ಮದ್ವೆ ಫಿಕ್ಸಾಗೋದು ಒಬ್ಬರ ಜೊತೆ, ತಾಳಿ ಕಟ್ಟೋದು ಮತ್ತೊಬ್ರಿಗೆ, ಈ ಕನ್ನಡ ಸೀರಿಯಲ್‌ಗಳಿಗೇನಾಗಿದೆ?
Kannada Serial Updates: ಕನ್ನಡ ಸೀರಿಯಲ್‌ಗಳಲ್ಲೀಗ ಮದ್ವೆ ಹವಾ ಜೋರಾಗಿದೆ. ಆದ್ರೆ ಎಲ್ಲಾ ಕಡೆ ಮದ್ವೆ ಫಿಕ್ಸಾಗೋದು ಒಬ್ಬರ ಜೊತೆಗಾದ್ರೆ ತಾಳಿ ಕಟ್ಟೋದು ಮತ್ತೊಬ್ಬರ ಜೊತೆಗೆ ಅಂತಾಗಿದೆ. ಕನ್ನಡ ಸೀರಿಯಲ್‌ನವ್ರಿಗೆ ಏನಾಗಿದೆ ಅಂತ ವೀಕ್ಷಕರು ಸಿಡಿಮಿಡಿಕೊಂಡಿದ್ದಾರೆ.
ಕಳೆದ ದಶಕಗಳಲ್ಲಿ ಸೀರಿಯಲ್‌ಗಳಲ್ಲಿ (Serial) ಅತ್ತೆ ಸೊಸೆ ಜಗಳ ಸಖತ್ ಟ್ರೆಂಡಿ(Trendy) ಅನಿಸಿಕೊಳ್ತಿತ್ತು. ಜೊತೆಗೆ ಸಂಸಾರ, ಅಲ್ಲಿನ ಕಷ್ಟ ಸುಖಗಳ ಕಥೆ ಇರುವ ಸೀರಿಯಲ್‌ಗಳು ಗಮನ ಸೆಳೆಯುತ್ತಿದ್ದವು. ಹೆಣ್ಣು ಮಕ್ಕಳ ಕಣ್ಣೀರಿನ ಧಾರೆಯಲ್ಲಿ ಮುಳುಗಿ ತೇಲುತ್ತಿದ್ದ ಸೀರಿಯಲ್‌ಗಳೂ ಸಾಕಷ್ಟಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ರೊಮ್ಯಾಂಟಿಕ್ ಸೀರಿಯಲ್‌ಗಳು(Romantic Serials) ಸಖತ್ ಪಾಪ್ಯುಲರ್ ಆಗ್ತಿವೆ. ಅದರಲ್ಲೂ ತ್ರಿಕೋನ ಲವ್ ಸ್ಟೋರಿ(Love story0 ಇರುವ ಸೀರಿಯಲ್‌ಗಳೇ ಎಲ್ಲೆಲ್ಲೂ ಇವೆ. ಒಟ್ಟಾರೆ ಲವ್ ಸಬ್ಜೆಕ್ಟ್ ಇವತ್ತಿನ ಸೀರಿಯಲ್ ಟ್ರೆಂಡ್ ಅಂತ ಹೇಳಬಹುದು. ನಂಬರ್ 1 ಸ್ಥಾನಗಳಲ್ಲಿರುವ ಪುಟ್ಟಕ್ಕನ ಮದುವೆಯಲ್ಲೂ(Puttakkana maduve) ಪುಟ್ಟಕ್ಕನ ಮಗಳ ಜೊತೆಗೆ ಕಂಠಿಯ ಲವ್‌ಸ್ಟೋರಿ ಎಳೆ ಗಮನ ಸೆಳೆಯುತ್ತಿದೆ. 'ಗಟ್ಟಿಮೇಳ'ದಲ್ಲಿ(Gattimela) ವೇದಾಂತ್ ಹಾಗೂ ರೌಡಿ ಬೇಬಿ ಅಮೂಲ್ಯಗೆ ಮದುವೆ ಆಗಿದ್ರೂ ರೊಮ್ಯಾಂಟಿಕ್ ಸೀನ್‌ಗಳನ್ನ ಜನ ಎನ್‌ಜಾಯ್ ಮಾಡ್ತಿದ್ದಾರೆ. ಮೊನ್ನೆ ಮೊನ್ನೆವರೆಗೂ 'ಜೊತೆ ಜೊತೆಯಲಿ ಸೀರಿಯಲ್' (Jothe jotheyali) ಅನು ಸಿರಿಮನೆ ಹಾಗೂ ಆರ್ಯವರ್ಧನ್ ಲವ್ ಸ್ಟೋರಿಗೆ ದೊಡ್ಡ ಅಭಿಮಾನಿ ಬಳಗವೇ ಕ್ರಿಯೇಟ್ ಆಗಿತ್ತು.
