ಹೇರ್​ಸ್ಟೈಲ್​ ಕುರಿತು ಕುತೂಹಲದ ಮಾಹಿತಿ ಹೇಳಿದ ಮೈಕೆಲ್​! ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಪಾರ್ಟಿ ಮೂಡ್​..

ಬಿಗ್​ಬಾಸ್​ ಖ್ಯಾತಿಯ ಮೈಕೆಲ್​ ಅಜಯ್​ ಅವರು ತಮ್ಮ ಹೇರ್​ಸ್ಟೈಲ್​ ಕುರಿತು ಕುತೂಹಲದ ವಿಷಯಗಳನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್​. 
 

Michael Ajay of Bigg Boss fame has explained some intersting things about  hairstyle suc

ಬಿಗ್​ಬಾಸ್​ನಲ್ಲಿ ಈ ಬಾರಿ ಎಲ್ಲರಿಗಿಂತ ಹೆಚ್ಚು ವಿಭಿನ್ನ ರೀತಿಯಲ್ಲಿ ಗಮನ ಸೆಳೆದವರು ಮೈಕೆಲ್​ ಅಜಯ್​. ಇದಕ್ಕೆ ಕಾರಣ ಇವರ ಕನ್ನಡ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು, ಇಲ್ಲಿಯ ಅನ್ನ ತಿನ್ನುತ್ತಿರುವವರ ಪೈಕಿ ಕೆಲವರಿಗೆ ಕನ್ನಡದ ಒಂದಕ್ಷರವೂ ಬರುವುದಿಲ್ಲ. ಅದೇ ಇನ್ನೊಂದೆಡೆ, ಕನ್ನಡ ಬಂದರೂ ಮಾತೃಭಾಷೆಯಲ್ಲಿ ಮಾತನಾಡುವುದು ಎಂದರೆ ಅಳುಕು. ಅದಕ್ಕಾಗಿಯೇ ಇಂಗ್ಲಿಷ್​, ಹಿಂದಿಯ ಮೊರೆ ಹೋಗಿ ತಾವು ದೊಡ್ಡಮಂದಿ ಎಂದು ಎನಿಸಿಕೊಳ್ಳುತ್ತಿದ್ದಾರೆ. ಇಂಥವರ ನಡುವೆ ಮೈಕೆಲ್​ ಅವರು ಬಿಗ್​ಬಾಸ್​ನಲ್ಲಿ ಮಾತನಾಡಿದ ಕನ್ನಡ ಕೇಳಿ ಎಲ್ಲರೂ ಹೌಹಾರಿದ್ದಂತೂ ನಿಜ. ಕೆಲವು ವಾರಗಳು ಬಿಗ್​ಬಾಸ್​ನಲ್ಲಿ ಇದ್ದು, ಗ್ರ್ಯಾಂಡ್​ ಫಿನಾಲೆಯವರೆಗೆ ತಲುಪದಿದ್ದರೂ ಕನ್ನಡಿಗರ ಮನಸ್ಸಿನಲ್ಲಿ ಈ ನೈಜೇರಿಯನ್​ ಪ್ರಜೆ ಅಚ್ಚೊತ್ತಿ ಉಳಿದಿದ್ದಾರೆ. 
 
ಮಾಡಲ್, ಬಾಸ್ಕೆಟ್ ಬಾಲ್, ಫಿಟ್​ನೆಸ್​ನಿಂದ ಮಾತಾಗಿರುವ ಮೈಕೆಲ್​ ಅವರ ಕನ್ನಡ ಕೇಳಿ ನಟಿ  ಶ್ರುತಿ ಕೂಡ ಅಬ್ಬಾ ಎಂದಿದ್ದರು. ಮೈಕೆಲ್​ ಅವರು ಇನ್ನೂ ಒಂದು ರೀತಿಯಲ್ಲಿ ವಿಶೇಷವಾಗಿ ಕಾಣಿಸಲು ಕಾರಣ ಅವರ ಹೇರ್​ಸ್ಟೈಲ್​. ಅಷ್ಟಕ್ಕೂ ಆಫ್ರಿಕನ್​ನಲ್ಲಿ ಬಹುತೇಕ ಮಂದಿಯ ಕೂದಲು ಇದೇ ರೀತಿ ಇರುತ್ತದೆ. ಆದರೆ ಇಲ್ಲಿ ಮಾತ್ರ ನೋಡುಗರಿಗೆ ಅದು ಕುತೂಹಲ ಎನ್ನಿಸುವುದು ಉಂಟು. ಅಷ್ಟಕ್ಕೂ ಮೈಕೆಲ್​ ಅವರು  ಹೇರ್‌ಸ್ಟೈಲ್‌ನಿಂದಲೇ ಕಿಚ್ಚ ಸುದೀಪ್ ಅವರ ಗಮನ ಸೆಳೆದಿರುವುದಾಗಿ ಅವರು ಒಮ್ಮೆ ಹೇಳಿದ್ದರು. ರೂಪದರ್ಶಿಯೂ ಆಗಿರುವ ಮೈಕೆಲ್ ಅಜಯ್‌ ಅವರಿಗೆ ರಿಯಾಲಿಟಿ ಶೋದಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಆ ಕನಸನ್ನು ಸುದೀಪ್​ ನನಸು ಮಾಡಿದ್ದರು. ನೋಡೊದಕ್ಕೆ ವಿಲನ್ ಥರ ಇದ್ದೀನಿ.. ಆದರೆ, ನಾನು ಒಳ್ಳೆ ಹುಡುಗ ಎಂದು ಅಚ್ಚ ಕನ್ನಡದಲ್ಲಿ ತಮಾಷೆ ಮಾಡುವ ಮೂಲಕ  ಮೈಕೆಲ್​ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. 

