Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತುವಿನಿಂದ ಮಿಸ್ಸಾದ ಶಾರ್ವರಿ ಇಲ್ಲಿ ಪ್ರತ್ಯಕ್ಷ! ಕನ್ನಡಿಗರಿಗೆ ಮೋಸ ಮಾಡ್ಬಿಟ್ರಿ ಅಂತಿರೋ ಫ್ಯಾನ್ಸ್​

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಶಾರ್ವರಿ ಪಾತ್ರ ಮಾಡಿದ್ದ ನೇತ್ರಾ ಜಾಧವ್​, ಇಲ್ಲಿಂದ ಮಿಸ್​ ಆಗಿ ಬೇರೆ ಕಡೆ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್​ ಹೇಳ್ತಿರೋದೇನು?
 

Netra Jadhav who played the  Sharvari in Shreerastu Shubhamastu  now in another serial suc
Author
First Published Jun 22, 2024, 9:17 PM IST | Last Updated Jun 22, 2024, 9:17 PM IST

ಶಾರ್ವರಿ ಎಂದಾಕ್ಷಣ ಸೀರಿಯಲ್​ ಪ್ರೀಕ್ಷಕರ ಗಮನ ಸೆಳೆಯುತ್ತಿದ್ದವರು ಶ್ರೀರಸ್ತು ಶುಭಮಸ್ತುವಿನ ನೇತ್ರಾ ಜಾಧವ್​. ಇವರ ಪಾತ್ರವನ್ನು ಅಭಿಮಾನಿಗಳು ಸಕತ್​ ಮೆಚ್ಚಿಕೊಂಡಿದ್ದರು.   ತಮ್ಮ ಕಣ್ಣುಗಳಿಂದಲೇ ಅಭಿಯನ ಮಾಡುವ ಮುದ್ದು ಮೊಗದ ಸುಂದರಿ ಶಾರ್ವರಿ ಈಗ ಈ ಸೀರಿಯಲ್​ನಿಂದ ಹೊರಕ್ಕೆ ಬಂದು ಸೀರಿಯಲ್​ ಪ್ರೇಮಿಗಳಿಗೆ ಶಾಕ್​ ನೀಡಿದ್ದರು.  ಶಾರ್ವರಿ  ಪಾತ್ರಕ್ಕೆ ಹೊಸ ಎಂಟ್ರಿ ಆಗಿದೆ. ಆದರೆ ಒಂದು ಪಾತ್ರದಲ್ಲಿ ಒಬ್ಬರನ್ನೇ ಬಹು ತಿಂಗಳು, ವರ್ಷ ನೋಡುವ ಸೀರಿಯಲ್​ ಪ್ರೇಮಿಗಳಿಗೆ ಅದೇ ಪಾತ್ರಕ್ಕೆ ಹೊಸ ಮುಖವನ್ನು ಕಲ್ಪನೆ ಮಾಡಿಕೊಳ್ಳುವುದು ಬಹು ಕಷ್ಟ. ಅದರಲ್ಲಿಯೂ ಯಾರಿಗೂ ಡೌಟ್​ ಬರದಂತೆ, ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಕಣ್ಣಿನಲ್ಲಿಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಅದಕ್ಕಾಗಿಯೇ ಇವರು ಸೀರಿಯಲ್​ನಿಂದ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ. ಮತ್ತೊಮ್ಮೆ ಅವರನ್ನು ವಾಪಸ್​  ಕರೆದುಕೊಂಡು ಬರುವಂತೆಯೂ ಹಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​  ಕೂಡ ಹಾಕುತ್ತಿದ್ದರು.

ನೇತ್ರಾ ಅವರು ಸೀರಿಯಲ್​ ಬಿಟ್ಟದ್ದು ಯಾಕೆ ಎಂದು ಗುಟ್ಟಾಗಿಯೇ ಉಳಿದಿದೆ.  ಆದರೆ ಅವರು ಇನ್ನೊಂದು ಸೀರಿಯಲ್​ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ ಆ ಸೀರಿಯಲ್​  ಕನ್ನಡದ್ದು ಅಲ್ಲ. ಬದಲಿಗೆ ತೆಲಗು ಸೀರಿಯಲ್​. ಮಗುವಾ ಓ ಮಗುವಾ. ಇದರಲ್ಲಿ ಅವರು ಫುಲ್​ ಆ್ಯಕ್ಷನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಖುದ್ದು ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಖಾತೆಯಲ್ಲಿ ಶೇರ್​  ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಕನ್ನಡಿಗರು ಯಾಕೋ ತುಂಬಾ ಬೇಜಾರು ಆಗಿದ್ದಾರೆ. ಇಲ್ಲಿ ನಿಮ್ಮನ್ನುನಾವು ತುಂಬಾ ಮಿಸ್​ ಮಾಡಿಕೊಳ್ತಿದ್ದೇವೆ. ನೀವು ನೋಡಿದ್ರೆ ತೆಲಗುಗೆ ಹೋಗಿ ಕನ್ನಡದ ಅಭಿಮಾನಿಗಳಿಗೆ ಮೋಸ ಮಾಡಿಬಿಟ್ರಿ ಎನ್ನುತ್ತಿದ್ದಾರೆ. 

