BBK9 ಅನುಪಮಾ ಗೌಡ ಸ್ವಿಮ್ ಸ್ಯೂಟ್ ಫೋಟೋ ವೈರಲ್; ಆಟ ಈಗ ಶುರು ಎಂದ ನೆಟ್ಟಿಗರು
ಬಿಬಿ ಮನೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಅನುಪಮಾ ಗೌಡ. ಸ್ವಿಮ್ ಸ್ಯೂಟ್ ಲುಕ್ ಸಖತ್ ವೈರಲ್....
ಕನ್ನಡ ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೆಸರು ಮಾಡಿರುವ ನಟಿ ಅನುಪಮಾ ಗೌಡ ಎರಡನೇ ಸಲ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಬಿಗ್ ಬಾಸ್ ಸೀಸನ 5ರಲ್ಲಿ ಸಖತ್ ರಫ್ ಆಂಡ್ ಟಫ್ ಆಗಿ ಕಾಣಿಸಿಕೊಂಡ ಅನುಪಮಾ ಗೌಡ ಸೀಸನ್ 9ರಲ್ಲಿ ಕಾಮ್ ಆಂಡ್ ಕಂಪೋಸ್ ಆಗಿ ಆಟ ಶುರು ಮಾಡಿದ್ದಾರೆ.
ವಿದೇಶದಲ್ಲಿ ಸ್ಕೂಬಾ ಡೈವಿಂಗ್ ಕಲಿತಿರುವ ಅನುಪಮಾ ಗೌಡ ಈ ಸಲ ಬಿಬಿ ಮನೆಯಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಸ್ವಿಮಿಂಗ್ ಪೂಲ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಸ್ವಿಮ್ ಸೂಟ್ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ಅನುಪಮಾ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ಲೋಡ್ ಮಾಡಿ 'ಪೋಲ್ ಸೈಡ್ನಲ್ಲಿ ಲೈಫ್ ಸೂಪರ್ ಆಗಿರುತ್ತದೆ' ಎಂದು ಬರೆದುಕೊಂಡಿದ್ದಾರೆ.
ಈ ಸೀಸನ್ನಲ್ಲಿ ಅನುಪಮಾ ತುಂಬಾನೇ ಸರಳವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಯಾವುದೇ ಲುಕ್ ಎಕ್ಸಪರೀಮೆಂಟ್ ಮಾಡುತ್ತಿಲ್ಲ. ಸರಳವಾಗಿ ಸೀರೆ ಅಥವಾ ಮಾಡ್ರನ್ ಡ್ರೆಸ್ ಧರಿಸಿ ಮನೆ ಮಗಳಂತೆ ಕನೆಕ್ಟ್ ಆಗುತ್ತಿದ್ದಾರೆ.
ಎರಡನೇ ವಾರದ ಟಾಸ್ಕ್ನಲ್ಲಿ ವಜ್ರಕಾಯ ತಂಡಕ್ಕೆ ಅನುಪಮಾ ಗೌಡ ಲೀಡರ್ ಆಗಿದ್ದರು. ತಂಡದಲ್ಲಿದ್ದ 7 ಮಂದಿಗೂ ಸಮವಾಗಿ ಅವಕಾಶ ಕೊಟ್ಟು ಟೀಂ ಗೆಲುವಿಗೆ ಕಾರಣವಾಗಿದಕ್ಕೆ ವೀಕೆಂಡ್ನಲ್ಲಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.