'ಜೋಡಿ ನಂ 1' ವೇದಿಕೆಯಲ್ಲಿ ಮಗಳಿಗೆ ನಾಮಕರಣ ಮಾಡಿದ ಕಾಮಿಡಿ ಕಿಲಾಡಿಗಳು!

ಗೋವಿಂದೇ ಗೌಡ ಮತ್ತು ದಿವ್ಯಾ ದಂಪತಿ ಮಗಳಿಗೆ ಜೀ ಕನ್ನಡ ರಿಯಾಲಿಟಿ ಶೋನಲ್ಲಿ ನಾಮಕರಣ ಮಾಡಿದ್ದಾರೆ. 
 

Govinde gowda divya daughter naming ceremony in zee kannada jodi no 1 reality show vcs

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಹಾಸ್ಯ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯವಾದ ದಿವ್ಯಾ ಮತ್ತು ಗೋವಿಂದೇ ಗೌಡ ಇದೀಗ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕನ್ನಡ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿರುವ ಈ ಜೋಡಿ ಇದೇ ಕಾರ್ಯಕ್ರಮದಲ್ಲಿ ತಮ್ಮ ಮಗಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಜೀ ವಾಹಿನಿ ಜೊತೆ ಹೊಂದಿರುವ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. 

'ಜೀ ಕನ್ನಡ ನಮಗೆ ಜೀವನ ಕಟ್ಟಿಕೊಟ್ಟು ಬದುಕು ರೂಪಿಸಿದ ಪುಣ್ಯ ವೇದಿಕೆ. ನಮ್ಮ ಮಗುವಿನ ನಾಮಕರಣವನ್ನು ಜೋಡಿ ನಂಬರ್ ಒನ್ ವೇದಿಕೆಯಲ್ಲಿ ಮಾಡುವ ಮೂಲಕ ಕಲಾವಿದರೆಲ್ಲ ಒಂದೇ ಕುಟುಂಬದವರು ಎಂದು ಮತ್ತೆ ನಿರೂಪಿಸಿದ ವೇದಿಕೆಗೆ ದೊಡ್ಡದೊಂದು ನಮನ' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಗೋವಿಂದೇ ಗೌಡ. 

Comedy Khiladigalu: ಸೀಮಂತದ ದಿನವೇ ನೇತ್ರದಾನಕ್ಕೆ ಸಹಿ ಮಾಡಿದ ಗೋವಿಂದೇ ಗೌಡ ಕುಟುಂಬ!

ದಿವ್ಯಾ ಮತ್ತು ಗೋವಿಂದೇ ಗೌಡ ದಂಪತಿ ಮಗಳಿಗೆ ಸಂಸ್ಕೃತಿ ಎಂದು ನಾಮಕರಣ ಮಾಡಿದ್ದಾರೆ. 

