ಸೀತಾರಾಮ ಸೀತೆಯ ಬಳಿ ಬಂದಿರೋ ಮಂಗ ಏನು ಮಾಡಿತು ನೋಡಿ... ವಿಡಿಯೋ ವೈರಲ್ ಆಗಿದ್ದು ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗ್ತಿದೆ.
ರಾಮಾಯಣದಲ್ಲಿ ಹನುಮನಿಗೆ ವಿಶೇಷ ಮನ್ನಣೆ, ಸ್ಥಾನಮಾನ, ಗೌರವವಿದೆ. ಸೀತಾ-ರಾಮರ ಭಕ್ತನಾಗಿರುವ ಹನುಮನ ಬಗ್ಗೆ ಇರುವಷ್ಟು ಕಥೆ, ಐತಿಹ್ಯಗಳು ಅಷ್ಟಿಷ್ಟಲ್ಲ. ಸೀತಾಪಹರಣದ ಸಮಯದಲ್ಲಿ ಹನುಮನ ಪಾತ್ರ ಬಲು ದೊಡ್ಡರು. ಅದು ರಾಮಾಯಣದ ಮಾತಾಯಿತು ಬಿಡಿ. ಆದರೆ ರಿಯಲ್ ಲೈಫ್ ಸೀತೆಯ ಬಳಿ ಬಂದ ಈ ಹನುಮ ಏನ್ ಮಾಡಿದ ನೋಡಿ. ಅಷ್ಟಕ್ಕೂ ಈ ಸೀತೆ ಬೇರೆ ಯಾರೂ ಅಲ್ಲ, ಸೀತಾರಾಮ ಸೀರಿಯಲ್ ಸೀತೆ. ಅರ್ಥಾತ್ ವೈಷ್ಣವಿ ಗೌಡ.
ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ವೈಷ್ಣವಿ ಅವರು ಆಗಾಗ್ಗೆ ವಿಡಿಯೋ, ರೀಲ್ಸ್ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ದೇವಸ್ಥಾನವೊಂದರ ಬಳಿ ಹೋದಾಗ ಮಂಗನ ಮರಿಯೊಂದು ಅವರ ಬಳಿ ಬಂದಿದೆ. ವೈಷ್ಣವಿ ಅವರು ಕೈ ಚಾಚಿದಾಗ ಅವರ ಕೈಯತ್ತ ಮರಿ ನೋಡಿದೆ. ಸಾಮಾನ್ಯವಾಗಿ ಹೀಗೆ ಮಂಗಗಳು ಮಾಡುವುದು ಮಾಮೂಲೇ. ಭಕ್ತಾದಿಗಳು ತರುವ ಹಣ್ಣುಗಳ ಮೇಲೆ ಅವುಗಳ ಕಣ್ಣು ನೆಟ್ಟಿರುತ್ತದೆ. ಆದರೂ ಜನರಿಗೆ ಅವುಗಳನ್ನು ನೋಡಿದ ತಕ್ಷಣ ಭಯವಾಗುವುದು ಇದೆ. ಆದರೆ ವೈಷ್ಣವಿ ಅವರು ತಮ್ಮ ಕೈ ಚಾಚಿದ್ದಾರೆ. ಆಗ ಮಂಗ ಅವರ ಕೈಯಿಂದ ಸುಲಭದಲ್ಲಿ ಹಣ್ಣನ್ನು ತೆಗೆದುಕೊಂಡು ಹೋಗಿದೆ.
ತಿಳಿಯದೇ ತಪ್ಪಾಗೋಯ್ತು, ಪ್ಲೀಸ್ ಕ್ಷಮಿಸಿ ಬಿಡಿ... ಅಭಿಮಾನಿಗಳ ಕ್ಷಮೆ ಕೋರಿದ ಸೀತಾರಾಮ ನಟಿ ವೈಷ್ಣವಿ ಗೌಡ
ಇದಾದ ಬಳಿ ವೈಷ್ಣವಿ ಅವರು ಸ್ವಲ್ಪ ದೂರದಲ್ಲಿ ಕೋತಿಗಳಿಗೆ ಬಾಳೆಹಣ್ಣುಗಳನ್ನು ನೀಡಿದ್ದು, ಅದನ್ನೂ ಈ ರೀಲ್ಸ್ನಲ್ಲಿ ನೋಡಬಹುದು. ಪ್ರಾಣಿಗಳ ಮೇಲೆ ನಟಿಗೆ ಇರುವ ಪ್ರೀತಿಯ ಬಗ್ಗೆ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ, ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.
ಅಷ್ಟಕ್ಕೂ ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಸನ್ನಿಧಿ ಎಂದೇ ಫೇಮಸ್ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಆಗಾಗ್ಗೆ ಸಕತ್ ಪೋಸ್ ಕೊಟ್ಟು ಫೋಟೋ, ವಿಡಿಯೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್, ಅರೆಬರೆ ಡ್ರೆಸ್ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ.
ಮಾತಾಡೋದ್ ಹೇಗಂತ ಹೇಳಿಕೊಡು... ಎನ್ನುತ್ತಲೇ ಭರ್ಜರಿ ರೀಲ್ಸ್ ಮಾಡಿದ ಸೀತಾಳಿಗೆ ಫ್ಯಾನ್ಸ್ ಫಿದಾ...

