ಆತ್ಮೀಯ ಸ್ನೇಹಿತೆ ದಿವ್ಯಾ ಸುರೇಶ್ ಬಳಿ ತಮ್ಮ ಜೀವನದ ಮುಂದಿನ ಕನಸುಗಳನ್ನು ಹಂಚಿಕೊಂಡ ಮಂಜು ಪಾವಗಡ.

ಬಿಗ್ ಬಾಸ್‌ 8 ಸೀಸನ್‌ನಲ್ಲಿ ಹಾಸ್ಯ ಕಲಾವಿದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಒಳ್ಳೆಯ ಸ್ನೇಹಿತರು. ಅದೇನೇ ಕಷ್ಟ ಬಂದರೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಬೇಷ್ ಎನ್ನುತ್ತಾ, ತಪ್ಪು ಮಾಡಿದಾಗ ಮುಖಕ್ಕೆ ಹೊಡೆದಂತೆ ಮಾತನಾಡುವಷ್ಟು ಆತ್ಮೀಯತೆ ಹೊಂದಿರುವ ಸ್ನೇಹಿತರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಷಾರು ಕಣ್ರೋ ಚಕ್ರವರ್ತಿ ಚಂದ್ರಚೂಡ್‌ ಸಾಯಿಸೋಕೆ ಬಂದಿರೋದು: ಲ್ಯಾಗ್ ಮಂಜು 

ದಿನದ ಅಂತ್ಯದಲ್ಲಿ ಇಬ್ಬರೂ ಕೂತು ದಿನ ಹೇಗಿತ್ತು, ಏನೆಲ್ಲಾ ಮಾಡಿದರು ಹಾಗೂ ಯಾರು ಏನು ತಪ್ಪು ಮಾಡಿದರೆಂಬುವುದಾಗಿ ಚರ್ಚೆ ಮಾಡುತ್ತಾರೆ. ಈ ವೇಳೆ ದಿವ್ಯಾ '2 ವರ್ಷಗಳ ನಂತರ ನಿನ್ನನ್ನು ನೀನು ಎಲ್ಲಿ ನೋಡಿಕೊಳ್ಳೊಕೆ ಬಯಸುತ್ತೀಯಾ' ಎಂದು ಕೇಳಿದರು. ಒಂದು ನಿಮಿಷ ಗಾಡವಾಗಿ ಚಿಂತಿಸಿದ ಮಂಜು ಉತ್ತರ ನೀಡಿದ್ದು ಹೀಗೆ....

'ನಾನು ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು. ಬಹುಶಃ ಕ್ಯಾರೆಕ್ಟರ್ ಆರ್ಟಿಸ್ಟ್ ಎಂದರೆ ತಪ್ಪಾಗಬಹುದು. ಹೀಗಾಗಿ, ನಾನೊಬ್ಬ ಒಳ್ಳೆ ನಟ ಆಗಬೇಕು. ನನಗೆ ಯಾವ ಪಾತ್ರ ಕೊಟ್ಟರೂ ಜೀವಿಸಬೇಕು. ಅನಂತ್ ನಾಗ್, ಪ್ರಕಾಶ್ ರೈ, ಸುದೀಪ್ ಅವರು ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅವರ ತರ ನಾನು ಆಗಬೇಕು. ಒಬ್ಬ ಕಥೆ ಬರೆಯುವಾಗ ಪಾತ್ರ ಸೃಷ್ಟಿ ಮಾಡುವಾಗ ಬರಿ 20% ಮಾತ್ರ ಕಲ್ಪನೆ ಮಾಡಿಕೊಂಡಿರುತ್ತಾರೆ. ಆ ಪಾತ್ರಕ್ಕೆ ಜೀವ ತುಂಬೋದು ನಟನ ಕೆಲಸ. ಮಂಜುಗೆ ಪಾತ್ರ ಕೊಟ್ಟರೆ ಸಾಕು ಅದನ್ನು ಸರಿಯಾಗಿ ನಿರ್ವಹಿಸುತ್ತಾನೆ ಎಂಬ ಭರವಸೆ ನಿರ್ದೇಶಕರಿಗೆ ಬರಬೇಕು ಅಂತಹ ಸಾಧನೆ ಮಾಡಬೇಕು,'ಎಂದು ಮಂಜು ತಮ್ಮ ಕನಸನ್ನು ಬಿಚ್ಚಿಟ್ಟರು.