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...  


ಇದೀಗ  ಮೈಕೆಲ್​ ಅವರು ತಮ್ಮ ವ್ಲಾಗ್​ನಲ್ಲಿ ತಮ್ಮ ಹೇರ್​ಸ್ಟೈಲ್​ ಕುರಿತು ವಿವರಿಸಿದ್ದಾರೆ. ಈ ಹೇರ್​ಸ್ಟೈಲ್​ಗೆ ಟ್ರೆಡ್​ಲಾಗ್ಸ್​ ಎಂದು ಕರೆಯಲಾಗುತ್ತದೆ ಎಂದಿರುವ ಅವರು, ತಾವು ಯಾವ ಸಲೂನ್​ಗೆ ಹೋಗುತ್ತೇವೆ, ಅಲ್ಲಿ ಹೇಗೆ ಹೇರ್​ಸ್ಟೈಲ್​ ಮಾಡಿಸಿಕೊಳ್ಳುತ್ತೇವೆ ಎಂಬುದನ್ನು ತೋರಿಸಿದ್ದಾರೆ.  ಹೀಗೆ ಹೇರ್​ಸ್ಟೈಲ್​ ಮಾಡುವುದು ಆಫ್ರಿಕನ್​ ಸಲೂನ್​ ನಡೆಸುವವರಿಗೆ ಮಾತ್ರ ಗೊತ್ತು ಎಂದಿರುವ ಮೈಕೆಲ್​ ಅವರು, ಅಲ್ಲಿಯೇ ಹೇರ್​ ಕಟ್ಟಿಂಗ್​ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ, ಪವಿ, ನಮ್ರತಾ, ವಿನಯ್​ , ನಿಶಾನಿ, ಬುಲೆಟ್​ ರಕ್ಷಕ್ ಸೇರಿದಂತೆ ಇತರ ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಭರ್ಜರಿ ಪಾರ್ಟಿಯನ್ನೂ ಮಾಡಿದ್ದಾರೆ. ​ 

ಕನ್ನಡದ ಭಾಷೆ ಮೇಲೆ ಅಷ್ಟೊಂದು ಪ್ರೀತಿ ಮತ್ತು ಗೌರವ ಹೊಂದಿರೋ ಮೈಕಲ್ ತಮ್ಮ ಕೈ ಮೇಲೆ ಮಣ್ಣಿನ ಮಗ ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಂದಹಾಗೆ, ಮೈಕೆಲ್​ ಸದ್ಯ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಇವರು  ಬರ್ಗರ್ ಶಾಪ್ ಕೂಡ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡಬೇಕು ಅನ್ನೋ ಆಸೆಯಿದೆಯಂತೆ.  ಈ ವಿಷಯವನ್ನು ಬಿಗ್​ಬಾಸ್​ನಲ್ಲಿ ಅವರು ಹೇಳಿಕೊಂಡಿದ್ದರು. ನಿಮ್ಮ ಆಸೆ ಬೇಗ ಈಡೇರಲಿ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್​.

ಎರಡೇ ವಾರಕ್ಕೆ ಕಳಿಸಿ ಎಂದ್ರೂ ರನ್ನರ್​ ಅಪ್​ ಮಾಡಿದ್ರು: ನನ್ನ ಉದ್ದೇಶವೇ ಬೇರೆಯಿತ್ತು ಎಂದ ಡ್ರೋನ್​ ಪ್ರತಾಪ್
 

Latest Videos
Follow Us:
Download App:
  • android
  • ios