ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ನರ್ತಕಿ ಯಶಸ್ವಿನಿ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಬಿಗ್‌ಬಾಸ್ ಮೂಲಕ ಪ್ರಸಿದ್ಧರಾದ ನಿರಂಜನ್, ಮಜಾಭಾರತದಲ್ಲಿ ಭೇಟಿಯಾದ ಯಶಸ್ವಿನಿಯವರನ್ನು ವಿವಾಹವಾದರು. ಮದುವೆ ದಿನ ನಿರಂಜನ್ ನಾಪತ್ತೆಯಾಗಿದ್ದ ಘಟನೆಯನ್ನು ದಂಪತಿಗಳು ಹಂಚಿಕೊಂಡಿದ್ದಾರೆ.
ತಮ್ಮ ಮಾತುಗಾರಿಕೆ, ಹಾಸ್ಯದಿಂದಲೇ ಸಖತ್ ಫೇಮಸ್ ಆಗಿರೋ, ತಮ್ಮ ಪಟ್ ಪಟಾಕಿ ಮಾತುಗಳು, ಕಾಮಿಡಿ, ಉತ್ತಮ ನಿರೂಪಣಾ ಶೈಲಿಯಿಂದ ಜನರ ಮನಗೆದ್ದಿರುವ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಯಶಸ್ವಿನಿ ಅವರದ್ದು ಸಕತ್ ಜೋಡಿ. ಮದುವೆಯಾಗಿ ಏಳು ವರ್ಷಗಳಾದರೂ ನವ ದಂಪತಿಯಂತೆ ಇಬ್ಬರೂ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಷೋನಲ್ಲಿ ಸ್ಪರ್ಧಿಯಾಗಿದ್ದ ಈ ಜೋಡಿ ಶೂಟಿಂಗ್, ಫ್ರೀ ಟೈಂ, ಶಾಪಿಂಗ್, ಅಡುಗೆ ಹೀಗೆ ವಿಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಫಾಲೋವರ್ಸ್‌ಗೆ ಮನೋರಂಜನೆ ನೀಡುತ್ತಾರೆ.
ಇನ್ನು ಈ ಜೋಡಿಯ ಮದುವೆಯ ವಿಷಯವೂ ಸಕತ್ ಇಂಟರೆಸ್ಟಿಂಗ್ ಆಗಿಯೇ ಇದೆ. 2017ರಲ್ಲಿ ನಡೆದ 'ಬಿಗ್ ಬಾಸ್ ಕನ್ನಡ ಸೀಸನ್ 4' ಮೂಲಕ ಜನಪ್ರಿಯತೆ ಗಳಿಸಿದ್ದ ನಿರಂಜನ್ ಈ ಷೋದಿಂದ ಹೊರಬಂದ ಬಳಿಕ ಯಶಸ್ವಿನಿ ಜೊತೆ ಮದುವೆಯಾಗಿದ್ದಾರೆ. ಮದುವೆಯ ಬಗ್ಗೆ ಮೊದಲೇ ಡಿಸೈಡ್ ಆಗಿತ್ತು. ಆದರೆ ಮದುವೆ ಫಿಕ್ಸ್ ಆಗುತ್ತಲೇ ಬಿಗ್ಬಾಸ್ನಿಂದ ಆಫರ್ ಬಂದಿತ್ತು. ಆದ್ದರಿಂದ ಮದುವೆ ಡೇಟ್ ಮುಂದಕ್ಕೆ ಹಾಕಿದ್ದರು. ಪತ್ನಿ ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿತ್ತು. ಬಳಿಕ ಇವರು ಇಬ್ಬರ ಪ್ರೀತಿಗೆ ಕಾರಣವಾದ ಮಜಾ ಭಾರತ ಶೂಟಿಂಗ್ ಸೆಟ್ ನಲ್ಲೇ ಮದ್ವೆಯಾಗಿದ್ದರು. ಇಷ್ಟು ವರ್ಷಗಳಾದರೂ ದಂಪತಿ ಕಾಲೆಳೆದುಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ನಿಮಗೆಲ್ಲಾ ರೋಲ್ ಇಲ್ಲ ಅಂತ ಕೆಜಿಎಫ್ ನಿರ್ದೇಶಕ ಮಾಳವಿಕಾಗೆ ವಾಪಸ್ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ
ಇನ್ನು ಇವರ ಮದುವೆಯ ಶಾಸ್ತ್ರದ ದಿನ, ನಿರಂಜನ್ ಅವರೇ ನಾಪತ್ತೆಯಾಗಿದ್ದ ಘಟನೆಯನ್ನು ಅವರಿಬ್ಬರೂ ವಿವರಿಸಿದ್ದಾರೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಇಬ್ಬರೂ ರಿವೀಲ್ ಮಾಡಿದ್ದಾರೆ. ನಿರಂಜನ್ ಅವರು ಹೇಳಿದ್ದೇನೆಂದರೆ, 'ಮದುವೆ ಹಿಂದಿನ ದಿನ ಬ್ಯಾಚುಲರ್ಸ್ ಪಾರ್ಟಿ ಇತ್ತು. ನನ್ನ ಅಪ್ಪನೂ ಬಂದಿದ್ರು. ಇವಳ ಫ್ರೆಂಡ್ಸೂ ಬಂದಿದ್ರು. ಬ್ಯಾಟರಿ ಲೋ ಆಗಿ ಸ್ವಿಚ್ ಆಫ್ ಆಗಿ ಹೋಗಿತ್ತು. ಅದೇ ಗಮ್ಮತ್ತಲ್ಲಿ ಮಲಗಿ ಬಿಟ್ಟಿದ್ವಿ ಎಲ್ಲ್ಆ. ಮರುದಿನ ಯಾರಿಗೂ ಎಚ್ಚರನೇ ಇಲ್ಲ' ಎಂದಿದ್ದರೆ, ಯಶಸ್ವಿನ ಅವರು, 'ನಾವೆಲ್ಲಾ ಟೆನ್ಷನ್ ಆಗಿಬಿಟ್ವಿ. ಇವರ ಫೋನೂ ಸ್ವಿಚ್ ಆಫು, ಅವರ ಅಪ್ಪನೂ ಫೋನ್ ರಿಸೀವ್ ಮಾಡ್ತಿಲ್ಲ. ಕೊನೆಗೆ ಒಂದಿಷ್ಟು ಮಂದಿ ಹೋಗಿ ಅವರ ಮನೆ ಬಾಗಿಲು ಬಡಿದು ಬಡಿದೂ ಇಟ್ಟರು. ಕೊನೆಗೆ ಇವರಿಗೆ ಎಚ್ಚರ ಆಗಿದೆ. ನಿನ್ನದೇ ಮದ್ವೆ ಕಣಪ್ಪಾ ಎಂದು ಹೇಳಿ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಸುಸ್ತಾಗಿ ಹೋಯ್ತು' ಎಂದಿದ್ದಾರೆ.
ಇನ್ನು ಆ್ಯಂಕರ್ ನಿರಂಜನ್ ಅವರ ಕುರಿತು ಹೇಳುವುದಾದರೆ, ಇವರು ಸೀರಿಯಲ್ ಹಾಗೂ ಸಿನಿಮಾ ನಟರೂ ಹೌದು. 'ಮಿಲನ' ಧಾರಾವಾಹಿ, 'ಬೊಂಬೆ ಮಿಠಾಯಿ' ಸಿನಿಮಾದಲ್ಲಿಯೂ ನಿರಂಜನ್ ನಟಿಸಿದ್ದಾರೆ. ಪತ್ನಿ ಯಶಸ್ವಿನಿ ಅವರು ಡಾನ್ಸರ್.
ಮೇಕಪ್ ಇಲ್ಲದ ಮುಖ ತೋರಿಸಲು ನಾಚಿಗೊಂಡ ಬಿಗ್‌ಬಾಸ್ ನಮ್ರತಾ! ಬಣ್ಣ ರಹಿತ ತನಿಷಾರನ್ನೂ ನೋಡಿಬಿಡಿ
