ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ ಕಮ್ ಬ್ಯಾಕ್ ಸಾನ್ಯ ಟ್ರೆಂಡ್...ರೂಪೇಶ್ ಶೆಟ್ಟಿ ಪ್ರೀತಿ ಹುಚ್ಚತನ ಎಂದ ನೆಟ್ಟಿಗರು......

ಬಿಗ್ ಬಾಸ್ ಸೀಸನ್9 ರಿಂದ ಎಲಿಮಿನೇಟ್ ಆಗಿ ಹೊರ ಬಂದ 6ನೇ ಸ್ಪರ್ಧಿ ಸಾನ್ಯ ಐಯರ್. ಓಟಿಟಿಯಿಂದ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸಾನ್ಯ ಇದೀಗ ಬಹುಬೇಡಿಕೆ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಎಲಿಮಿನೇಟ್ ಆಗಿ ಹೊರ ಬಂದಾಗಿನಿಂದಲ್ಲೂ ಟ್ವಿಟರ್‌ನಲ್ಲಿ ಅಭಿಮಾನಿಗಳು ಹೊಸ ಟ್ರೆಂಡ್ ಶುರು ಮಾಡಿದ್ದಾರೆ. Come back Sanya ಎಂದು ಟ್ವೀಟ್ ಮಾಡುತ್ತಿದ್ದಾರೆ. ಬಿಬಿ ಮನೆಗೆ ಇನ್ನೂ ವೈಲ್ಡ್‌ ಕಾರ್ಡ್ ಎಂಟ್ರಿ ಆಗಬೇಕಿದೆ ಹೀಗಾಗಿ ಸಾನ್ಯನೇ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ವಿಚಾರ ಸಾನ್ಯ ಗಮನಕ್ಕೂ ಬಂದಿದ್ದೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಪೋರ್ಟ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಸಾನ್ಯನೇ ಯಾಕೆ?

ಬಿಗ್ ಬಾಸ್ ಮನೆಯಲ್ಲಿ 6ನೇ ವಾರ ಎಲಿಮಿನೇಟ್‌ ತುಂಬಾನೇ ಕಷ್ಟಕರವಾಗಿತ್ತು. ಪ್ರಶಾಂತ್ ಸಂಬರಗಿ ಮತ್ತು ಸಾನ್ಯ ಲೀಸ್ಟ್‌ ವೋಟ್‌ ಪಡೆದವರು ಆದರೆ ಪ್ರಶಾಂತ್ ಹೊರ ಬರಲಿದ್ದಾರೆ ಎಂದು ನೆಟ್ಟಿಗರು ಗೆಸ್ ಮಾಡಿದ್ದರು ಆದರೆ ಸಾನ್ಯ ಹೊರ ಬಂದ ಕಾರಣ ನೆಟ್ಟಿಗರಿಗೆ ಹಾರ್ಟ್‌ ಬ್ರೇಕ್ ಆಗಿದೆ. ಸಾನ್ಯ ಹೊರ ಬಂದಾಗಿನಿಂದಲ್ಲೂ ರೂಪೇಶ್ ವಿಚಿತ್ರವಾಗಿ ವರ್ತಿಸುತ್ತಿರುವುದು ಕೂಡ ವೈರಲ್ ಆಗುತ್ತಿದೆ. ಹಣೆಗೆ ಪಟ್ಟಿ ಕಟ್ಟಿಕೊಂಡು ಸಾನ್ಯ ಮಿಸ್ ಯು ಎಂದು ಬರೆದುಕೊಳ್ಳುತ್ತಿದ್ದಾರೆ. ನಿನ್ನೆ ಕೆನ್ನೆ ಮೇಲೆ ಕೆಂಪು ಹೃದಯ ಬರೆದುಕೊಂಡು 's' ಅಕ್ಷರ ಬರೆದುಕೊಂಡಿದ್ದರು. ಒಟ್ಟಿನಲ್ಲಿ ಸಾನ್ಯ ಬರಲಿದೆ ಎಂದು ಬಿಬಿ ತಂಡಕ್ಕೆ ಒತ್ತಾಯ ಹೆಚ್ಚಾಗಿದೆ. 

