ನಗಿಸಲು ಬರ್ತಿದೆ ಮಜಾ ಟಾಕೀಸ್ , ಒನ್ ಆಂಡ್ ಓನ್ಲಿ ವರು ಮಿಸ್ ಮಾಡ್ಕೊಳ್ತಿದ್ದಾರೆ ಫ್ಯಾನ್ಸ್
ಕೆಲಸದ ಟೆನ್ಷನ್ ನಲ್ಲಿರುವ ಜನರಿಗೆ ರಿಲ್ಯಾಕ್ಸ್ ಸುದ್ದಿಯೊಂದಿದೆ. ಮಜಾ ಟಾಕೀಸ್ ಮತ್ತೆ ಬರ್ತಿದೆ. ಸೃಜನ್ ನಿರೂಪಣೆಯ ನಂಬರ್ ಒನ್ ಟಾಕ್ ಶೋ ಮಜಾ ಟಾಕೀಸ್ ಪ್ರೋಮೋ ಬಿಡುಗಡೆಯಾಗಿದ್ದು, ಫ್ಯಾನ್ಸ್ ವರಲಕ್ಷ್ಮಿ ಅಲಿಯಾಸ್ ಅಪರ್ಣಾ ಮಿಸ್ ಮಾಡ್ಕೊಳ್ತಿದ್ದಾರೆ.
ಕಲರ್ಸ್ ಕನ್ನಡ (Colors Kannada) ದಲ್ಲಿ ಇನ್ಮುಂದೆ ನಗುವಿನ ಹಬ್ಬ ಶುರುವಾಗ್ತಿದೆ. ಮಜಾ ಟಾಕೀಸ್ (Maja Talkies) ಮತ್ತೆ ಬರ್ತಿದೆ. ಸೀರಿಯಲ್ ನೋಡಿ ಬೋರ್ ಆಗಿದೆ, ಡಾನ್ಸ್, ಮ್ಯೂಜಿಕ್ ಮಧ್ಯೆ ಒಂದು ನಗಿಸುವ ಶೋ ಅವಶ್ಯಕತೆ ಇದೆ ಎನ್ನುತ್ತಿದ್ದ ವೀಕ್ಷಕರಿಗೆ ಸೃಜನ್ ಲೋಕೇಶ್ (Srujan Lokesh) ಗುಡ್ ನ್ಯೂಸ್ ನೀಡಿದ್ದಾರೆ. ಒಂದಿಷ್ಟು ವರ್ಷ ಬ್ರೇಕ್ ಪಡೆದಿದ್ದ ಮಜಾ ಟಾಕೀಸ್ ಮತ್ತೆ ಶುರುವಾಗ್ತಿದೆ. ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದೆ. ಬಿಗ್ ಬಾಸ್ ಸೀಸನ್ 11 ಕೊನೆಯ ಹಂತದಲ್ಲಿದ್ದು, ಕೆಲವೇ ವಾರದಲ್ಲಿ ಬಿಗ್ ಬಾಸ್ ಮುಗಿಯಲಿದೆ. ಅದಾದ್ಮೇಲೆ ಏನು ಎಂಬ ಪ್ರಶ್ನೆಗೆ ಉತ್ತರ ಈಗ ಸಿಕ್ಕಿದಂತಿದೆ. ಆದ್ರೆ ಪ್ರೋಮೋದಲ್ಲಿ ಮಜಾ ಟಾಕೀಸ್ ಯಾವಾಗಿನಿಂದ ಶುರುವಾಗಲಿದೆ ಎಂಬ ಮಾಹಿತಿ ಇಲ್ಲ.
