Asianet Suvarna News Asianet Suvarna News

ಪ್ರಭಾಸ್‌ಗೆ ಮದುವೆ ಆಗುವ ಯೋಗವಿಲ್ಲ; ಭವಿಷ್ಯ ನುಡಿದು ಆತಂಕಕ್ಕೆ ಸಿಲುಕಿದ ವೇಣು ಸ್ವಾಮಿ!

44 ವರ್ಷ ಆದ್ರೂ ಮದ್ವೆ ಆಗಿಲ್ಲ. ಪ್ರಭಾಸ್ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ವೇಣು ಸ್ವಾಮಿ ಭವಿಷ್ಯ....
 

Tollywood actor Prabhas will not marry says astrologer Venu Swamy vcs
Author
First Published Dec 7, 2023, 10:07 AM IST

ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮದುವೆ ಅವರ ಮನೆ ಮಂದಿಗೆ ಮಾತ್ರವಲ್ಲ ಅದೆಷ್ಟೋ ಅಭಿಮಾನಿಗಳ ಕನಸ್ಸಾಗಿ ಉಳಿದುಬಿಟ್ಟಿದೆ. ಈಗ ಮದುವೆ ಆಗುತ್ತಾರೆ ಆಗ ಮದುವೆ ಆಗುತ್ತಾರೆ ಅನ್ನೋ ಗಾಸಿಪ್ ಕೇಳಿ ಕೇಳಿ ಬೇಸರವಾಗಿದೆ. ಈ ನಡುವೆ ಸಾಕಷ್ಟು ಜ್ಯೋತಿಷಿಗಳು ಭವಿಷ್ಯ ನುಡಿದು ನುಡಿದು ಸುಸ್ತಾಗಿದ್ದಾರೆ. ಅದರಲೂ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ನೀಡುವ ಹೇಳಿಕೆಗಳು ಸತ್ಯವಾಗುತ್ತದೆ ಅನ್ನೋ ಮಾತುಗಳಿದೆ.

ಇತ್ತೀಚಿಗೆ ಪ್ರಭಾಸ್‌ ಮದುವೆ ಆಗುವ ಯೋಗವಿಲ್ಲ ಎಂದು ವೇಣು ನೀಡಿರುವ ಹೇಳಿಕೆ ವೈರಲ್ ಆಗಿದೆ. ಪ್ರಭಾಸ್ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ. ಅವರಿಗೆ ಮದುವೆ ಆಗುವ ಯೋಗವಿಲ್ಲ. ಅವರ ಮದುವೆ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ ಎಂದು ವೇಣು ಸ್ವಾಮಿ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಪ್ರಭಾಸ್ ಮದುವೆ ಬಗ್ಗೆ ಮಾತ್ರವಲ್ಲ ಅವರ ವೈಯಕ್ತಿಕ ಬದುಕಿನ ಬಗ್ಗೆನೂ ಕಾಮೆಂಟ್ ಮಾಡಿದ್ದಾರೆ. ಪ್ರಭಾಸ್ ಬಾಹುಬಲಿ ಚಿತ್ರದ ನಂತರ ಉತ್ತುಂಗಕ್ಕೆ ಹೋಗಿದ್ದಾರೆ ಆದರೆ ಇನ್ನು ಅವರ ಡೌನ್ ಫಾನ್ ಶುರುವಾಗುತ್ತೆ ಎಂದು ಹೇಳುದ್ದಾರೆ. 

ಪವನ್​ ಕಲ್ಯಾಣ್​, ಸಮಂತಾ, ಜಿರಂಜೀವಿ ಪುತ್ರಿಗೆ ಇನ್ನೆಷ್ಟು ಮದ್ವೆ? ಜ್ಯೋತಿಷಿ ವೇಣು ಸ್ವಾಮಿ ರಿವೀಲ್​

ವೇಣು ಸ್ವಾಮಿಗಳ ಮಾತುಗಳಿಂದ ಅಭಿಮಾನಿಗಳು ಗರಂ ಆಗಿದ್ದಾರೆ. ನಮ್ಮ ನೆಚ್ಚಿನ ನಟನ ಸಿನಿಮಾಗಳನ್ನು ನಾವು ನೋಡಬೇಕು ಅವರ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ಏಷ್ಯಾ ನಟ ಆಗಬೇಕು ಅನ್ನೋದು ನಮ್ಮ ಆಸೆ ಎಂದಿದ್ದಾರೆ. ಅಲ್ಲದೆ ಪ್ರಭಾಸ್ ಮದುವೆ ಆಗಲ್ಲ ಅನ್ನೋದು ಸತ್ಯವಲ್ಲ...ಒಂದು ಗಂಡಿಗೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ...ಪ್ರಭಾಸ್ ಖಂಡಿತಾ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ವೇಣು ಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. 

ಸಮಂತಾ ಡಿವೋರ್ಸ್​ ವಿಷ್ಯ ಮೊದ್ಲೇ ಹೇಳಿದ್ದ ಜ್ಯೋತಿಷಿಯಿಂದ ಅಲ್ಲು ಅರ್ಜುನ್ 10 ವರ್ಷದ ಭವಿಷ್ಯ!

ಸ್ಟಾರ್ ನಟರು ಸಾವಿನ ಬಗ್ಗೆ ಸುಳಿವು ಕೊಟ್ಟ ಜ್ಯೋತಿಷಿ ವೇಣು ಸ್ವಾಮಿ:

ಪ್ರತಿ ಸಲವೂ ಸ್ಟಾರ್ ನಟರು ಅಥವಾ ಸಿನಿಮಾ ಉದ್ದೇಶಿಸಿ ಮಾತನಾಡುವ ವೇಣು ಸ್ವಾಮಿ ಈ ಸಲ ಸುಳಿವು ಕೊಡದೆ ಭವಿಷ್ಯ ನುಡಿದಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟರು ಖಂಡಿತಾ 2026ರೊಳಗೆ ಅನಾರೋಗ್ಯದಿಂದ ಬಳಲುತ್ತಾರೆ ಇಲ್ಲವಾದರೆ ಅಗಲುತ್ತಾರೆ. ಸಾವಾಗುವುದು ಕನ್ಫರ್ಮ್‌  ಎಂದಿದ್ದಾರೆ ಆದರೆ ಯಾರು ಆ ಇಬ್ಬರು ಎಂದು ಮಾತ್ರ ರಿವೀಲ್ ಮಾಡಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಗೊಂದಲ ಸೃಷ್ಟಿ ಮಾಡಿದೆ. 

Follow Us:
Download App:
  • android
  • ios