Asianet Suvarna News Asianet Suvarna News

ಚಪಾತಿ ಹಿಟ್ಟಿಂದ ಪುತ್ರಿ ವಂಶಿಕಾಳ ಹಲ್ಲು ಉದುರಿಸಿದ ಮಾಸ್ಟರ್ ಆನಂದ್; ವಿಡಿಯೋ ವೈರಲ್

ಅಪ್ಪ ಮಾಡಿದ ಟ್ರಿಕ್‌ನಿಂದ ನೆಮ್ಮದಿಯಾಗಿ ನಿದ್ರೆ ಮಾಡುತ್ತೀನಿ ಎಂದ ವಂಶಿಕಾ....
 

Master Anand plays trick to fix daughter Vanshika milk tooth vcs
Author
First Published May 2, 2024, 1:00 PM IST

ಕನ್ನಡ ಕಿರುತೆರೆಯ ಲಿಟಲ್ ಪಟಾಕಿ ಎಂದೇ ಬಿರುದು ಪಡೆದಿರುವ ವಂಶಿಕಾ ಅಂಜನಿ ಕಶ್ಯಪಾ ಬೇರೆ ಯಾರೂ ಅಲ್ಲ ಮಾಸ್ಟರ್ ಬ್ಲಾಸರ್ ಅನಂದ್ ಅವರ ಮುದ್ದಿನ ಪುತ್ರಿ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಈ ಪುಟಾಣಿಯ ಹಲ್ಲಿನ ಸಮಸ್ಯೆಗೆ ತಂದೆ ಮನೆ ಮದ್ದಿನದಲ್ಲಿ ಸೂಪರ್ ಉಪಾಯ ಮಾಡಿದ್ದಾರೆ. 

ಹೌದು! ವಂಶಿಕಾಗೆ ಈ ಹಲ್ಲು ಬಿದ್ದು ಹೊಸ ಹಲ್ಲು ಹುಟ್ಟುವ ಸಮಯ. ಮುಂಭಾಗದ ಒಂದು ಹಲ್ಲು ತುಂಬಾ ಕಿರಿಕಿರಿ ಮಾಡುತ್ತಿತ್ತು ಅನ್ಸುತ್ತೆ ಅದಿಕ್ಕೆ ಮಾಸ್ಟರ್ ಆನಂದ್‌ ಮನೆಯಲ್ಲಿ ಚಪಾತಿ ಹಿಟ್ಟಿನ ಸಹಾಯದಿಂದ ಉದುರಿಸಿದ್ದಾರೆ. 'ನನ್ನ ಹಲ್ಲು ಬಿತ್ತು. ಅಪ್ಪ ಇವತ್ತು ಒಂದು ಟ್ರಿಕ್ ಮಾಡಿ ಹಲ್ಲು ಬೀಳಿಸಿದ್ರು. ಅದು ಚಪಾತಿ ಹಿಟ್ಟಿನಿಂದ..ಸದ್ಯ ಈಗ ಆರಾಮ್ ನಿದ್ದೆ ಮಾಡ್ಬೋದು' ಎಂದು ಕ್ಯಾಪ್ಶನ್ ಬರೆದು ವಂಶಿಕಾಳ ಫನ್ನಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

ಪುತ್ರ ಗುರುಕುಲದಲ್ಲಿದ್ದಾಗ ಮನಸ್ಸಿಗೆ ಕಷ್ಟವಾಯ್ತು: ಮಾಸ್ಟರ್ ಅನಂದ್ ಭಾವುಕ

ಟಿವಿ ಕಾರ್ಯಕ್ರಮಕ್ಕ ರೆಡಿ ಮಾಡಿದ್ದ ಪೋಸ್ಟರ್ ಮುಂದೆ ನಿಂತುಕೊಂಡು ನಾನು ವಂಶಿಕಾ ನನ್ನ ಹಲ್ಲು ಬೀಳುವ ಮುನ್ನ ಹೀಗಿದ್ದೆ...ಹಲ್ಲು ಬಿದ್ದ ಮೇಲೆ ಹೀಗೆ ಕಾಣಿಸುತ್ತಿದೆ ಎಂದು ಮಾತನಾಡಿದ್ದಾರೆ. ವಂಶಿಕಾಳ ಯಾವುದೇ ಪೋಸ್ಟ್‌ ಓಪನ್ ಮಾಡಿದರೂ ಆಕೆ ಯಾಕೆ ಟಿವಿಯಲ್ಲಿ ಕಾಣಿಸುತ್ತಿಲ್ಲ ಎಂದೇ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ವಂಶಿಕಾ ಪಟ ಪಟ ಮಾತುಗಳನ್ನು ಮಿಸ್ ಮಾಡಿಕೊಳ್ಳುತ್ತೀವಿ, ಪ್ಲೀಸ್‌ ಮಗಳಿಗೆ ಸಿನಿಮಾ ಮಾಡಲು ಹೇಳಿ ನಾವು ಆನಂದ್ ಮಿನಿ ವರ್ಷನ್‌ ನೋಡಲು ಮಿಸ್ ಮಾಡಿಕೊಳ್ಳುತ್ತೀವಿ ಎನ್ನುತ್ತಾರೆ ಫ್ಯಾನ್ಸ್‌. 

ಇಷ್ಟು ದಿನ ಗೃಹಿಣಿ ಆಗಿದ್ರಿ ಇದ್ದಕ್ಕಿದ್ದಂತೆ ಏನಾಯ್ತು?; ಜನರ ಟೀಕೆಗೆ ಉತ್ತರ ಕೊಟ್ಟ ಯಶಸ್ವಿನಿ ಮಾಸ್ಟರ್ ಆನಂದ್

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಆದ ನಂತರ ವಂಶಿಕಾ ಗಿಚ್ಚಿ ಗಿಲಿಗಿಲಿ ಸೀಸನ್ 1 ಟ್ರೋಫಿ ಪಡೆದಳು. ಅಲ್ಲಿಂದ ಖ್ಯಾತ ನಿರೂಪಕರ ಜೊತೆ ಒಂದೆರಡು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಳು. ಆಗಾಗ ಗೆಸ್ಟ್ ಆಗಿ ಎಂಟ್ರಿ ಕೊಟ್ಟು ಎಲ್ಲರನ್ನು ನಗಿಸುತ್ತಿದ್ದಳು.

 

Latest Videos
Follow Us:
Download App:
  • android
  • ios