ಟೆನ್ಷನ್ ಬಿಟ್ಟಾಕಿ, ನಗೋಕೆ ರೆಡಿಯಾಗಿ ಎಂಬ ಶೀರ್ಷಿಕೆಯಲ್ಲಿ ಮಜಾ ಟಾಕೀಸ್ ಪ್ರೋಮೋ ಬಿಡುಗಡೆಯಾಗಿದೆ. ಇದ್ರಲ್ಲಿ ಗಂಡ, ಹೆಂಡತಿ ಇಡೀ ದಿನ ಮನೆ ಕೆಲಸ, ಕಚೇರಿ ಅದು ಇದು ಅಂತ ಬ್ಯೂಸಿಯಾಗಿ ಟೆನ್ಷನ್ ಮಾಡ್ಕೊಳ್ಳೋದನ್ನು ನೋಡ್ಬಹುದು. ಕೊನೆಯಲ್ಲಿ ಟಿವಿಯಲ್ಲಿ ಬರುವ ಸೃಜನ್, ನಿಮ್ಮ ಯಾವುದೇ ಸಮಸ್ಯೆಗೆ ನಗುವಿನ ಮೂಲಕ ಪರಿಹಾರ ನಮ್ಮಲ್ಲಿದೆ. ಕರ್ನಾಟಕದ ನಂಬರ್ ಒನ್ ಕಾಮಿಟಿ ಟಾಕ್ ಶೋ ಮಜಾ ಟಾಕೀಸ್ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಎಂಬ ಮಾಹಿತಿ ನೀಡ್ತಾರೆ.
ಹೌಸ್‌ಫುಲ್ 5 ಚಿತ್ರದ ಶೂಟಿಂಗ್ ವೇಳೆ ದುರ್ಘಟನೆ, ನಟ ಅಕ್ಷಯ್ ಕುಮಾರ್ ಕಣ್ಣಿಗೆ ಗಾಯ!
ಮಜಾ ಟಾಕೀಸ್ ಪ್ರೋಮೋ ನೋಡಿದ ವೀಕ್ಷಕರಿಗೆ ಒಂದ್ಕಡೆ ಖುಷಿಯಾದ್ರೂ ಇನ್ನೊಂದ್ಕಡೆ ವರಲಕ್ಷ್ಮಿ ಅಲಿಯಾಸ್ ಕನ್ನಡದ ಅತ್ಯುತ್ತಮ ನಿರೂಪಕಿ, ಎಲ್ಲರ ಮನ ಮೆಚ್ಚಿನ ನಟಿ ಅಪರ್ಣಾ ಇಲ್ಲದಿರುವ ನೋವು ಕಾಡ್ತಿದೆ. ಮಜಾ ಟಾಕೀಸ್, ವರಲಕ್ಷ್ಮಿ ಇಲ್ಲದೆ ನೋಡೋದು ಕಷ್ಟ ಎಂದು ಫ್ಯಾನ್ಸ್ ತಮ್ಮ ನೋವು ತೋಡಿಕೊಂಡಿದ್ದಾರೆ. ಒನ್ ಆಂಡ್ ಓನ್ಲಿ ವರಲಕ್ಷ್ಮಿ ಎಂದೇ ಅಪರ್ಣಾ ಪ್ರಸಿದ್ಧಿ ಪಡೆದಿದ್ದರು. ಜನರು ಅಪರ್ಣಾ ಅವರ ನಿರೂಪಣೆ, ಕನ್ನಡದ ಮೇಲಿನ ಪ್ರೀತಿ, ಮುತ್ತಿನಂತೆ ಕನ್ನಡ ಪದಗಳನ್ನು ಜೋಡಿಸುವ ಅವರ ಕಲೆಯನ್ನು ನೋಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅಪರ್ಣಾ ಜೀವನದ ಕೆಲ ವಿಷ್ಯಗಳು ಅಭಿಮಾನಿಗಳಿಗೆ ತಿಳಿದಿತ್ತು. ಆದ್ರೆ ಮಜಾ ಟಾಕೀಸ್, ಅಪರ್ಣಾ ಅವರನ್ನು ಭಿನ್ನವಾಗಿ ವೀಕ್ಷಕರಿಗೆ ತೋರಿಸಲು ಯಶಸ್ವಿಯಾಗಿತ್ತು. ಪ್ರತಿಯೊಂದು ಪಾತ್ರವನ್ನೂ ಅಚ್ಚುಕಟ್ಟಾಗಿ ಮಾಡ್ತಿದ್ದ ವರಲಕ್ಷ್ಮಿ, ಎಲ್ಲರನ್ನು ನಕ್ಕು ನಗಿಸುತ್ತಿದ್ದರು. ಆದ್ರೆ ಅಪರ್ಣಾ ನಮ್ಮ ಜೊತೆ ಈಗಿಲ್ಲ. ಅವರ ನೆನಪಿನಲ್ಲಿಯೇ ಮಜಾ ಟಾಕೀಸ್ ವೀಕ್ಷಣೆ ಮಾಡೋದು ಅಭಿಮಾನಿಗಳಿಗೆ ಅನಿವಾರ್ಯವಾಗಿದೆ.
