ಹಿಸ್ಟಾರಿಕ್ ಥಾಮಸ್ ಕಪ್ ಗೆದ್ದ ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಕೋಚ್ ಬಾಯ್‌ಫ್ರೆಂಡ್ ಮಥಿಯಾಸ್!
ಭಾರತೀಯ ಮೆನ್ ಬ್ಯಾಡ್ಮಿಂಟನ್ ತಂಡ ಮತ್ತು ಕೋಚ್ ಕಮ್ ಬಾಯ್‌ಫ್ರೆಂಡ್ ಮಥಿಯಾಸ್ ಬೋ ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ ತಾಪ್ಸಿ ಪನ್ನು....
ಭಾರತದ ಮೆನಗ ಬ್ಯಾಡ್ಮಿಂಟನ್ (Indian Badminton Men ) ತಂಡ ಶನಿವಾರ ದೊಡ್ಡ ದಾಖಲೆ ಮಾಡಿದೆ. ಎಲ್ಲರ ಫೇವರೆಟ್ ತಂಡಗಳಾಗಿದ್ದ, 14ನೇ ಬಾರಿಗೆ ಥಾಮಸ್ ಕಮ್ ಗೆದ್ದಿರುವ ತಂಡವನ್ನು ಸೋಲಿಸಿ ಈ ಬಾರಿ 2022 ಥಾಮಸ್ ಕಮ್ ಚಾಂಪಿಯನ್ ಆಗಿದ್ದಾರೆ. ಇದೇ ಮೊದಲ ಬಾರಿ ಭಾರತ ಪ್ರತಿಷ್ಠಿತ ಪಂದ್ಯ ಗೆದಿದ್ದು, ದೊಡ್ಡ ನ್ಯೂಸ್ ಆಗಿರುವಕ್ಕೆ ಕಾರಣವೇ ತಂಡದಲ್ಲಿರುವ ಒರ್ವ ವ್ಯಕ್ತಿ ಬಾಲಿವುಡ್ ಕನೆಕ್ಷನ್ ಹೊಂದಿರುವುದಕ್ಕೆ. ತಂಡದ ಡಬಲ್ಸ್ ಕೋಚ್ ಮಾಜಿ ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರನಾಗಿರುವ ಮಥಿಯಾಸ್ ಬೋ (Mathias Boe) ಅವರು ನಟಿ ತಾಪ್ಸಿ ಪನ್ನು ಅವರ ಬಾಯ್‌ಫ್ರೆಂಡ್.
ಹೌದು! ಮಥಿಯಾಸ್ ಟ್ರೋಪಿ ಗೆಲ್ಲುತ್ತಿದ್ದಂತೆ ತಾಪ್ಸಿ (Taapsee Pannu) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ವಿಶ್ ಮಾಡಿದ್ದಾರೆ. 'The Boys did it. ನಮ್ಮ ಭಾರತಕ್ಕೆ ಸಿಕ್ಕಿರುವ ಮೊದಲ ಥಾಮಸ್ ಕಪ್. ಮಿಸ್ಟರ್ ಕೋಚ್ ನೀವು ನಮಗೆ ಹೆಮ್ಮೆ ತಂದಿದ್ದೀರಿ'ಎಂದು ಬರೆದುಕೊಂಡು ಇಡೀ ತಂಡವನ್ನು ತಾಪ್ಸಿ ಟ್ಯಾಗ್ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ಮಥಿಯಾಸ್ ಬೋ ಅವರ ಬ್ಯಾಡ್ಮಿಂಟನ್ ಸ್ಪರ್ಧೆ ನೋಡಲು ಹೋದಾಗ ತಾಪ್ಸಿ ಫಿದಾ ಆಗಿದ್ದಾರೆ. ಟ್ವಿಟರ್‌ನಲ್ಲಿ ಒಬ್ಬರನ್ನೊಬ್ಬರು ಟ್ಯಾಗ್ ಮಾಡಿಕೊಂಡು ಟ್ವೀಟ್ ಶುರು ಮಾಡಿ ಅಲ್ಲಿಂದ ತಮ್ಮ ಸ್ನೇಹ ಶುರುವಾದ ಘಟನೆ ಬಗ್ಗೆ ಇ-ಟೈಮ್ಸ್ ಸಂದರ್ಶನದಲ್ಲಿ ತಾಪ್ಸಿ ಹೇಳಿದ್ದರು.
'ಅನೇಕ ಕಾರಣಗಳಿಂದ ನನಗೆ ಚಿತ್ರರಂಗದಲ್ಲಿ ಇರುವವರನ್ನು ಡೇಟ್ ಮಾಡುವುದಕ್ಕೆ ಇಷ್ಟವಿಲ್ಲ. ನನ್ನ ಪರ್ಸನಲ್ ಲೈಫ್ ಮತ್ತು ಪ್ರೊಫೆಷನಲ್ ಲೈಫ್‌ನ ಸಪರೇಟ್ ಆಗಿ ಇಡಬೇಕು. ನನ್ನ ಜೀವನದಲ್ಲಿ ನನಗೆ ಮುಖ್ಯವಾದವರ ಫೋಟೋಗಳನ್ನು ಮಾತ್ರ ಹಂಚಿಕೊಂಡು ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತೀನಿ. ಮಥಿಯಾಸ್‌ಗೂ ಹಾಗೆ ವಿಶ್ ಮಾಡಿದೆ. ಅವರು ನನಗೆ ಆಪ್ತರಲ್ಲಿ ಆಪ್ತರು' ಎಂದು ತಾಪ್ಸಿ ಹೇಳಿದ್ದರು.
