲೆ ಅಮ್ಮನ ಜೊತೆ ಇದ್ದರೂ ಇಬ್ಬರ ಪ್ರೀತಿಗಾಗಿ ಹಂಬಲಿಸಿದ್ದೆ. ಆದರೆ ಅದು ಕನಸಾಗಿಯೇ ಉಳಿಯಿತು ಎಂದಿದ್ದಾರೆ.

ಪಾರ್ಟಿ ಮತ್ತಲ್ಲಿ ತಮ್ಮದೇ ಮದ್ವೆಗೆ ಹೋಗೋದನ್ನು ಮರೆತಿದ್ರಂತೆ ನಿರಂಜನ್​ ದೇಶಪಾಂಡೆ! ಮುಂದೇನಾಯ್ತು ಕೇಳಿ..

ಇದೀಗ ಅಪ್ಪ ಬೇರೆ, ಅಮ್ಮ ಬೇರೆ, ಅಕ್ಕ ಬೇರೆ, ನಾನು ಬೇರೆ... ಜೊತೆಗೆ ಇರುವುದು ಎಂದರೆ ನಾನು ಮತ್ತು ಪತ್ನಿ ಇಬ್ಬರೇ ಎಂದು ಕಣ್ಣೀರಾಗಿದ್ದಾರೆ. ಅಷ್ಟಕ್ಕೂ ರಿಯಾಲಿಟಿ ಷೋಗಳಲ್ಲಿ ಎಲ್ಲವೂ ಮೊದಲೇ ಪ್ಲ್ಯಾನ್​ ಆಗಿರುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಇಲ್ಲಿ ಕೂಡ ಇದು ಮೊದಲೇ ಪ್ಲ್ಯಾನ್​ ಆಗಿರುವಂಥದ್ದು. ಅದೇ ಕಾರಣಕ್ಕೆ ನಿರಂಜನ್​ ಅವರು ಕಣ್ಣೀರು ಹಾಕುವ ಸಮಯದಲ್ಲಿ, ತಮ್ಮ ಬಗ್ಗೆ ಹೇಳಿಕೊಳ್ಳುತ್ತಿರುವಾಗಲೇ ಅವರ ಅಪ್ಪ ಮಾತನಾಡಿದ್ದಾರೆ. ಅದನ್ನು ಕೇಳಿ ನಿರಂಜನ್​ ಶಾಕ್​ ಆಗಿದ್ದು, ಕಣ್ಣೀರು ಬಂದಿದೆ. ನಮ್ಮ ಪ್ರೀತಿ ಸದಾ ನಿನ್ನ ಮೇಲೆ ಇರುತ್ತದೆ. ನೀನು ಇಷ್ಟು ದೊಡ್ಡ ವ್ಯಕ್ತಿಯಾಗಿದ್ದು ಖುಷಿ ಕೊಟ್ಟಿದೆ. ನಿನ್ನನ್ನು ನಾನು ಮತ್ತು ನಿನ್ನ ಅಜ್ಜಿ ಟಿವಿನಲ್ಲಿ ನೋಡುತ್ತಲೇ ಇರುತ್ತೇವೆ. ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಇದೇ ವೇಳೆ ರವಿಚಂದ್ರನ್​ ಅವರು, ಇಷ್ಟೊಂದು ನೋವು ಇಟ್ಟುಕೊಂಡು ಹೇಗೆ ಎಲ್ಲರನ್ನೂ ನಕ್ಕು ನಗಿಸುತ್ತಿರುವಿರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ನಿರಂಜನ್​ ಮತ್ತು ಪತ್ನಿಯ ವಿಷಯ ಬರುವುದಾದರೆ, ಜೋಡಿಯ ಮದುವೆಯ ವಿಷಯವೂ ಸಕತ್​ ಇಂಟರೆಸ್ಟಿಂಗ್​ ಆಗಿಯೇ ಇದೆ. 2017ರಲ್ಲಿ ನಡೆದ 'ಬಿಗ್ ಬಾಸ್ ಕನ್ನಡ ಸೀಸನ್ 4' ಮೂಲಕ ಜನಪ್ರಿಯತೆ ಗಳಿಸಿದ್ದ ನಿರಂಜನ್ ಈ ಷೋದಿಂದ ಹೊರಬಂದ ಬಳಿಕ ಯಶಸ್ವಿನಿ ಜೊತೆ ಮದುವೆಯಾಗಿದ್ದಾರೆ. ಮದುವೆಯ ಬಗ್ಗೆ ಮೊದಲೇ ಡಿಸೈಡ್​ ಆಗಿತ್ತು. ಆದರೆ ಮದುವೆ ಫಿಕ್ಸ್​ ಆಗುತ್ತಲೇ ಬಿಗ್​ಬಾಸ್​ನಿಂದ ಆಫರ್​ ಬಂದಿತ್ತು. ಆದ್ದರಿಂದ ಮದುವೆ ಡೇಟ್​ ಮುಂದಕ್ಕೆ ಹಾಕಿದ್ದರು. ಪತ್ನಿ ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿತ್ತು. ಬಳಿಕ ಇವರು ಇಬ್ಬರ ಪ್ರೀತಿಗೆ ಕಾರಣವಾದ ಮಜಾ ಭಾರತ ಶೂಟಿಂಗ್ ಸೆಟ್ ನಲ್ಲೇ ಮದ್ವೆಯಾಗಿದ್ದರು. ಇಷ್ಟು ವರ್ಷಗಳಾದರೂ ದಂಪತಿ ಕಾಲೆಳೆದುಕೊಳ್ಳುತ್ತಾ ಎಂಜಾಯ್​ ಮಾಡುತ್ತಿದ್ದಾರೆ.

ಸವತಿ ಜೊತೆ ಭಾಗ್ಯ ಭರ್ಜರಿ ಡಾನ್ಸ್​: ಶ್ರೇಷ್ಠಾ ಪಾಡು ಇಂಗು ತಿಂದ ಮಂಗ! ವಿಡಿಯೋ ವೈರಲ್​

View post on Instagram