ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ,  ನಟ ಶಿಯಸ್ ಕರೀಮ್ ಅವರು ಹಿಂದೂ ನಟಿ ಅನುಮೊಲ್ ಅವರಿಗೆ ಗೋಮಾಂಸ ತಿನ್ನಲು ಒತ್ತಾಯಿಸಿದ್ದಾರೆ. ನಟಿ ನಿರಾಕರಿಸಿದಾಗ, ಆತ ಆಕೆಯನ್ನು 'ನೀನು ಬಿಜೆಪಿ ಬೆಂಬಲಿಗಳೇ?' ಎಂದು ಪ್ರಶ್ನಿಸಿದ್ದು, ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಂದಿ ಮಾಂಸ ತಿನ್ನು ಅಂದ್ರೆ ಸುಮ್ಮನಿರುತ್ತಿದ್ದರೆ? ನಟನ ವಿರುದ್ಧ ನೆಟ್ಟಿಗರ ಆಕ್ರೋಶ:

ಹಿಂದೂ ಸಮುದಾಯದಲ್ಲಿ ಗೋವನ್ನು ದೇವರೆಂದೇ ಪೂಜಿಸಲಾಗುತ್ತದೆ. ಮುಕ್ಕೋಟಿ ದೇವರು ಗೋವಿನಲ್ಲಿ ನೆಲೆಸಿರುತ್ತವೆ ಎಂದು ಹಿಂದೂ ಜನರು ನಂಬುತ್ತಾರೆ. ಹೀಗಾಗಿ ಹಿಂದು ಸಮುದಾಯದ ಜನ ಬೀಫ್ ತಿನ್ನುವುದಿಲ್ಲ, ಅದು ಅವರ ನಂಬಿಕೆಗೆ ವಿರುದ್ಧವಾದುದು. ಆದರೆ ಗೋಮಾಂಸವನ್ನು ಕದ್ದು ತಿನ್ನುವ ಹಿಂದೂಗಳ ಸಂಖ್ಯೆ ಏನು ಕಡಿಮೆ ಏನಿಲ್ಲ, ಮುಸ್ಲಿಮರಿಗೆ ಹಂದಿ ಮಾಂಸ ಹೇಗೆ ನಿಷೇಧವೋ ಅವರಿಗೆ ಹೇಗೆ ಹಂದಿ ಮಾಂಸ ತಿನ್ನಿ ಅಂತ ಒತ್ತಾಯಿಸಲಾಗುವುದಿಲ್ಲವೋ ಹಾಗೆಯೇ ಹಿಂದೂಗಳಿಗೂ ಗೋಮಾಂಸ ತಿನ್ನುವಂತೆ ಒತ್ತಾಯಿಸುವಂತಿಲ್ಲ, ಆದರೆ ಕೇರಳದಲ್ಲಿ ಗೋಮಾಂಸವೆಂಬುದು ಬಹುತೇಕರ ಸಾಮಾನ್ಯ ಆಹಾರವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ಬಾಸ್ ವಿನ್ನರ್ ನಟಿಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ ನಟ

ಇಲ್ಲಿನ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಗೋಮಾಂಸವೆಂಬುದು ಸಾಮಾನ್ಯವಾಗಿದ್ದು, ಇಲ್ಲಿ ಕೆಲ ಹಿಂದೂಗಳು ಗೋಮಾಂಸವನ್ನು ಸಹಜವೆಂಬಂತೆ ತಿನ್ನುತ್ತಾರೆ. ಆದರೆ ತಿನ್ನದವರನ್ನು ಇಲ್ಲಿ ಗೋಮಾಂಸ ತಿನ್ನಿ ಎಂದು ಯಾರು ಒತ್ತಾಯಿಸುವಂತಿಲ್ಲ, ಹಾಗೂ ಒತ್ತಾಯಿಸಲು ಬಾರದು ಕೂಡ ಆಹಾರದ ಆಯ್ಕೆ ಅವರವರ ಇಷ್ಟ. ಆದರೆ ಇಲ್ಲೊಂದು ಕಡೆ ಗೋಮಾಂಸ ನಿರಾಕರಿಸಿದ ಹಿಂದೂ ನಟಿಗೆ ನಟನೋರ್ವ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ್ದಲ್ಲದೇ ಆಕೆ ಗೋಮಾಂಸ ನಿರಾಕರಿಸಿದ್ದಕ್ಕೆ ಬಿಜೆಪಿ ಬೆಂಬಲಿಗರ ಎಂದು ಪ್ರಶ್ನೆ ಮಾಡಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವೀಡಿಯೋ ವೈರಲ್ ಆಗ್ತಿದ್ದಂತೆ ಮಾಡೆಲ್ ಶಿಯಸ್ ವಿರುದ್ಧ ತೀವ್ರ ಆಕ್ರೋಶ