Taapsee Pannu Story: ಸ್ಟಾರ್‌ಗಳು ನನ್ನ ಜೊತೆ ನಟಿಸೋಕೆ ಇಷ್ಟಪಡ್ತಿರಲಿಲ್ಲ! ತಾಪ್ಸಿ ಪನ್ನು ಕತೆ ಕೇಳಿ
ಮಥಿಯಾಸ್ ವೃತ್ತಿಯಲ್ಲಿ ಬ್ಯಾಡ್ಮಿಂಟನ್ ಪ್ಲೇಯರ್ ಆಗಿದ್ದು 2012ರ ಒಲಂಪಿಕ್ (2012 Olympic) ಮೆನ್ ಡಬಲ್ಸ್‌ನಲ್ಲಿ ಸಿಲ್ವರ್ ಮೆಡಲ್ ಗೆದ್ದಿದ್ದಾರೆ. ಡೆನ್ಮಾರ್ಕ್‌ನಲ್ಲಿ (Denmark) ಡಬಲ್ಸ್ ಮತ್ತು ತಂಡದ ಆಟಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2020ರಲ್ಲಿ ನಿವೃತ್ತಿ ಪಡೆದ ನಂತರ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಪುರುಷರ ತಂಡಕ್ಕೆ ಕೋಚ್ ಅಗಿದ್ದಾರೆ.
ತಾಪ್ಸಿ ಸುದ್ದಿ:
ದಿ ಕಾಶ್ಮೀರಿ ಫೈಲ್ ಚಿತ್ರಕ್ಕೆ ರಿಯಾಕ್ಟ್:
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ( The Kashmir Files) ಚಿತ್ರ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ನೋಡಿ ಇಡೀ ಬಾಲಿವುಡ್ ಇಂಡಸ್ಟ್ರಿ ಬೆಚ್ಚಿ ಬಿದ್ದಿದೆ. ಆದರೆ ಬಾಲಿವುಡ್‌ನ ಹಲವು ಸ್ಟಾರ್ಸ್ ಈ ಚಿತ್ರದ ಗಳಿಕೆಯ ಬಗ್ಗೆ ಮೌನವಾಗಿ ಕುಳಿತಿದೆ. ಈಗ ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu ) ಕೊನೆಗೂ ಬಾಯಿ ಬಿಟ್ಟಿದ್ದಾರೆ.
ಅವಾರ್ಡ್ ಶೋನಲ್ಲಿ ಪೋಸ್ ನೀಡಿದ ರೇಖಾ, ತಾಪ್ಸಿ ಪನ್ನು, ಅನನ್ಯಾ ಪಾಂಡೆ
'ಕಡಿಮೆ ಬಜೆಟ್‌ನ ಸಿನಿಮಾ ಈ ರೀತಿಯ ಕಲೆಕ್ಷನ್ ನೀಡಿದರೆ ಅದು ಕೆಟ್ಟ ಚಿತ್ರವಾಗಲಾರದು, ಜನರ ಮನಸ್ಥಿತಿಯ ಬಗ್ಗೆ ಪ್ರಶ್ನೆ ಏಳಬಹುದು, ಅದರ ಅರ್ಥ ಮತ್ತು ಇತರ ವಿಷಯಗಳನ್ನು ನೀವು ಪ್ರಶ್ನಿಸಬಹುದು. ಈ ಎಲ್ಲಾ ಅಂಶಗಳು ವಿಷಯವಾಗಿದೆ. ಒಪ್ಪಿಕೊಳ್ಳೋಣ ಅಥವಾ ಒಪ್ಪದೇ ಇರೋಣ. ಆದರೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಿಮಗೆ ಹಕ್ಕಿದೆ' ಎಂದು ತಾಪ್ಸಿ ಹೇಳಿದ್ದಾರೆ.
Mithali Raj ಪಾತ್ರದಲ್ಲಿ Taapsee Pannu:
ತಾಪ್ಸಿ ಪನ್ನು (Taapsee Pannu)ಇತ್ತೀಚಿನ ದಿನಗಳಲ್ಲಿ ಅವರ ಬಹು ನಿರೀಕ್ಷಿತ ಚಿತ್ರ ಶಭಾಷ್ ಮಿಥುಗಾಗಿ (Shabaash Mithu) ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (Mithali Raj)ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.ಚಿತ್ರದ ಹೊಸ ದಿನಾಂಕವನ್ನು ನಿರ್ಮಾಪಕರು ಇನ್ನೂ ಘೋಷಿಸಿಲ್ಲ. ಚಿತ್ರವನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದಾರೆ. ಕ್ರೀಡಾ ಪಟುಗಳನ್ನು ಆಧರಿಸಿ ಮಾಡಲಾದ ಚಿತ್ರ ಇದೇ ಮೊದಲಲ್ಲ. ಇದಕ್ಕೂ ಮೊದಲು ಕ್ರೀಡಾಪಟುಗಳ ಮೇಲೆ ಅನೇಕ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ.