Asianet Suvarna News Asianet Suvarna News

ಎರಡೇ ವಾರಕ್ಕೆ ಕಳಿಸಿ ಎಂದ್ರೂ ರನ್ನರ್​ ಅಪ್​ ಮಾಡಿದ್ರು: ನನ್ನ ಉದ್ದೇಶವೇ ಬೇರೆಯಿತ್ತು ಎಂದ ಡ್ರೋನ್​ ಪ್ರತಾಪ್

ಬಿಗ್​ಬಾಸ್​ನಲ್ಲಿ ಮೊದಲ ರನ್ನರ್​ ಅಪ್​ ಆಗಿರುವ ಡ್ರೋನ್​ ಪ್ರತಾಪ್​ ಬಿಗ್​ಬಾಸ್​ ಜರ್ನಿ ಕುರಿತು ಹೇಳಿದ್ದೇನು?
 

Drone Pratap who is the first runner up in Bigg Boss say about Bigg Boss journey suc
Author
First Published Feb 6, 2024, 4:29 PM IST

ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ ಎನ್ನುತ್ತಲೇ ಬಿಗ್​ಬಾಸ್​ ರನ್ನರ್​ ಅಪ್​ ಡ್ರೋನ್​ ಪ್ರತಾಪ್​ ಕಲರ್ಸ್​ ಕನ್ನಡ ವಾಹಿನಿಗೆ ಸಂದರ್ಶನ ನೀಡಿದ್ದಾರೆ. ಬಿಗ್​ಬಾಸ್​ನಲ್ಲಿ ಫಿನಾಲೆಯವರೆಗಿನ ತಮ್ಮ ಜರ್ನಿಯ ಕುರಿತು ಅವರು ಕೆಲವೊಂದು ಮಾಹಿತಿಗಳನ್ನು ಶೇರ್​ ಮಾಡಿಕೊಂಡರು.

ನಾನು ಬಿಗ್​ಬಾಸ್ ಮನೆಗೆ ಹೋಗುವಾಗಲೇ ಒಂದು ಅಥವಾ ಎರಡು ವಾರ ಎಂದುಕೊಂಡಿದ್ದೆ. ಎರಡು ವಾರಗಳಲ್ಲಿಯೇ ನನ್ನನ್ನು ಕಳುಹಿಸಿ ಎಂದೂ ಹೇಳಿದ್ದೆ. ಏನೋ ಒಂದು ಉದ್ದೇಶ ಇಟ್ಟುಕೊಂಡು ಬಂದಿದ್ದೆ. ಆ ಉದ್ದೇಶವೇ ಬೇರೆಯಾಗಿತ್ತು. ಅದಕ್ಕೇ ಬೇಗ ಕಳುಹಿಸಿ ಎಂದಿದ್ದೆ. ನಾನು ನನ್ನ ಸಂಸ್ಥೆಯ ಜೊತೆ ಕೆಲವೊಂದು ಮಾತುಕತೆ ಮಾಡಬೇಕಿತ್ತು. ಆದ್ದರಿಂದ ಎರಡೇ ವಾರದಲ್ಲಿ ಹೋಗುವ ಪ್ಲ್ಯಾನ್​ ಮಾಡಿದ್ದೆ. ಈ ಬಗ್ಗೆ ಮುಂಚೆನೇ ಹೇಳಿದ್ದೆ ಕೂಡ. ಆದರೆ ಜನರ ವೋಟ್​ ಹೆಚ್ಚು ಬಂದರೆ ನೀವು ಇರಲೇಬೇಕಾಗುತ್ತದೆ, ನಾವೇನೂ ಮಾಡಲು ಆಗುವುದಿಲ್ಲ ಎಂದಿದ್ದರು. ಅದರಂತೆಯೇ ಆಯಿತು. ನನ್ನನ್ನು ಜನರು ತುಂಬಾ  ಇಷ್ಟಪಟ್ಟು, ಪ್ರೀತಿ ಕೊಟ್ಟರು. ಹೆಚ್ಚು ವೋಟ್​ ಮಾಡಿದರು. ಈ ಹಿನ್ನೆಲೆಯಲ್ಲಿ ನಾನು ಫಿನಾಲೆಯವರೆಗೂ ಉಳಿದುಕೊಂಡೆ ಎಂದಿದ್ದಾರೆ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಡ್ರೋನ್​ ಪ್ರತಾಪ್​, ತಾವು ಏನು ಎಂದು ತೋರಿಸುವ ಉದ್ದೇಶದಿಂದ ಬಿಗ್​ಬಾಸ್​ಗೆ ಹೋಗಿದ್ದೆ. ಇದೇ ನನ್ನ ಉದ್ದೇಶವಾಗಿತ್ತು ಎಂದಿದ್ದರು. 
 

