Asianet Suvarna News Asianet Suvarna News

BBK9 ಅದೇ ಬಟ್ಟೆ ಹಾಕಿದ್ರೆ ಬಟ್ಟೆ ಇಲ್ವಾ ಅಂತಿದ್ರು ಜನ; ಬಟ್ಟೆ ಕಳುಹಿಸಿದವರಿಗೆ ಥ್ಯಾಂಕ್ಸ್‌ ಹೇಳಿದ ನವಾಜ್

ವಿಜಯದಶಮಿ ದಿನ ಬಣ್ಣ ಬಣ್ಣದ ಉಡುಪು ಕಳುಹಿಸಿ ಕೊಟ್ಟಿ ಜನರಿಗೆ ಥ್ಯಾಂಕ್ಸ್‌ ಹೇಳಿದ ನವಾಜ್.... 
 

Nawaz review gets emotional getting designer outfits from fans in bigg boss kannada 9 vcs
Author
First Published Oct 7, 2022, 11:02 PM IST

ಸಿನಿಮಾ ರಿವ್ಯೂ ಅಂದ್ರೆ ನವಾಜ್‌, ಸೈಕ್ ನವಾಜ್ ಇದ್ರೆ ಸಿನಿಮಾ ಸೂಪರ್ ಹಿಟ್ ಅನ್ನೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾತು. ಥಿಯೇಟರ್‌ನಲ್ಲಿ ಫಸ್ಟ್‌ ಡೇ ಫಸ್ಟ್‌ ಶೋ ಆದ್ಮೇಲೆ ನಟ-ನಟಿಯರು ಅಥವಾ ನಿರ್ದೇಶಕರು ಮಾತನಾಡುತ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಮೀಡಿಯಾ ಮುಂದೆ ಮೊದಲು ಸೈಕ್‌ ನವಾಜ್ ನಿಂತಿರುತ್ತಾರೆ.  ಈ ಜನಪ್ರಿಯತೆಯಿಂದಲೇ ನವಾಜ್ ಬಿಗ್ ಬಾಸ್ ಪ್ರವೇಶಿಸಿ ಆಟವಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

ಏನಿದು ಬಟ್ಟೆ ಕಥೆ:

ತುಂಬಾ ಕಷ್ಟಗಳನ್ನು ನೋಡಿಕೊಂಡು ಬೆಳೆಯುತ್ತಿರುವ ನವಾಜ್‌ ಬಿಗ್ ಬಾಸ್ ಪ್ರವೇಶಿಸುವಾಗಲೂ ಕಡಿಮೆ ಬಟ್ಟೆ ತಂದಿದ್ದರು. ಹೀಗಾಗಿ ಹಬ್ಬದ ದಿನ ವಿಶೇಷವಾಗಿ ಧರಿಸಲು ಯಾವ ಉಡುವು ಇರಲಿಲ್ಲ. ವಿಜಯದಶಮಿ ಹಬ್ಬದ ದಿನ ಚಡ್ಡಿ ಶರ್ಟ್‌ ಧರಿಸಿ ನವಾಜ್ ಓಡಾಡುವಾಗ ಸ್ಟೋರ್‌ ರೂಮ್‌ನಲ್ಲಿ ಗೋಲ್ಡನ್ ಬಝರ್ ಹೊಡೆಯುತ್ತದೆ. ಆಗ ಬಾಗಿಲು ತೆರೆದು ನೋಡಿದಾಗ ನವಾಜ್‌ಗೆ ಬುಟ್ಟಿಯಲ್ಲಿ ಡಿಸೈನರ್ ಡ್ರೆಸ್‌ ಬಂದಿರುತ್ತದೆ. 