ಮೆಹಂದಿ ನೋಡಿಯೇ, ಶೋಭಿತಾ- ನಾಗಚೈತನ್ಯ ದಾಂಪತ್ಯ ಜೀವನ ಡಿಸೈಡ್ ಮಾಡಿಬಿಟ್ರಲ್ಲಾ
ಇನ್ನು ಮಜಾ ಟಾಕೀಸ್ನಲ್ಲಿ ಸಾಕಷ್ಟು ಕಲಾವಿದರು ತಮ್ಮ ಛಾಪು ಮೂಡಿಸಿದ್ದಾರೆ. ಅದ್ರಲ್ಲಿ ಕುರಿ ಪ್ರತಾಪ್, ಶ್ವೇತಾ ಚಂಗಪ್ಪ, ಮಿಮಿಕ್ರಿ ದಯಾನಂದ್, ಪವನ್ ಕುಮಾರ್, ಇಂದ್ರಜಿತ್ ಲಂಕೇಶ್, ನವೀನ್ ಪಡೀಲ್, ಮಂಡ್ಯ ರಮೇಶ್ ಸೇರಿದ್ದಾರೆ. ಹಳೇ ಕಲಾವಿದರೇ ಈ ಬಾರಿಯೂ ಕಾಣಿಸಿಕೊಂಡ್ರೆ ಚೆಂದ ಎಂಬುದು ಕೆಲ ವೀಕ್ಷಕರ ಅಭಿಪ್ರಾಯ. 2015ರಲ್ಲಿ ಶುರುವಾದ ಮಜಾ ಟಾಕೀಸ್, 10 ವರ್ಷ ಪೂರೈಸುವ ಸಂಭ್ರಮದಲ್ಲಿದೆ. ಸೃಜನ್ ಬೇರೆ ಶೋಗಳಲ್ಲಿ ಬ್ಯೂಸಿಯಿದ್ದ ಕಾರಣ ಅವರು ಮಜಾ ಟಾಕೀಸ್ಗೆ ಬ್ರೇಕ್ ನೀಡಿದ್ದರು. ಕೆಲವೇ ಕೆಲವು ಸೀಸನ್ ಮಾತ್ರ ಪ್ರಸಾರವಾಗಿದ್ರೂ ಜನರು ಮಜಾ ಟಾಕೀಸ್ ಮಜವನ್ನು ಮರೆತಿಲ್ಲ. ಈಗ್ಲೂ ಶೋ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ಸೀಸನ್ ವೀಕ್ಷಕರನ್ನು ಎಷ್ಟು ಸೆಳೆಯುತ್ತೆ, ಯಾರೆಲ್ಲ ಕಲಾವಿದರು ಕಾಣಿಸಿಕೊಳ್ತಾರೆ ಎಂಬುದನ್ನು ಕಾದು ನೋಡ್ಬೇಕು.