'ನಾವು ಊರಿನವರು ಇಲ್ಲಿಗೆ ಬಂದು ಜೀವನ ಕಟ್ಟು ಕೊಂಡ ರೀತಿನೇ ಬೇರೆ. ಜೀವನ ದೊಡ್ಡ ಪಾಠ ಕಲಿಸಿತ್ತು. ಬಟ್ಟೆ ಅಥವಾ ವಾತಾವರಣಕ್ಕಿಂತ ಹೆಚ್ಚಾಗಿ ದಿನ ಕೆಲಸ ಸಿಗಬೇಕು ದುಡಿಮೆ ಸಿಗಬೇಕು ಅದರಿಂದ ಜೀವನ ಕಟ್ಟಿಕೊಳ್ಳಬೇಕು ಅನ್ನೋ ಮೈಂಡ್‌ ಸೆಟ್‌ ಇತ್ತು. ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದು ನನಗೆ ದೊಡ್ಡ ಸಾಧನೆ. 1 ರೂಪಾಯಿನೂ ಇಲ್ಲದೆ ಬಂದವನು ಇಲ್ಲಿ ಬದುಕುತ್ತಿರುವ ಇಲ್ಲಿ ಜೀವನ ಮಾಡುತ್ತಿರುವೆ ನಿನ್ನನ್ನು ಮದುವೆಯಾಗಿರುವೆ ಅಂದ್ರೆ ನನಗೆ ನಂಬಲು ಆಗುತ್ತಿಲ್ಲ. ನನ್ನ ತಾಯಿ ಈಗ ನನ್ನ ಜೊತೆಗಿಲ್ಲ ಆದರೆ ಈಗಲ್ಲೂ ಅವರಿದ್ದಾರೆ ಅಂತ ನಂಬಿರುವೆ. ನನ್ನ ತಾಯಿ ಹಾಡುಗಾರತಿ ಅವರಿದ್ದರೆ ಇನ್ನೂ ನಾಲ್ವರಿಗೆ ಕೆಲಸ ಸಿಗುತ್ತದೆ ಅಂತ ಅವರಿಗೆ ಒಪ್ಪಿಸುತ್ತಿದ್ದರು. ಅವರು ಹಾಡುಗಾರತಿ. ಕೊನೆಯಲ್ಲಿ ಹೇಗೆ ಆಯ್ತು ಅಂದ್ರೆ ಅವರಿಗೆ ಗಂಟಲು ಕ್ಯಾನ್ಸರ್ ಆಗುತ್ತೆ. ಗಂಟಲಲ್ಲಿ ತೂತ್ತು ಮಾಡುತ್ತಾರೆ. ಅಷ್ಟು ಚೆನ್ನಾಗಿ ಹಾಡುವವರಿಗೆ ಮಾತು ನಿಂತಿತ್ತು. ಅಕ್ಕ ಪಕ್ಕ ಊರಿನಲ್ಲಿ ನಾನು ಮಕ್ಕಳಿಗೆ ನಾಟಕ ಮತ್ತು ಪಾಠ ಮಾಡುತ್ತಿದ್ದೆ ಅವರನ್ನು ಮನೆಗೆ ಕರೆದುಕೊಂಡು ಬಂದಾಗ ತಾಯಿ ಅಡುಗೆ ಮಾಡಿ ಹಾಕುತ್ತಿದ್ದರು. ಅಕ್ಕ ಪ್ರಶ್ನೆ ಮಾಡಿದಾಗ ಮಾತನಾಡಲು ಬಾರದಿದ್ದರೂ ಅಕ್ಕಳಿಗೆ ಹೇಳುತ್ತಾರೆ ಅವನಿಗೆ ಬೈಯ ಬೇಡ ಅವನು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾನೆ ಅಂತ. ಹೀಗಾಗಿ ಇಲ್ಲಿ ಬಂದು ಜೀವನ ಕಟ್ಟಿರುವುದು ನನಗೆ ಒಂದು ಸಾಧನೆ. ಇಲ್ಲಿ ಬಂದು ಬಟ್ಟೆ ಫ್ಯಾಷನ್ ಬಗ್ಗೆ ಗಮನ ಕೊಡುತ್ತಿರಲಿಲ್ಲ ಏಕೆಂದರೆ ಸರಳವಾಗಿ ಬಟ್ಟೆ ಧರಿಸಿ  ಸರಳವಾಗಿ ಜೀವನ ಮಾಡಿದ್ದರೆ ನಮ್ಮನ್ನು ನಾವು ಮೇಂಟೈನ್ ಮಾಡುವುದು ಸುಲಭ' ಎಂದು ಗೋವಿಂದೇ ಗೌಡ ವೇದಿಕೆ ಮೇಲೆ ಮಾತನಾಡುತ್ತಾರೆ. ಆಗ ಪತಿಗೆ ಸರ್ಪ್ರೈಸ್ ಕೊಡಬೇಕು ಎಂದು ಮೊದಲ ಬಾರಿ ಪುತ್ರಿಯನ್ನು ವೇದಿಕೆ ಮೇಲೆ ಕರೆಸಿಕೊಳ್ಳುತ್ತಾರೆ. 

ಜೀ ಕನ್ನಡದಲ್ಲಿ ಜೋಡಿ ಜೀವಗಳ ದಾಂಪತ್ಯದ ಉತ್ಸವ ಜೋಡಿ ನಂ 1

'ನಮ್ಮ ಜೀವನ ಶುರುವಾಗಿದ್ದು ಜೀ ಕನ್ನಡ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಇಲ್ಲಿ ನೀನು ಸಿಕ್ಕಿದೆ ಇಲ್ಲಿಂದ ನಮ್ಮ ಮತ್ತೊಂದು ಹೊಸ ಜೀವನ ಶುರುವಾಯ್ತು. ನಮ್ದು ಕುಟುಂಬ ಅಂತ ಬಾಯಿ ಮಾತಿನಲ್ಲಿ ಹೇಳುತ್ತಿಲ್ಲ ಈ ವಾಹಿನಿ. ಹೀಗಾಗಿ ಈ ಕುಟುಂಬದ ಜೊತೆ ನಾವು ನಮ್ಮ ಮಗಳಿಗೆ ನಾಮಕರಣ ಮಾಡಬೇಕು ಅಂದುಕೊಂಡಿರುವೆ.' ಎಂದು ನಾಮಕರಣ ಮಾಡುತ್ತಾರೆ.

 

Latest Videos
Follow Us:
Download App:
  • android
  • ios