ಭಾಗ್ಯಾ (ಸುಷ್ಮಾ ಕೆ. ರಾವ್) ಕ್ಯಾಂಟೀನ್ ಮಾಲೀಕರಾಗಿ ಯಶಸ್ಸು ಕಂಡು, ತಾಂಡವ್ ಮತ್ತು ಶ್ರೇಷ್ಠಾ (ಕಾವ್ಯಾ ಗೌಡ) ಅವರ ಅಸೂಯೆಗೆ ಕಾರಣರಾಗಿದ್ದಾರೆ. ತಾಂಡವ್ ಕಚೇರಿಯಲ್ಲಿ ಭಾಗ್ಯಾಳನ್ನು ಕಿರುಕುಳ ನೀಡಿದ್ದಕ್ಕಾಗಿ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ. ಭಾಗ್ಯಾ ಮತ್ತು ಶ್ರೇಷ್ಠಾ ಜೊತೆಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದಾರೆ.

ಭಾಗ್ಯಳ ಗೋಳು ನೋಡಿ ಸಾಕು ಸಾಕು ಎನ್ನಿಸಿದವರಿಗೆ ನಿರ್ದೇಶಕರು ಕೊನೆಗೂ ಗುಡ್​ ನ್ಯೂಸ್​ ಕೊಟ್ಟಿದ್ದರು. ಇಷ್ಟು ದಿನ ವೀಕ್ಷಕರು ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಭಾಗ್ಯಳನ್ನು ಹೇಗಾದರೂ ಮಾಡಿ ತುಳಿಯಬೇಕು, ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಬೇಕು, ನಾನಿಲ್ಲದೇ ಭಾಗ್ಯಳಿಗೆ ಸಂಸಾರ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಅಹಂನಲ್ಲಿದ್ದ ತಾಂಡವ್​ಗೆ ಭಾರಿ ಮುಖಭಂಗ ಆಗಿಯೇ ಬಿಟ್ಟಿದೆ. ತನ್ನ ಲವರ್​ ಶ್ರೇಷ್ಠಾಳನ್ನು ಭಾಗ್ಯ ಬಿಟ್ಟುಕೊಟ್ಟರೂ ತಾಂಡವ್​ಗೆ ಸಮಾಧಾನ ಇಲ್ಲ. ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಅವನು ಹೇಳಿದ್ದ. ಆದರೆ ಈಗ ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಬಲ್ಲುಳು ಎನ್ನೋದನ್ನು ತೋರಿಸಿಕೊಟ್ಟಿರೋ ಭಾಗ್ಯ, ತಾಂಡವ್​ ಕಚೇರಿಯಲ್ಲಿಯೇ ಕ್ಯಾಂಟೀನ್​ ಓನರ್​ ಆಗಿದ್ದಾಳೆ. 

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇದನ್ನೇ ತಾಂಡವ್​ ಮತ್ತು ಶ್ರೇಷ್ಠಾಳಿಗೆ ಅರಗಿಸಿಕೊಳ್ಳಲು ಆಗದ ಸ್ಥಿತಿ. ಇದರ ನಡುವೆಯೇ ಇದೀಗ ಕಚೇರಿಯಲ್ಲಿಯೇ ಭಾಗ್ಯಳ ಮೇಲೆ ದರ್ಪ ತೋರಿದ್ದಾನೆ ತಾಂಡವ್​. ಈತನಿಗೆ ಶ್ರೇಷ್ಠಾ ಜೊತೆಯಾಗಿದ್ದಾಳೆ. ಇದನ್ನೆಲ್ಲಾ ಕಚೇರಿಯ ಮ್ಯಾನೇಜರ್​ ನೋಡಿದ್ದಾರೆ. ಅವರಿಗೆ ಪರಿಸ್ಥಿತಿ ಅರ್ಥವಾಗಿದೆ. ತಾಂಡವ್​ ಮತ್ತು ಶ್ರೇಷ್ಠಾ ಜೊತೆಗೂಡಿ ಟಾರ್ಚರ್​ ಕೊಡುತ್ತಿರುವುದು ತಿಳಿದಿದೆ. ಇದೇ ಕಾರಣಕ್ಕೆ ಇಬ್ಬರನ್ನು ಕೆಲಸದಿಂದ ಟರ್ಮಿನೇಟ್​ ಮಾಡಿದ್ದಾರೆ. ಇಬ್ಬರ ಕೈಗೆ ಟರ್ಮಿನೇಷನ್​ ಲೆಟರ್​ ಕೊಟ್ಟಿದ್ದಾರೆ. ಇದನ್ನು ನೋಡಿ ತಾಂಡವ್​ ಮತ್ತು ಶ್ರೇಷ್ಠಾಳ ನೆಲವೇ ಕುಸಿದ ಅನುಭವವಾಗಿದೆ.

ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್​

ಇದರ ನಡುವೆಯೇ ಸವತಿ ಶ್ರೇಷ್ಠಾಳ ಜೊತೆ ಭಾಗ್ಯ ಸಕತ್​ ರೀಲ್ಸ್​ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಇದು ನಿಮ್ಮಿಂದ ಮಾತ್ರ ಸಾಧ್ಯ ಬಿಡಿ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನು ಭಾಗ್ಯಳ ಒರಿಜಿನಲ್ ಹೆಸರು ಸುಷ್ಮಾ ಕೆ. ರಾವ್‌ ಆಗಿದ್ದರೆ, ಶ್ರೇಷ್ಠಾಳದ್ದು ಕಾವ್ಯಾ ಗೌಡ. ಸುಷ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿದ್ದಾರೆ. ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

ರೌಡಿಗಳ ಮಟ್ಟಹಾಕಲು ಬಂದ ಬುಲ್ಡೋಜರ್​ ಬೇಬಿ! ಮುಂದಿನ ಸಿಎಂ ನೀವೇ ಎಂದ ನೆಟ್ಟಿಗರು...

View post on Instagram