ಪರ್ಸನಲ್‌ ಲೈಫ್‌ ವಿಚಾರಕ್ಕೆ ಕಣ್ಣಿರು:

'ನನ್ನ ತಾಯಿಗಾಗಿ ನನ್ನ ಮಲತಂದೆ ನನ್ನ ಹೆಸರು ಕೆಡಿಸಿದ್ದರು' ಎನ್ನುವ ಸಾಲುಗಳನ್ನು ಬಿಗ್ ಬಾಸ್‌ ಪೇಪರ್‌ವೊಂದರ ಮೇಲೆ ಬರೆದು ಕೊಡುತ್ತಾರೆ. ಈ ವಿಚಾರದ ಬಗ್ಗೆ ಸಾನ್ಯ ಮಾತನಾಡಿ ಭಾವುಕರಾಗುತ್ತಾರೆ.

'ನನ್ನ ತಾಯಿ ಡಬಲ್ ಡಿವೋರ್ಸಿ. ಒಂದು ನನ್ನ ಬಯೋಲಾಜಿಕಲ್ ಫಾದರ್ ಮತ್ತೊಬ್ಬರು ಫಾದರ್ ಫಿಗರ್. ಬಯೋಲಾಜಿಕಲ್ ಫಾದರ್ ಜೊತೆ ನನ್ನ ಸಂಬಂಧ ಅಷ್ಟಕ್ಕೆ ಅಷ್ಟೆ ಏಕೆಂದರೆ ಚಿಕ್ಕ ವಯಸ್ಸಿಗೆ ಅವರಿಂದ ದೂರ ಉಳಿದುಬಿಟ್ಟೆ. ಫಾದರ್‌ ಫಿಗರ್‌ನ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವೆ ನನ್ನ ತಾಯಿಗೆ ಸ್ನೇಹಿತೆ ಅಗಿರುವಾಗಲೂ ನಾನು ಅವರನ್ನು ನೋಡಿರುವೆ. ಅವರಿಬ್ಬರೂ ಮದುವೆ ಆಗುತ್ತಾರೆ. ಮದ್ವೆ ಆದ್ಮೇಲೆ ತಾಯಿಗೆ ಅನಿಸುತ್ತದೆ ಇದು ಆಕೆ ತೆಗೆದುಕೊಂಡ ತಪ್ಪು ನಿರ್ಧಾರ ಅಂತ. ಸ್ನೇಹಿತನಾಗಿದ್ದಾಗ ಸಂಬಂಧ ಚೆನ್ನಾಗಿತ್ತು ಆದರೆ ಪಾರ್ಟನರ್‌ ಆದಾಗ ಚೆನ್ನಾಗಿರಲಿಲ್ಲ. ಇದುವರೆಗೂ ನಾನು ನನ್ನ ಫಾದರ್‌ ಫಿಗರ್‌ ಜೊತೆ ಒಂದು ವಿಚಾರ ಹೇಳಿಕೊಂಡಿಲ್ಲ, ಏನೆಂದರೆ ಅವರು ನನ್ನ ಅಮ್ಮನ ಜೀವನದಲ್ಲಿ ಉಳಿಯಬೇಕು ಅಂತ ನನಗೆ ಕೆಟ್ಟ ಹೆಸರು ತರುತ್ತಾರೆ' ಎಂದು ಸಾನ್ಯ ಘಟನೆ ಬಗ್ಗೆ ವಿವರಿಸಿದ್ದಾರೆ.

BBK9; ಚೀಪ್ ಮೆಂಟಾಲಿಟಿ ನನಗಿಲ್ಲ; ರೂಪೇಶ್‌ ಆರೋಪಕ್ಕೆ ದಿವ್ಯಾ ಉರುಡುಗ ಕಿಡಿ

ಎಕ್ಸ್‌ ಬಾಯ್‌ಫ್ರೆಂಡ್ ಹಿಂಸೆ:

'ಅಮ್ಮ ಚಿಕ್ಕಮ್ಮ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮದೊಂದು ಸ್ಟೋರಿ ಹೇಳಬೇಕು. ನನ್ನ ಜೀವನದ ಕೆಟ್ಟ ಅನುಭವ ಅಥವಾ ಮೋಸ ಹೇಳಬೇಕು ಅಂದ್ರೆ. ನನ್ನ ಚಿಕ್ಕಮ್ಮ ನಿಂದನಾತ್ಮಕ ಮದುವೆಯಲ್ಲಿದ್ದರು ಅವರು ಹೇಗೆ ಅಂದ್ರೆ ನನ್ನ ಕಣ್ಣು ಮುಂದೆನೇ ನನ್ನ ಚಿಕ್ಕಮ್ಮನಿಗೆ ಹೊಡೆಯುವರು. ಲಟ್ಟಣಿಗೆಯಿಂದ ಹೊಡೆದಿದ್ದಾರೆ ಗೋಡೆಗೆ ನೂಕಿ ಹಿಂಸೆ ಕೊಟ್ಟಿದ್ದಾರೆ. ದಿನ ಹೊಡೆಯುವುದನ್ನು ನೋಡಿ ನೋಡಿ ಸಂಸಾರದಲ್ಲಿ ಇದೆಲ್ಲಾ ನಾರ್ಮಲ್ ಅನಿಸಿತ್ತು. ನಾನೊಂದು ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಅದು verbally abusive physically abusive ಆಗಿತ್ತು.' ಎಂದು ಸಾನ್ಯ ಮಾತನಾಡಿದ್ದಾರೆ.