ಹಿಸ್ಟಾರಿಕ್ ಥಾಮಸ್ ಕಪ್ ಗೆದ್ದ ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಕೋಚ್ ಬಾಯ್‌ಫ್ರೆಂಡ್ ಮಥಿಯಾಸ್!
ಇನ್ನೊಂದು ಕಡೆ ಸೀರಿಯಲ್‌ಗಳಲ್ಲಿ ಲವ್, ರೊಮ್ಯಾಂಟಿಕ್ ಕ್ಷಣಗಳೆಲ್ಲ ದಾಟಿ ಮದುವೆ ಸೀಸನ್ ಹೆಚ್ಚಾಗ್ತಿದೆ. ಮೊನ್ನೆ ಮೊನ್ನೆ ತಾನೇ ಆರ್ಯ ಮತ್ತು ಅನು ಮದುವೆ ಆಗಿದೆ. ಕೆಲವೇ ದಿನಗಳ ಕೆಳಗೆ 'ಲಕ್ಷಣ' (Lakshana) ಸೀರಿಯಲ್‌ನ ನಕ್ಷತ್ರಾ ಮತ್ತು ಭೂಪತಿ ಮದುವೆ ನಡೆದಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕನ್ನಡತಿ'(Kannadathi) ಯಲ್ಲಿಭುವಿ ಹಾಗೂ ಹರ್ಷನ ಮದುವೆ ದಿನಗಳು ಹತ್ತಿರದಲ್ಲೇ ಇವೆ. 'ದೊರೆಸಾನಿ'(Doresaani) ಸೀರಿಯಲ್‌ನಲ್ಲಿ ಪುರುಷೋತ್ತಮನ ಮುದ್ದಿನ ಮಗಳು ದೀಪಿಕಾ ಆನಂದನ ಜೊತೆಗೆ ಪ್ರೇಮ ಲೋಕದಲ್ಲಿ ವಿಹರಿಸುತ್ತಾ ಇದ್ದಾಳೆ. ಇವರ ಮದುವೆ ಸದ್ಯಕ್ಕಂತೂ ನಡೆಯೋದು ಡೌಟ್.
777 Charlie: ರಕ್ಷಿತ್ ಶೆಟ್ಟಿಗೆ ಜತೆಯಾಗುತ್ತಿರುವ ಧನುಷ್, ಸಾಯಿಪಲ್ಲವಿ
ಆದರೆ ಇತ್ತೀಚೆಗೆ ಸೀರಿಯಲ್‌ಗಳ ಕತೆಗಳಲ್ಲಿ ಒಂದು ಏಕತಾನತೆಯನ್ನು ಪ್ರೇಕ್ಷಕರು ಗುರುತಿಸಿದ್ದಾರೆ. ಅದು ಒಬ್ಬರ ಜೊತೆಗೆ ಮದುವೆ ನಿಶ್ಚಯವಾಗಿ ಕೊನೇ ಕ್ಷಣದಲ್ಲಿ ಮತ್ತೊಬ್ಬರ ಜೊತೆಗೆ ಮದುವೆ ಆಗೋದು. ಈ ಬಗೆಯ ಕತೆ 'ಲಕ್ಷ್ಮೀ ಬಾರಮ್ಮ', 'ಅಗ್ನಿಸಾಕ್ಷಿ'(Agni sakshi)ಯಂಥಾ ಸೀರಿಯಲ್‌ಗಳನ್ನು ಸಖತ್ ಪಾಪ್ಯುಲರ್ ಮಾಡಿತ್ತು. ಈ ಜನಪ್ರಿಯತೆಯ ಎಳೆ ಹಿಡಿದು ಹೊರಟ ಇತರೇ ಸೀರಿಯಲ್‌ಗಳು ಅದೇ ಕತೆಯ ನೇಣಿಗೆ ಕೊರಳೊಡ್ಡಿ ಪ್ರಾಣ ಕಳ್ಕೊಳ್ಳಲು ಹೊರಟಿವೆ ಅಂತ ಜನ ಖಾರವಾಗಿ ಕಮೆಂಟ್ ಮಾಡ್ತಿದ್ದಾರೆ. 