- Home
- Entertainment
- TV Talk
- ‘Shravani Subramanya’ ಧಾರಾವಾಹಿಯಿಂದ ಹೊರಬಂದ ಪ್ರಮುಖ ಪಾತ್ರಧಾರಿ… ಅಭಿಮಾನಿಗಳು ಶಾಕ್!
‘Shravani Subramanya’ ಧಾರಾವಾಹಿಯಿಂದ ಹೊರಬಂದ ಪ್ರಮುಖ ಪಾತ್ರಧಾರಿ… ಅಭಿಮಾನಿಗಳು ಶಾಕ್!
Shravani Subramanya: ಕನ್ನಡ ಕಿರುತೆರೆಯ ಜನಪ್ರಿಯ ‘ಶ್ರಾವಣಿಸುಬ್ರಹ್ಮಣ್ಯ’ ಧಾರಾವಾಹಿ ರೋಚಕ ಘಟ್ಟ ತಲುಪಿರುವ ಸಮಯದಲ್ಲೇ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಈ ಬಗ್ಗೆ ನಟ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

‘ಶ್ರಾವಣಿಸುಬ್ರಹ್ಮಣ್ಯ’ ಧಾರಾವಾಹಿಯಿಂದ ಹೊರಬಂದ ಮುಖ್ಯ ಪಾತ್ರಧಾರಿ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಶ್ರಾವಣಿಸುಬ್ರಹ್ಮಣ್ಯ’. ಎರಡು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಇದೀಗ ರೋಚಕ ಘಟ್ಟವನ್ನು ತಲುಪಿರುವ ಹೊತ್ತಿಗೆ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಇದನ್ನು ನೋಡಿ ವೀಕ್ಷಕರು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಧಾರಾವಾಹಿಯಿಂದ ಹೊರ ನಡೆದ ನಟ ಅಥರ್ವ
‘ಶ್ರಾವಣಿಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ವಿಲನ್ ಮದನ್/ಮ್ಯಾಡಿ ಪಾತ್ರದಲ್ಲಿ ಮಿಂಚುತ್ತಿದ್ದ ನಟ ಅಥರ್ವ ತಾವು ಸೀರಿಯಲ್ ನಿಂದ ಹೊರ ಬಂದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ, ಮುದ್ದಾದ ವಿಡೀಯೋಗಳನ್ನು ಹಂಚಿಕೊಂಡು, ಪೋಸ್ಟ್ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ನಟ ಈ ಕುರಿತು ಹೇಳಿದ್ದೇನು ನೋಡಿ.
ನಾನು ಎಂದೆಂದಿಗೂ ನೆನಪಿಸಿಕೊಳ್ಳುವ ಪ್ರಯಾಣ.
ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಮದನ್ (ಮ್ಯಾಡಿ) ಆಗಿ 2 ವರ್ಷಗಳಿಗೂ ಹೆಚ್ಚು ಕಾಲ ಅದ್ಭುತ ಜೀವನ ಕಳೆದ ನಂತರ, ನನ್ನ ಜೀವನದ ಈ ಸುಂದರ ಅಧ್ಯಾಯಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಈ ಸೆಟ್‌ನಲ್ಲಿನ ಪ್ರತಿಯೊಂದು ದೃಶ್ಯ, ಪ್ರತಿ ಶೂಟಿಂಗ್ ದಿನ, ಪ್ರತಿ ನಗು, ಪ್ರತಿ ಸವಾಲು ಮತ್ತು ಪ್ರತಿಯೊಂದು ನೆನಪು ನನಗೆ ಬೆಳೆಯಲು ಸಹಾಯ ಮಾಡಿದೆ . ಕೇವಲ ನಟನಾಗಿ ಅಲ್ಲ, ಒಬ್ಬ ವ್ಯಕ್ತಿಯಾಗಿ. ಈ ಪ್ರಯಾಣವು ಯಾವಾಗಲೂ ನನ್ನ ಹೃದಯದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿರುತ್ತದೆ.
ಧನ್ಯವಾದಗಳನ್ನು ತಿಳಿಸಿದ ನಟ
ನನ್ನ ಮೇಲೆ ವಿಶ್ವಾಸವಿಟ್ಟು ಇಂತಹ ಸುಂದರ ಕಾರ್ಯಕ್ರಮದ ಭಾಗವಾಗುವಂತೆ ಮಾಡಿ, ಈ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಜೀ ಕನ್ನಡ, ಮತ್ತು ನಮ್ಮ ಪ್ರೀತಿಯ ನಿರ್ಮಾಪಕ ಸುಬ್ರಹ್ಮಣ್ಯ ಮೂರ್ತಿನಾಥ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಆದರ್ಶ್ ಹೆಗ್ಡೆ ಸರ್, ನಿಮ್ಮ ನಿರಂತರ ಮಾರ್ಗದರ್ಶನ, ತಾಳ್ಮೆ ಮತ್ತು ಪ್ರೋತ್ಸಾಹಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರ್ದೇಶನದಲ್ಲಿ ನಾನು ತುಂಬಾ ಕಲಿತಿದ್ದೇನೆ.
