Asianet Suvarna News Asianet Suvarna News

ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ!

ಕಳೆದ ಒಂದೂವರೆ ವರ್ಷದಿಂದ ಪ್ರಸಾರ ಕಾಣುತ್ತಿದ್ದ 'ನೀನಾದೆ ನಾ' ಧಾರಾವಾಹಿ ಈ ವಾರದಲ್ಲಿ ಮುಗಿಯಲಿದೆ ಎಂಬುದನ್ನು ತಿಳಿದು ಇದರ ಅಭಿಮಾನಿಗಳು ಸಂಕಟ ಪಡುವುದು ಪಕ್ಕಾ ಎನ್ನಬಹುದು. ಆದರೆ ಅವರಿಗೆ ದುಃಖದಲ್ಲೂ ಕೂಡ ಒಂದು ಸಂತಸದ ಸಂಗತಿಯಿದೆ...

Star Suvarna serial Neenade na present story ends and new one starts soon srb
Author
First Published Aug 28, 2024, 9:28 PM IST | Last Updated Aug 28, 2024, 9:36 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna) ಮೂಡಿ ಬರುತ್ತಿರುವ 'ನೀನಾದೆ ನಾ' ಸೀರಿಯಲ್ (Neenade na) ಅಂತಿಮ ಘಟ್ಟಕ್ಕೆ ತಲುಪಿದ್ದು, ವಿಕ್ರಮ್-ವೇದಾ ಪ್ರೇಮಕಥೆ ಕೊನೆಯಾಗಲಿದೆ. ಈ ವಾರ ವಿಕ್ರಮ್ ಹಾಗೂ ವೇದಾ ಕಥೆ ಮುಗಿಯಲಿದ್ದು, ಇಂದು 403ನೇ ಸಂಚಿಕೆ ಪ್ರಸಾರ ಕಾಣಲಿದೆ. ಕಳೆದ ಒಂದೂವರೆ ವರ್ಷದಿಂದ ಪ್ರಸಾರ ಕಾಣುತ್ತಿದ್ದ 'ನೀನಾದೆ ನಾ' ಧಾರಾವಾಹಿ ಈ ವಾರದಲ್ಲಿ ಮುಗಿಯಲಿದೆ ಎಂಬುದನ್ನು ತಿಳಿದು ಇದರ ಅಭಿಮಾನಿಗಳು ಸಂಕಟ ಪಡುವುದು ಪಕ್ಕಾ ಎನ್ನಬಹುದು. ಆದರೆ ಅವರಿಗೆ ದುಃಖದಲ್ಲೂ ಕೂಡ ಒಂದು ಸಂತಸದ ಸಂಗತಿಯಿದೆ. 

ಅದೇನೆಂದರೆ, ನೀನಾದೆ ನಾ ಸೀರಿಯಲ್ ಮುಗಿಯುತ್ತಿದ್ದರೂ ಈ ಹೆಸರು ಮುಗಿಯುತ್ತಿಲ್ಲ. ಅಂದರೆ, ಈಗಿನ ವಿಕ್ರಮ್-ವೇದಾ ಕಥೆ ಮಾತ್ರ ಕೊನೆಯಾಗಲಿದ್ದು, ಹೊಸ ಕಥೆ ಇದೇ ಹೆಸರಲ್ಲಿ ಶುರುವಾಗಲಿದೆ. ಸದ್ಯದಲ್ಲೇ ಹೊಸ ಕಥೆಯೊಂದಿಗೆ ಮತ್ತೆ 'ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ..' ಧಾರಾವಾಹಿ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಜನಮೆಚ್ಚಿದ ಅದೇ ಜೋಡಿ ನಾಯಕ-ನಾಯಕಿ ಮುಂದಿನ ಸೀರಿಯಲ್‌ನಲ್ಲಿ, ಅಂದರೆ ಪ್ರೀತಿಯ ಹೊಸ ಅಧ್ಯಾಯದಲ್ಲಿಯೂ ಕೂಡ ಮುಂದುವರೆಯಲಿದ್ದಾರೆ. ಇದು ಅಚ್ಚರಿ ಎನಿಸಿದರೂ ಸತ್ಯ!

ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?

ಸ್ಟಾರ್ ಸುವರ್ಣ ವಾಹಿನಿ ಈ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸೀರಿಯಲ್ ವೀಕ್ಷಕರು ಈ ಮೂಲಕ ನೀನಾದೆ ನಾ ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ, ಆ ವಿಕ್ರಮ್-ವೇದಾರನ್ನು ಅದೇ ಪಾತ್ರಗಳಲ್ಲಿ ಮತ್ತೆ ನೋಡಲಾಗದು. ಆದರೆ, ವೀಕ್ಷಕರು ಮೆಚ್ಚಿ ಮುದ್ದಾಡಿದ ಅದೇ ಜೋಡಿ ಅದೇ ಹೆಸರಿನಲ್ಲಿ ಹೊಸ ರೂಪದಲ್ಲಿ ವೀಕ್ಷಕರ ಮುಂದೆ ಬರಲಿದ್ದು, ಅವರನ್ನು ಒಪ್ಪಿಕೊಳ್ಳಬೇಕು. ಈ ಬದಲಾವಣೆಯನ್ನು ತಿಳಿದು ವೀಕ್ಷಕರು ಥ್ರಿಲ್ ಆಗಿ ಹೊಸ ಕುತೂಹಲಕ್ಕೆ ಈಗಾಗಲೇ ರೆಡಿ ಆಗಿರಬಹುದು. ಈಗಿರುವ ಕಥೆಯ ಕ್ಲೈಮ್ಯಾಕ್ಸ್ ಈ ವಾರವೇ ನಡೆಯಲಿದೆ. 

ಅಲ್ಲಿಗೆ, ಶುರುವಾಗಲಿರುವ ನೀನಾದೆ ನಾ ಹೊಸ ಕಥೆ ಹೇಗಿರಬಹುದು? ವೀಕ್ಷಕರ ಅಚ್ಚುಮೆಚ್ಚಿನ ವಿಕ್ರಮ್-ವೇದಾ ಜೋಡಿ ಮೋಡಿ ಮಾಡಲು ಹೊಸ ರೂಪದಲ್ಲಿ ಬಂದಾಗ ಹೇಗನ್ನಿಸಬಹುದು? ಬದಲಾದ ಮೇಕಿಂಗ್, ಸ್ಥಳ ಎಲ್ಲವೂ ಹೇಗೆಲ್ಲಾ ಇರಬಹುದು? ಹೀಗೆ ಸಾಕಷ್ಟು ಪ್ರಶ್ನೆಗಳು ವೀಕ್ಷಕರ ಮನಸ್ಸನ್ನು ಕಾಡುವುದು ನಿಶ್ಚಿತ. ಅದಕ್ಕೆಲ್ಲಾ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ. ಸದ್ಯಕ್ಕೆ ವಿಕ್ರಮ್-ವೇದಾ ಕಥೆಯ ಕ್ಲೈಮ್ಯಾಕ್ಸ್ ನೋಡಲು ಮರೆಯದಿರಿ ಎನ್ನುತ್ತಿದೆ ಸ್ಟಾರ್ ಸುವರ್ಣ..!

ಅಣ್ಣಾವ್ರು 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ಲೇ ಇಲ್ಲ!

Latest Videos
Follow Us:
Download App:
  • android
  • ios