ವೈಲ್ಡ್ ಕಾರ್ಡ್ ಎಂಟ್ರಿಯಿಂದ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳ ಮನಸ್ಥಿತಿ ಬದಲಾಗಿದೆ. ಹೊಸದಾಗಿ ಬಂದ ಅತಿಥಿಯನ್ನು ಹೇಗೆ ಸ್ವೀಕರಿಸಬೇಕು ಎಂಬುವುದೂ ಗೊತ್ತಿಲ್ಲ. 'ಹೊಸ ಅಣ್ಣ'ನ ಬಗ್ಗೆ ಹಿಂದೆ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ವಿಭಿನ್ನ ವ್ಯಕ್ತಿತ್ವದವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಾರೆ. ಈ ವರ್ಷದ ಸೀಸನ್ 8ರ ವೈಲ್ಡ್ ಕಾರ್ಡ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್. ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ತಪ್ಪಿದ್ದರೆ ತಿದ್ದುಕೊಳ್ಳಲು ಅವಕಾಶ ನೀಡುತ್ತಾರೆ, ಏನೂ ಮಾಡದೇ ಮನೆಯಲ್ಲಿದ್ದರೆ ವೇಸ್ಟ್ ಬಾಡಿ ಆಗಿದ್ದೀ, ಬದಲಾಗು ಎನ್ನುತ್ತಾರೆ.
ಬಿಬಿ ಮನೆಯಲ್ಲಿ ಊಟ ಕೊಟ್ಟಿಲ್ಲ ಅಂದ್ರೆ ಸೊಳ್ಳೆ, ಜಿರಳೆ ತಿನ್ನಬೇಕು: ರಘು ಗೌಡ
ಬಿಬಿ ಮನೆಯಲ್ಲಿ ತಮ್ಮದೇ ರೂಲ್ಸ್ ಮಾಡಿಕೊಂಡು ಜೀವನ ಮಾಡುತ್ತಿದ್ದ ಸೋಂಬೇರಿಗಳು ಚಕ್ರವರ್ತಿ ಆಗಮನದಿಂದ ಆ್ಯಕ್ಟಿವ್ ಆಗಿದ್ದಾರೆ. ಸುಮಾರು 20 ವರ್ಷಗಳಿಂದ ಪ್ರಶಾಂತ್ ಸಂಬರಗಿ ಸ್ನೇಹಿತರಾಗಿರುವ ಚಕ್ರವರ್ತಿ ತಮ್ಮ ಎಂದರೆ ಸುಳ್ಳಾಗುವುದಿಲ್ಲ. ಸುಳ್ಳು ಹೇಳುವವರು ಇಷ್ಟ ಇಲ್ಲವೆಂದು ನೇರವಾಗಿ ಹೇಳುತ್ತಾರೆ. ಮನೆ ಮಂದಿಯನ್ನು ಬದಲಾಯಿಸಲು ಬಂದಿದ್ದಾರಾ ಅಥವಾ ಅವರೂ ಒಬ್ಬ ಸ್ಪರ್ಧೀನಾ ಎಂಬ ಉತ್ತರ ಸಿಗದೇ ಎಲ್ಲರೂ ಕಂಗಲಾಗಿದ್ದಾರೆ.
ಬೆಳಗ್ಗೆ ಮನೆಯಲ್ಲಿರುವ ಸದಸ್ಯರು ವ್ಯಾಯಾಮ ಮಾಡುವುದನ್ನು ಅಭ್ಯಸ ಮಾಡಿಕೊಂಡಿದ್ದಾರೆ. ವೈಷ್ಣವಿ ಜೊತೆ ಅನೇಕರು ಸೇರಿ ಯೋಗ ಮಾಡುತ್ತಾರೆ. ಆದರೆ ಚಕ್ರವರ್ತಿ ಹೇಳಿಕೊಟ್ಟ ಹೊಸ ಉಸಿರಾಟ ಕ್ರಿಯೆ ಎಲ್ಲರ ಪ್ರಾಣ ತೆಗೆದುಕೊಳ್ಳಬಹುದು, ಎಂದು ಹಾಸ್ಯ ಕಲಾವಿದ ಮಂಜು ಪಾವಗಡ ಹೆದರಿದ್ದಾರೆ.
ಅರವಿಂದ್‌ಗೆ ನಾನು ಗರ್ಲ್‌ಫ್ರೆಂಡ್, ತಂಗಿ, ಹೆಂಡ್ತಿಯೂ ಆಗಿರ್ಬೋದು; ಪ್ರಶಾಂತ್ ಸಂಬರಗಿಗೆ ದಿವ್ಯಾ ವರ್ನಿಂಗ್!
ಉಸಿರನ್ನು ಹೊರ ಹಾಕುವ ಒಂದು ಯೋಗವನ್ನು ಚಕ್ರವರ್ತಿ ಅವರು ವೈಷ್ಣವಿ, ಶಮಂತ್, ರಘು ಗೌಡ ಹಾಗೂ ನಿಧಿ ಸುಬ್ಬಯ್ಯ ಅವರಿಗೆ ಹೇಳಿಕೊಡುತ್ತಾರೆ. ಡೈನಿಂಗ್ ಟೇಬಲ್ ಮೇಲೆ ಕುಳಿತು ವೀಕ್ಷಿಸುತ್ತಿದ್ದ ಲ್ಯಾಗ್ ಮಂಜು ಹಾಗೂ ರಾಜೀವ್ ಕಾಮೆಂಟ್ರಿ ಆರಂಭಿಸುತ್ತಾರೆ. 'ಯಾರೂ ಏನೂ ಬೇಕಾದರೂ ಅಂದುಕೊಂಡರೂ ಪರವಾಗಿಲ್ಲ ನೀವು ಮಾಡಿ,' ಎಂದು ಚಕ್ರವರ್ತಿ ಧೈರ್ಯ ತುಂಬುತ್ತಾರೆ.
'ಹಸಿರು ಕಟ್ಟಿಕೊಂಡು ಸತ್ತು, ಗಿತ್ತು ಹೋದ್ಯಾ ಹುಷಾರು. ಸಾಯಿಸೋಕೆ ಚಕ್ರವರ್ತಿ ಬಂದಿರಬಹುದು,' ಎಂದು ಲ್ಯಾಗ್ ಮಂಜು ಹೇಳುತ್ತಾರೆ. 'ವೈಷ್ಣವಿ ಬೇಡ ಆಗಲ್ಲ ಉಸಿರುಗಟ್ಟಬಹುದು,' ಎಂದು ರಾಜೀವ್ ಹೇಳುತ್ತಾರೆ. ಯಾರೂ ಇವರಿಬ್ಬರ ಮಾತು ಕೇಳದ ಕಾರಣ 'ಒಂದೇ ತಟ್ಟಿಯಲ್ಲಿ ಊಟ ತಿಂದು ಮುಹೂರ್ತ ಇಡ್ತಾರೋ' ಎಂದು ಹಾಡು ಹಾಡುತ್ತಾರೆ.
Last Updated Apr 3, 2021, 11:41 AM IST