ಡ್ರೋನ್​ ಪ್ರತಾಪ್​ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು?

ಇದೇ ವೇಳೆ, ಫಿನಾಲೆವರೆಗೆ ಹೋಗಲು ನಿಮಗೆ ಬೂಸ್ಟ್​ ಕೊಟ್ಟಿದ್ದು ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಡ್ರೋನ್​ ಪ್ರತಾಪ್​,  ಕೆಲವರು ಆಡಿದಂಥ ಕೆಲವು ಮಾತುಗಳು, ನೀಡಿದಂಥ ಕೆಲವು ಪ್ರತಿಕ್ರಿಯೆಗಳು ನನಗೆ ಬೂಸ್ಟ್​ ಕೊಟ್ಟವು ಎಂದರು. ಬಿಗ್​ಬಾಸ್​​ ಮನೆಯಲ್ಲಿ ರಕ್ಷಕ್​, ವಿನಯ್​, ಈಶಾನಿ, ಮೈಕೆಲ್​ ಸೇರಿದಂತೆ ಕೆಲವರು ಆಡಿದ  ಮಾತುಗಳಿಂದ ನನಗೆ ತುಂಬಾ ನೋವಾಯಿತು. ನಮ್ರತಾ ದೀದೀ ಅವರೂ ಅಪ್ಪ-ಅಮ್ಮನ ಕುರಿತು ಹೇಳಿದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಆದರೆ ನನಗೆ ಗೊತ್ತು. ಎಲ್ಲರೂ  ಆಟಕ್ಕೋಸ್ಕರ ಮಾಡಿದ್ದಾರೆ. ಕೊನೆಗೆ ನಮ್ರತಾ ದೀದೀ, ವಿನಯ್​ ಎಲ್ಲರೂ ಸಾರಿ ಕೇಳಿದ್ರು. ಅಲ್ಲಿಗೇ ಎಲ್ಲವೂ ಮುಗಿಯಿತು. ಆದರೂ ಕೆಲವು ಮಾತುಗಳನ್ನು ನೆನಪಿಸಿಕೊಂಡಾಗ ನೋವಾಗುತ್ತದೆ. ಆದರೆ ಬಿಗ್​ಬಾಸ್​ ಮನೆಯಲ್ಲಿಯೇ ಎಲ್ಲ ಗಲಾಟೆ ಮುಗಿದಿದೆ. ಅಲ್ಲಿ ನಡೆದಿದ್ದನ್ನು ಮರೆತಿದ್ದೇನೆ ಎಂದರು. 

ಅಷ್ಟಕ್ಕೂ ಡ್ರೋನ್​ ಪ್ರತಾಪ್​ ಎಂದಾಕ್ಷಣ ಈಗ ಎಲ್ಲರಿಗೂ ನೆನಪಾಗುವುದು ಬಿಗ್​ಬಾಸ್​. ಬಿಗ್​ಬಾಸ್​ ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಕಷ್ಟು ಶ್ರಮವಹಿಸಿದ್ದಾರೆ ಡ್ರೋನ್​. ಇದೇ ಕಾರಣಕ್ಕೆ ಫಿನಾಲೆವರೆಗೂ ಎಂಟ್ರಿ ಕೊಟ್ಟು, ಮೊದಲ ರನ್ನರ್​ ಅಪ್​ ಕೂಡ ಆದರು. ಆದ್ರೆ  ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್‌ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್‌ ಅಪ್‌ ಕೂಡ ಆದರು.

ಬಿಗ್​ಬಾಸ್​ ಅಂದ್ರೆ ಪ್ರತಾಪ್​ಗೆ ಹೀಗಂತೆ! ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡ್ರೋನ್​ ಹೇಳಿದ್ದೇನು?

 

Follow Us:
Download App:
  • android
  • ios