ತಲೈವಾ ಹಾಡಿದ ಹೆಜ್ಜೆ ಹಾಕಿದ ನಿವೇದಿತಾ ಚಂದನ್ ಶೆಟ್ಟಿ. ನೋಡಲು ಸೂಪರ್ ಆಗಿದ್ದರೂ ನೆಟ್ಟಿಗರ ಕಾಮೆಂಟ್ಸ್‌ ಮಾತ್ರ ಬೇಸರ ತರುತ್ತದೆ...

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಟ್ರೆಂಡಿಂಗ್‌ನಲ್ಲಿರುವ ಪ್ರತಿಯೊಂದು ಹಾಡಿಗೂ ಹೆಜ್ಜೆ ಹಾಕುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಅಗಿರುವ ಈ ಚೆಲುವೆ ತಲೈವಾ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ಜೈಲರ್ ಚಿತ್ರದ ಕಾವಾಲ ಹಾಡಿಗೆ ಪತಿ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ್ದಾರೆ. ಮನೆಯಲ್ಲಿ ಕನ್ನಡಿ ಮುಂದೆ ನಿಂತು ಮಾಡಿರುವ ಸಿಂಪಲ್ ರೀಲ್ಸ್‌ ಇದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಕಾಮೆಂಟ್ಸ್‌ ನೋಡಿ ಬೇಸರ ಮಾಡಿಕೊಂಡವೇ ಹೆಚ್ಚು... 

ನಿವೇದಿತಾ ಏನೇ ಮಾಡಲಿ ಪದೇ ಪದೇ ಟ್ರೋಲ್ ಅಗೋದು ಗ್ಯಾರಂಟಿ. ಬ್ಲ್ಯಾಕ್ ಬಣ್ಣದ ಪ್ಯಾಂಟ್‌ಗೆ ಹಸಿರುವ ಬಣ್ಣದ ಕ್ರಾಪ್ ಟಾಪ್ ಧರಿಸಿ ನಿವಿ ಡ್ಯಾನ್ಸ್ ಮಾಡಿದ್ದಾರೆ. ಪಕ್ಕದಲ್ಲಿ ಮೊಬೈಲ್ ಹಿಡಿದುಕೊಂಡು ನಿಂತಿರುವ ಚಂದನ್ ಶೆಟ್ಟಿ ಕೂಡ ಬ್ಲ್ಯಾಕ್ ಟಿ ಶರ್ಟ್‌ ಅಂಡ್ ಡೆನಿಮ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇದು ಅವರ ಮನೆಯಲ್ಲಿರುವ ಕನ್ನಡಿ ಮುಂದೆ ಕ್ಲಿಕ್ ಮಾಡಿರುವ ವಿಡಿಯೋ. ಸಿನಿಮಾದ ಹಾಡಿನಲ್ಲಿ ಇರುವ ರೀತಿನೇ ನಿವಿ ಕೂಡ ಡ್ಯಾನ್ಸ್‌ ಮಾಡಿದ್ದಾರೆ. ಆದರೆ ಜನರಿಗೆ ಸಮಸ್ಯೆ ಅಗಿರುವುದು ಡ್ಯಾನ್ಸ್‌ ಸ್ಟೆಪ್‌ ಅಲ್ಲ ನಿವಿ ಧರಿಸಿರುವ ಬಟ್ಟೆ. 

ಒಂದು ಕಾಲಿಗೆ ಸಾಕ್ಸ್‌ ಹಾಕೋದು ಮರೆತ ನಿವೇದಿತಾ ಗೌಡ; ಚಂದನ್ ಮಡಿಲಿನಲ್ಲಿ ಪತ್ನಿ, ಹಿಗ್ಗಾಮುಗ್ಗಾ ಟ್ರೋಲ್!

ಮೂಲತಃ ಮೈಸೂರಿನವರಾಗಿರುವ ನಿವಿ ಸಿಕ್ಕಾಪಟ್ಟೆ ಮಾಡ್ರನ್ ಹುಡುಗಿ. ಸದಾ ಟ್ರೆಂಡ್‌ನಲ್ಲಿರುವ ಮಾಡ್ರನ್ ಉಡುಪುಗಳನ್ನು ಧರಿಸುತ್ತಾರೆ. ಈ ಹಾಡಿಗೂ ಹಾಗೆ ಧರಿಸಿದ್ದಾರೆ ಆದರೆ ನೆಟ್ಟಿಗರು ಮಾತ್ರ ಸುಮ್ಮನಿಲ್ಲ. 'ಚಂದನ್ ಶೆಟ್ಟಿ ನಿನ್ನ ಹೆಂಡತಿಗೆ ಮೈ ತುಂಬಾ ಬಟ್ಟೆ ಕೊಡಿಸಪ್ಪ, ನೀಟಾಗಿ ಬಟ್ಟೆ ಹಾಕಿಕೊಳ್ಳುವುದಕ್ಕೆ ಹೇಳಪ್ಪ, ಚಂದನ್ ಡ್ರೆಸ್ ಚೆನ್ನಾಗಿದೆ ಆದರೆ ನಿವಿ ಡ್ರೆಸ್ ಚೆನ್ನಾಗಿಲ್ಲ ಸ್ವಲ್ಪ ಲೂಸ್ ಅಗಿರಬೇಕಿತ್ತು' ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟು ವರ್ಷದಿಂದ ಟ್ರೋಲ್ ಆಗುತ್ತಿರುವ ನಿವಿ ವರ್ಷಕ್ಕೆ ಒಂದು ಸಲ ರಿಯಾಕ್ಟ್ ಮಾಡಿದ್ದರೂ ಹೆಚ್ಚು ಆದಷ್ಟು ನಿರ್ಲಕ್ಷ್ಯ ಮಾಡಿ ದೂರ ಉಳಿದುಬಿಡುತ್ತಾರೆ. 

