ಅಮೃತಧಾರೆ ಧಾರಾವಾಹಿಯ ಕ್ಲೈಮ್ಯಾಕ್ಸ್ನಲ್ಲಿ ಆನಂದ್ ಮತ್ತು ಆಕಾಶ್ ಮಿಸ್ ಆಗಿದ್ದರು. ಇತ್ತೀಚೆಗೆ ಸಹನಟಿ ಸ್ವಾತಿ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಆನಂದ್ ಅವರ ಮಗ ದುಷ್ಯಂತ್ ಇದೀಗ 'ನಿನಗಾಗಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಅಮೃತಧಾರೆ ಸೀರಿಯಲ್ (Amruthadhaare Serial) ಮುಗಿದರೂ ಅಭಿಮಾನಿಗಳು ಇಂದಿಗೂ ಆ ಸೀರಿಯಲ್ ಅನ್ನು ನೆನಪಿಸಿಕೊಳ್ಳುವುದು ಇದೆ. ಅಷ್ಟರ ಮಟ್ಟಿಗೆ ಈ ಸೀರಿಯಲ್, ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ. ಒಂದೆಡೆ, ಗೌತಮ್ ಮತ್ತು ಭೂಮಿಕಾ ಮಿಡ್ಲ್ ಏಜ್ ಲವ್ ಸ್ಟೋರಿ ವೀಕ್ಷಕರಿಗೆ ಇಷ್ಟವಾಗಿದ್ದರೆ, ಈ ಸೀರಿಯಲ್ನಲ್ಲಿ ಇನ್ನೊಂದು ಹೈಲೈಟ್ ಆಗಿದ್ದು, ಗೌತಮ್ ಮತ್ತು ಆನಂದ್ ಅವರ ಫ್ರೆಂಡ್ಷಿಪ್. ಇದ್ದರೆ ಇರಬೇಕು ಇಂಥ ಗೆಳೆಯರು ಎಂದೇ ಎಲ್ಲರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇವರಿಬ್ಬರ ಗೆಳೆತನ ಇತ್ತು. ನಿಜ ಜೀವನದಲ್ಲಿ ಇಂಥ ಗೆಳೆಯರು ಸಿಗುವುದು ಅಪರೂಪ. ಇಂಥ ಫ್ರೆಂಡ್ಸ್ ಸಿಕ್ಕವರು ಅದೃಷ್ಟವಂತರು ಎಂದೇ ಹೇಳಲಾಗುತ್ತಿದೆ.
ಮಿಸ್ ಆಗಿದ್ದ ಕುಚುಕು ಗೆಳೆಯ
ಆದರೆ, ಅದ್ಯಾಕೋ ಗೊತ್ತಿಲ್ಲ. ಅಮೃತಧಾರೆಯ ಕೊನೆಯ ಕೆಲವು ಸಂಚಿಕೆಗಳಲ್ಲಿ ಆನಂದ್ ಮತ್ತು ಗೌತಮ್ ಪುತ್ರನಾಗಿ ನಟಿಸಿದ್ದ ಆಕಾಶ್ ಮಿಸ್ ಆಗಿದ್ದರು. ಅಸಲಿಗೆ ಆನಂದ್ ಅವರ ರಿಯಲ್ ಹೆಸರು ಕೂಡ ಆನಂದ್ ಆಗಿದ್ದು, ಆಕಾಶ್ ಆಗಿ ನಟಿಸಿದ ಬಾಲಕ, ನಿಜ ಜೀವನದಲ್ಲಿ ಆನಂದ್ ಅವರ ರಿಯಲ್ ಮಗ ದುಷ್ಯಂತ್ ಚಕ್ರವರ್ತಿ. ಆದರೆ ಈ ಅಪ್ಪ-ಮಗ ಯಾಕೋ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ಲೈಮ್ಯಾಕ್ಸ್ನಲ್ಲಿ ಆದರೂ ಬರ್ತಾರೆ ಎಂದುಕೊಂಡಿದ್ದರೆ ಅದಕ್ಕೂ ಬಂದಿರಲಿಲ್ಲ.
ಆದರೆ, ಇದೀಗ ಅಪ್ಪ-ಮಗನ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ರಾಯಲ್ ಸ್ವಾತಿ. ಇವರು ಈ ಸೀರಿಯಲ್ನಲ್ಲಿ ಆನಂದ್ ಪತ್ನಿ ಅಪರ್ಣಾ ಆಗಿ ನಟಿಸಿದ್ದರು. ಇದರ ಜೊತೆ ಗೌತಮ್ ಅಮ್ಮನಾಗಿ ನಟಿಸಿದ್ದ ಚಿತ್ಕಲಾ ಬಿರಾದಾರ್ ಅವರನ್ನೂ ಈ ಫೋಟೋದಲ್ಲಿ ನೋಡಬಹುದಾಗಿದೆ. ಈ ಫೋಟೋ ನೋಡುತ್ತಿದ್ದಂತೆಯೇ ಫ್ಯಾನ್ಸ್ ನಿಮ್ಮನ್ನು ಕ್ಲೈಮ್ಯಾಕ್ಸ್ನಲ್ಲಿ ಮಿಸ್ ಮಾಡಿಕೊಂಡ್ವಿ ಎಂದು ಹೇಳುತ್ತಿದ್ದಾರೆ.
ಅಪ್ಪ-ಮಗನ ಕುರಿತು
ಇನ್ನು ನಟ ಆನಂದ್ ಕುರಿತು ಹೇಳುವುದಾದರೆ, ಆನಂದ್ ಅವರು ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದರು. ತೆರೆ ಮೇಲೆ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ತೇಲಿಸುವ ಅದೆಷ್ಟೋ ನಟರ ಬಾಳಲ್ಲಿ ನೋವಿನ ಸರಮಾಲೆಗಳೇ ಇರುತ್ತವೆ. ತಮ್ಮ ಜೀವನದ ಕಹಿ ಘಟನೆಗಳನ್ನು ಅವರು ನೆನಪಿಸಿಕೊಂಡಿದ್ದರು. ಆದರೆ ಮಗ ದುಷ್ಯಂತ್ ಈ ವಯಸ್ಸಿನಲ್ಲಿಯೇ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾನೆ. ಇದಾಗಲೇ ಕೆಲವು ಸೀರಿಯಲ್ಗಳಲ್ಲಿ ಈತ ನಟಿಸಿದ್ದು, ಈಗಲೂ ನಟನಾ ವೃತ್ತಿ ಮುಂದುವರೆಸಿದ್ದಾನೆ. ಈ ಹಿಂದೆ ದುಷ್ಯಂತ್, ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದಲ್ಲಿ ಬಾಲನಟನಾಗಿ ದುಷ್ಯಂತ್ ನಟಿಸಿದ್ದ. ಅಷ್ಟೇ ಅಲ್ಲದೆ ಪುನೀತ್ ರಾಜ್ಕುಮಾರ್ ನಟನೆಯ ‘ರಾಜಕುಮಾರ’ ಸೆಟ್ನಲ್ಲಿ ಅಪ್ಪು ಜೊತೆಗೆ ದುಷ್ಯಂತ್ ಒಂದಷ್ಟು ಸಮಯ ಕಳೆದಿದ್ದ. ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 'ನನ್ನಮ್ಮ ಸೂಪರ್ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ ದುಷ್ಯಂತ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾನೆ. ಈಗ ಆತ, ದಿವ್ಯಾ ಉರುಡುಗ, ರಿತ್ವಿಕ್ ಮಠದ್ ನಟನೆಯ ‘ನಿನಗಾಗಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾನೆ.












