ನನ್ನಮ್ಮ ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿ ಪಡೆದ ಬಾಲನಟಿ ಮಹಿತಾ ಈಗ "ನಾ ನಿನ್ನ ಬಿಡಲಾರೆ" ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಹಿತಾ ಅವರ ತಾಯಿ ತನುಜಾ, ಮಗಳ ಆಸಕ್ತಿಗೆ ಪೂರ್ಣ ಬೆಂಬಲ ನೀಡುತ್ತಿದ್ದು, ಓದು ಮತ್ತು ನಟನೆ ಎರಡನ್ನೂ ಸಮರ್ಥವಾಗಿ ನಿಭಾಯಿಸಲು ಸಹಕರಿಸುತ್ತಿದ್ದಾರೆ. ಮಗಳ ಭವಿಷ್ಯ ದೇವರ ಇಚ್ಛೆಯ ಮೇಲೆ ಅವಲಂಬಿತವಾಗಿದೆ ಎಂದು ತನುಜಾ ಅಭಿಪ್ರಾಯಪಟ್ಟಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಪುಟ್ಟ ಹುಡುಗಿ ಮಹಿತಾ ಇದೀಗ ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಳೆ. ಈ ಹಿಂದೆ ಚುಕ್ಕಿತಾರೆ ಸೀರಿಯಲ್ ಮೂಲಕ ಜನರ ಗಮನ ಸೆಳೆದಿದ್ದಳು. ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮಹಿತಾ ಹೇಗೆ ಮ್ಯಾನೇಜ್ ಮಾಡುತ್ತಿದ್ದಾಳೆ? ಫ್ಯಾಮಿಲಿ ಸಪೋರ್ಟ್ ಹೇಗಿದೆ ಎಂದು ಮಹಿತಾ ತಾಯಿ ತನುಜಾ ಮಾತನಾಡಿದ್ದಾರೆ.
'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ನಾನು ಹಾಡುತ್ತಿದ್ದೆ ಆಗ ಒಂದು ಸಾಲು ತಪ್ಪದೆ ಹಾಡುತ್ತಿದ್ದಳು. ಹಾಡಲು ಇಂಟ್ರೆಸ್ಟ್ ಇದೆ ಎಂದು ಸೇರಿದಿದೆ. ಕೋವಿಡ್ ಸಮಯದಲ್ಲಿ ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡಿದ್ದೆ ಆಗ ಆಕ್ಟಿಂಗ್ ಇಂಟ್ರೆಸ್ಟ್ ಇದೆ ಎಂದು ತಿಳಿಯಿತ್ತು. ಬರೀ ಓದಬೇಕು ಎಂದು ನಾನು ಯಾವತ್ತೂ ಒಡತ ಹಾಕುವುದಿಲ್ಲ. ಆಕೆಗೆ ಯಾವುದೇ ಟ್ಯಾಲೆಂಟ್ ಇದ್ದರೂ ಸಪೋರ್ಟ್ ಮಾಡಬೇಕು ಅನ್ನೋ ಆಸೆ ನನಗೆ ಇತ್ತು. ಮಹಿತಾಗೆ ಅವಕಾಶಗಳು ವೇದಿಕೆಗಳು ಸಿಕ್ಕಿರುವುದಕ್ಕೆ ಸಪೋರ್ಟ್ ಮಾಡುತ್ತಿದ್ದೀವಿ. ಮಹಿತಾಗೂ ಇಂಟ್ರೆಸ್ಟ್ ಇರುವ ಕಾರಣ ಮಾಡುತ್ತಿದ್ದಾಳೆ, ತಂದೆ ತಾಯಿ ಬಲವಂತಕ್ಕೆ ಮಗು ಎಷ್ಟು ದೂರ ಓಡಬಹುದು? ಅವರಿಗೆ ಆಸಕ್ತಿ ಇದ್ದಾಗ ನಾವು ಸಪೋರ್ಟ್ ಮಾಡಿದಾಗ ಅವಳ ಪ್ರತಿಭಿಗೆ ಜನರ ಪ್ರೀತಿ ಸಿಗುತ್ತಿದೆ. ಎಲ್ಲಿ ತನಕ ಹೋಗುತ್ತದೆ ಗೊತ್ತಿಲ್ಲ ಆದರೆ ಜನರ ಪ್ರೀತಿ ಗಳಿಸಬೇಕು ಜನರ ಮನಸ್ಸಿನಲ್ಲಿ ಉಳಿಯಬೇಕು ಅನ್ನೋ ಆಸೆ ಇದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ತನುಜಾ ಮಾತನಾಡಿದ್ದಾರೆ.
