Asianet Suvarna News Asianet Suvarna News

ವಾರಕ್ಕೊಮ್ಮೆ ಕೆಲಸ ಮಾಡಿದ್ರೆ ಎರಡು ದಿನ ರೆಸ್ಟ್‌ ಬೇಕು; ಗಂಡನ ಸಪೋರ್ಟ್‌ಗೆ ಶ್ವೇತಾ ಚಂಗಪ್ಪ ಮೆಚ್ಚುಗೆ

ಪ್ರತಿ ಕೆಲಸ ಮಾಡುವ ತಾಯಂದಿರು ಗ್ರೇಟ್. ಅಮ್ಮ ಮತ್ತು ಗಂಡನ ಸಪೋರ್ಟ್‌ ಹೊಗಳಿದ ಶ್ವೇತಾ...

My biggest support is my husband and mother say Swetha Changappa vcs
Author
First Published Dec 7, 2023, 1:33 PM IST

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚಂಗಪ್ಪ ಟ್ರಾನ್ಸ್‌ಫಾರ್ಮೆಷನ್‌ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ. ತಾಯಿ ಆದ ಮೇಲೆ ಶ್ವೇತಾ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಚಿಕ್ಕ ವಯಸ್ಸಿನಿಂದ ಅಜ್ಜ-ಅಜ್ಜಿಗೂ ಗೊತ್ತು ಶ್ವೇತಾ ಯಾರೆಂದು, ಹೀಗೆ ಕೆಲಸ ಮತ್ತು ಮನೆ ಹೇಗೆ ಮ್ಯಾನೇಜ್ ಮಾಡುತ್ತಾರೆಂದು ಹಂಚಿಕೊಂಡಿದ್ದಾರೆ.

ನನ್ನ ಜೀವನದಲ್ಲಿ ಮೊದಲ ಪ್ರಾಮುಖ್ಯತೆ ಪಡೆಯುವುದು ನನ್ನ ಮಗ ಜಿಯಾನ್. ನನ್ನ ಜೀವನದಲ್ಲಿ ಯಾವುದೇ ಕೆಲಸ ಮುಂದೆ ಬಂದರೂ ನನ್ನ ಮಗನ ಮುಂದೆ ಯಾವುದೂ ಇಲ್ಲ. ಅವನಿಗಾಗಿ ಯಾವ ರೀತಿ ತ್ಯಾಗ ಬೇಕಿದ್ದರೂ ಮಾಡುತ್ತೀನಿ. ದೇವರ ಆಶೀರ್ವಾದದಿಂದ ನನಗೆ ದೊಡ್ಡ ಸಪೋರ್ಟ್ ಅಂದ್ರೆ ಅಮ್ಮ ಮತ್ತು ಗಂಡ. ಕೆಲಸ ಅಂತ ನಾನು ಬ್ಯುಸಿಯಾಗಿರುವಾಗ ನನ್ನ ಮಗನನ್ನು ಇಬ್ಬರೂ ನೋಡಿಕೊಳ್ಳುತ್ತಾರೆ. ನನ್ನ ವೃತ್ತಿ ಬದುಕಿನಲ್ಲಿರುವ ಹಲವು ಕಮಿಟ್ಮೆಂಟ್ ಬ್ಯುಸಿಯಲ್ಲಿ ನಾನಿರುತ್ತೀನಿ ಅದನ್ನು ಅರ್ಥ ಮಾಡಿಕೊಂಡು ನನಗೆ ಸಪೋರ್ಟ್ ಮಾಡುತ್ತಾರೆ ಎಂದು ಶ್ವೇತಾ ಚಂಗಪ್ಪ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅಳು ಮುಂಜಿ ಗೀತಾ ನಿಮಿಷಕ್ಕೊಂದು ಎಕ್ಸ್‌ಪ್ರೆಷನ್ ನೋಡಿ 'ಹಾ ಹಾ ಸುಂದ್ರಿ' ಎಂದ ನೆಟ್ಟಿಗರು!

