ಪ್ರ್ಯಾಂಕ್ ಮಾಡಲು ಹೋಗಿ ತೊಂದರೆಯಲ್ಲಿ ಸಿಲುಕಿಕೊಂಡ ರಾಕೇಶ್. ಅನುಪಮಾ ಎಷ್ಟೇ ಕ್ಷಮೆ ಕೇಳಿದರೂ ಪ್ರಶಾಂತ್ ಒಪ್ಪಲಿಲ್ಲ...

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 9ರ ಮೊದಲ ವೀಕೆಂಡ್ ಮಾತುಕಥೆ ನಡೆಯುತ್ತಿದೆ. ಯಾರು ಮನೆಯಿಂದ ಹೊರ ನಡೆಯುತ್ತಾರೆ ಯಾರು ಉಳಿದುಕೊಳ್ಳುತ್ತಾರೆ ಗೊತ್ತಿಲ್ಲ ಹೀಗಾಗಿ ಸಣ್ಣ ಪ್ರ್ಯಾಂಕ್ ಮಾಡಿ ತಮಾಷೆ ತೆಗೆದುಕೊಳ್ಳೋಣ ಎಂದು ಅನುಪಮಾ ಗೌಡ, ನೇಹಾ, ಅಮೂಲ್ಯ ಮತ್ತು ರಾಕೇಶ್ ಅಡಿಗ ಪ್ಲ್ಯಾನ್ ಮಾಡುತ್ತಾರೆ. ಪ್ಲ್ಯಾನ್ ಮಾಡುವಾಗ ಪ್ರಶಾಂತ್‌ ಸಂಬರ್ಗಿನ ಟಾರ್ಗೇಟ್ ಮಾಡುತ್ತಾರೆ. 'ಪ್ರಶಾಂತ್‌ನ ಅವರಿಗೆ ಇದು ಪ್ರ್ಯಾಂಕ್ ಅಂತ ತಿಳಿದ ಮೇಲೆ ಕೋಪ ಬರುತ್ತೆ ಹೀಗೆ ಮಾಡಬೇಡಿ' ಎಂದು ಕ್ಯಾಪ್ಟನ್ ಗೋಬ್ರಾ ಹೇಳುತ್ತಾರೆ. 

ಸ್ಕೂಲಿನಲ್ಲಿ ಈ ರೀತಿ ಪ್ರ್ಯಾಂಕ್ ಮಾಡಿರುವೆ ಎಂದು ರಾಕೇಶ್‌ ಬಾತ್‌ರೂಮಿಗೆ ಹೋಗಿ ಟೂತ್‌ಪೇಸ್ಟ್‌ನ ನೀರಿಗೆ ಮಿಕ್ಸ್‌ ಮಾಡಿ ಬಾಯಿ ತುಂಬಾ ತುಂಬಿಕೊಳ್ಳುತ್ತಾರೆ. ಗಾರ್ಡನ್‌ ಏರಿಯಾದಲ್ಲಿ ಪಿಡ್ಸ್‌ ಬಂದಂತೆ ನಾಟಕ ಮಾಡುವೆ ಎನ್ನುತ್ತಾರೆ. ಹಾಗೆಯೇ ಮಾಡುತ್ತಾರೆ. ಅಡುಗೆ ಮನೆಯಲ್ಲಿದ್ದ ಪ್ರಶಾಂತ್ ಓಡೋಡಿ ಬರುತ್ತಾರೆ. ಮೊದಲು ಗಾಬರಿಗೊಳ್ಳುತ್ತಾರೆ ಅನಂತರ ಕಬ್ಬಿಣದ ವಸ್ತು ಹಿಡಿದುಕೊಂಡು ಬರಲು ಅಡುಗೆ ಮನೆ ಹೋಗುತ್ತಾರೆ. ಪ್ರ್ಯಾಂಕ್‌ಗೆ ಕೈ ಜೋಡಿಸಿರುವ ಪ್ರತಿಯೊಬ್ಬರು ನಗುತ್ತಾರೆ ಆದರೆ ಪ್ರಶಾಂತ್ ಬರುತ್ತಿದ್ದಂತೆ ಸುಮ್ಮನಾಗುತ್ತಾರೆ. 