Nawaz review gets emotional getting designer outfits from fans in bigg boss kannada 9 vcs

ಸಂತೋಷಕ್ಕೆ ಹೇಗೆ ರಿಯಾಕ್ಟ್‌ ಮಾಡಬೇಕು ಎಂದು ಗೊತ್ತಾಗದೆ ನವಾಜ್ ಬಟ್ಟೆ ಹಿಡಿದುಕೊಂಡು ಬಾತ್‌ರೂಮ್‌ಗೆ ಬರುತ್ತಾರೆ. ಆಗ ತಮ್ಮ ಕಷ್ಟ ದಿನಗಳ ಬಗ್ಗೆ ನೆನಪಿಸಿಕೊಂಡು ಭಾವುಕರಾಗಿದ್ದಾರೆ. 'ಜೀವನದಲ್ಲೂ ನಾನು ಈ ರೀತಿ ಬಟ್ಟೆ ಹಾಕಿಕೊಳ್ಳುತ್ತೀನಿ ಅಂತ ಅಂದುಕೊಂಡಿರಲಿಲ್ಲ. ನಾನು ಒಂದು ಸತ್ಯ ವಿಚಾರ ಹಂಚಿಕೊಳ್ಳುತ್ತೀನಿ ನನ್ನ ಲೈಫಲ್ಲಿ ಮನೆಯಲ್ಲಿ ಅಥವಾ ಹೊರಗಡೆ ಹೋದಾಗ ಕೇವಲ ಎರಡು ಜೋಡಿ ಬಟ್ಟೆ ಇತ್ತು ಅದೇ ಹಾಕಿಕೊಳ್ಳುತ್ತಿದ್ದೆ. ಎರಡು ಜೀನ್ಸ್‌ ಪ್ಯಾಂಟ್‌ ಮತ್ತು ನಾಲ್ಕು ಶರ್ಟ್‌. ಎಲ್ಲಿ ಹೋದರೂ ಅದೇ ಹಾಕಿಕೊಳ್ಳುತ್ತಿದ್ದೆ ಎಷ್ಟರ ಮಟ್ಟಕ್ಕೆ ಹಾಕಿಕೊಳ್ಳುತ್ತಿದ್ದೆ ಅಂದ್ರೆ ಎಲ್ಲರೂ ಕೇಳುತ್ತಿದ್ದರೂ ಏನೂ ಬಟ್ಟೆ ಇಲ್ವಾ? ಅದೇ ಹಾಕೊಂಡು ಬರ್ತೀಯಾ ಅಂತ. ಆಗ ಸುಳ್ಳು ಹೇಳುತ್ತಿದ್ದೆ. ನನಗೆ ಚೆನ್ನಾಗಿ ಕಾಣಿಸುತ್ತದೆ ಮಸ್ತ್ ಆಗಿರುತ್ತೆ ಅಂತ ಹೇಳಿ ಸುಮ್ಮನಾಗುತ್ತಿದ್ದೆ. ಯಾರು ಈ ಬಟ್ಟೆಗಳನ ಕಳುಹಿಸಿಕೊಟ್ಟಿದ್ದಾರೆ ಗೊತ್ತಿಲ್ಲ ಆದರೆ ಅವರಿಗೆ ನಾನು ಥ್ಯಾಂಕ್ಸ್‌ ಹೇಳುವೆ' ಎಂದು ಮಾತನಾಡಿರುವ ನವಾಜ್ ಭಾವುಕರಾಗುತ್ತಾರೆ. ಕ್ಯಾಮೆರಾಗಳ ಕಡೆ ಮುಖ ಮಾಡಿ ಕೈ ಮುಗಿದು ಯಾರು ಬಟ್ಟೆ ಕಳುಹಿಸಿಕೊಟ್ಟಿದ್ದೀರಾ ನನಗೆ ಗೊತ್ತಿಲ್ಲ ನಿಮಗೆ ನಾನು ಕೈ ಮುಗಿದು ಧನ್ಯವಾದಗಳನ್ನು ಹೇಳುತ್ತೀನಿ ಅಂದಿದ್ದಾರೆ.

