- Home
- Entertainment
- TV Talk
- Bigg Boss ಮನೆಮಗಳು ಆಮೇಲೆ, ಮೊದ್ಲು ಅಪ್ಪ-ಅಮ್ಮನ ಮಗಳು; ಅವ್ರೇ ಕೇಳಲ್ಲ, ಇವ್ರೆಲ್ಲಾ ಯಾರು? ಐಶ್ವರ್ಯ ಗರಂ
Bigg Boss ಮನೆಮಗಳು ಆಮೇಲೆ, ಮೊದ್ಲು ಅಪ್ಪ-ಅಮ್ಮನ ಮಗಳು; ಅವ್ರೇ ಕೇಳಲ್ಲ, ಇವ್ರೆಲ್ಲಾ ಯಾರು? ಐಶ್ವರ್ಯ ಗರಂ
ಬಿಗ್ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ, ತಮ್ಮ ಡ್ರೆಸ್ನಿಂದಾಗಿ ಟ್ರೋಲ್ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಉಡುಗೆಯ ಬಗ್ಗೆ ಕೇಳಲು ಇವರ್ಯಾರು ಎಂದು ಪ್ರಶ್ನಿಸಿರುವ ಅವರು, ಸಹ-ಸ್ಪರ್ಧಿ ಶಿಶಿರ್ ಜೊತೆಗಿನ ಮದುವೆ ವದಂತಿಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

ಬಿಗ್ಬಾಸ್ ಮನೆಮಗಳು
ಬಿಗ್ಬಾಸ್ ಮನೆಮಗಳು ಎಂದೇ ಫೇಮಸ್ ಆಗಿರೋ ಐಶ್ವರ್ಯ ಸಿಂಧೋಗಿ ಅವರು ಬಿಗ್ಬಾಸ್ನ ಶಿಶಿರ್ ಜೊತೆ ಮೈಚಳಿ ಬಿಟ್ಟು ಸ್ಟೆಪ್ ಹಾಕುತ್ತಿರುವ ಕಾರಣದಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಅವರ ಡ್ರೆಸ್ನಿಂದಾಗಿ ಸಾಕಷ್ಟು ಟ್ರೋಲ್ ಕೂಡ ಆಗುತ್ತಿದ್ದಾರೆ.

ತುಂಬಾ ನೋವಾಗತ್ತೆ
ತಮ್ಮ ಟ್ರೋಲ್ ಬಗ್ಗೆ ತೀವ್ರವಾಗಿ ನೊಂದುಕೊಂಡಿರುವ ಐಶ್ವರ್ಯ ಅವರು, ಇವೆಲ್ಲಾ ತಲೆಗೆ ಹಾಕಿಕೊಳ್ಳಬಾರದು ಎನ್ನಿಸುತ್ತೆ. ಆದರೂ ನೋವಾಗುತ್ತೆ. ಅವರಿಗೆ ನಾನು ಗೊಂಬೆ ರೀತಿ ಇರಬಹುದು. ಆದರೆ ನನಗೂ ಮನಸ್ಸು ಎನ್ನೋದು ಇದೆ. ಏನೇನೋ ಕೆಟ್ಟ ಕಮೆಂಟ್ಸ್ ಹಾಕಿದಾಗ ನೋವಾಗತ್ತೆ ಎಂದು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮೊದಲು ಅಪ್ಪ-ಅಮ್ಮನ ಮಗಳು
ಬಟ್ಟೆಯ ಬಗ್ಗೆ ಕೆಟ್ಟದ್ದಾಗಿ ಕಮೆಂಟ್ಸ್ ಹಾಕ್ತಾರೆ. ಇಂಥವಳನ್ನು ಬಿಗ್ಬಾಸ್ ಮನೆಮಗಳು ಅಂತಾರೆ ಎಂದು ಕಮೆಂಟ್ಸ್ ಹಾಕ್ತಾರೆ ಎಂದಿರೋ ಐಶ್ವರ್ಯ, ನಾನು ಬಿಗ್ಬಾಸ್ ಮನೆಮಗಳು ಆಮೇಲೆ ಮೊದಲಿಗೆ ನನ್ನ ಅಪ್ಪ-ಅಮ್ಮನ ಮಗಳು ಎಂದಿದ್ದಾರೆ.
ಇವರೆಲ್ಲಾ ಯಾರು ಕೇಳೋರು?
ನನ್ನ ಡ್ರೆಸ್ ಬಗ್ಗೆ ನನ್ನ ಅಪ್ಪ-ಅಮ್ಮನೇ ಕೇಳಲ್ಲ. ಇವರೆಲ್ಲಾ ಯಾಕೆ ಕೇಳ್ತಾರೆ. ನನ್ನ ಬಗ್ಗೆ ಇಷ್ಟೆಲ್ಲಾ ನೆಗೆಟಿವ್ ಕಮೆಂಟ್ಸ್ ಯಾಕೆ ಹಾಕ್ತಾರೆ. ತುಂಬಾ ಬೇಸರ ಆಗುತ್ತದೆ. ನನ್ನ ಇಷ್ಟವಾಗಿರುವ ಡ್ರೆಸ್ ನಾನು ಹಾಕ್ತೇನೆ. ಕೇಳುವವರೇ ಕೇಳುವುದಿಲ್ಲ, ಇವರೆಲ್ಲಾ ಯಾರು ಕೇಳೋರು ಎಂದು ಗರಂ ಆಗಿದ್ದಾರೆ ನಟಿ.
ಶಿಶಿರ ಜೊತೆ ಮದುವೆ?
ಅಂದಹಾಗೆ ಶಿಶಿರ್ ಜೊತೆ ಐಶ್ವರ್ಯ ಮದ್ವೆಯಾಗುತ್ತಾರೆ ಎನ್ನುವ ಗುಸುಗುಸು ಇದ್ದದ್ದೇ. ಅದಕ್ಕೆ ಕಾರಣ ಅವರಿಬ್ಬರೂ ರೀಲ್ಸ್ನಲ್ಲಿ ಕಾಣಿಸಿಕೊಳ್ಳುವ ರೀತಿ. ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್ ಪಾರ್ಟನರ್ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.
ಸದ್ಯ ಏನಿಲ್ಲಾ
ಕೆಲವು ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಈ ಜೋಡಿ ಸ್ವಲ್ಪ ಭಿನ್ನ ಪ್ರತಿಕ್ರಿಯೆ ಕೊಟ್ಟಿತ್ತು. ನಮ್ಮ ಅಭಿಮಾನಿಗಳು ಸದಾ ಮದುವೆಯ ಬಗ್ಗೆ ಕೇಳುತ್ತಿರುತ್ತಾರೆ. ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿರುತ್ತಾರೆ, ಆದರೆ ಸದ್ಯ ಏನಿಲ್ಲಾ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