ಯಾವಾಗ ಇದೆಲ್ಲಾ ಅತಿರೇಕಕ್ಕೆ ಏರುತ್ತೆ ಆಗ ಇದು ಪ್ರ್ಯಾಂಕ್ ಎಂದು ದರ್ಶ್‌ ಕಂಡು ಹಿಡಿಯುತ್ತಾರೆ. ರಾಕೇಶ್‌ ಮೇಲೆದ್ದು ಇದು ಪ್ರ್ಯಾಂಕ್ ಎಂದು ಹೇಳಿದಾಗ ಪ್ರಶಾಂತ್ ಸಂಬರ್ಗಿ ಓಡೋಗಿ ರಾಕೇಶ್‌ ಕಾಲರ್ ಹಿಡಿದು ಯಾಕೆ ಈ ರೀತಿ ಪ್ರ್ಯಾಂಕ್ ಮಾಡಿದ್ದು ಎಂದು ಪ್ರಶ್ನೆ ಮಾಡುತ್ತಾರೆ. ಪ್ರ್ಯಾಂಕ್ ಮಾಡಿದ್ದವರು ಎಷ್ಟು ಸಲ ಕ್ಷಮೆ ಕೇಳಿದ್ದರು ಪ್ರಶಾಂತ್ ಕ್ಷಮಿಸುವುದಿಲ್ಲ ಬದಲಿಗೆ ಮಗನನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾರೆ.

BBK9; ನೀರು ಮಿತವಾಗಿ ಬಳಸಿ ಎಂದಿದ್ದೇ ತಪ್ಪಾಯ್ತಾ? ರೂಪೇಶ್ ನೀತಿ ಪಾಠಕ್ಕೆ ಸಿಡಿದೆದ್ದ ಪ್ರಶಾಂತ್ ಸಂಬರಗಿ

'ಹೆಲ್ತ್‌ ವಿಚಾರದಲ್ಲಿ ಈ ರೀತ ಆಟ ಆಡಬೇಡ. ತಪ್ಪಾಯಿತ್ತು ಎಂದು ಕ್ಷಮೆ ಕೇಳು. ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದೂ ಈ ರೀತಿ ಮಾಡಬೇಡಿ. ಇದರಿಂದ ಬೇರೆ ಅವರಿಗೆ ಹಾರ್ಟ್‌ ಅಟ್ಯಾಕ್ ಆಗಿದ್ದರೆ. ಏಕೆಂದರೆ ನನ್ನ ಮಗನಿಗೆ ಈ ರೀತಿ ಆಗಿತ್ತು ಅದಿಕ್ಕೆ ನನಗೆ ಪರ್ಸನಲ್ ಆಗಿ ಕನೆಕ್ಟ್ ಅಯ್ತು. ಮೂರು ವರ್ಷ ಕಷ್ಟ ಪಟ್ಟಿದ್ದೀನಿ ನಾನು ಜೊತೆ ಕರ್ಕೊಂಡು ಹೋಗಿ ಹೋಗಿ. ಇದು ನಿಜಕ್ಕೂ ದೊಡ್ಡ issue. ರಾಕೇಶ್‌ನ ನೋಡಿ ನನ್ನ ಮಗ ನೆನಪು ಆದಾ. ನೀವು ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅವಮಾನ ಮಾಡುತ್ತಿದ್ದೀರಿ, ಈ ಕಾಯಿಲೆಯನ್ನು ಕೀಳಾಗಿ ನೋಡುತ್ತಿದ್ದೀರಿ..ಯಾರಿಗೆಲ್ಲಾ ಈ ಸಮಸ್ಯೆ ಇದೆ ಅವರಿಗೆ ಇದು ದೊಡ್ಡ ಅವಮಾನ. ನನ್ನ ಮಗನ ರೋಡ್‌ನಲ್ಲಿ ಒಬ್ಬನೇ ಬಿಡುವುದಕ್ಕೆ ಭಯ ಆಗುತ್ತೆ ಎಲ್ಲಿ ಒಬ್ಬನೆ ನಿಂತು ಬಿಡುತ್ತಾನೆ ಅಂತ. 8 ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ನಾನು ಮರೆತು ಬಿಟ್ಟಿದ್ದೆ. ಕಡಿಮೆ ಆಗಿದೆ ವರ್ಷಕ್ಕೆ ಒಂದು ಸಲ ಆಗುತ್ತೆ...ನೀವು ಈ ರೀತಿ ಮಾಡಿದ್ದು ನಾನು ನಂಬುವುದಕ್ಕೆ ಆಗೋಲ್ಲ ಮತ್ತೆ ಈ ರೀತಿ ಮಾಡಬೇಡಿ' ಎಂದು ಪ್ರಶಾಂತ್ ಸಂಬರ್ಗಿ ಕಣ್ಣೀರಿಡುತ್ತಾರೆ.