'ಲಕ್ಷಣ' ಸೀರಿಯಲ್‌ನಲ್ಲಿ ಶ್ವೇತಾ ಹಾಗೂ ಭೂಪತಿ ನಡುವೆ ಮದುವೆ ಫಿಕ್ಸ್ ಆಗಿ ಅವರು ಇನ್ನೇನು ಮದುವೆ ಆಗಬೇಕು ಅನ್ನುವಾಗ ಟ್ವಿಸ್ಟ್ ಬಂದು ಭೂಪತಿ ನಕ್ಷತ್ರಾಗೆ ತಾಳಿ ಕಟ್ಟೋ ಹಾಗಾಗಿದೆ. ಇದೀಗ ಇನ್ನೊಂದು ಸೀರಿಯಲ್ 'ಸತ್ಯಾ' ಸಹ ಅದೇ ಹಂತದಲ್ಲಿದೆ. ಇದರಲ್ಲಿ ಸತ್ಯ ಮತ್ತು ಕಾರ್ತಿಕ್ ಒಳಗೊಳಗೇ ಇಷ್ಟಪಡುತ್ತಿದ್ದರೂ ಅವರ ನಡುವೆ ಮದುವೆ ನಡೆಯಲ್ಲ ಅಂತಲೇ ಬಿಂಬಿಸಲಾಗಿತ್ತು. ಇದೀಗ ಸತ್ಯಳ ಅಕ್ಕ ದಿವ್ಯಾ ಓಡಿಹೋಗುವ ಟ್ವಿಸ್ಟ್ ತಂದು ಸತ್ಯಾಗೂ ಕಾರ್ತಿಕ್‌ಗೂ ಮದುವೆ ಮಾಡುವ ಮಾತುಕತೆ ನಡೆಯುತ್ತಿದೆ. ಬೆಟ್ಟದ ಹೂ ಸೀರಿಯಲ್‌ನಲ್ಲಿ(Bettada hoo) ಅದರ ಹೀರೋಗೆ ಈಗಾಗಲೇ ಇಬ್ಬರ ಜೊತೆಗೆ ಮದುವೆ ಆಗಿದೆ. ನಾಯಕಿ ಹೂವಿ ನಾಯಕನ ಮನೆ ಕೆಲಸದವಳಾಗಿ ಇದ್ದಾಳೆ. ಇದು ಯಾವುದೋ ಆಂಗಲ್‌ನಲ್ಲಿ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನ ಮತ್ತೊಂದು ವರ್ಶನ್‌ನಂತೆ ಕಾಣಬಹುದು.
ಗೆಳತಿಯ ಮದುವೆ ಸಂಭ್ರಮದಲ್ಲಿ ರಶ್ಮಿಕಾ; ಕೂರ್ಗ್ ಸ್ಟೈಲ್‌ನಲ್ಲಿ ಮಿಂಚಿದ ನಟಿ
ಒಂದು ಹೊಸ ಸಬ್ಜೆಕ್ಟ್‌ನ ಸಿನಿಮಾ ಸೂಪರ್ ಹಿಟ್ ಆದ ಕೂಡಲೇ ಅದೇ ಬಗೆಯ ಕತೆಯಲ್ಲಿ ಒಂದಿಷ್ಟು ಸಿನಿಮಾಗಳು ಬರೋದನ್ನು ಕಾಣಬಹುದು. ಆದರೆ ಸಕ್ಸಸ್ ಸಿನಿಮಾದ ಸೂತ್ರ ಹಿಡಿದು ಆಮೇಲೆ ಬರುವ ಚಿತ್ರಗಳು ಯಶಸ್ವಿಯಾದ ಉದಾಹರಣೆ ತೀರಾ ಕಡಿಮೆ. ಸೀರಿಯಲ್‌ಗಳಲ್ಲೂ ಈ ಮದುವೆಯ ಡ್ರಾಮಾದಲ್ಲಿ ಮೊದ ಮೊದಲ ಕೆಲವು ಸೀರಿಯಲ್‌ಗಳು ಸಕ್ಸಸ್ ಆದವು. ಆದರೆ ಅದೇ ಕತೆಯ ಲೈನ್ ಈಗಲೂ ಸಕ್ಸಸ್ ಆಗುತ್ತೆ ಅಂದ್ರೆ ಅದು ನಿಮ್ಮ ಭ್ರಮೆ ಅಂತ ಪ್ರೇಕ್ಷಕರು ಹೇಳ್ತಿದ್ದಾರೆ. ಸೀರಿಯಲ್ ಆಗಲಿ, ಸಿನಿಮಾವೇ ಆಗಲಿ, ಜನರಿಗೆ ಬೇಕಾಗಿರೋದು ಕತೆಯಲ್ಲಿ, ನಿರೂಪಣೆಯಲ್ಲಿ ಹೊಸತನ. ಈ ಹೊಸತನವನ್ನು ಜನರೂ ಮೆಚ್ಚುವಂತೆ ಕೊಡೋದೇ ಸವಾಲು. 'ಜೊತೆ ಜೊತೆಯಲಿ' ಅಂತಹ ಸೀರಿಯಲ್‌ಗಳು ಇದರಲ್ಲಿ ಯಶಸ್ವಿ ಆಗಿದ್ದವು. ಉಳಿದ ಸೀರಿಯಲ್‌ಗಳು ಹೊಸತೇನಾದ್ರೂ ಕತೆ ಹುಡುಗಿದ್ರೆ ಬೆಟರ್(better). ಇಲ್ಲವಾದರೆ ಜನ ಚಾನೆಲ್ ಚೇಂಜ್ ಮಾಡಿ ಮುಂದೆ ಹೋಗ್ತಿರ್ತಾರೆ ಅಷ್ಟೇ!