BBK9 ಪಿಡ್ಸ್‌ ಬಂದು ಬಿದ್ದ ರಾಕೇಶ್ ಅಡಿಗ; ಸಿಟ್ಟಲ್ಲಿ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ

ನವಾಜ್ ಮಾತುಗಳನ್ನು ಕೇಳುತ್ತಿದ್ದ ರೂಪೇಶ್, ಸಾನ್ಯಾ ಮತ್ತು ಅರುಣ್ ಸಾಗರ್ ಸಾಥ್ ಕೊಟ್ಟಿದ್ದಾರೆ. 'ನೋಡು ಈಗ ಇರುವ ಬಟ್ಟೆಗಳಲ್ಲಿ ಯಾವುದು ಹಾಕಬೇಕು ಅನ್ನೋದು ನಿನಗೆ ಕನ್ಫ್ಯೂಸ್ ಆಗಿದೆ. ಅದು ಸಕ್ಸಸ್ ಅಂದ್ರೆ' ಎಂದು ರೂಪೇಶ್ ಹೇಳಿದ್ದರೆ. 'ವಿಜಯದಶಮಿ ದಿನ ವಿಜಯ ನಿನದಾಗಿ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ' ಎಂದು ಸಾನ್ಯಾ ಹೇಳಿದ್ದಾರೆ ಹಾಗೇ 'ಪ್ರೀತಿಯಿಂದ ಕಳುಹಿಸಿಕೊಟ್ಟವರು ಯಾರೇ ಇದ್ದರೂ ಅದು ನಿನ್ನ ಪ್ರೀತಿಗೆ ಬಂದಿರುವುದು ನಿನ್ನ ಸಾಧನೆಗೆ ಎಂಜಾಯ್ ಮಾಡು. ಇದ್ದರೂ ನೀನು ಇದ್ದಂಗೆ ಇರಬೇಕು ಇಲ್ಲದಿದ್ದರೂ ಇದ್ದಂಗೆ ಇರಬೇಕು ಎಂದು ಅರುಣ್ ಸಾಗರ್ ಹೇಳಿದ್ದಾರೆ.

100 ಚಡ್ಡಿ ಕೊಡ್ಸು ಅಂದ್ರೆ ಬರೀ 6 ಚಡ್ಡಿ ಕೊಡ್ಸಿದ್ದಾರೆ ನಮ್ಮಪ್ಪ:

'ಜನರು ನನ್ನ ಸೈಕ್ ನವಾಜ್ ಎಂದು ಕರೆಯುತ್ತಾರೆ. ಮಸ್ತಾಗಿ ಜನರನ್ನು ನಗಿಸುವ ಆದು ಅವರಿಗೆ ಸೈಕ್ ಅಗಿರುತ್ತೆ. ಬಿಗ್ ಬಾಸ್ ಮನೆಯಲ್ಲಿ ಆ ಸೈಕ್‌ನೆಸ್‌ ತೋರಿಸುತ್ತೀನಿ' ಎಂದು ಹೇಳುತಾ ವೇದಿಕೆ ಮೇಲೆ ಕುರಿ ಪ್ರತಾಪ್‌ನ ನೆನಪಿಸಿಕೊಂಡಿದ್ದಾರೆ. 'ಕುರಿ ಪ್ರತಾಪ್ ಬಿಗ್ ಬಾಸ್ ಮನೆಯೊಳಗೆ ಹೋಗುವಾಗ 100 ಚಡ್ಡಿ ತೆಗೆದುಕೊಂಡು ಬಂದಿದ್ರು ನನಗೂ ಕೊಡ್ಸು ಅಪ್ಪ ಅಂತ ಕೇಳಿದೆ. ನಮ್ಮ ಅಪ್ಪ 6 ಚಡ್ಡಿ ಕೊಡ್ಸಿ ಸಾಕು ಹೋಗಿ ಬಾ ಅಂದ್ರು. ಈಗ ಆ 6 ಚಡ್ಡಿಯಲ್ಲಿ 100 ದಿನ ಇರ್ತೀನಿ' ಎಂದಿದ್ದಾರೆ ನವಾಜ್. ಇದಕ್ಕೆ ಕಿಚ್ಚ 'ನಿಮ್ಮ ತಂದೆ ಹೇಳಿದ್ದು ಉಳಿದ ದಿನಗಳು ಬೇಡ ವಾರದ ದಿನ ಮಾತ್ರ ಹಾಕೋ ಅಂತ. ಫ್ರೀಡಂನಲ್ಲಿ ಇರ್ಬೇಕು ಅನ್ನೋದಕ್ಕೆ ಹೇಳಿದ್ದಾರೆ' ಕೌಂಟರ್ ಕೊಟ್ಟಿದ್ದಾರೆ.

Follow Us:
Download App:
  • android
  • ios