'ರಾಕೇಶ್ ಮಾಡಿದ್ದು ಮನಸ್ಸಿಗೆ ನೋವಾಯ್ತು. ಯಾವತ್ತೂ ನಾನು ಆತನನ್ನು ಈ ರೀತಿ ನೋಡಿರಲಿಲ್ಲ ನನಗೆ ಏನು ಮಾಡಬೇಕು ಗೊತ್ತಗುತ್ತಿರಲಿಲ್ಲ. ತಲೆ ಉಜ್ಜುತ್ತಿರುವೆ. ಅದು ನಾಟಕ ಅಂತ ಗೊತ್ತಾಗಿದ ತಕ್ಷಣ ಒಂದು ತರ ಬೇಜಾರ್ ಆಗುತ್ತೆ' ಎಂದು ರೂಪೇಶ್ ಶೆಟ್ಟಿ ಹೇಳುತ್ತಾರೆ. 

BBK9 ಅರೇ! ಪಾತ್ರೆ ತೊಳಿತಿದ್ದೀರಾ ಗಾಡಿ ತೊಳಿತಿದ್ದೀರಾ? ರಾಕೇಶ್‌- ಅಮೂಲ್ಯ ನಡುವೆ ಸ್ಪಾರ್ಕ್!

'ರಾಕೇಶ್‌ ಅವರ ತಪ್ಪು ಏನೂ ಇಲ್ಲ ನಾನು ಇದನ್ನು ಶುರು ಮಾಡಿದ್ದು ಪ್ರ್ಯಾಂಕ್ ಮಾಡೋಣ ಅಂತ ಇದಕ್ಕೆ ನಾನು ಕ್ಷಮೆ ಕೇಳುತ್ತೀನಿ. ಈ ರೀತಿ ವಿಚಾರ ನಿಮ್ಮ ಜೀವನದಲ್ಲಿ ಆಗಿದೆ ಎಂದು ನನಗೆ ಗೊತ್ತಿರಲಿಲ್ಲ' ಎನ್ನುತ್ತಾರೆ ಅನುಪಮಾ ಗೌಡ.

'ನನ್ನ ಮಗ ಒಂದು ಜಾಗದಲ್ಲಿ ನಿಂತುಕೊಂಡು ಬಿಡುತ್ತಿದ್ದ. ಏನಾದರೂ ತಪ್ಪು ಅಥವಾ ಹೋಮ್‌ ವರ್ಕ್‌ ಮಾಡಿಲ್ಲ ಅಂದ್ರೆ ಗಟ್ಟಿಯಾಗಿ ನಿಂತುಕೊಂಡಿರುತ್ತಿದ್ದ. ನಿಂತ್ಕೊಂಡು ನಾಟಕ ಮಾಡುತ್ತೀಯಾ ಅಂತ ನಾನು ಬೈದು ಒಂದು ಸಲ ನೋಡಿದೆ ಎರಡು ಸಲ ನೋಡಿದೆ ಆಮೇಲೆ ಡಾಕ್ಟರ್‌ಗೆ ತೋರಿಸಿದಲಾಗಿತ್ತು. ಆಗ ಅವರು ಬ್ರೈನ್ ಸ್ಕ್ಯಾನ್ ಮಾಡಿ ಎಂದು ಹೇಳಿದ್ದರು. ನೀವು ಏನೇ ಪ್ರ್ಯಾಂಕ್ ಮಾಡಿದರೂ ನಾನು ಒಪ್ಪಿಕೊಳ್ಳುವೆ ಆದರೆ ಇದನ್ನು ಎಂದೂ ಒಪ್ಪಿಕೊಳ್ಳಲಿಲ್ಲ' ಎಂದಿದ್ದಾರೆ ಪ್ರಶಾಂತ್.