ಹೌದು ಕೇರಳದಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇರಳದ ಬಿಗ್‌ಬಾಸ್ ಸೀಸನ್ 7ರ ವಿನ್ನರ್ ಹಾಗೂ ಟಿವಿ ನಟಿ ಹಾಗೂ ನಿರೂಪಕಿ ಆಗಿರುವ ಅನುಮೊಲ್ ಆರ್ ಎಸ್ ಅಥವಾ ಅನ್‌ಮೋಲ್ ಅನುಕುಟ್ಟಿ ಎಂಬುವವರಿಗೆ ನಟ ಹಾಗೂ ಮಾಡೆಲ್ ಆಗಿರುವ ಶಿಯಸ್ ಕರೀಮ್ ಅವರು ದನದ ಮಾಂಸ ತಿನ್ನುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ದನದ ಮಾಂಸ ತಿನ್ನುವುದಕ್ಕೆ ನಟಿ ಅನ್‌ಮೋಲ್ ನಯವಾಗಿ ನಿರಾಕರಿಸಿದ್ದಾರೆ. ಆದರೆ ಇದನ್ನು ಸಹಜವಾಗಿ ಸ್ವೀಕರಿಸದ ಶಿಯಸ್ ಕರೀಮ್ ಆಕೆಗೆ ನೀನು ಬಿಜೆಪಿ ಬೆಂಬಲಿಗಳ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಶಿಯಸ್ ಕರೀಮ್ ನಡೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಆತ ಅನುಮೋಲ್ ಬೀಪ್‌ ಅನ್ನು, ತಿನ್ನು ಅನು ತಿನ್ನು ಎಂದು ಹೇಳುವುದನ್ನು ಕಾಣಬಹುದು. ಆದರೆ ಆಕೆ ನಿರಾಕರಿಸಿದಾಗ ಆತ ನೀನು ಬಿಜೆಪಿ ಬೆಂಬಲಿಗಳ ಎಂದು ಕೇಳಿದ್ದಾನೆ.

ಇದನ್ನೂ ಓದಿ: ಬೀದಿ ಕಾಳಗದ ವೇಳೆ ಅಪ್ಪನ ರಕ್ಷಣೆಗೆ ಗನ್ ಹೊರತೆಗೆದ ಮಗಳು: ವೀಡಿಯೋ ಭಾರಿ ವೈರಲ್

ಅನೇಕರು ಈ ಘಟನೆಯನ್ನು ಕೇರಳ ಸ್ಟೋರಿಗೆ ಹೋಲಿಕೆ ಮಾಡಿದ್ದಾರೆ. ಒಂದು ವೇಳೆ ಆ ಹಿಂದೂ ಮಹಿಳೆ ಆತನಿಗೆ ಹಂದಿ ಮಾಂಸ ತಿನ್ನುವಂತೆ ಹೇಳಿದ್ದರೆ ಆತ ಒಪ್ಪಿಕೊಳ್ಳುತ್ತಿದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತೀವ್ರ ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ: ಮಗಳ ಮೇಲೆ ಅತ್ಯಾ*ಚಾರವೆಸಗಿದ ವ್ಯಕ್ತಿ ಕೊಲೆ: ತಾಯಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Scroll to load tweet…