ನನ್ನ ಕೆಲಸ ಹೇಗೆಂದರೆ ವಾರಕ್ಕೊಮ್ಮೆ ಕೆಲಸ ಮಾಡಿದರೂ ಎರಡು ಮೂರು ದಿನ ವಿಶ್ರಾಂತಿ ತೆಗೆದುಕೊಳ್ಳುವುದು ತುಂಬಾ ಅಗತ್ಯ ಅನಿಸುತ್ತದೆ. ನನ್ನ ಜೀವನದ ಹಲವು ಜವಾಬ್ದಾರಿಗಳನ್ನು ಸುಲಭವಾಗಿ ಮ್ಯಾನೇಜ್ ಮಾಡಲು ನನಗೆ ಅಮ್ಮ ಮತ್ತು ಗಂಡ ಸಪೋರ್ಟ್ ಮಾಡುತ್ತಾರೆ. ಮನೆ ಸಂಸಾರ ಮತ್ತು ಕೆಲಸ ಮ್ಯಾನೇಜ್ ಮಾಡುವುದು ತುಂಬಾ ದೊಡ್ಡ ಟಾಸ್ಕ್‌. ಪ್ರತಿ ದಿನ ಕೆಲಸ ಮಾಡಿಕೊಂಡು ಮನೆ ಮ್ಯಾನೇಜ್ ಮಾಡುವವರಿಗೆ ನನ್ನದೊಂದು ನಮಸ್ಕಾರ ಎಂದು ಶ್ವೇತಾ ಚಂಗಪ್ಪ ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ನನ್ನ ಫಿಟ್ನೆಸ್‌ ಮತ್ತು ಬ್ಯೂಟಿ ಬಗ್ಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಅದರಲ್ಲೂ ನಾನು ತಾಯಿ ಆದ ಮೇಲೆ ಹೆಚ್ಚಾಗಿದೆ. ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವೆ. ನಾನು ಸ್ಕೂಲ್‌ನಲ್ಲಿದ್ದಾಗ ಆಕ್ಟಿಂಗ್ ಮಾಡುವುದಕ್ಕೆ ಶುರು ಮಾಡಿದ್ದರೂ 16-17ನೇ ವಯಸ್ಸಿಗೆ ನನ್ನ ವಯಸ್ಸು ಮೀರಿದ ಪಾತ್ರಗಳನ್ನು ಮಾಡಿರುವೆ. ಹೀಗಾಗಿ ಜನರಿಗೆ ನನ್ನ ವಯಸ್ಸಿನ ಬಗ್ಗೆ ಜಾಸ್ತಿ ಗೊಂದಲವಿದೆ, ಪ್ರಶ್ನೆ ಮಾಡುತ್ತಾರೆ ಎಂದಿದ್ದಾರೆ ಶ್ವೇತಾ.

ಪ್ರಭಾಸ್‌ಗೆ ಮದುವೆ ಆಗುವ ಯೋಗವಿಲ್ಲ; ಭವಿಷ್ಯ ನುಡಿದು ಆತಂಕಕ್ಕೆ ಸಿಲುಕಿದ ವೇಣು ಸ್ವಾಮಿ!

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಿಂದ ಜನಪ್ರಿಯತೆ ಪಡೆಯುವುದು ತುಂಬಾ ಸುಲಭ. ಸೆಲೆಬ್ರಿಟಿಗಳು ಹುಟ್ಟಿಕೊಳ್ಳುತ್ತಾರೆ ಪ್ರಾಜೆಕ್ಟ್‌ ಒಪ್ಪಿಕೊಂಡು ಕೆಲಸ ಮಾಡುತ್ತಾರೆ, ಸಂಪೂರ್ಣವಾಗಿದೆ ಎಂದು ಪೋಸ್ಟ್ ಹಾಕುತ್ತಾರೆ. ಆದರೆ ಅವರನ್ನು ತೆಎ ಮೇಲೆ ಕಂಡು ಹಿಡಿಯುವುದೇ ಒಂದು ಚಾಲೆಂಜ್. ಜನರ ಕಣ್ಣು ಮುಂದೆ ಸದಾ ಕಾಣಿಸಿಕೊಳ್ಳಲು ಇರುವುದೇ ಸೋಷಿಯಲ್ ಮೀಡಿಯಾ ಎಂದು ಶ್ವೇತಾ ಹೇಳಿದ್ದಾರೆ.

Follow Us:
Download App:
  • android
  • ios