ಸತ್ಯ ಸೀರಿಯಲ್​ ದಿವ್ಯಾ-ಬಾಲಾ ದಂಪತಿ ಸಕತ್​ ರೀಲ್ಸ್​: ನಖರಾ ಬಿಟ್ಟು ಗಂಡನ ಜೊತೆ ಬಾಳು ಎಂದ ಫ್ಯಾನ್ಸ್​


ಅಷ್ಟಕ್ಕೂ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಶಾರ್ವರಿಯ ಪಾತ್ರಕ್ಕೆ ಸ್ವಪ್ನಾ ದೀಕ್ಷಿತ್ ಅವರು ಬಂದಿದ್ದಾರೆ. ಅವರು ಕೂಡ ಅದ್ಭುತ ಕಲಾವಿದೆಯೇ. ಆದರೆ ಸೀರಿಯಲ್​ನ ಬಹಳಷ್ಟು ವೀಕ್ಷಕರಿಗೆ ನೇತ್ರಾ ಅವರೇ ಬೇಕಂತೆ. ಈ ಸೀರಿಯಲ್​ ಪ್ರೊಮೋ ಹಾಕಿದಾಗಲೆಲ್ಲವೂ ನೇತ್ರಾ ಅವರನ್ನು ಮಿಸ್​ ಮಾಡಿಕೊಳ್ಳುವ ಬಗ್ಗೆ ಕಮೆಂಟಿಗರು ಹೇಳುತ್ತಲೇ ಇರುತ್ತಾರೆ.   ನೇತ್ರಾ ಅವರು, ಈ ಹಿಂದೆ  ಸುಧಾರಾಣಿ ಅವರ ಜೊತೆ  ರಥಸಪ್ತಮಿ ಧಾರಾವಾಹಿಯಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ನಂತರ ಅವರದ್ದೇ ಜೊತೆ  ನೆಗಟಿವ್ ರೋಲ್​ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.  ಈ ಹಿಂದೆ ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ  ಸುಂದರಿ ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು.  ಅಂದಹಾಗೆ ಶಾರ್ವರಿ ಅವರ ಮಕ್ಕಳು ಇನ್ನೂ ಚಿಕ್ಕವರು. ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ  ಮಕ್ಕಳಿಗೆ ಮದುವೆಯಾಗಿದ್ದರೆ  ರಿಯಲ್​ ಲೈಫ್​ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆಗಾಗ್ಗೆ ಮಾಡರ್ನ್​ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುತ್ತಾರೆ.  

 ಶ್ರೀರಸ್ತು ಶುಭಮಸ್ತು ಸೀರಿಯಲ್​ನ 400ನೇ ಎಪಿಸೋಡ್​  ಸಂಭ್ರಮದ ವಿಡಿಯೋ ಈಚೆಗೆ ವೈರಲ್ ಆಗಿತ್ತು. ಅದರಲ್ಲಿ ಸೀರಿಯಲ್​ನ ಎಲ್ಲಾ ನಟಿ-ನಟರು ಇದ್ದರೂ ಸೀರಿಯಲ್​ ಪ್ರೇಮಿಗಳು ನೇತ್ರಾ ಅವರನ್ನು ಮಿಸ್​ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಬಹುಶಃ ಈ ಶೂಟಿಂಗ್​ ನೇತ್ರಾ ಅವರು ಸೀರಿಯಲ್​ನಲ್ಲಿ ಇದ್ದ ಸಂದರ್ಭದಲ್ಲಿಯೇ ಮಾಡಿದ್ದು ಎಂದು ತೋರುತ್ತಿದೆ. ಅದಕ್ಕಾಗಿ 400ರ ಸಂಭ್ರಮದಲ್ಲಿ ನೇತ್ರಾ ಕಾಣಿಸಿಕೊಂಡಿದ್ದು ಸ್ವಪ್ನಾ ಕಾಣಿಸುತ್ತಿಲ್ಲ. ಆದರೆ ನೇತ್ರಾ ಅವರೇ ತಮಗೆ ಬೇಕು ಎಂದು ಅಭಿಮಾನಿಗಳು ಪಟ್ಟುಹಿಡಿಯುತ್ತಿದ್ದಾರೆ. 

ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!

Latest Videos
Follow Us:
Download App:
  • android
  • ios