View post on Instagram

ನಿವಿ ಕಷ್ಟನೇ ನೋಡಿಲ್ಲ:

 ನಿವೇದಿತಾ ಗೌಡ ಮತ್ತು Rapper ಚಂದನ್ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 3 ವರ್ಷ ಕಳೆದಿದೆ. ನಿವೇದಿತಾಗೆ ಸರ್ಪ್ರೈಸ್ ಕೊಡಬೇಕು ಎಂದು ರಾಗಿ ಮುದ್ದೆಯಿಂದ ಮಾಡಿರುವ ಕೇಕ್‌ನ ತಯಾರಿಸಿರುವೆ ಎಂದು ಹಾಸ್ಯ ಕ್ರಿಯೇಟ್ ಮಾಡಿದ್ದಾರೆ. ಕೇಕ್ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಒಂದೊಂದು ಲೇಯರ್ ಇಡುವ ಮುನ್ನ ಪ್ರತಿ ವರ್ಷವನ್ನು ನೆನಪಿಸಿಕೊಂಡಿದ್ದಾರೆ. ಹಾರ್ಟ್‌ ಶೇಪ್‌ ಕೇಕ್‌ಗೆ ಕೆಂಪು ಬಣ್ಣ ಹಾಕಿದ್ದಾರೆ. ಹ್ಯಾಪಿ ಆನಿವರ್ಸರಿ ಪಪ್ಪಿ ಎಂದು ಬರೆದು ಕೇಕ್ ಮಾಡಿದ್ದಾರೆ. ಚಂದನ್ ವೇದಿಕೆ ಮೇಲೆ ಬರುವುದಿಲ್ಲ ಎಂದು ಕೊಂಡು ಇದು ನನಗೆ ಸರ್ಪ್ರೂಸ್‌ ಅಥವಾ ಶಿಕ್ಷೆನಾ ಗೊತ್ತಿಲ್ಲ ಅನುಭವಿಸಲು ಆಗುತ್ತಿಲ್ಲ. ಯಾವತ್ತೂ ಚಂದನ್ ಈ ರೀತಿ ಮಾಡಿರಲಿಲ್ಲ ಹೀಗಾಗಿ ಖುಷಿಯಾಗುತ್ತಿದೆ ಎಂದು ನಿವಿ ಭಾವುಕರಾಗಿದ್ದಾರೆ.

ಆಂಟಿ ತುಂಬಾ ಕ್ಯೂಟ್; ಮಗಳನ್ನೇ ಮೀರಿಸ್ತಾರೆ ನಿವೇದಿತಾ ಗೌಡ ತಾಯಿ!

'ಮೊದಲು ನಿವಿ ನೋಡಿದಾಗ ಕ್ಯೂಟ್ ಅನಿಸಿತ್ತು. ಬಿಗ್ ಬಾಸ್‌ನಲ್ಲಿ ಮದುವೆ ಮಾಡಿಕೊಳ್ಳುವ ಐಡಿಯಾ ಬಂದಿರಲಿಲ್ಲ. ಹೊರಗಡೆ ಬಂದ ಮೇಲೆ ಫೀಲಿಂಗ್ ಶುರುವಾಗಿತ್ತು. ಫೀಲಿಂಗ್ ಶುರುವಾದ ಮೇಲೆ ಪ್ರಪೋಸ್ ಮಾಡಿದೆ ಸಂಬಂಧ ಗಟ್ಟಿ ಆಯ್ತು ಆಮೇಲೆ ಗೌರವ ಹೆಚ್ಚಾಗಿತ್ತು. ಇಬ್ಬರು ಅರ್ಥ ಮಾಡಿಕೊಳ್ಳುತ್ತಾ ಜೀವನ ಶುರುವಾಯ್ತು...ಕಷ್ಟ ಅಂದ್ರೆ ಏನೆಂದು ನಿವಿಗೆ ಅವರ ತಂದೆ ತಾಯಿ ತೋರಿಸಿಲ್ಲ. ಎಷ್ಟೇ ಕಷ್ಟ ಇದ್ರೂ ಮಗಳಿಗೆ ತೋರಿಸದೆ ರಾಣಿ ರೀತಿ ಬೆಳೆಸಿಕೊಂಡು ಬಂದಿದ್ದಾರೆ. ಈಗಲೂ ನಿವಿಗೆ ಪ್ರಿನ್ಸೆಸ್‌ ಫೀಲಿಂಗ್ ಮದುವೆ ಆದ ಮೇಲೆ ನಾನು ಹಾಗೆ ನೋಡಿಕೊಳ್ಳುತ್ತಿರುವೆ' ಎಂದು ಚಂದನ್ ಮಾತನಾಡಿದ್ದಾರೆ.