ಸ್ನೇಹಾ ಈಶ್ವರ್ ಮತ್ತು ಮೋಹನ್ ಬಗ್ಗೆ ಅಥರ್ವ ಮಾತು
ಸ್ನೇಹಾ ಈಶ್ವರ್ ಮೇಡಂ, ಯಾವಾಗಲೂ ತುಂಬಾ ದಯೆ, ಬೆಂಬಲ ಮತ್ತು ಸ್ಪೂರ್ತಿದಾಯಕವಾಗಿರುವುದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ನನ್ನ ನೆಚ್ಚಿನ ಕೋ ಸ್ಟಾರ್ ಗಳಲ್ಲಿ ಒಬ್ಬರಾಗಿ ಉಳಿಯುತ್ತೀರಿ. ಹಾಗೂ ಮೋಹನ್ ಶಂಕರ್ ಸರ್, ಸತತ ಎರಡನೇ ಪ್ರಾಜೆಕ್ಟ್ ನಲ್ಲಿ ನಿಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಿರುವುದಕ್ಕೆ ನಿಜಕ್ಕೂ ಹೆಮ್ಮೆ ಇದೆ. ಇದು ನನ್ನ ಆಶೀರ್ವಾದವೂ ಔದು. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಇನ್ನು ರಕ್ಷಿತಾ ಭಾಸ್ಕರ್ ಈ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸಂತೋಷ ತಂದಿದೆ. ಥ್ಯಾಂಕ್ಯೂ ಎಂದು ಹೇಳಿದ್ದಾರೆ.
ಅಭಿಮಾನಿಗಳ ಪ್ರೀತಿ ನನ್ನ ದೊಡ್ಡ ಪ್ರೇರಣೆ
ಪ್ರತಿಯೊಬ್ಬ ನಟ, ತಂತ್ರಜ್ಞ, ಸಹಾಯಕ ನಿರ್ದೇಶಕ, ಕ್ಯಾಮೆರಾಮನ್, ಮೇಕಪ್ ಕಲಾವಿದ, ವೇಷಭೂಷಣ ತಂಡ, ನಿರ್ಮಾಣ ತಂಡ ಮತ್ತು ಶ್ರಾವಣಿ ಸುಬ್ರಹ್ಮಣ್ಯದ ಹಿಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡು ವರ್ಷಗಳನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ಈ ಕುಟುಂಬ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಇನ್ನು ಕೊನೆಅದಾಗಿ ಪ್ರೇಕ್ಷಕರಿಗೆದೊಡ್ಡ ಧನ್ಯವಾದಗಳು. ಯಾರಾದರೂ ನನ್ನನ್ನು ಮ್ಯಾಡಿ ಎಂದು ಗುರುತಿಸಿದಾಗ, ಫೋಟೋ ಕ್ಲಿಕ್ ಮಾಡಿದಾಗ, ನನಗೆ ಶುಭ ಹಾರೈಸಿದಾಗ ಅಥವಾ ನನ್ನ ಅಭಿನಯವನ್ನು ಮೆಚ್ಚಿದಾಗಲೆಲ್ಲಾ, ನಾನು ಈ ವೃತ್ತಿಯನ್ನು ಏಕೆ ಆರಿಸಿಕೊಂಡೆ ಎಂಬುದನ್ನು ಅದು ನನಗೆ ನೆನಪಿಸುತ್ತದೆ. ನಿಮ್ಮ ಪ್ರೀತಿ ಮತ್ತು ಬೆಂಬಲ ನನ್ನ ದೊಡ್ಡ ಪ್ರೇರಣೆಯಾಗಿದೆ.
ಹೊಸ ಪಾತ್ರ, ಶೇಡ್ ಮೂಲಕ ಶೀಘ್ರದಲ್ಲಿ ಮತ್ತೆ ಹಿಂದಿರುತೇನೆ
ಇಂದು, ನಾನು ಮದನ್ (ಮ್ಯಾಡಿ) ಪಾತ್ರದಿಂದ ನಿರ್ಗಮಿಸುತ್ತಿದ್ದೇನೆ, ನನ್ನ ಹೃದಯದಲ್ಲಿ ಕೃತಜ್ಞತೆ ಮಾತ್ರ ಇದೆ. ಆದರೆ ಇದು ಅಂತ್ಯವಲ್ಲ… ಇದು ಕೇವಲ ಹೊಸ ಅಧ್ಯಾಯದ ಆರಂಭ. ಹೊಸ ಪಾತ್ರ, ಹೊಸ ಶೇಡ್, ಹೊಸ ಕಥೆಗಳು ಮತ್ತು ನಿಮ್ಮೆಲ್ಲರನ್ನೂ ರಂಜಿಸಲು ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ಅಲ್ಲಿಯವರೆಗೆ, ಈ ಅದ್ಭುತ ಪ್ರಯಾಣದುದ್ದಕ್ಕೂ ನನ್ನನ್ನು ಸ್ವೀಕರಿಸಿದ್ದಕ್ಕಾಗಿ, ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಎಂದೆಂದಿಗೂ ಕೃತಜ್ಞರು. ಪ್ರೀತಿಯಿಂದ, ಅಥರ್ವ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