ಸುಸ್ತಾಗಿದೆ ರೆಸ್ಟ್ ತಗೋ ಅಂತ ಹೇಳೋ ಅಣ್ಣ ಬೇಕಿತ್ತು; ಹುಟ್ಟುಹಬ್ಬದಂದು ಕಣ್ಣೀರಿಟ್ಟ ಅನುಶ್ರೀ
'ನನ್ನ ಕನಸುಗಳು ಬೇರೆ ಇತ್ತು ಆದರೆ ನಾನು ಬದುಕುತ್ತಿರುವುದೇ. ನಾವು ಅಂದುಕೊಂಡಂತೆ ನಡೆಯುವುದಿಲ್ಲ. ನಮ್ಮ ಆಸೆಗಳು ಸಾವಿರ ಇರುತ್ತೆ ಆದರೆ ದೇವರು ಪ್ರತಿಯೊಂದು ಡಿಸೈನ್ ಮಾಡುತ್ತಾನೆ. ನೀನು ಸಿಂಗರ್ ಅಲ್ಲ ಟಾಪ್ ಸಿಂಗರ್ ಆಗಬೇಕು, ನೀನು ಟಾಪ್ ಆರ್ಟಿಸ್ಟ್ ಆಗಬೇಕು ಟಾಪ್ ಹೀರೋಯಿನ್ ಆಗಬೇಕು ಎಂದು ನಾವು ಒತ್ತಡ ಹಾಕುವುದು ಅಲ್ಲ. ಅವಳಿಗೆ ಸ್ಟ್ರಾಂಗ್ ಆಸೆ ಇದ್ರೆ ಸಪೋರ್ಟ್ ಮಾಡುತ್ತೀವಿ. ದೇವರು ಅವಕಾಶ ಮಾಡಿಕೊಟ್ಟಾಗ ಆಕೆ ಶ್ರಮ ಹಾಕುವುದರ ಬಗ್ಗೆ ನಾನು ಗಮನ ಕೊಡುತ್ತೀನಿ. ನಾವು ದೊಡ್ಡ ಕನಸು ಕಾಣಬಹುದು ಆದರೆ ಅದೇ ಆಗುತ್ತೆ ಅನ್ನೋ ಆಸೆ ನನಗೆ ಇಲ್ಲ. ಹಲವರು ಸಂದರ್ಶನ ಮಾಡುತ್ತಾ ಅವಳಿಗೆ ಹೇಳುತ್ತಾರೆ...ನೀನು ಚೆನ್ನಾಗಿ ಆಕ್ಟಿಂಗ್ ಮಾಡುತ್ತಿದ್ದೀಯಾ ಹಾಗಿದ್ರೆ ನೀನು ಹೀರೋಯಿನ್ ಆಗುತ್ತೀಯಾ ಎನ್ನುತ್ತಾರೆ. ಹೆಣ್ಣುಮಕ್ಕಳ ಬಗ್ಗೆ ನಾನು ಹೇಗ್ ಹೇಳುವುದು? ಬಾಡಿ ನೇಚರ್, ಹಾರ್ಮೋನಲ್ ಇಂಬ್ಯಾಲೆನ್ಸ್ ಏನೋ ಬದಲಾವಣೆ ಆಗುತ್ತದೆ.... ಆ ಕನಸು ಅವಳಿನಲ್ಲಿ ತುಂಬಿಬಿಟ್ಟರೆ ಏನಾದರೂ ಸಣ್ಣದಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇರಬೇಕು. ಎಲ್ಲಾದನ್ನು ಕಲಿತಿರಬೇಕು ನಿಮ್ಮ 100% ಶ್ರಮ ಹಾಕಬೇಕು..ನಿನ್ನ ಹಣೆ ಬರಹದಲ್ಲಿ ದೇವರು ಅದನ್ನೇ ಬರೆದಿದ್ದರೆ ಅದೇ ಆಗುತ್ತೀಯಾ. ನೀನು ಯಾವುದೇ ಕೆಲಸ ಮಾಡಿದ್ದರೂ 100% ಶ್ರಮ ಹಾಕಿ ಕೆಲಸ ಮಾಡು ಉಳಿದಿದ್ದು ದೇವರಿಗೆ ಬಿಟ್ಟಿದ್ದು ಎನ್ನುತ್ತೀನಿ' ಎಂದು ತನುಜಾ ಹೇಳಿದ್ದಾರೆ.