ಬದಲಾಗಲು ಸಾಧ್ಯವೇ ಇಲ್ಲ ರೂಪಿ..ನನ್ನ ರಾಕ್‌ಸ್ಟಾರ್ ನೀನು; ರೂಪೇಶ್ ಬಗ್ಗೆ ಸಾನ್ಯಾ ಪೋಸ್ಟ್

'ನನ್ನ ಬಾಯ್‌ಫ್ರೆಂಡ್‌ ಕಾಲಲ್ಲಿ ಒದ್ದಿದ್ದಾನೆ ಕಪ್ಪಾಳಕ್ಕೆ ಹೊಡೆದಿದ್ದಾನೆ ಕತ್ತು ಹಿಸುಕಿದ್ದಾನೆ. ನಾನು ಅವನಿಗೋಸ್ಕರ ಕೆಲಸ ಬಿಡುವುದಕ್ಕೆ ಸಿದ್ಧಳಾಗಿದ್ದೆ ಸಂಬಂಧ ಉಳಿಸಿಕೊಳ್ಳುವುದಕ್ಕೆ ನಾನು ಏನ್ ಬೇಕಿದ್ದರೂ ಮಾಡಲು ರೆಡಿಯಾಗಿದ್ದೆ. ನನ್ನ ಚಿಕ್ಕಮ್ಮ ಗಂಡ ಅಥವಾ ನನ್ನ ಬಾಯ್‌ಫ್ರೆಂಡ್‌ ನೋಡಿದರೆ ವಾವ ಈ ಸಂಬಂಧ ಎಷ್ಟು ಚೆನ್ನಾಗಿದೆ ಅನಿಸುತ್ತದೆ ಆದರೆ ಆ ರೀತಿ ಇದು ಇರಲಿಲ್ಲ. ಹುಡುಗೀಯರಿಗೆ ಮೆಚ್ಯೂರಿಟಿ ಬೇಗ ಬರುತ್ತೆ ಹುಡುಗರಿಗೆ ಲೇಟ್ ಆಗಿ ಬರುತ್ತೆ. ಒಂದು ದಿನ ನಾನು ಈ ಹಾಡು ಕೇಳಿ ನನ್ನ ಎಕ್ಸ್‌ ನೆನಪು ಬಂತ ಅಂತ ಹೇಳಿದೆ. ಪಿಜಾ ಎಲ್ಲಾ ಬಿಸಾಕಿದ ಅಲ್ಲೊಂದು ಬಾಟಲ್‌ ಇತ್ತು ಅನ್ನು ಪುಡಿ ಮಾಡಿದ ಹಾಸಿಗೆ ಮೇಲೆ ಮಲಗಿಕೊಂಡ ನಾನು ನೆಲದ ಮೇಲೆ ಅವನ ಕಾಲಿನ ಬಳಿ ಕುಳಿತುಕೊಂಡಿದ್ದೆ ನನ್ನ ತಪ್ಪು ಇಲ್ಲದಿದ್ದರೂ ನಾನು ಕ್ಷಮೆ ಕೇಳಿರುವೆ ಕೋಪದಲ್ಲಿ ಜಾಡಿಸಿ ಒದ್ದ. ಇದೆಲ್ಲಾ ನಾನು ಹೇಳಿಕೊಳ್ಳುವುದಕ್ಕೆ ಹೋಗಿಲ್ಲ. ಇಡೀ ಮನೆ ನಾನೇ ಕ್ಲೀನ್ ಮಾಡಿದೆ. ಕೊನೆಯಲ್ಲಿ ಹೇಗೆ ಅನಿಸಿತ್ತು ಅಂದ್ರೆ ಈ ಸಂಬಂಧದಲ್ಲಿ ನಾನು ಯಾರು ಅನಿಸಿತ್ತು' ಎಂದು ಸಾನ್ಯ ಹೇಳಿದ್ದಾರೆ.